ಅಭಿಷೇಕ್-ಅವಿವಾ ಬೀಗರೂಟಕ್ಕೆ ಮಂಡ್ಯದಲ್ಲಿ ಭರ್ಜರಿ ಸಿದ್ದತೆ: ಬಾಡೂಟದ ಮೆನು ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ

ಅಭಿಷೇಕ್-ಅವಿವಾ ಬೀಗರೂಟಕ್ಕೆ ಮಂಡ್ಯದಲ್ಲಿ ಭರ್ಜರಿ ಸಿದ್ದತೆ ನಡೆಯುತ್ತಿದೆ. ಬಾಡೂಟದ ಮೆನು ನೋಡಿದ್ರೆ ಬಾಯಲ್ಲಿ ನೀರು ಬರುವಂತಿದೆ.

abhishek Ambareesh and aviva wedding begaruta on June 16th in Mandya sgk

ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಜೂನ್ 5ರಂದು ಬಹುಕಾಲದ ಗೆಳತಿ ಅವಿವಾ ಬಿದಪ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಫ್ಯಾಷನ್ ಡಿಸೈನರ್ ಅವಿವಾ ಬಿದಪ ಮತ್ತು ಅಭಿಷೇಕ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇದೀಗ ಪತಿ ಪತ್ನಿಯರಾಗಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರದಲ್ಲಿ ಇಬ್ಬರೂ ಅದ್ದೂರಿಯಾಗಿ ವಿವಾಹವಾದರು. ಅಭಿ-ಅವಿವಾ ಮದುವೆಗೆ ಅನೇಕ ಗಣ್ಯರು ಆಗಮಿಸಿ ಶುಭಹಾರೈಸಿದರು. ಜೂನ್ 5ರಂದು ದಾಂಪತ್ಯ ಕಾಲಿಟ್ಟ ಅವಿವಾ ಮತ್ತು ಅಭಿಷೇರ್ ಜೂನ್ 7ರಂದು ಅದ್ದೂರಿ ಆರತಕ್ಷತೆ ಮಾಡಿಕೊಂಡರು. 

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅದ್ದೂರಿ ಆರತಕ್ಷತೆ ಸಮಾರಂಭದಲ್ಲಿ ಅನೇಕ ಗಣ್ಯರು ಹಾಜರಿದ್ದರು. ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ಸೇರಿದಂತೆ ಅನೇಕರು ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದರು. ಆರತಕ್ಷತೆ ಬಳಿಕ ಚಿತ್ರರಂಗದವರಿಗಾಗಿ ಅಭಿಷೇಕ್ ಅದ್ದೂರಿ ಪಾರ್ಟಿ ಹಮ್ಮಿಕೊಂಡಿದ್ದರು. ಇದೀಗ ಮಂಡ್ಯದಲ್ಲಿ ಬೀಗರೂಟಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.     

ಮೋದಿ ಕಾರ್ಯಕ್ರಮ ನಡೆದಿದ್ದ ಜಾಗದಲ್ಲೇ ಬೀಗರೂಟ

ಮಂಡ್ಯದಲ್ಲಿ ಅಭಿಷೇಕ್  ಮತ್ತು ಅವಿವಾ ಮದುವೆಯ ಬೀಗರ ಔತಣಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಪ್ರಧಾನಿ ಮೋದಿ ಕಾರ್ಯಕ್ರಮ ನಡೆದಿದ್ದ ಜಾಗದಲ್ಲೇ ಬಾಡೂಟ ಆಯೋಜನೆ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆ ಮದ್ದೂರು ತಾ ಗೆಜ್ಜಲಗೆರೆ ಕಾಲೋನಿ ಬಳಿ ಕಾರ್ಯಕ್ರಮ ನಡೆಯುತ್ತಿದೆ. ಇದೇ ಸ್ಥಳದಲ್ಲಿ ಪ್ರಧಾನಿ ಮೋದಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟಿಸಿದ್ದರು. ಅದೇ ಜಾಗದಲ್ಲಿ ಜೂನ್ 16 ಶುಕ್ರವಾರ ಅದ್ದೂರಿಯಾಗಿ ಬೀಗರೂಟ ನಡೆಯುತ್ತಿದೆ. 

ಅಭಿಷೇಕ್-ಅವಿವಾ ವೆಡ್ಡಿಂಗ್ ಪಾರ್ಟಿ: ಸಂಭ್ರಮದಲ್ಲಿ ಯಶ್, ಶಿವಣ್ಣ, ಪ್ರಭುದೇವ, ಜಯಪ್ರದಾ ಸೇರಿ ತಾರೆಯರ ದಂಡು

ಈಗಾಗಲೇ ಬೀಗರ ಔತಣಕೂಟಕ್ಕೆ ಸಂಸದೆ ಸುಮಲತಾ ಕುಟುಂಬಸ್ಥರು ಹಾಗೂ ಆಪ್ತ ವಲಯ ಸಿದ್ಧತೆ ನಡೆಸುತ್ತಿದ್ದಾರೆ. ಸುಮಾರು 15ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಿ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 50 ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ. ಸಿದ್ಧತೆ ನಡೆಯುತ್ತಿರುವ ಬಗ್ಗೆ ಅಂಬರೀಶ್ ಕುಟುಂಬದ ಆಪ್ತ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ ಪರಿಶೀಲನೆ ನಡೆಸುತ್ತಿದ್ದಾರೆ. ಈವೇಳೆ ರಾಜ್ ಲೈನ್ ಜೊತೆ  ಅಂಬರೀಶ್ ಅಣ್ಣನ ಮಗ ಮದನ್, ಸುಮಲತಾ ಬೆಂಬಲಿಗರು ಭಾಗಿ‌ಯಾಗಿದ್ದರು. 

ಅಭಿಷೇಕ್ ಸಂಗೀತ್‌ನಲ್ಲಿ ಕುಣಿದು ಕುಪ್ಪಳಿಸಿದ ಸುಮಲತಾ, ಮಾಲಾಶ್ರೀ: ಹೇಯ್ ಜಲೀಲ ಹಾಡಿಗೆ ಸಖತ್ ಡ್ಯಾನ್ಸ್..!
 
ಊಟದ ಮೆನು 

ಬೀಗರ ಊಟ ಅಂದ್ಮೇಲೆ ಭರ್ಜರಿ ಬಾಡೂಟ ಇರಲಿದೆ. ಅಭಿ ಮತ್ತು ಅವಿವಾ ಮದುವೆ ಬೀಗರೂಟ ಪಕ್ಕಾ ಮಂಡ್ಯ ಶೈಲಿಯಲ್ಲಿಯೇ ಇರಲಿದೆಯಂತೆ. ಸಂಪೂರ್ಣ ಮಂಡ್ಯ ಶೈಲಿಯಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುದ್ದೆ, ಬೋಟಿ ಗೊಜ್ಜು, ಮಟನ್, ಚಿಕನ್, ಮೊಟ್ಟೆ, ಗೀ ರೈಸ್, ಅನ್ನ ತಿಳಿ ಸಾಂಬಾರ್, ಮಜ್ಜಿಗೆ, ಬೀಡಾ, ಐಸ್ ಕ್ರೀಂ ಮೆನು ಸೇರಿದಂತೆ ಇನ್ನೂ ಸಾಕಷ್ಟು ವೆರೈಟಿ ಇರಲಿದೆ. 
 

Latest Videos
Follow Us:
Download App:
  • android
  • ios