Asianet Suvarna News

ನಾನೂ ಒಬ್ಬ ಡಿ ಕಂಪನಿ ಹುಡುಗ; ಅಭಿಮಾನಿಗಳ ಬಗ್ಗೆ ದರ್ಶನ್ ಮಾತು!

1 ಮಿಲಿಯನ್ ಫಾಲೋವರ್ಸ್, ಹೃದಯ ಮುಟ್ಟಿರುವ ದರ್ಶನ್ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ.

Kannada actor Darshan says he is a D company fan vcs
Author
Bangalore, First Published Jul 4, 2021, 2:15 PM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ಹಾಗೂ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್‌ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್ ದಾಟಿದ್ದಾರೆ. ಅಭಿಮಾನಿಯನ್ನು ಸೆಲೆಬ್ರಿಟಿ ಎಂದು ಕರೆಯುವ ದರ್ಶನ್ ಕೂಡ ತಮ್ಮ ಫ್ಯಾನ್ ಪೇಜ್ ಫಾಲೋವರ್ ಅಂತೆ.

'ಡಿ ಕಂಪನಿಯಲ್ಲಿ ನಾನೂ ಒಬ್ಬ ಹುಡುಗ.  ಅವರೆಲ್ಲರೂ ತೋರಿಸಿರುವ ಪ್ರೀತಿಗೆ ನಾನು ಆಭಾರಿ. ಸೋಷಿಯಲ್ ಮೀಡಿಯಾದಲ್ಲೂ ಅಷ್ಟೇ ಪ್ರೀತಿ ನೋಡುತ್ತಿರುವೆ. ನಾನು ದಿನಾ ಭೇಟಿ ಆಗದೇ ಇರಬಹುದು ಆದರೆ ಅವರು ನನ್ನ ಮಾತು ಮತ್ತು ನಿರ್ಧಾರವನ್ನು ಗೌರವಿಸುತ್ತಾರೆ. ಯಾವುದನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ನನ್ನ ಜೊತೆ ಮಾತನಾಡಬೇಕು ಎಂದು ಮೆಸೇಜ್ ಮಾಡುತ್ತಾರೆ, ನಾನು ಅವರನ್ನು ಸಂಪರ್ಕಿಸಿ ಮಾತನಾಡುತ್ತೇನೆ' ಎಂದು ದರ್ಶನ್ 5 ವರ್ಷಗಳ ಹಿಂದೆ ಟೈಮ್ಸ್‌ಗೆ ಹೇಳಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್‌; ಡಿ-ಬಾಸ್‌ಗೆ ಅಭಿಮಾನಿಗಳ ಜೈಕಾರ! 

ಇದೇ ಲಾಜಿಕ್‌ನ ದರ್ಶನ್‌ ತಮ್ಮ ಸಿನಿಮಾಗಳ ವಿಚಾರಕ್ಕೂ ಅಪ್ಲೈ ಮಾಡುತ್ತಾರೆ. 'ಯಾವುದೇ ನಿರೀಕ್ಷೆ ಇಲ್ಲದೆ ಬಂದು ಸಿನಿಮಾ ನೋಡಿ. ನನ್ನ ಮಾರ್ಕೆಟ್ ಇರುವುದು ಕೇವಲ ಮೂರು ದಿನಗಳು ಮಾತ್ರ. ನನ್ನ ಬಾಕ್ಸ್ ಆಫೀಸ್ ಕ್ರೌಡ್ ಇರುವು ಮೂರು ದಿನ- ಶುಕ್ರವಾರ, ಶನಿವಾರ ಮತ್ತು ಭಾನುವಾರ. ಅವರೇ ರಿಯಲ್ ಅಭಿಮಾನಿಗಳು' ಎಂದು ದರ್ಶನ್ ಹೇಳಿದ್ದಾರೆ.

Follow Us:
Download App:
  • android
  • ios