ಸದ್ಯ ನಿರ್ದೇ​ಶಕ ಚೇತನ್‌ ಕುಮಾರ್‌ ಅವರು ಡೈಲಾಗ್‌ ರೀಡಿಂಗ್‌​ನಲ್ಲಿ ಬ್ಯುಸಿ​ಯಾ​ಗಿ​ದ್ದಾರೆ. ಈ ನಡುವೆ ಮಾಚ್‌ರ್‍ 17ಕ್ಕೆ ಚಿತ್ರದ ಮೋಷನ್‌ ಪೋಸ್ಟರ್‌ ಬಿಡು​ಗ​ಡೆಗೆ ಮಾಡಲು ತಯಾರಿ ಮಾಡಿ​ಕೊಂಡಿ​ದ್ದಾರೆ.

ತಾರಾ​ಮೆ​ರು​ಗು: ಕಿಶೋರ್‌ ಪತ್ತಿ​ಕೊಂಡ ನಿರ್ಮಾ​ಣದ, ಶ್ರೀಶ ಕೂದುವಳ್ಳಿ ಕ್ಯಾಮೆರಾ, ಚರಣ್‌ ರಾಜ್‌ ಸಂಗೀ​ತದ ಈ ಚಿತ್ರ​ದಲ್ಲಿ ಪುನೀ​ತ್‌​ರಾ​ಜ್‌​ಕು​ಮಾರ್‌ ಸೇರಿ​ದಂತೆ 250 ರಿಂದ 300 ಜನ ಕಲಾ​ವಿ​ದರು ಚಿತ್ರ​ದಲ್ಲಿ ಬರುತ್ತಾರೆ.

ಶೂಟಿಂಗ್‌ ಸ್ಪಾಟ್‌: ಕಲ​ರ್‌​ಫು​ಲ್ಲಾ​ಗಿ​ರುವ ಒಂದು ಸೆಟ್‌ ಹಾಕ​ಲಾ​ಗಿತ್ತು. ರವಿ​ವರ್ಮ ಸಾಹಸ ನಿರ್ದೇ​ಶ​ನ​ದಲ್ಲಿ ಒಂದು ಫೈಟ್‌ ಚಿತ್ರೀ​ಕ​ರಣ ಮಾಡ​ಲಾ​ಗಿದೆ. ಇದರ ನಡುವೆ ಚಿತ್ರದ ಕೆಲ ಮಾತಿನ ಭಾಗದ ಚಿತ್ರೀ​ಕ​ರಣ ಮಾಡ​ಲಾ​ಗಿದೆ. ಮೇಕಿಂಗ್‌ ಕಡೆಗೆ ಹೆಚ್ಚು ಗಮನ ಕೊಡ​ಲಾ​ಗು​ತ್ತಿದೆ. ಯಾಕೆಂದರೆ ಕತೆ ಹೇಗೆ ಹೇಳಿ​ದರೂ ಅದನ್ನು ಹೊಸ ರೀತಿಯ ದೃಶ್ಯ​ಗಳ ಮೂಲಕ ಹೇಳ​ಬೇಕು ಎಂಬುದು ‘ಜೇಮ್ಸ್‌’ ನಿರ್ದೇ​ಶ​ಕ ಚೇತನ್‌ ಕುಮಾರ್‌ ನಂಬಿಕೆ. ಹೀಗಾಗಿ ಚಿತ್ರ​ವನ್ನು ಸಾಕಷ್ಟುಅದ್ದೂ​ರಿ​ಯಾ​ಗಿಯೇ ನಿರ್ಮಾಣ ಮಾಡ​ಲಿದ್ದು, 20ಕ್ಕೂ ಹೆಚ್ಚು ಸೆಟ್‌​ಗ​ಳನ್ನು ಹಾಕ್ವು ಪ್ಲಾನ್‌ ಚಿತ್ರ​ತಂಡದ್ದು. ಚಿತ್ರದ ನಾಯಕ ಪುನೀತ್‌ ರಾಜ್‌​ಕು​ಮಾರ್‌ ಅವರು ಕಾರ್ಪೋ​ರೇಟ್‌ ಸ್ಟೈಲ್‌ನ ನ್ಯೂ ಲುಕ್‌​ನ​ಲ್ಲಿ ತೆರೆ ಮೇಲೆ ಬರ​ಲಿ​ದ್ದಾರೆ. ಈಗಾ​ಗಲೇ ಚಿತ್ರದ ಫಸ್ಟ್‌ ಲುಕ್‌ ನೋಡಿ​ದ​ವ​ರಿಗೆ ಅಪ್ಪು, ಹೊಸ​ತನ ಗೊತ್ತಾ​ಗ​ಲಿದೆ. ಬೆಂಗ​ಳೂರು ಸೇರಿ​ದಂತೆ ಉತ್ತರ ಕರ್ನಾ​ಟಕ, ಉತ್ತರ ಭಾರ​ತದ ಕೆಲವು ವಿಶೇ​ಷ​ವಾದ ಸ್ಥಳ​ಗ​ಳಲ್ಲಿ ಸಿನಿಮಾ ಶೂಟಿಂಗ್‌ ಮಾಡಿ​ಕೊ​ಳ್ಳ​ಲಿದೆ. ಜತೆಗೆ ವಿದೇಶಿ ತಾಣ​ಗ​ಳಲ್ಲಿ ಹಾಡು​ಗಳ ಚಿತ್ರೀ​ಕ​ರಣ ಮಾಡುವ ಪ್ಲಾನ್‌ ನಿರ್ದೇ​ಶ​ಕ​ರದ್ದು.

ಈ ಕೆಲಸಕ್ಕಾಗಿ ಸಂಭಾವನೆಯನ್ನೇ ಪಡೆಯದ ಅಪ್ಪು, ನಿಜಕ್ಕೂ ಗ್ರೇಟ್!

ಪ್ರತಿ ದಿನ 120ಕ್ಕೂ ಹೆಚ್ಚು ತಂತ್ರ​ಜ್ಞರ ತಂಡ​ದೊಂದಿಗೆ ‘ಜೇಮ್ಸ್‌’ ಚಿತ್ರಕ್ಕೆ ಕೆಲಸ ಮಾಡು​ತ್ತಿ​ದ್ದೇನೆ. ಯಾವುದೇ ಚಿತ್ರಕ್ಕೆ ಕೆಲಸ ಮಾಡಿ​ದರೂ ಬರ​ವ​ಣಿ​ಗೆಯೇ ನನ್ನ ಮೊದಲ ನಂಬಿಕೆ. ಯಾವ ಹೀರೋಗೆ ಸಿನಿಮಾ ಮಾಡು​ತ್ತಿ​ದ್ದೇವೆ, ಅವರ ಅಭಿ​ಮಾ​ನಿ​ಗಳು ನಿರೀಕ್ಷೆ, ನಿರ್ಮಾ​ಪ​ಕರ ಗುರಿ, ಚಿತ್ರ​ರಂಗದ ಊಹೆ​ಗಳು, ನಾಯಕ ನಟನ ಹಿಂದಿ​ನ ಕೆರಿ​ಯರ್‌ ಇವೆ​ಲ್ಲ​ವನ್ನೂ ಗಮ​ನ​ದ​ಲ್ಲಿ​ಟ್ಟು​ಕೊಂಡು ಕತೆ ಬರೆ​ಯು​ವುದು, ಬರೆದ ಕತೆಗೆ ತಕ್ಕಂತೆ ಪಾತ್ರ​ಗ​ಳನ್ನು ರೂಪಿ​ಸು​ವ ಸವಾಲು ಮುಟ್ಟಿ​ದರೆ ಸಿನಿಮಾ ಅರ್ಧ ಗೆದ್ದಂತೆ. ಚಿತ್ರ​ಮಂದಿ​ರಕ್ಕೆ ಬಂದ ಮೇಲೆ ನಮ್ಮ ಉಳಿ​ದರ್ಧ ಗೆಲುವು ಪ್ರೇಕ್ಷ​ಕರ ಕೈಯ​ಲ್ಲಿ​ರು​ತ್ತದೆ.- ಚೇತನ್‌ಕುಮಾರ್‌

ಸಣ್ಣ ವಯಸ್ಸಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಪುನೀತ್ ಮಗಳು ದೃತಿ...

ಯಾವಾಗ ತೆರೆಗೆ ಬರು​ತ್ತೆ?: ಶೂಟಿಂಗ್‌ ಈಗ ಆರಂಭ​ವಾ​ಗಿ​ದೆ. ಅಲ್ಲದೆ ‘ಯುವ​ರ​ತ್ನ’ ಬಿಡು​ಗ​ಡೆಯ ಸಾಲಿ​ನಲ್ಲಿ ‘ಜೇಮ್ಸ್‌’ಗಿಂತ ಮೊದಲು ಇದೆ. ಹೀಗಾಗಿ ‘ಜೇಮ್ಸ್‌’ ಸಿನಿಮಾ ಬಿಡು​ಗಡೆ ದಿನಾಂಕ​ವನ್ನು ಪಕ್ಕಾ ಮಾಡಿ​ಕೊಂಡಿಲ್ಲ. ಎಲ್ಲವೂ ಅಂದು​ಕೊಂಡಂತೆ ಆದರೆ ಈ ವರ್ಷದ ಕೊನೆ​ಯಲ್ಲಿ ಬರುವ ಸಾಧ್ಯ​ತೆ​ಗ​ಳಿವೆ.