Controversial Statements: ನಟ ಚೇತನ್‌ ಗಡೀಪಾರು ಸಾಧ್ಯತೆ?

*  ಅಮೆರಿಕ ಪ್ರಜೆಯಾಗಿದ್ದರೂ ಭಾರತದ ಹೋರಾಟಗಳಲ್ಲಿ ಭಾಗಿ
*  ನಟನಿಂದ ಸಾಗರೋತ್ತರ ಭಾರತೀಯ ನಾಗರಿಕ ನಿಯಮ ಉಲ್ಲಂಘನೆ
*  ಈ ಬಗ್ಗೆ ಚೇತನ್‌ ವಿರುದ್ಧ ಕೇಂದ್ರ ಸರ್ಕಾರಕ್ಕೆ ಪೊಲೀಸರ ವರದಿ
 

Actor Chetan Likely to be Deport From India Due to His Controversy Statements grg

ಬೆಂಗಳೂರು(ಮಾ.12):  ಸದಾ ಒಂದಿಲ್ಲೊಂದು ವಿವಾದಗಳಿಗೆ ತುತ್ತಾಗುವ ಕನ್ನಡ ಚಲನಚಿತ್ರ(Sandalwood) ನಟ ಹಾಗೂ ಅಮೆರಿಕ ಪ್ರಜೆ ಚೇತನ್‌(Chetan) ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಈಗ ಸಾಗರೋತ್ತರ ಭಾರತೀಯ ನಾಗರಿಕ ಪತ್ರ (OCA) ನಿಯಮಗಳನ್ನು ಉಲ್ಲಂಘನೆ ಮಾಡಿದ ಸಂಬಂಧ ನಟನ ವಿರುದ್ಧ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಪೊಲೀಸರು(Police) ವರದಿ ಸಲ್ಲಿಸಿದ್ದಾರೆ.

ವಿದೇಶಿ ಪ್ರಜೆಗಳು ಭಾರತದಲ್ಲಿನ(India) ಹೋರಾಟದಲ್ಲಿ ಪಾಲ್ಗೊಳ್ಳುವಂತಿಲ್ಲ. ಆದರೆ ಚೇತನ್‌ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ರಾಜ್ಯ ಸರ್ಕಾರವು(Government of Karnataka) ಈ ಬಗ್ಗೆ ವರದಿಯನ್ನು ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆಗೆ ರವಾನಿಸಲಿದೆ. ಅಂತಿಮವಾಗಿ ರಾಜ್ಯ ಸರ್ಕಾರದ ವರದಿ ಆಧರಿಸಿ ಚೇತನ್‌ ಅವರನ್ನು ಗಡೀಪಾರಿಗೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Hijab Row: ನಟ ಚೇತನ್‌ಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ!

ಇತ್ತೀಚಿಗೆ ಹಿಜಾಬ್‌ ವಿವಾದ (Hijab Row) ವಿಚಾರದಲ್ಲಿ ಹೈಕೋರ್ಟ್‌(High Court) ನ್ಯಾಯಮೂರ್ತಿಯೊಬ್ಬರನ್ನು ನಿಂದಿಸಿ ಟ್ವೀಟ್‌ ಮಾಡಿದ ಆರೋಪದ ಮೇರೆಗೆ ಚೇತನ್‌ ಬಂಧನವಾಗಿತ್ತು. ಇದಕ್ಕೂ ಮುನ್ನ ಪೇಜಾವರ ಶ್ರೀಗಳ ಬಗ್ಗೆ ಸಹ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇರೆಗೆ ಚೇತನ್‌ ವಿರುದ್ಧ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಪೊಲೀಸರು, ಈಗ ಸಾಗರೋತ್ತರ ಭಾರತೀಯ ನಾಗರಿಕ ಪತ್ರದ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಚೇತನ್‌ ಪಾಲ್ಗೊಂಡಿದ್ದಾರೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಓಸಿಎ ನಿಯಮದ ಪ್ರಕಾರ ರಾಜಕೀಯ ಚಟುವಟಿಕೆಗಳು(Political Activities) ಹಾಗೂ ಸಾರ್ವಜನಿಕ ಪ್ರತಿಭಟನೆಗಳಲ್ಲಿ ಸಾಗರೋತ್ತರ ನಾಗರಿಕರು ಪಾಲ್ಗೊಳ್ಳುವಂತಿಲ್ಲ. ಆದರೆ ಅಮೆರಿಕ ಪ್ರಜೆಯಾಗಿದ್ದರೂ(American Citizen) ಚೇತನ್‌ ಅವರು ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಹಲವು ಬಾರಿ ರಾಜಕೀಯ ವಿಚಾರಗಳಲ್ಲಿ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅಪರಾಧ ಪ್ರಕರಣದಲ್ಲಿ ಯಾವುದೇ ವಿದೇಶಿ ಪ್ರಜೆ ಬಂಧನವಾದ ಕೂಡಲೇ ಸಂಬಂಧಪಟ್ಟ ದೇಶದ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ. ಅಂತೆಯೇ ಚೇತನ್‌ ವಿಚಾರದಲ್ಲೂ ಸಹ ಸರ್ಕಾರಕ್ಕೆ ವರದಿ ನೀಡಲಾಗಿದೆ. ಈ ವರದಿಯಲ್ಲಿ ಅವರ ಓಸಿಎ ಉಲ್ಲಂಘನೆ ವಿಚಾರವನ್ನು ಸಹ ಪ್ರಸ್ತಾಪಿಸಲಾಗಿದ್ದು, ಮುಂದಿನ ಕಾನೂನು ಕ್ರಮದ ಬಗ್ಗೆ ಕೇಂದ್ರ ನಿರ್ಧರಿಸಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ: ನಟ ಚೇತನ್‌

ದಾವಣಗೆರೆ: ಶಾಲಾ ಮಕ್ಕಳಿಗೆ ಮೊಟ್ಟೆ(Eggs) ನೀಡುವ ಸರ್ಕಾರದ ನಿರ್ಧಾರಕ್ಕೆ ವಿರೋಧಿಸುವ ಸ್ವಾಮೀಜಿಗಳು ಬಸವತತ್ವದವರು ಅಲ್ಲ. ಕೆಲ ಸ್ವಾಮೀಜಿಗಳು(Swamjis) ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆಗಳನ್ನ ಕೇಳುತ್ತೀರುವುದು ಬೇಸರದ ವಿಚಾರವಾಗಿದೆ ಅಂತ ಸ್ಯಾಂಡಲ್‌ವುಡ್‌ ನಟ ಚೇತನ್ ಹೇಳಿದ್ದರು. 

ನಟ ಚೇತನ್‌ರಿಂದ 1 ರು. ಮಾನನಷ್ಟ ಕೇಸ್‌: ಸಚಿವ ಹೆಬ್ಬಾರ್‌ಗೆ ನೋಟಿಸ್‌

ಡಿ.25 ರಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಮೊಟ್ಟೆ ತಿನ್ನುವವರ ಶಾಲೆ, ಮಟನ್(Mutton) ತಿನ್ನುವರ ಶಾಲೆ ಹೀಗೆ ಪ್ರತ್ಯೇಕ ಶಾಲೆಗಳಾಗಿ(Schools) ಭಾಗ ಮಾಡುವುದೇ ಸ್ವಾಮೀಜಿಗಳ ಉದ್ದೇಶವೇ?. ಅನುಭವ ಮಂಟಪದಲ್ಲಿ ಸಹ ಮಾಂಸಾಹಾರಿಗಳು ಇದ್ರು, ಇದನ್ನ ಸ್ವಾಮೀಜಿಗಳು ಅರಿತುಕೊಳ್ಳಬೇಕು. ಇಡಿ ರಾಜ್ಯವೇ ದೇಶಕ್ಕೆ ಮಾದರಿ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಅಂತ ತಿಳಿಸಿದ್ದರು. 

ದೇವದಾಸಿಗಳು ಅಸ್ಪೃಶ್ಯರು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇದನ್ನ ನೋಡುವಷ್ಟು ತಾಳ್ಮೆ ರಾಜಕಾರಣಿಗಳಿಗೆ(Politicians) ಇಲ್ಲ. ಬಸವರಾಜ ಬೊಮ್ಮಾಯಿ(Basavaraj Bommai) ಒಬ್ಬ ಕೋಮುವಾದಿ(Communalist Chief Minister) ಸಿಎಂ ಆಗಿದ್ದಾರೆ. ಯಾವ ಸಿಎಂ ಕೂಡ ಇಷ್ಟು ಕೋಮುವಾದಿಗಳು ಇರಲಿಲ್ಲ, ಎಲ್ಲರಿಗಿಂತ ಇವರು ಹೆಚ್ಚಿದ್ದಾರೆ. ಅವರ ತಂದೆ(ಎಸ್‌.ಆರ್‌. ಬೊಮ್ಮಾಯಿ) ಒಳ್ಳೆಯ ಪ್ರಗತಿಪರ ಮುಖ್ಯಮಂತ್ರಿ ಆಗಿದ್ದರು ಅಂತ ಹೇಳಿದ್ದರು. 
 

Latest Videos
Follow Us:
Download App:
  • android
  • ios