ಜೂನ್ 5 ಮದುವೆ, 7 ಆರತಕ್ಷತೆ, ಮಂಡ್ಯದಲ್ಲಿ ಬಾಡೂಟ; ಅಭಿಷೇಕ್ ಅಂಬರೀಶ್ ಮದುವೆ ಅಮಂತ್ರಣ ವೈರಲ್!
ಜ್ಯೂನಿಯರ್ ರೆಬೆಲ್ ಸ್ಟಾರ್ ಮದುವೆ ಆಮಂತ್ರಣ ಪತ್ರಿಕೆ ವೈರಲ್. ಮಂಡ್ಯದಲ್ಲಿ ಬಾಡೂಟ ಅಂತ ಅಭಿಮಾನಿಗಳು ಫುಲ್ ಖುಷ್...
ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಮತ್ತು ಅವಿವಾ ಬಿಡಪ ಜೂನ್ 5ರಂದು ಹಸೆಮಣೆ ಏರಲಿದ್ದಾರೆ.
ಜೂನ್ 5ರಂದು ಬೆಳಗ್ಗೆ 9.30 ರಿಂದ 10.30ರ ಸಮಯದಲ್ಲಿ ಕರ್ಕಾಟಕ ಲಗ್ನದಲ್ಲಿ ಮಾಣಿಕ್ಯ-ಚಾಮರ ವಜ್ರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಜೂನ್ 7ರಂದು ಸಂಜೆ 7ರಿಂದ ತ್ರಿಪುರವಾಸಿನಿ ಪ್ಯಾಲೆಸ್ ಗ್ರೌಂಡ್‌ನಲ್ಲಿ (Palace grounds) ಆರತಕ್ಷತೆ (Wedding reception) ನಡೆಯಲಿದೆ.
ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಮಂಡ್ಯದಲ್ಲಿ (Mandya) ಬಾಡೂಟ ವ್ಯವಸ್ಥೆ ಹಾಗೂ ಸಣ್ಣ ಆರತಕ್ಷತೆ ನಡೆಯಲಿದೆ.
ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ (Designer Prasad Bidappa) ಮತ್ತು ಶ್ರೀ ಜುಡಿತ್ ಬಿಡಪ ಪುತ್ರಿ ಅವಿವಾ ಕೂಡ ಫ್ಯಾಷನ ಡಿಸೈನರ್.
'ನನ್ನ ಎಂಗೇಜ್‌ಮೆಂಟ್‌ನ ಬ್ರೇಕಿಂಗ್ ನ್ಯೂಸ್ ನಾನು ಮಾಡಿಲ್ಲ ಅದೇ ಲೀಕ್ ಅಗಿ ಹೋಯ್ತು. ಪ್ರೈವೇಟ್ ಆಗಿ ಮಾಡಿಕೊಳ್ಳಬೇಕು ಅನ್ನೋ ಆಸೆ ತುಂಬಾ ಇತ್ತು. ನನ್ನ ಜೀವನದಲ್ಲಿ ಎಲ್ಲಾ ಪಬ್ಲಿಕ್ ಆಗಿದೆ ಬೆಳಗ್ಗಿನಿಂದ ರಾತ್ರಿವರೆಗೂ ಪಬ್ಲಿಕ್....ಚಿಕ್ಕ ವಯಸ್ಸಿನಿಂದ ಎಲ್ಲಾ ಪಬ್ಲಿಕ್ ಚಡ್ಡಿ ಹಾಕೊಂಡು ಬಂದ್ರೂ ಪಬ್ಲಿಕ್....ಏನೂ ಪ್ರೈವೇಟ್ ಆಗಿಲ್ಲ ನನ್ನ ಜೀವನದಲ್ಲಿ ಎಂದು ಈ ಹಿಂದೆ ಅಭಿಷೇಕ್ ಹೇಳಿದ್ದರು.
ಅವಿವಾ ಕೂಡ ಅಭಿಷೇಕ್ ಜೊತೆಗಿರುವ ಫೋಟೋ ಹಂಚಿಕೊಂಡು 'ನನ್ನ ಜೀವನದ ಬೆಸ್ಟ್ ಹುಟ್ಟುಹಬ್ಬವಿದು. ಯಾರೆಲ್ಲಾ ಸಮಯ ಕೊಟ್ಟು ನನಗೆ ವಿಶ್ ಮಾಡಿದ್ದೀರಿ ಖುಷಿ ಆಯ್ತು ಎಂದು ಬರೆದುಕೊಂಡಿದ್ದಾರೆ.
ಅವಿವಾ ಪೋಸ್ಟ್‌ಗೆ ಅಭಿ 'ಖುಷಿಯಾಗಿರುವ ಲಿಟಲ್ ಪಪ್. ನೀನು ಸದಾ ಖುಷಿಯಾಗಿರಬೇಕು' ಎಂದು ಕಾಮೆಂಟ್ ಮಾಡಿದ್ದಾರೆ. ಕಾಶ್ಮೀರದಲ್ಲಿ ಅವಿವಾ ಮತ್ತು ಅಭಿಷೇಕ್ ರೊಮ್ಯಾಂಟಿಕ್ ಅಗಿ ಪೋಸ್ ಕೊಟ್ಟಿದ್ದಾರೆ. ಮತ್ತೊಂದು ಫೋಟೋದಲ್ಲಿ ಅಭಿ ಕಿಸ್ ಮಾಡಿದ್ದಾರೆ.