Asianet Suvarna News Asianet Suvarna News

ಇಬ್ಬರೂ ಜೂಜಿನ ಜಾಹೀರಾತಿನಲ್ಲಿ ಹಣ ಗಳಿಸಿದವರೇ; ಸುದೀಪ್-ಪ್ರಕಾಶ್ ರಾಜ್‌ಗೆ ಚೇತನ್ ಅಹಿಂಸಾ ಟಾಂಗ್

ಇಬ್ಬರೂ ಜೂಜಿನ ಜಾಹೀರಾತಿನಲ್ಲಿ ಹಣ ಗಳಿಸಿದವರೇ ಎಂದು ಸುದೀಪ್ ಮತ್ತು ಪ್ರಕಾಶ್ ರಾಜ್‌ಗೆ ಚೇತನ್ ಅಹಿಂಸಾ ಟಾಂಗ್ ನೀಡಿದ್ದಾರೆ.

actor chetan Ahimsa about Kiccha Sudeep and Prakash Raj over politics sgk
Author
First Published Apr 7, 2023, 1:01 PM IST

ಕಿಚ್ಚ ಸುದೀಪ್  ಸಿಎಂ ಬಸವರಾಜ ಬೊಮ್ಮಾಯಿಗೆ  ಬೆಂಬಲ ನೀಡಿದ ಬನ್ನಲ್ಲೇ ಪರ ವಿರೋಧ ಚರ್ಚೆ ನಡೆಯುತ್ತಿದೆ. ಕೆಲವರು ಕಿಚ್ಚನ ಪರ ಮಾತನಾಡಿದ್ರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಸುದೀಪ್ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಬಿಜೆಪಿಗೆ ಬೆಂಬಲ ನೀಡುತ್ತಿದ್ದಂತೆ ನಟ ಪ್ರಕಾಶ್ ರಾಜ್ ಆಶ್ಚರ್ಯ ಮತ್ತು ಆಘಾತಕ್ಕೊಳಗಾಗಿದ್ದಾರೆ. ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿ ಅಸಮಾಧಾನ ಹೊರಹಾಕುತ್ತಿದ್ದಾರೆ ಪ್ರಕಾಶ್ ರಾಜ್. ಇದೀಗ ಇಬ್ಬರೂ ನಟರಿಗೆ ಚೇತನ್ ಅಹಿಂಸಾ ಟಾಂಗ್ ನೀಡಿದ್ದಾರೆ. ಈ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. 

ಇಬ್ಬರೂ ಪ್ರತಿಭಾವಂತ ನಟರು. ಒಬ್ಬರು ಬಿಜೆಪಿ ಪರ & ಮತ್ತೊಬ್ಬರು ಬಿಜೆಪಿ ವಿರೋಧಿ .ಜೂಜಿನ ಜಾಹೀರಾತುಗಳ ಮೂಲಕ ಇಬ್ಬರು ಸಹ ಹೆಚ್ಚು ಹಣವನ್ನು ಗಳಿಸಿದ್ದಾರೆ ಎಂದು ಇಬ್ಬರನ್ನು ತರಾಟೆ ತೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, ಸಿನಿಮಾ ತಾರೆಯೊಬ್ಬರು ಬಿಜೆಪಿ ಪಕ್ಷಕ್ಕೆ ಸೇರಿದರೆ ಉದಾರವಾದಿಗಳು ಅದನ್ನು ‘ಮಾರಾಟ’ ಎನ್ನುತ್ತಾರೆ  ಏಕೆ? ಈ ಉದಾರವಾದಿಗಳು ಈಗಾಗಲೇ ಕಾಂಗ್ರೆಸ್‌/ಜೆಡಿಎಸ್/ಎಎಪಿ ಅಂತಹ ವ್ಯವಸ್ಥಿತ ರಾಜಕೀಯ ಹಿಂದೂ ಶಕ್ತಿಗಳಿಗೆ 'ಮಾರಾಟ' ಆಗಿದ್ದಾರೆ ಎಂದು ಪ್ರಕಾಶ್ ರಾಜ್ ಅವರಿಗೆ ತಿರುಗೇಟು ನೀಡಿದ್ದಾರೆ. 

ನೀವು ಮಾಡಿದ್ದು ಅಷ್ಟೇ; ಸುದೀಪ್ ಕೆಣಕಿದ ಪ್ರಕಾಶ್ ರಾಜ್‌ಗೆ ನೆಟ್ಟಿಗರ ಕ್ಲಾಸ್

ಇಬ್ಬರೂ ಜೂಜಿನ ಜಾಹೀರಾತಿನಲ್ಲಿ ಹಣ ಗಳಿಸಿದವರೇ

'ಬಿಜೆಪಿಗೆ ಸುದೀಪ್ ರವರು ನೀಡಿದ ಬೆಂಬಲದಿಂದ ಪ್ರಕಾಶ್ ರಾಜ್ ರವರು ‘ಆಶ್ಚರ್ಯ & ಆಘಾತಕ್ಕೊಳಗಾಗಿದ್ದಾರೆ . ಇದು ಕುತೂಹಲಕಾರಿ ವಿಷಯವಾಗಿದೆ' ಎಂದು ಚೇತನ್ ಹೇಳಿದ್ದಾರೆ. 
'ಇಬ್ಬರು ಪ್ರತಿಭಾವಂತ ನಟರು. ಒಬ್ಬರು ಬಿಜೆಪಿ ಪರ & ಮತ್ತೊಬ್ಬರು ಬಿಜೆಪಿ ವಿರೋಧಿ - ಜೂಜಿನ ಜಾಹೀರಾತುಗಳ ಮೂಲಕ ಇಬ್ಬರು ಸಹ ಹೆಚ್ಚು ಹಣವನ್ನು ಗಳಿಸಿದ್ದಾರೆ. 
ನಾನು ಇಬ್ಬರ ನಿಲವುಗಳು/ಸಿದ್ಧಾಂತಗಳು ಒಪ್ಪದಿದ್ದರೂ, ಅಂತಹ ಪ್ರಶ್ನಾರ್ಹ ಸಂಪಾದನೆಯನ್ನು ಮೊದಲು ಯಾರು ಸದ್ಬಳಕೆಗೆ ಹಿಂದುರುಗಿಸುತ್ತಾರೋ ಆ ವ್ಯಕ್ತಿ ಮೇಲುಗೈಯಾಗುತ್ತಾರೆ' ಎಂದು ಬರೆದುಕೊಂಡಿದ್ದಾರೆ.

ಈಗಾಗಲೇ ಮಾರಾಟ ಆಗಿದ್ದಾರೆ 

ಈ ಪೋಸ್ಟ್ ಶೇರ್ ಮದಲು ಚೇತನ್, ಪ್ರಕಾಶ್ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿ ಬರೆದುಕೊಂಡಿದ್ದರು. 'ಸಿನಿಮಾ ತಾರೆಯೊಬ್ಬರು ಬಿಜೆಪಿ ಪಕ್ಷಕ್ಕೆ ಸೇರಿದರೆ ಉದಾರವಾದಿಗಳು ಅದನ್ನು ‘ಮಾರಾಟ’ ಎನ್ನುತ್ತಾರೆ — ಏಕೆ? ಏಕೆಂದರೆ ಈ ಉದಾರವಾದಿಗಳು ಈಗಾಗಲೇ ಕಾಂಗ್ರೆಸ್‌/ಜೆಡಿಎಸ್/ಎಎಪಿ ಅಂತಹ ವ್ಯವಸ್ಥಿತ ರಾಜಕೀಯ ಹಿಂದೂ ಶಕ್ತಿಗಳಿಗೆ 'ಮಾರಾಟ' ಆಗಿದ್ದಾರೆ' ಎಂದು ಹೇಳಿದ್ದರು. ಬಿಜೆಪಿ ಮಾತ್ರ ಶತ್ರು ಎಂದು ಹೇಳುವವರು ಕೂಡ ನಮ್ಮ ಶತ್ರುಗಳು. ನಾವು ಅನ್ಯಾಯದ ಮತ್ತು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯ ವಿರುದ್ಧ ಹೋರಾಡಬೇಕು ಎಂದು ಚೇತನ್ ಬರೆದುಕೊಂಡಿದ್ದಾರೆ. 

ಸುದೀಪ್ ಬಿಜೆಪಿಗೆ; ಸುಳ್ಳು ಸುದ್ದಿ, ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದ ಪ್ರಕಾಶ್ ರಾಜ್

ಸಮಸ್ಯೆ ಏನು?

ನಮ್ಮ ಕರ್ನಾಟಕದ ಬಹುಪಾಲು ಜನರು ತಮ್ಮ ಜಾತಿಯ ಆಧಾರದ ಮೇಲೆ ಮತ ಚಲಾಯಿಸಬಹುದಾದರೆ, ಒಬ್ಬ ಚಲನಚಿತ್ರ ತಾರೆಯೊಬ್ಬರು ಮುಖ್ಯಮಂತ್ರಿಯೊಂದಿಗಿನ ತಮ್ಮ ವೈಯಕ್ತಿಕ ಬಾಂಧವ್ಯದ ಆಧಾರದ ಮೇಲೆ ಪಕ್ಷದ ಪರವಾಗಿ ಪ್ರಚಾರ ಮಾಡಿದರೆ ಸಮಸ್ಯೆ ಏನು?

 

Follow Us:
Download App:
  • android
  • ios