Asianet Suvarna News Asianet Suvarna News

ಕರ್ನಾಟಕ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಲಿ; ನಟ ಚೇತನ್ ಮನವಿ

ಕರ್ನಾಟಕವೂ ಗಾಂಜಾ ಕೃಷಿ ಕಾನೂನುಬದ್ಧಗೊಳಿಸಲಿ ಎಂದು ನಟ ಚೇತನ್ ಮನವಿ ಮಾಡಿದ್ದಾರೆ. ಚೇತನ್ ಹೇಳಿಕೆಗೆ ಪರವಿರೋಧ ಚರ್ಚೆ ನಡೆಯುತ್ತಿದೆ. 

actor chetan ahimsa says Karnataka must also look into legalising cannabis cultivation sgk
Author
First Published Apr 14, 2023, 11:42 AM IST

ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸ ಒಂದಲ್ಲೊಂದು ಹೇಳಿಕೆ ಮೂಲಕ ಗಮನ ಸೆಳೆಯುತ್ತಿದ್ದಾರೆ.  ಸದಾ ಸದ್ದು ಸುದ್ದಿಯಲ್ಲಿರುವ ನಟ ಚೇತನ್ ಇದೀಗ ಗಾಂಜಾ ಬಗ್ಗೆ ಹೇಳಿಕೆ ನೀಡಿ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಥೈಲ್ಯಾಂಡ್‌ನಲ್ಲಿ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿದೆ. ಭಾರತ ಕೂಡ ಅದನ್ನು ಅನುಸರಿಸಲಿ ಎಂದು ನಟಿ ಚೇತನ್ ಹೇಳಿದ್ದಾರೆ. ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಲು ಯೋಜಿಸುತ್ತಿರುವ ಬಗ್ಗೆಯೂ ಚೇತನ್ ಪ್ರತಿತಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ. 

'ಥೈಲ್ಯಾಂಡ್ ಗಾಂಜಾವನ್ನು ಕಾನೂನು ಬದ್ಧಗೊಳಿಸಿದ ಮೊದಲ ಏಷ್ಯಾದ ರಾಷ್ಟ್ರವಾಗಿದೆ. ಅದರ ಸರ್ಕಾರವು ಕೃಷಿಯನ್ನು ಉತ್ತೇಜಿಸಲು ಲಕ್ಷಾಂತರ ಸಸ್ಯಗಳನ್ನು ನೀಡಲು ಯೋಜಿಸಿದೆ. ನಮ್ಮ ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಕೃಷಿ ಕ್ಷೇತ್ರಗಳನ್ನು ಉತ್ತೇಜಿಸುವ ಗಾಂಜಾವನ್ನು ಕಾನೂನುಬದ್ಧಗೊಳಿಸುವ ಮತ್ತು ನಿಯಂತ್ರಿಸುವ ಮೂಲಕ ಭಾರತವೂ ಇದನ್ನು ಅನುಸರಿಸಬೇಕು' ಎಂದು ಟ್ವೀಟ್ ಮಾಡಿದ್ದಾರೆ. 

ಮತ್ತೊಂದು ಟ್ವೀಟ್‌ನಲ್ಲಿ ಹಿಮಾಚಲದ ಮುಖ್ಯಮಂತ್ರಿಗಳಾದ ಸುಖವಿಂದರ್ ಅವರ ಯೋಜನೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. 'ಹಿಮಾಚಲದ ಮುಖ್ಯಮಂತ್ರಿಗಳಾದ ಸುಖವಿಂದರ್ ಸುಖು ಅವರು ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಲು ಯೋಜಿಸಿದ್ದಾರೆ. ಇದು ಒಳ್ಳೆಯದು' ಎಂದು ಹೇಳಿದ್ದಾರೆ

ಇಬ್ಬರೂ ಜೂಜಿನ ಜಾಹೀರಾತಿನಲ್ಲಿ ಹಣ ಗಳಿಸಿದವರೇ; ಸುದೀಪ್-ಪ್ರಕಾಶ್ ರಾಜ್‌ಗೆ ಚೇತನ್ ಅಹಿಂಸಾ ಟಾಂಗ್

'ಈ ಕೃಷಿಯು ರಾಜ್ಯದ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಮತ್ತು ರೋಗಿಗಳಿಗೆ ಔಷಧೀಯ ಪ್ರಯೋಜನಗಳನ್ನು ಹೇಗೆ ಒದಗಿಸುತ್ತದೆ ಎಂಬುದನ್ನು 5-ಸದಸ್ಯ ಸಮಿತಿಯೊಂದು ಅಧ್ಯಯನ ಮಾಡುತ್ತದೆ. ಉತ್ತರಾಖಂಡ/ಗುಜರಾತ್/ಉತ್ತರ ಪ್ರದೇಶ/ಮಧ್ಯ ಪ್ರದೇಶದಂತೆ, ಕರ್ನಾಟಕವೂ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವತ್ತ ಗಮನಹರಿಸಬೇಕು' ಎಂದು ಹೇಳಿದ್ದಾರೆ.

ಕಲಿಯುಗದ ಕರ್ಣ'ನ ಸ್ಮಾರಕಕ್ಕೆ ಕೆಣಕಿದ ಚೇತನ್‌ಗೆ ಚಿತ್ರರಂಗದಿಂದ ಛೀಮಾರಿ

ಚೇತನ್ ಅವರ ಈ ಹೇಳಿಕೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಅನೇಕರು ಚೇತನ್ ಅವರನ್ನು ತರಾಟೆತೆಗೆದುಕೊಂಡರೆ ಇನ್ನು ಕೆಲವರು ಚೇತನ್ ಹೇಳಿಕೆಯನ್ನು ಬೆಂಬಲಿಸುತ್ತಿದ್ದಾರೆ. 'ದೇಶದ ಆರ್ಥಿಕತೆ ಎಂಬ ನೆಪ ಕೊಟ್ಟು ಯಾವುದೋ ಒಂದು ದೇಶ ಹೆಂಡತಿಯರನ್ನ ಅಡವಿಡುತ್ತೆ ಹಾಗಂತ ನೀನು ಅಡವಿಡ್ತೀಯಾ?' ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಸಮಾಜಘಾತುಕರು. ಈ ಮುಖಗಳು ಕೊಡುವ ಸಂದೇಶವೇ ಹೀಗಿರುತ್ತೆ' ಎಂದು ಹೇಳಿದ್ದಾರೆ. ಮತ್ತೋರ್ವ ಪ್ರತಿಕ್ರಿಯೆ ನೀಡಿ, 'ಗಾಂಜಾ ಸೊಪ್ಪಿಗಿಂತಲೂ ನಿಕೋಟಿನ್ ಇರುವ ಸಿಗರೇಟು ತುಂಬಾ ಅಪಾಯಕಾರಿ' ಎಂದು ಹೇಳಿದ್ದಾರೆ. 

Follow Us:
Download App:
  • android
  • ios