Ambareesh Birthday: ಅಭಿಷೇಕ್-ಅವಿವಾ ವಿಶೇಷ ಗೌರವ, ಭಾವಿ ಪತ್ನಿ ಜೊತೆ ಅಂಬಿ ಪುತ್ರ ಡ್ಯೂಯೆಟ್; ವಿಡಿಯೋ ವೈರಲ್
ಅಂಬರೀಷ್ ಹುಟ್ಟುಹಬ್ಬಕ್ಕೆ ಅಭಿಷೇಕ್ ಮತ್ತು ಅವಿವಾ ಬಿಡಪ ವಿಶೇಷ ಗೌರವ ಸಲ್ಲಿಸಿದ್ದಾರೆ. ಭಾವಿ ಪತಿ ಜತೆ ಡ್ಯೂಯೆಟ್ ಹಾಡಿರುವ ಅವಿವಾ ವಿಡಿಯೋ ವೈರಲ್ ಆಗಿದೆ.

ರೆಬಲ್ ಸ್ಟಾಕ್ ಅಂಬರೀಷ್ ಹಾಗೂ ಸುಮಲತಾ ಪುತ್ರ, ನಟ ಅಭಿಷೇಕ್ ಅಂಬರೀಷ್ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸಿ ಇದೀಗ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಇಂದು (ಮೇ 29) ರೆಬಲ್ ಸ್ಟಾರ್ ಅವರ ಜನ್ಮದಿನ. ಕುಟುಂಬದವರು ಹಾಗೂ ಅಭಿಮಾನಿಗಳು ಅಂಬಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಈ ವಿಶೇಷ ದಿನದೊಂದು ಅಂಬಿ ಪುತ್ರ ಅಭಿಷೇಕ್ ಮತ್ತು ಭಾವಿ ಸೊಸೆ ಅವಿವಾ ವಿಶೇಷ ಗೌರವ ಸಲ್ಲಿಸಿದ್ದಾರೆ. ಅಂಬರೀಷ್ ಅವರ ಸೂಪರ್ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಅಭಿಷೇಕ್ ಮತ್ತು ಅವಿವಾ ಇಬ್ಬರೂ ಅಂಬರೀಷ್ ಅವರ ಸೂಪರ್ ಹಿಟ್ ಹಾಡುಗಳಾದ ‘ಒಲವಿನ ಉಡುಗೊರೆ ಕೊಡಲೇನು..’, ‘ಚಳಿ ಚಳಿ ತಾಳೆನು ಈ ಚಳಿಯ..’, ‘ಮಂಡ್ಯದ ಗಂಡು..’ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರೂ ರೆಟ್ರೋ ಶೈಯಲ್ಲಿ ಕಾಣಿಸಿಕೊಂಡಿದ್ದಾರೆ. ಅವಿವಾ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಡಾನ್ಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ನೋಡದ ಅಭಿಮಾನಿಗಳು ಅಂಬರೀಷ್ ನೆನಪಾದರು ಎಂದು ಹೇಳಿದ್ದಾರೆ.
ಅಂದಹಾಗೆ ಈ ವಿಡಿಯೋವನ್ನು ಕೆಆರ್ಜಿ ಕನೆಕ್ಟ್ಸ್ ಅವರು ಬಿಡುಗಡೆ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡು ಇದು ರೆಬಲ್ ಸ್ಟಾರ್ ಅವರಿಗೆ ವಿಶೇಷ tribute ಎಂದು ಹೇಳಿದ್ದಾರೆ.
‘ಸ್ಯಾಂಡಲ್ವುಡ್ನ ರೆಬೆಲ್ ಸ್ಟಾರ್, ನಮ್ಮೆಲ್ಲರ ಪ್ರೀತಿಯ ಡಾ. ಅಂಬರೀಷ್ ಅವರ ಹುಟ್ಟುಹಬ್ಬದ ಸ್ಮರಣೆಯಲ್ಲಿ ಒಂದು ವಿಶೇಷವಾದ tribute. ಅಭಿಷೇಕ್ ಅಂಬರೀಷ್ ಹಾಗೂ ಅವಿವ ಬಿಡಪ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು’ ಎಂದು ಕೆಆರ್ಜಿ ಕನೆಕ್ಟ್ಸ್ ವಿಡಿಯೋ ಶೇರ್ ಮಾಡಿ ಬರೆದುಕೊಂಡಿದ್ದಾರೆ.
Happy Birthday Ambareesh: ಬಾಲ್ಯದ ಆ ತುಂಟತನ ನಿಮ್ಮಲ್ಲಿ ಕೊನೆವರೆಗೂ ಇತ್ತು- ಸುಮಲತಾ ಭಾವುಕ ಸಾಲು
ಬ್ಯಾಡ್ ಮ್ಯಾನರ್ಸ್‌ನಲ್ಲಿ ಅಭಿಷೇಕ್ ಬ್ಯುಸಿ
ಅಭಿಷೇಕ್ ಸದ್ಯ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅಮರ್ ಸಿನಿಮಾ ಮೂಲಕ ಅಭಿಷೇಕ್ ಬ್ಯಾಡ್ ಮ್ಯಾನರ್ಸ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸುಕ್ಕಾ ಸೂರಿ ಸಾರಥ್ಯದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಕ್ರೈಂ ಥ್ರಿಲ್ಲರ್ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಅಭಿಷೇಕ್ಗೆ ಜೊತೆಯಾಗಿ ರಚಿತಾ ರಾಮ್, ಪ್ರಿಯಾಂಕಾ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಅಭಿಷೇಕ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇಂದು ಅಂಬರೀಷ್ ಹುಟ್ಟುಹಬ್ಬದ ಪ್ರಯುಕ್ತ ಬ್ಯಾಡ್ ಮ್ಯಾನರ್ಸ್ ತಂಡ ಚಿಕ್ಕ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.
ಜೂನ್ 5 ಮದುವೆ, 7 ಆರತಕ್ಷತೆ, ಮಂಡ್ಯದಲ್ಲಿ ಬಾಡೂಟ; ಅಭಿಷೇಕ್ ಅಂಬರೀಶ್ ಮದುವೆ ಅಮಂತ್ರಣ ವೈರಲ್!
ಮದುವೆ ಯಾವಾಗ, ಎಲ್ಲಿ?
ಜೂನ್ 4ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5 ಮಾಣಿಕ್ಯ-ಚಾಮರ ವಜ್ರದಲ್ಲಿ 9.30 ರಿಂದ 10.30ರ ಸಮಯದಲ್ಲಿ ಕರ್ಕಾಟಕ ಲಗ್ನದಲ್ಲಿಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮೂಲಗ ಪ್ರಕಾರ ಮಂಡ್ಯದಲ್ಲಿ ಅದ್ದೂರಿ ಬಾಡೂಟ ವ್ಯವಸ್ಥೆ ಹಾಗೂ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.