Asianet Suvarna News Asianet Suvarna News

ನರಗುಂದದಲ್ಲಿ ಮೋಹಕ ಶುಭಾ ಪೂಂಜ, ಕಾಯಕಯೋಗಿ ರಕ್ಷಾ ಹೋರಾಟ!

ನೈಜ ಘಟ​ನೆ​ಗ​ಳನ್ನು ಆಧ​ರಿ​ಸಿದ ಪಕ್ಕಾ ಕಮ​ರ್ಷಿ​ಯಲ್‌ ಚಿತ್ರ ‘ನರ​ಗುಂದ ಬಂಡಾ​ಯ’. ರೈತರ ಹೋರಾ​ಟದ ಚರಿ​ತ್ರೆ​ಯನ್ನು ಹೇಳುವ ಈ ಚಿತ್ರ​ವನ್ನು ಪ್ರತಿ​ಯೊ​ಬ್ಬರು ನೋಡ​ಬೇಕು ಎಂಬುದು ನಿರ್ದೇ​ಶಕ ನಾಗೇಂದ್ರ ಮಾಗಡಿ ಮನವಿ.

about Shuba punja rakshak kannada movie Naragunda Bandaya
Author
Bangalore, First Published Mar 13, 2020, 3:25 PM IST

ಈ ಚಿತ್ರ ಇದೇ ಮಾ.13ಕ್ಕೆ ತೆರೆ ಕಾಣು​ತ್ತಿದ್ದು, ಸಿನಿಮಾ ಬಿಡು​ಗ​ಡೆಯ ಜತೆಗೆ ಚಿತ್ರದ ಕುರಿತು ಮಾತ​ನಾ​ಡಲು ಚಿತ್ರ​ತಂಡ ಮಾಧ್ಯ​ಮ​ಗಳ ಮುಂದೆ ಆಗ​ಮಿ​ಸಿತು. ಶುಭಾ ಪೂಜಾ ಹಾಗೂ ರಕ್ಷಾ… ಚಿತ್ರದ ಜೋಡಿ. 1980ರಲ್ಲಿ ನರ​ಗುಂದ​ದಲ್ಲಿ ನಡೆದ ಘಟ​ನೆಯೇ ಈ ಚಿತ್ರಕ್ಕೇ ಪ್ರೇರಣೆ ಆಗಿದ್ದು, ಆ ದಿನ​ಗಳ ಕತೆ​ ಈಗಲೂ ಪ್ರಸ್ತುತ ಎಂಬು​ದಕ್ಕೆ ಅದು ರೈತ​ರಿಗೆ ಸಂಬಂಧಿ​ಸಿದ್ದು. ಆ ಕಾರ​ಣಕ್ಕೆ ಇದನ್ನು ಸಿನಿಮಾ ಮಾಡ​ಲಾ​ಗಿದೆ. ಉತ್ತರ ಕರ್ನಾ​ಟಕ ಭಾಗದ ಒಂದು ಪವ​ರ್‌​ಫುಲ್‌ ಕತೆ​ಯನ್ನು ಈ ಸಿನಿಮಾ ಒಳ​ಗೊಂಡಿದೆ. ಚಿತ್ರದಲ್ಲಿ ನಟಿ​ಸಿ​ರುವ ಪ್ರತಿ​ಯೊ​ಬ್ಬರು ಅವ​ರ​ವರ ಪಾತ್ರಕ್ಕೆ ನ್ಯಾಯ ಸಲ್ಲಿ​ಸಿ​ದ್ದಾರೆ. ಹೊಸ ರೀತಿಯ ಅನು​ಭವ ನೀಡುವ ಸಿನಿಮಾ ಇದು ಎಂಬು​ದ​ರಲ್ಲಿ ಎರಡು ಮಾತಿಲ್ಲ. ಈಗಿನ ಜನ​ರೇ​ಷ​ನ್‌ಗೆ ನರ​ಗುಂದ ವಿಷಯ ಗೊತ್ತಿಲ್ಲ. ಆ ಒಂದು ರೋಚಕ ಕಥನ ತೆರೆ ಮೇಲೆ ಮೂಡಿ​ದರೆ ಹೇಗಿ​ರು​ತ್ತದೆ ಎನ್ನುವ ಕುತೂ​ಹಲ ಇದ್ದ​ವರು ಈ ಸಿನಿಮಾ ನೋಡ​ಬೇಕು ಎಂಬುದು ನಿರ್ದೇಶ ನಾಗೇಂದ್ರ ಮಾಗಡಿ ಅವರ ಮಾತು.

ಚಿತ್ರ ವಿಮರ್ಶೆ: ದ್ರೋಣ

ನಟಿ ಶುಭಾ ಪೂಂಜಾ ಮೊದಲ ಬಾರಿಗೆ ರೈತ ಮಹಿ​ಳೆಯ ಪಾತ್ರ ಮಾಡಿ​ದ್ದಾರೆ. ಹಳ್ಳಿಯ ಹಿನ್ನೆ​ಲೆ​ಯಲ್ಲಿ ಸಾಗುವ ಕತೆ​ಯಲ್ಲಿ ರೈತ ಹೋರಾ​ಟ​ಗಾ​ರನ ಪತ್ನಿ ಪಾತ್ರ ಮಾಡಿ​ರು​ವು​ದಕ್ಕೆ ಖುಷಿ ಇದೆ. ರೆಗ್ಯೂ​ಲರ್‌ ಸಿನಿ​ಮಾ​ಗಳ ಜತೆಗೆ ಇಂಥ ಅಪ​ರೂಪ ಕತೆ ಇರುವ ಸಿನಿ​ಮಾ​ಗ​ಳಲ್ಲಿ ನಟಿ​ಸು​ವು​ದಕ್ಕೆ ಖುಷಿ ಇದೆ. ಈ ರೀತಿಯ ಚಿತ್ರ​ಗಳು ದೊಡ್ಡ ಮಟ್ಟ​ದಲ್ಲಿ ಗೆಲ್ಲ​ಬೇಕು. ಉತ್ತರ ಕರ್ನಾ​ಟ​ಕದ ಭಾಗ​ದಲ್ಲಿ ಹಳ್ಳಿ​ಗ​ಳಲ್ಲಿ ಓಡಾ​ಡಿದ್ದು, ಅಲ್ಲೇ ಇದ್ದು ಶೂಟಿಂಗ್‌ ಮಾಡಿದ್ದು ನನಗೆ ವಿಷೇಶ ಅನು​ಭವ ನೀಡಿತು ಎಂದು ಶುಭಾ ಪೂಂಜಾ ಹೇಳಿ​ಕೊಂಡರು. ‘ಪುಟ್ಟ​ಗೌ​ರಿ’ ಧಾರಾ​ವಾಹಿ ಮೂಲಕ ಕಿರು​ತೆ​ರೆ​ಯಲ್ಲಿ ಗುರು​ತಿ​ಸಿ​ಕೊಂಡಿ​ರುವ ರಕ್ಷಿತ್‌ ಅಲಿ​ಯಾಸ್‌ ರಕ್ಷಾ…, ಮೊದ​ಲ ಬಾರಿಗೆ ಚಿತ್ರದ ನಾಯ​ಕ​ನಾಗಿ ‘ನರ​ಗುಂದ ಬಂಡಾ​ಯ’ ಚಿತ್ರದ ಮೂಲಕ ಬರು​ತ್ತಿ​ದ್ದಾರೆ. ರೈತರ ಬದು​ಕಿನ ಚಿತ್ರ​ಣ​ವನ್ನು ಹೇಳು​ತ್ತಲೇ ಅವರ ಹೋರಾ​ಟದ ಕೆಚ್ಚು ಈಗಿನ ಪೀಳಿ​ಗೆಗೆ ತಿಳಿ​ಸುವ ನಿಟ್ಟಿ​ನಲ್ಲಿ ಈ ಸಿನಿಮಾ ಬಂದಿದೆ ಎಂಬುದು ರಕ್ಷಾ… ಅವರ ಅಭಿ​ಪ್ರಾಯ. ಈ ಕಾರ​ಣಕ್ಕೆ ಈ ಚಿತ್ರ​ವನ್ನು ನೋಡ​ಬೇಕು ಎಂಬುದು ಅವರ ಪ್ರೀತಿಯ ಬೇಡಿಕೆ ಕೂಡ ಹೌದು.

ಚಿತ್ರ ವಿಮರ್ಶೆ: ಬಿಚ್ಚುಗತ್ತಿ

ಭವ್ಯ, ನೀನಾಸಂ ಅಶ್ವ​ತ್‌್ಥ, ಸುನಂದ ಈ ಚಿತ್ರ​ದ ಮುಖ್ಯ ಪಾತ್ರ​ಗ​ಳಲ್ಲಿ ನಟಿ​ಸಿ​ದ್ದಾರೆ. ಶೇಖರ್‌ ಯಳುವಿ​ ಹಾಗೂ ಎಸ್‌ ಜಿ ಸಿದ್ದೇಶ್‌ ವಿರ​ಕ್ತ​ಮ​ಠ ಈ ಚಿತ್ರವನ್ನು ಅದ್ದೂ​ರಿ​ಯಾಗಿ ನಿರ್ಮಾಣ ಮಾಡಿ​ದ್ದಾರೆ. ಕೇಶ​ವಾ​ದಿತ್ಯ ಚಿತ್ರಕ್ಕೆ ಸಂಭಾ​ಷಣೆ ಬರೆ​ದಿ​ದ್ದಾರೆ. ಆರ್‌ ಗಿರಿ ಛಾಯಾ​ಗ್ರಾ​ಹಣ, ಯಶೋ​ವ​ರ್ಧ​ನ್‌ ಸಂಗೀತ ಚಿತ್ರ​ಕ್ಕಿದೆ.

Follow Us:
Download App:
  • android
  • ios