ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್ ಸುಲ್ತಾನ್‌ ದರ್ಶನ್‌ ಅಭಿನಯದ 'ರಾಬರ್ಟ್‌' ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ, ತಮಿಳಿನಲ್ಲೂ ಸದ್ದು ಮಾಡುತ್ತಿದೆ.

ಪೋಸ್ಟರ್‌, ಟೀಸರ್‌ ಹಾಗೂ ಸಾಂಗ್ ಮೂಲಕವೇ ಒಂದಾದ ಮೇಲೊಂದು ದಾಖಲೆಗಳನ್ನು ಸೃಷ್ಟಿಸುತ್ತಿರುವ ರಾಬರ್ಟ್‌ ಚಿತ್ರದಲ್ಲಿ ದರ್ಶನ್‌ಗೆ ಜೋಡಿಯಾಗಿ ಆಶಾ ಭಟ್ ಮಿಂಚುತ್ತಿದ್ದಾರೆ. ತರುಣ್‌  ಸುಧೀರ್‌ ನಿರ್ದೇಶನ ಹಾಗೂ ಉಮಾಪತಿ ನಿರ್ಮಾಣದ ಸಿನಮಾಗಳು ಈಗಾಗಲೇ ಹಲವು ದಾಖಲೆಗಳನ್ನು ಸೃಷ್ಟಿಸಿ, ಇತಿಹಾಸ ಸೃಷ್ಟಿಸುತ್ತಿದೆ.

ಯುಟ್ಯೂಬ್‌ನಲ್ಲಿ ಡಿಬಾಸ್ ಹವಾ, ರಾಬರ್ಟ್ ಬಂದ ದಾರಿಬಿD!

ಏಪ್ರಿಲ್‌ 6ರಂದು ರಾಜ್ಯದ್ಯಾಂತ ತೆರೆ ಕಾಣುತ್ತಿರುವ ರಾಬರ್ಟ್‌ ಚಿತ್ರದ ವಿತರಣೆ ಬಗ್ಗೆ ಇದುವರೆಗೂ ಅಧಿಕೃತ ಮಾಹಿತಿ ಇಲ್ಲವಾದರೂ, ಕೆಲವು ಮೂಲಗಳ ಪ್ರಕಾರ ವಿತರಣೆ ಹಕ್ಕು 35 ಕೋಟಿ ರೂ.ಗೆ ಮಾರಾಟವಾಗಿದೆ. ಕನ್ನಡ ಹಾಗೂ ತಮಿಳಿನಲ್ಲಿ ತೆರೆ ಕಾಣುತ್ತಿರುವ ರಾಬರ್ಟ್‌ ಟಿವಿ ಮತ್ತು ಡಿಜಿಟಲ್ ಹಕ್ಕುಗಳಿಗೆ ಸಂಬಂಧಿಸಿದಂತೆ ಸುಮಾರು 60 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ. ನಿರ್ಮಾಪಕರು ಅಥವಾ ಚಿತ್ರತಂಡದವರು ವಿತರಣೆಯಲ್ಲಿ ಗಳಿಸಿರುವ ಮೊತ್ತದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ನೀಡದಿದ್ದರೂ, ಗಾಂಧಿ ನಗರದಲ್ಲಿ ಈ ರೀತಿಯ ಸುದ್ದಿಯೊಂದು ಹರಿದಾಡುತ್ತಿದೆ.

"

ಮಾರ್ಚ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ