ಕಾನೂನು ವಿವಿ ಯುವ ಜನೋತ್ಸವಕ್ಕೆ ಚೇತನ್‌ ಅಹಿಂಸಾ ಅತಿಥಿಯಾಗಿದ್ದಾರೆ. ಆದರೆ ಚೇತನ್ ಅತಿಥಿಯಾಗಬಾರದು ಎಂದು ಎಬಿವಿಪಿ ಆಕ್ರೋಶ ಹೊರಹಾಕಿದೆ. 

ನಟ ಚೇತನ್ ಅಹಿಂಸಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ರಾಜಕೀಯ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಿದ್ದ ಚೇತನ್, ಸಿದ್ಧರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಗದ್ದುಗೆ ಸಮರದ ಬಗ್ಗೆ ಕಿಡಿಕಾರಿದ್ದರು. ರಾಜಕೀಯ ಮಾತ್ರವಲ್ಲದೆ ಯಾವುದೇ ವಿಚಾರಗಳ ಬಗ್ಗೆಯಾದರೂ ಚೇತನ್ ಪ್ರತಿಕ್ರಿಯೆ ನೀಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಚೇತನ್ ಎಲ್ಲಾ ಅಪ್‌ಡೇಟ್ ನೀಡುತ್ತಿರುತ್ತಾರೆ. ಇದೀಗ ಚೇತನ್ ವಿರುದ್ಧ ಎಬಿವಿಪಿ ಕಿಡಿ ಕಾರುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯದ ಯುವಜನೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಟ ಚೇತನ್ ಅಹಿಂಸಾಗೆ ಆಹ್ವಾನ ಮಾಡಲಾಗಿದೆ. ಚೇತನ್ ಅತಿಥಿ ಎಂದು ಘೋಷಣೆ ಮಾಡುತ್ತಿದ್ದಂತೆ ಕಾನೂನು ವಿವಿ ಯುವ ಜನನೋತ್ಸವ ವಿವಾದದ ಸುಳಿಯಲ್ಲಿ ಸಿಲುಕಿದೆ. ನಟ ಚೇತನ್ ಅಹಿಂಸಾ ಅತಿಥಿಯಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿರೋಧ ವ್ಯಕ್ತಪಡಿಸಿದ್ದು ಚೇತನ್ ಅವರು ಅತಿಥಿಯಾವುದು ಬೇಡ ಎಂದು ಮನವಿ ಉಪಕುಲಪತಿಗಳಿಗೆ ಮಾಡಿದ್ದಾರೆ.

ಈ ಹಿಂದೆ ಲಿಂಗಾಯತರು, ಮಠಾಧೀಶರು ಸ್ವಾರ್ಥ ಜಾತಿ ರಾಜಕಾರಣಕ್ಕೆ ಒತ್ತಾಯಿಸಿದ್ದರು: ಚೇತನ್ ಅಹಿಂಸಾ ಕಿಡಿ

ಜೂನ್ 17ರಂದು ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯದ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದೆ. ಚೇತನ್ ಅವರನ್ನು ವಿರೋಧಿಸಿ ಎಬಿವಿಪಿ ಕಾನೂನು ವಿ.ವಿ ಉಪಕುಲಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕುಲಸಚಿವ ಪ್ರೋ ಡಾ.ಬಸವರಾಜ ಅವರಿಗೆ ABVP ಮನವಿ ಸಲ್ಲಿಸಲಿದೆ. ಚೇತನ್ ಅಹಿಂಸಾ ಅವರನ್ನು ಕಾರ್ಯಕ್ರಮದ‌ ಮುಖ್ಯ ಅತಿಥಿಯಾಗಿ ಆಹ್ವಾನಿಸದಂತೆ ಒತ್ತಾಯ ಮಾಡಲಾಗಿದೆ.

'ವಿಧ್ಯಾರ್ಥಿಗಳಿಗೆ ಆದರ್ಶವಾಗಿರುವವ ವ್ಯಕ್ತಿಗಳನ್ನ ಕರೆಯಿಸಬೇಕು. ಅದರ ಬದಲಾಗಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರನ್ನ ಕರೆಸಬಾರದು' ಎಂದು ಒತ್ತಾಯಿಸಿದ್ದಾರೆ. ಕೂಡಲೆ ಮುಖ್ಯ ಅಥಿತಿಗಳ ಲಿಸ್ಟನಿಂದ ಚೇತನ್ ಅವರನ್ನು ಕೈ ಬಿಡಬೇಕು. ಇಲ್ಲದಿದ್ರೆ ಜೂನ್ 16 ರಿಂದ ಗೋ ಬ್ಯಾಕ್ ಚೇತನ‌್ ಎಂದು ಪ್ರತಿಭಟನೆ ಮಾಡಬೇಕಾಗುತ್ತೆ' ಎಂದು ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ.