ಖಾಸಗಿ ಹೋಟೆಲ್‌ನಲ್ಲಿ ಅಭಿಷೇಕ್-ಅವಿವಾ ನಿಶ್ಚಿತಾರ್ಥ; ಯಾರಿಗೆಲ್ಲ ಇದೆ ಆಹ್ವಾನ?
ಸೈಲೆಂಟ್ ಆಗಿ ನಡೆಯುತ್ತಿದೆ ಅಂಬಿ ಮಗನ ನಿಶ್ಚಿತಾರ್ಥ. ಎಲ್ಲಿ ನಡೆಯುತ್ತಿದೆ ಹಾಗೂ ಯಾರೆಲ್ಲ ಬರುತ್ತಿದ್ದಾರೆ ?

ಕನ್ನಡ ಚಿತ್ರರಂಗದ ಓನ್ಲಿ ರೆಬೆಲ್ ಸ್ಟಾರ್ ಅಂಬರೀಸ್ ಮತ್ತು ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ನಿಶ್ಚಿತಾರ್ಥ ಇಂದು ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಹುಡುಗಿ ಯಾರು? ನೀವೇ ಹುಡುಕಿ ಕೊಡಿ ಎಂದು ಕೆಲವು ದಿನಗಳ ಹಿಂದೆ ಸಮಲತಾ ಹೇಳಿಕೆ ನೀಡಿದ್ದರು. ಹೀಗಾಗಿ ಸೈಲೆಂಟ್ ಆಗಿ ನಡೆಯುತ್ತಿರುವ ನಿಶ್ಚಿತಾರ್ಥಕ್ಕೆ ಯಾರಿಗೆಲ್ಲ ಆಹ್ವಾನ ನೀಡಿದ್ದಾರೆ? ತಯಾರಿ ಯಾವ ರೀತಿ ಇದೆ ಎಂಬುದ ಬಗ್ಗೆ ಮಾಹಿತಿ ಇಲ್ಲಿದೆ....
ಬೆಂಗಳೂರಿನ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ಇಂದು ನಿಶ್ಚಿತಾರ್ಥ ನಡೆಯಲಿದೆ. ಅಂಬಿ ನಿವಾಸದಿಂದ ಸುಮಲತಾ ಮತ್ತು ಕುಟುಂಬಸ್ತರು ಬೆಳಗ್ಗೆ 9.30ಗೆ ಹೋಟೆಲ್ ಕಡೆ ನಡೆದಿದ್ದಾರೆ. ಐಷಾರಾಮಿ ಕಾರುಗಳಲ್ಲಿ ಕುಟುಂಬಸ್ತರು, ಸ್ನೇಹಿತರು ಮತ್ತು ಸಿನಿಮಾ- ರಾಜಕೀಯ ಗಣ್ಯರು ಆಗಮಿಸುತ್ತಿದ್ದಾರೆ. ಟೈಟ್ ಸೆಕ್ಯೂರಿಟಿ ಇರುವ ಕಾರಣ ಯಾವುದೇ ವಿಡಿಯೋ ಅಥವಾ ಫೋಟೋ ರಿವೀಲ್ ಆಗಿಲ್ಲ.
ಫೇಮಸ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಆಗಿರುವ ಅವಿವಾ ಬಿದ್ದಪ್ಪ ಮತ್ತು ಕುಟುಂಬಸ್ತರು ಕೂಡ ಹೋಟೆಲ್‌ಗೆ ಆಗಮಿಸಿದ್ದಾರೆ. ಸಕಲ ಸಿದ್ಧತೆಗಳು ನಡೆಯುತ್ತಿದ್ದು ನವ ಜೋಡಿ ಫೋಟೋ ಮತ್ತು ವಿಡಿಯೋ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ನಿಶ್ಚಿತಾರ್ಥಕ್ಕೆ ಸಚಿವರಾದ ಅಶ್ವಥ್ ನಾರಾಯಣ್ ಕೂಡ ಆಗಮಿಸಿದ್ದಾರೆ. ಹೋಟೆಲ್ ಪ್ರವೇಶಿಸುತ್ತಿರುವ ಕಾರು ವಿಶ್ಯುವಲ್ಸ್‌ಗಳು ವೈರಲ್ ಅಗುತ್ತಿದೆ.
ಸ್ವಿಮ್ ಸೂಟ್ ಬ್ರ್ಯಾಂಡ್ ಒಡತಿ ಅವಿವಾ ಬಿದ್ದಪ್ಪ ಈಗ ಅಭಿಷೇಕ್ ಅಂಬರೀಶ್ ಪತ್ನಿ ಆಗ್ತಿದ್ದಾರೆ?
ನಾಲ್ಕು ವರ್ಷಗಳಿಂದ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಪ್ರೀತಿಸುತ್ತಿದ್ದಾರೆ, ತಮ್ಮ ಪ್ರೀತಿ ವಿಚಾರವನ್ನು ಕುಟುಂಬಕ್ಕೆ ತಿಳಿಸಿ ಗ್ರೀನ್ ಸಿಗ್ನಲ್ ಪಡೆದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಜನವರಿ 2023ರ ಸಂಕ್ರಾಂತಿ ಹಬ್ಬದಂದು ಅದ್ಧೂರಿಯಾಗಿ ಮದುವೆ ನಡೆಯಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಅವಿವಾ ಬಿದ್ದಪ್ಪ ಯಾರು?
ಅವಿವಾ ಬಿದ್ದಪ್ಪ ಫ್ಯಾಷನ್ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಸ್ವಿಮ್ ಸೂಟ್ ಬ್ರ್ಯಾಂಡ್‌ನ ಲಾಂಚ್ ಮಾಡಿದ್ದಾರೆ. ಪೊಲ್ಕಾ ಡಾಟ್ಸ್ ಇರುವ ಇಂಡಿಯನ್ ವೇರ್ ಸ್ವಿಮ್ ಸೂಟ್ ಲಾಂಚ್ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಮೂರ್ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಗುರು ಹಿರಿಯರ ಒಪ್ಪಿಗೆ ಪಡೆದುಕೊಂಡು ಅರಮನೆ ಮೈದಾನದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. 'ನಿದ್ರೆಗೆ ಹೆಚ್ಚಿನ ಪ್ರಮುಖ್ಯತೆ ನೀಡುತ್ತೇನೆ ಹೀಗಾಗಿ ಬೇಗ ಮಲಗಿಕೊಂಡು ಬೆಳಗ್ಗೆ ಬೇಗ ಎದ್ದು ನಾನು ವ್ಯಾಯಾಮ ಮುಗಿಸಿ ತಿಂಡಿ ತಿಂದು ಕೆಲಸ ಶುರು ಮಾಡುವ ಕಾಮನ್ ಹುಡುಗಿ ನಾನು. ಬಾಲ್ಯದಿಂದಲ್ಲೂ ನಾನು ಟಾಮ್ ಬಾಯ್ ಆಗಿದ್ದ ಕಾರಣ ಈ ವೃತ್ತಿ ಜೀವನ ನನಗೆ ಎಂದುಕೊಂಡಿರಲಿಲ್ಲ' ಎಂದು ಡೈಲಿ ಸಲಾರ್ ಸಂದರ್ಶನದಲ್ಲಿ ಅವಿವಾ ಮಾತನಾಡಿದ್ದಾರೆ.