ಸ್ವಿಮ್ ಸೂಟ್ ಬ್ರ್ಯಾಂಡ್ ಒಡತಿ ಅವಿವಾ ಬಿದ್ದಪ್ಪ ಈಗ ಅಭಿಷೇಕ್ ಅಂಬರೀಶ್ ಪತ್ನಿ ಆಗ್ತಿದ್ದಾರೆ?
ಅಂಬಿ ಮನೆ ಸೊಸೆ ಅವಿವಾ ಬಿದ್ದಪ್ಪ. ನಿಶ್ಚಿತಾರ್ಥ ಮದುವೆ ಯಾವಾಗ?
ಕನ್ನಡ ಚಿತ್ರರಂಗದ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಮತ್ತು ಮದುವೆ ವಿಚಾರ ದೊಡ್ಡ ವದಂತಿ ಆಗಿದೆ.
ಕೆಲವ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಜೊತೆ ಡಿಸೆಂಬರ್ 11ರಂದು ನಿಶ್ಚಿತಾರ್ಥ ನಡೆಯಲಿದೆ.
ಡಿಸೆಂಬರ್ 8 ಅಂಬಿ ಮತ್ತು ಸುಮಲತಾ ವಿವಾಹ ವಾರ್ಷಿಕೋತ್ಸವ, ಈ ದಿನ ನಿಶ್ಚಿತಾರ್ಥ ಮತ್ತು ಮದುವೆ ವಿಚಾರವನ್ನು ಅಧಿಕೃತ ಮಾಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಅವಿವಾ ಬಿದ್ದಪ್ಪ ಫ್ಯಾಷನ್ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಸ್ವಿಮ್ ಸೂಟ್ ಬ್ರ್ಯಾಂಡ್‌ನ ಲಾಂಚ್ ಮಾಡಿದ್ದಾರೆ. ಪೊಲ್ಕಾ ಡಾಟ್ಸ್ ಇರುವ ಇಂಡಿಯನ್ ವೇರ್ ಸ್ವಿಮ್ ಸೂಟ್ ಲಾಂಚ್ ಮಾಡಿದ್ದಾರೆ.
ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಮೂರ್ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಗುರು ಹಿರಿಯರ ಒಪ್ಪಿಗೆ ಪಡೆದುಕೊಂಡು ಅರಮನೆ ಮೈದಾನದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ.
'ನಿದ್ರೆಗೆ ಹೆಚ್ಚಿನ ಪ್ರಮುಖ್ಯತೆ ನೀಡುತ್ತೇನೆ ಹೀಗಾಗಿ ಬೇಗ ಮಲಗಿಕೊಂಡು ಬೆಳಗ್ಗೆ ಬೇಗ ಎದ್ದು ನಾನು ವ್ಯಾಯಾಮ ಮುಗಿಸಿ ತಿಂಡಿ ತಿಂದು ಕೆಲಸ ಶುರು ಮಾಡುವ ಕಾಮನ್ ಹುಡುಗಿ ನಾನು. ಬಾಲ್ಯದಿಂದಲ್ಲೂ ನಾನು ಟಾಮ್ ಬಾಯ್ ಆಗಿದ್ದ ಕಾರಣ ಈ ವೃತ್ತಿ ಜೀವನ ನನಗೆ ಎಂದುಕೊಂಡಿರಲಿಲ್ಲ' ಎಂದು ಡೈಲಿ ಸಲಾರ್ ಸಂದರ್ಶನದಲ್ಲಿ ಅವಿವಾ ಮಾತನಾಡಿದ್ದಾರೆ.