ಅಂಬರೀಷ್ ಸ್ಮಾರಕ ಪ್ರಶ್ನಿಸಿದ ನಟ ಅಹಿಂಸಾ ಚೇತನ್‌ಗೆ ಕರ್ನಾಟಕ ಫಿಲ್ಮ್ ಛೇಂಬರ್ ಚಳಿ ಬಿಡಿಸಿದೆ. ಚೇತನ್ ಸಿನಿಮಾ ಮಾಡಬಾರದು, ಸಿನಿಮಾ ಮಾಡಿದರೆ ರಿಲೀಸ್ ಮಾಡಬಾರದು. ಚೇತನ್‌ಗೆ ಬುದ್ಧಿ ಹೇಳಿ ಮುಂದಿನ ತೀರ್ಮಾನ ಎಂದು ಛೇಂಬರ್ ಹೇಳಿದೆ. 

ಬೆಂಗಳೂರು(ಮಾ.31): ನಟ ಚೇತನ್‌ ಅಹಿಂಸಾಗೆ ಸಂಕಷ್ಟ ಮತ್ತೆ ಶುರುವಾಗಿದೆ. ಹಿಂದೂ ವಿರೋಧಿ ಹೇಳಿಕೆ ನೀಡಿ ಜೈಲು ಸೇರಿದ್ದ ಚೇತನ್, ಬಿಡುಗಡೆಯಾದ ಬಳಿಕ ಹಿರಿಯ ನಟ ಅಂಬರೀಷ್ ಸ್ಮಾರಕ ವಿಚಾರ ಕೆದೆಕಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಸರ್ಕಾರದ ಹಣದಿಂದ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಸರ್ಕಾರದ ದುಡ್ಡನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಚೇತನ್ ಅಹಿಂಸಾ ಆರೋಪ ಮಾಡಿದ್ದರು. ಈ ಹೇಳಿಕೆ ಭಾರಿ ತಲ್ಲಣ ಸೃಷ್ಟಿಸಿತ್ತು. ಈ ಕುರಿತು ಕರ್ನಾಟಕ ಫಿಲ್ಮ್ ಛೇಂಬರ್‌ನಲ್ಲಿ ಮಹತ್ವದ ಸಭೆ ನಡೆಸಿದ ಪದಾಧಿಕಾರಿಗಳು, ಚೇತನ್ ಅಹಿಂಸಾ ಚಳಿ ಬಿಡಿಸಿದ್ದಾರೆ. ಪದಾಧಿಕಾರಿಗಳು ಒಕ್ಕೊರಲಿನಿಂದ ಚೇತನ್ ಅಹಿಂಸಾಗೆ ಛೀಮಾರಿ ಹಾಕಿದ್ದಾರೆ. ಅಂಬರೀಷ್ ಸ್ಮಾರಕಕ್ಕೆ ಕುಟುಂಬದವರ ಯವುದೇ ಒತ್ತಾಯ ಇರಲಿಲ್ಲ. ಇದು ಅಭಿಮಾನಿಗಳು ಹಾಗೂ ಚಿತ್ರರಂಗದ ಒತ್ತಾಯದಿಂದ ಸ್ಮಾರಕ ನಿರ್ಮಾಾಣ ಮಾಡಲಾಗಿದೆ ಎಂದು ಛೇಂಬರ್ ಹೇಳಿದೆ.

ಚೇತನ್ ಅಂಹಿಸಾ ಚಿತ್ರರಂಗಕ್ಕೆ ಮುಜುಗರವಾಗುವ ಹೇಳಿಕೆ ನೀಡುತ್ತಿದ್ದಾರೆ. ಅಂಬರೀಷ್ ಸ್ಮಾರಕ ಕುಟುಂಬದ ಒತ್ತಾಯ ಎಂದು ಆರೋಪ ಮಾಡಿದ್ದರು. ಆದರೆ ಇದು ಕನ್ನಡ ಚಿತ್ರರಂಗದ ಒತ್ತಾಯವಾಗಿತ್ತು. ಅಭಿಮಾನಿಗಳ ಒತ್ತಾಯವಾಗಿತ್ತು. ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವನ್ನು ಚೇತನ್ ಅಹಿಂಸಾ ಮಾಡಬಾರದು ಎಂದು ಫಿಲ್ಮ್ ಛೇಂಬರ್ ಅಧ್ಯಕ್ಷ ಬಾಮಾ ಹರೀಶ್ ಹೇಳಿದ್ದಾರೆ.

ನಟ ಅಹಿಂಸಾ ಚೇತನ್‌ ಬಂಧನ: ಹಿಂದುತ್ವದ ವಿರುದ್ಧ ಕೆಟ್ಟದಾಗಿ ಪೋಸ್ಟ್‌

ಡಾ. ರಾಜ್‌ಕುಮಾರ್ ಆಗಲಿ, ಅಂಬರೀಷ್, ಅಪ್ಪು ಅವರದ್ದಾಗಲಿ ಸ್ಮಾರಕ ನಿರ್ಮಾಣ, ಪುತ್ಥಳಿ ನಿರ್ಮಾಣಕ್ಕೆ ಅವರ ಕುಟುಂಬ ಇದುವರೆಗೂ ಒತ್ತಾಯ ಮಾಡಿಲ್ಲ. ಆದರೆ ಚೇತನ್ ಅಹಿಂಸಾ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಈ ಕುರಿತು ಸಭೆ ನಡೆಸಿದ ಪದಾಧಿಕಾರಿಗಳು, ಚೇತನ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಚೇತನ್ ಅಹಿಂಸಾಗೆ ತಿಳಿ ಹೇಳುವು ಪ್ರಯತ್ನ ಮಾಡಲಾಗುತ್ತದೆ. ಆದರೆ ಚೇತನ್ ಕೇಳುವ ಪರಿಸ್ಥಿತಿ ಇಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹೇಳಿದ್ದಾರೆ.

ಛೇಂಬರ್ ಸದಸ್ಯರು ಚೇತನ್ ಕರೆಸಿ ಮಾತನಾಡುತ್ತೇವೆ.ಛೇಂಬರ್ ಮಾತು ಕೇಳದಿದ್ದರೆ, ಮತ್ತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ. ನಾವೆಲ್ಲಾ ಒಂದೇ ಕುಟುಂಬ. ಹೀಗಾಗಿ ಕುಟುಂಬದ ವಿರುದ್ದ ಮಾತನಾಡುವಾಗ ಸ್ಪಷ್ಟತೆ ಇರಬೇಕು. ಇಲ್ಲ ಸಲ್ಲದ ಆರೋಪ ಮಾಡಬಾರದು ಎಂದು ಬಣಕಾರ್ ಸೂಚಿಸಿದ್ದಾರೆ.

ರೇಸ್​ ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರು, ಮಾರ್ಚ್‌ನಲ್ಲಿ ಸ್ಮಾರಕ ಉದ್ಘಾಟನೆ; ಸಿಎಂ ಬಸವರಾಜ ಬೊಮ್ಮಾಯಿ

ಚೇತನ್ ಸಿನಿಮಾ ಮಾಡಬಾರದು. ಮಾಡಿದರೆ ರಿಲೀಸ್ ಮಾಡಬಾರದು. ಅಂಬರೀಷ್ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುವ ಚೇತನ್‌ಕೆ ತಕ್ಕ ಉತ್ತರ ನೀಡಬೇಕು ಎಂದು ನಿರ್ಮಾಪಕರು, ನಿರ್ದೇಶಕರು, ಪ್ರದರ್ಶಕ ವಲಯದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬರೀಷ್ ಅಭಿಮಾನಿಗಳು ಚೇತನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಚೇತನ್ ಹಾಕಿಕೊಂಡು ಸಿನಿಮಾ ಮಾಡುವುದು ಬೇಡ, ಕಾರ್ಮಿಕರು, ಕಲಾವಿದರು ಅವರ ಸಿನಿಮಾದಲ್ಲಿ ಕೆಲಸ ಮಾಡುವುದು ಬೇಡ ಎಂದು ಬಣಕಾರ್ ಆಕ್ರೋಶ ಹೊರಹಾಕಿದ್ದಾರೆ.