ಚಿತ್ರ ವಿಮರ್ಶೆ: ಬಿಚ್ಚುಗತ್ತಿ

ರಾಮಾ​ಯ​ಣ​ವನ್ನು ರಾವ​ಣನ ಮೂಲಕ ನೋಡಿ​ದರೆ ಹೇಗಿ​ರು​ತ್ತದೆ, ಗೌತಮ ಬುದ್ಧನ ಅಹಿಂಸೆ​ಯನ್ನು ಅಂಗುಲಿ​ಮಾ​ಲನ ದೃಷ್ಟಿಕೋನ​ದಲ್ಲಿ ನೋಡಿ​ದಾಗ ಏನ​ನಿ​ಸು​ತ್ತದೆ, ಹಾಗೆ ಚರಿ​ತ್ರೆ​ಯಲ್ಲಿ ವಿಲ​ನ್‌​ಗಳು ಅನಿ​ಸಿ​ಕೊಂಡ​ವರ ನೆರ​ಳಿ​ನಲ್ಲಿ ಆ ದಿನ​ಗಳ ಕತೆ​ಗ​ಳನ್ನು ಓದಿ​ದಾಗ ಎಂಥ ರೋಚಕ ಮೂಡು​ತ್ತದೆ ಎಂಬು​ದಕ್ಕೆ ಸಾಹಿತಿ ಬಿ ಎಲ್‌ ವೇಣು ಅವರ ‘ದಳ​ವಾಯಿ ದಂಗೆ’ ಕಾದಂಬರಿ ಉತ್ತಮ ಉದಾ​ಹ​ರಣೆ. 

Rajavardhan Kannada movie Bicchugatti film review

ಆರ್‌ ಕೇಶ​ವ​ಮೂ​ರ್ತಿ

ಪಾಳೆ​ಗಾ​ರರ ಸಾಮ್ರಾ​ಜ್ಯಕ್ಕೆ ಕಾವಲು ಇದ್ದ​ ದಳ​ವಾ​ಯಿ​ಗಳ ನಾಯ​ಕನೇ ಮುದ್ದಣ್ಣ. ಮುಂದೆ ಪಾಳೆ​ಗಾ​ರರ ಆಡ​ಳಿ​ತ​ದ​ಲ್ಲಿನ ಆಂತರಿಕ ಕಲ​ಹವಾದಾಗ ಅದ​ನ್ನೇ ಬಂಡ​ವಾಳ ಮಾಡಿ​ಕೊಂಡ ದಳ​ವಾಯಿ ಮುದ್ದಣ್ಣ ಆಡಿದ ಚದು​ರಂಗ ಆಟವೇ ‘ದಳ​ವಾಯಿ ದಂಗೆ’ ಚಿತ್ರದ ಮುಖ್ಯ ಕತೆ. ಪಾಳೆ​ಗಾ​ರ​ರ ಇತಿ​ಹಾಸ ಪುಟ​ಗ​ಳನ್ನು ದಳ​ವಾಯಿ ಮುದ್ದಣ್ಣ ಮೂಲಕ ನೋಡುತ್ತ ಭರ​ಮಣ್ಣ ನಾಯಕ ಮತ್ತು ದಳ​ವಾಯಿ ಮುದ್ದ​ಣ್ಣ​ನನ್ನು ಮುಖಾ​ಮುಖಿ ಆಗಿ​ಸು​ತ್ತಾರೆ. ಹೀಗೆ ಇಬ್ಬರ ಮುಖಾ​ಮುಖಿಯ ರೋಚಕ ಇತಿ​ಹಾಸದ ಕಥ​ನವೇ ‘ಬಿಚ್ಚು​ಗ​ತ್ತಿ’ ಚಿತ್ರದ ಮುಖ್ಯ ಸರಕು.

ಡಿಂಗ್ರಿ ನಾಗರಾಜ್‌ ಪುತ್ರ ರಾಜವರ್ಧನ್‌ ಕಮಾಲ್‌; 'ಬಿಚ್ಚುಗತ್ತಿ' ಬಗ್ಗೆ ನೀವೇ ಕೇಳಿ!

ನಿರ್ದೇ​ಶಕ ಹರಿ ಸಂತೋಷ್‌ ಅವರು ಗತಿ​ಸಿದ ಚರಿ​ತ್ರೆಗೆ ಸಿನಿಮಾ ಕನ್ನಡಿ ಇಡುವ ಸಾಹಸ ಮಾಡಿ​ದ್ದಾರೆ. ಚರಿ​ತ್ರೆಯ ಪುಟ​ಗ​ಳು, ಕತೆಗ​ಳು, ವ್ಯಕ್ತಿ​ಗಳು, ಅವರ ಜೀವನ ವರ್ತ​ಮಾ​ನಕ್ಕೆ ರೋಚ​ಕ​ವಾ​ಗಿರು​ತ್ತವೆ. ಅಂಥ ಐತಿ​ಹಾ​ಸಿಕ ಪುಟ​ಗಳ ಕತೆ​ಗಳು ಸಿನಿಮಾ ಪರದೆ ಮೇಲೆ ದೃಶ್ಯ​ಗ​ಳಾಗಿ ಮೂಡಿ​ದಾಗ ಕುತೂ​ಹಲ ಹೆಚ್ಚಾ​ಗು​ವುದು ಸಹಜ. ‘ಬಿಚ್ಚು​ಗ​ತ್ತಿ’ ಸಿನಿಮಾ ಕೂಡ ಹೀಗೆ ಎಲ್ಲರ ಗಮನ ಸೆಳೆ​ದಿದ್ದು ನಿಜ. ಒಬ್ಬ​ರಿ​ಗೆ ಸಿಂಹಾಸ​ನದ ದಾಹ, ಮತ್ತೊ​ಬ್ಬ​ರಿಗೆ ಸಾಮ್ರಾ​ಜ್ಯದ ಉಳಿ​ಸುವ ಜವಾ​ಬ್ದಾರಿ. ಈ ಅಧಿ​ಕಾರ ದಾಹ, ಸಾಮ್ರಾಜ್ಯ ಕಟ್ಟುವ ಜವಾ​ಬ್ದಾರಿ ಈ ಎರಡು ಎದೆ ಸೆಟೆದು ಎದು​ರು​ಬ​ದರು ನಿಂತಾಗ, ಇವರ ನಡುವೆ ಸಿದ್ದಾಂಬೆ ಕತ್ತಿ ಝಳ​ಪಿ​ಸಿ​ದಾಗ, ತಮ್ಮ ನಾಯ​ಕನ ವಿರು​ದ್ಧವೇ ಸೈನಿ​ಕರು ದಂಗೆ ಎದ್ದಾಗ, ಮುದ್ದ​ಣ್ಣ​ನ ಪತ್ನಿಯೇ ಸತ್ಯ ಬಿಚ್ಚಿ​ಟ್ಟಾಗ, ಒಬ್ಬ ಸಾಮಾನ್ಯ ಯುವಕ ಭರ​ಮಣ್ಣ ನಾಯಕನಾಗು​ವು​ದು ಹೇಗೆ ಎಂಬು​ದನ್ನು ತಿಳಿಯಲು ನೀವು ಈ ಸಿನಿಮಾ ನೋಡ​ಬೇಕು. ಇಲ್ಲಿ​ವ​ರೆಗೂ ನಾವು ಓದಿ​ರುವ ಚರಿ​ತ್ರೆಯ ಪುಟ​ಗಳು ತೆರೆ ಮೇಲೆ ಹೇಗೆ ಮೂಡಿವೆ ಎನ್ನುವ ಕುತೂ​ಹಲ ಈ ಚಿತ್ರ ಉತ್ತ​ರ​ವಾ​ಗು​ತ್ತ​ದೆ. ಇಲ್ಲಿ ಕಾದಂಬ​ರಿ​ಕಾರ ತನ್ನ ಕೆಲ​ಸ​ವನ್ನು ಅಚ್ಚು​ಕ​ಟ್ಟಾಗಿ ಮಾಡಿ​ದ್ದಾರೆ.

'ಬಿಚ್ಚುಗತ್ತಿ' ಗಾಗಿ ಹೊಸ ವರಸೆ ಶುರು ಮಾಡಿದ ಹರಿಪ್ರಿಯಾ!

ಆದರೆ, ಆ ಕಾದಂಬ​ರಿ​ಯನ್ನು ಸಿನಿಮಾ ಮಾಡುವ ಹೊತ್ತಿ​ನಲ್ಲಿ ನಿರ್ದೇ​ಶ​ಕರು, ಇಡೀ ಚಿತ್ರದ ಕತೆ​ಯನ್ನು ಮೂವರು ಪಾತ್ರ​ಧಾ​ರಿ​ಗಳ ಹೆಗಲ ಮೇಲೆ ಹಾಕಿ ಸುಮ್ಮ​ನಾ​ಗು​ತ್ತಾರೆ. ಸಿದ್ದಾಂಬೆ ಹರಿ​ಪ್ರಿಯಾ, ದಳ​ವಾಯಿ ಮುದ್ದ​ಣ್ಣ ಪಾತ್ರಧಾರಿ ತೆಲುಗು ನಟ ಪ್ರಭಾಕರ್‌, ಭರ​ಮಣ್ಣ ನಾಯ​ಕ​ನಾಗಿ ರಾಜ್‌​ವ​ರ್ದನ್‌; ಇವರೇ ಚಿತ್ರ​ವನ್ನು ಮುಂದು​ವ​ರಿ​ಸಿ​ಕೊಂಡು ಹೋಗು​ತ್ತಾರೆ. ಹೀಗಾಗಿ ಮುದ್ದ​ಣ್ಣ ಆಡುವ ತಪ್ಪು ತಪ್ಪಾದ ಕನ್ನಡ ಭಾಷೆ, ನಿರ್ದೇ​ಶ​ಕರ ಅಧ್ಯ​ಯನ ಕೊರ​ತೆ​ಯಿಂದ ಪೇಲವ ದೃಶ್ಯ​ಗ​ಳಾಗಿ ಮೂಡುವ ಈ ಚಿತ್ರ ಇಷ್ಟ​ವಾ​ಗು​ವುದು ಅದರ ಮೂಲ ಕತೆಯ ಕಾರ​ಣಕ್ಕೆ. ಜತೆಗೆ ಹರಿ​ಪ್ರಿಯಾ ಮತ್ತು ರಾಜ್‌​ವ​ರ್ಧನ್‌ ಅವರ ಸ್ಕ್ರೀನ್‌ ಪ್ರಸೆನ್ಸಿನಿಂದ. ಶ್ರೀನಿ​ವಾಸಮೂರ್ತಿ, ರಮೇಶ್‌ ಪಂಡಿತ್‌ ಮುಂತಾದ ಪ್ರಬುದ್ಧ ನಟ​ರಿಂದ ‘ಬಿಚ್ಚು​ಗ​ತ್ತಿ’ಯನ್ನು ದರ್ಶನ ಮಾಡಿ​ಕೊ​ಳ್ಳ​ಬ​ಹು​ದು.

ಸೀಮಿತ ಅವ​ಕಾ​ಶ​ದಲ್ಲೇ ಚಿತ್ರ​ವನ್ನು ಕಟ್ಟಿ​ಕೊಡುವ ಗುರು​ಪ್ರ​ಶಾಂತ್‌ ರೈ ಅವರ ಛಾಯಾ​ಗ್ರ​ಹಣ. ಹಾಗಂತ ಕತೆ ಇಲ್ಲಿಗೆ ಮುಗಿ​ದಿಲ್ಲ. ಮೊಗ​ಲರ ದಾಳಿ ಮತ್ತು ಭರ​ಮ​ಣ್ಣನ ಅಬ್ಬರದ ಕಾಳಗವನ್ನು ‘ದಳ​ವಾಯಿ ದಂಗೆ-2’ರಲ್ಲಿ ನೋಡ​ಬ​ಹುದು.

Latest Videos
Follow Us:
Download App:
  • android
  • ios