ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮನೆಗೆ ನಟ ಅಲ್ಲು ಅರ್ಜುನ್ ಇಂದು ಭೇಟಿ ನೀಡಲಿದ್ದು, ಬೆಂಗಳೂರಿನ ಹೆಚ್‌ಎಎಲ್ ಏರ್‌ಪೋರ್ಟ್‌ಗೆ ಬಂದಿಳಿದಿದ್ದಾರೆ. ಮಧ್ಯಾಹ್ನ ಡಾ.ಶಿವರಾಜಕುಮಾರ್ ಅವರ ನಾಗಾವರದ ಮನೆಗೆ ತೆರಳಿ ಅಲ್ಲಿಂದ ಪುನೀತ್ ರಾಜ್‍ಕುಮಾರ್ ಅವರ ಮನೆಗೆ ಭೇಟಿ ನೀಡಿ ನಂತರ ಸಮಾಧಿ ಸ್ಥಳಕ್ಕೆ ಹೋಗಿ ಅಲ್ಲು ಅರ್ಜುನ್ ನಮನ ಸಲ್ಲಿಸಲಿದ್ದಾರೆ.
ಬೆಂಗಳೂರು (ಫೆ.03): ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಮನೆಗೆ ಟಾಲಿವುಡ್ ನಟ ಅಲ್ಲು ಅರ್ಜುನ್ (Allu Arjun) ಇಂದು ಭೇಟಿ ನೀಡಲಿದ್ದು, ಬೆಂಗಳೂರಿನ ಹೆಚ್‌ಎಎಲ್ ಏರ್‌ಪೋರ್ಟ್‌ಗೆ (HAL Airport) ಬಂದಿಳಿದಿದ್ದು, ಇದೀಗ ಶಿವರಾಜ್‌ಕುಮಾರ್ (Shivarajkumar) ಅವರ ನಾಗಾವರದ ಮನೆಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ದಾರೆ. ಅಲ್ಲಿಂದ ಪುನೀತ್ ರಾಜ್‍ಕುಮಾರ್ ಅವರ ಸದಾಶಿವ ನಗರದ ಮನೆಗೆ ಭೇಟಿ ನೀಡಿ ನಂತರ ಸಮಾಧಿ ಸ್ಥಳಕ್ಕೆ ಹೋಗಿ ಅಲ್ಲು ಅರ್ಜುನ್ ನಮನ ಸಲ್ಲಿಸಲಿದ್ದಾರೆ.
ಈಗಾಗಲೇ ಪುನೀತ್ ರಾಜ್‌ಕುಮಾರ್ ಮನೆ ಮುಂದೆ ಅಲ್ಲು ಅರ್ಜುನ್ ಅಭಿಮಾನಿಗಳ ಜಮಾವಣೆ ಆಗಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಜನ ಅಭಿಮಾನಿಗಳು ಅಪ್ಪು ಮನೆ ಮುಂದೆ ಆಗಮಿಸಿದ್ದು, ಅಲ್ಲು ಅರ್ಜುನ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸದಾಶಿವನಗರ ಪೊಲೀಸರು ಪುನೀತ್ ಮನೆ ಮುಂದೆ ಇದ್ದ ಅಭಿಮಾನಿಗಳನ್ನು ಕಳುಹಿಸಿದ್ದಾರೆ.
Raghavendra Rajkumar: ಅಪ್ಪು ನೆನಪಲ್ಲಿ ಒಂದು ಲಕ್ಷ ಸಸಿ ನೆಡಲು ನಿರ್ಧಾರ
ಪುನೀತ್ ಅವರ ಜೊತೆ ಆತ್ಮೀಯ ಒಡನಾಟವನ್ನು ಹೊಂದಿದ್ದ ಅಲ್ಲು ಅರ್ಜುನ್ ಪುನೀತ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದರು. ಪುನೀತ್ ಅಗಲಿಕೆ ನಂತರ ಈ ಹಿಂದೆ ಅಲ್ಲು ಅರ್ಜುನ್ ಅವರು ಬೆಂಗಳೂರಿಗೆ 'ಪುಷ್ಪ' (Pushpa) ಸಿನಿಮಾ ಪ್ರಚಾರಕ್ಕೆ ಆಗಮಿಸಿದ್ದರು. ಆದರೆ, ಮನೆಗೆ ಭೇಟಿ ನೀಡಿರಲಿಲ್ಲ. ಮಾತ್ರವಲ್ಲದೇ ಪುಷ್ಪ ಪ್ರಚಾರದ ವೇಳೆ ಅಪ್ಪು ಮನೆಗೆ ಭೇಟಿ ನೀಡಿದರೆ ಪ್ರಚಾರ ಪಡೆಯಲು ಈ ರೀತಿ ಮಾಡಿದರು ಎಂಬ ಅಪವಾದಗಳು ಬರುತ್ತವೆಂದು ನಾನು ಭೇಟಿ ನೀಡಿಲ್ಲ.ಹಾಗಾಗಿ ಮತ್ತೊಮ್ಮೆ ಬೆಂಗಳೂರಿಗೆ ಬರುತ್ತೇನೆ' ಎಂದು ಅಲ್ಲು ಅರ್ಜುನ್ ಹೇಳಿದ್ದರು.
'ಪುಷ್ಪಕ ವಿಮಾನಂ' ಚಿತ್ರದ ಪ್ರಮೋಷನ್ ಸಮಯದಲ್ಲಿ ಪುನೀತ್ ಬಗ್ಗೆ ಅಲ್ಲು ಅರ್ಜುನ್, 'ಪುನೀತ್ ಅವರು ನನಗೆ ತುಂಬಾ ವರ್ಷಗಳಿಂದ ಪರಿಚಯ. ನಮ್ಮ ಮನೆಗೆ ಅವರು ಬರುತ್ತಿದ್ದರು. ಎಷ್ಟೋ ಬಾರಿ ಜೊತೆಯಲ್ಲಿ ಕುಳಿತು ಊಟ ಮಾಡಿದ್ದೆವು. ನಮ್ಮಿಬ್ಬರ ನಡುವೆ ಪರಸ್ಪರ ಪ್ರೀತಿ-ವಿಶ್ವಾಸ ಇತ್ತು. ಒಂದು ಡ್ಯಾನ್ಸ್ ಕಾರ್ಯಕ್ರಮದಲ್ಲಿ ನಾವು ಜಡ್ಜ್ ಆಗಿದ್ದೆವು. ಯಾವಾಗ ಮಾತನಾಡಿದರೂ ಬೆಂಗಳೂರಿಗೆ ಬನ್ನಿ ಎಂದು ಕರೆಯುತ್ತಿದ್ದರು. ಆದರೆ ಇಂದು ಸಡನ್ ಆಗಿ ಅವರು ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ' ಎಂದು ಅಲ್ಲು ಅರ್ಜುನ್ ಈ ಹಿಂದೆ ಹೇಳಿದ್ದರು.
Puneeth Rajkumar ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದು ರೋಮಾಂಚನಕಾರಿಯಾಗಿತ್ತು: ಚೇತನ್ ಕುಮಾರ್
ಇದ್ದಕ್ಕಿದ್ದ ಹಾಗೆ ಪುನೀತ್ ಅವರು ನಮ್ಮನ್ನೆಲ್ಲ ಅಗಲಿದರು. ಅವರ ನಿಧನವಾರ್ತೆ ಕೇಳಿದಾಗ ನನಗೆ ನಿಜಕ್ಕೂ ತುಂಬಾ ಶಾಕ್ ಆಯ್ತು. ಜೀವನ ಎಷ್ಟು ಅನಿರೀಕ್ಷಿತ, ಪುನೀತ್ ಹಠಾತ್ ಸಾವಿಗೀಡಾದರು. ನನಗೆ ತುಂಬಾ ಆಘಾತವಾಯಿತು. ಒಂದು ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಬದುಕಿನಲ್ಲಿ ಯಾವಾಗಲೂ ಖುಷಿಯಾಗಿರಿ. ಪುನೀತ್ ಒಳ್ಳೆಯ ವ್ಯಕ್ತಿ ಹಾಗೂ ದೊಡ್ಡ ಸೂಪರ್ ಸ್ಟಾರ್ ಆಗಿದ್ದವರು. ಕನ್ನಡ ಚಿತ್ರರಂಗಕ್ಕಾಗಿ ಅವರು ತುಂಬ ಕೊಡುಗೆ ನೀಡಿದ್ದರು ಎಂದು ಅಲ್ಲು ಅರ್ಜುನ್ ತಿಳಿಸಿದ್ದರು.
