ಬೈಕ್‌ನಲ್ಲಿ ಓಡಾಡಬೇಡ ಎಂದು ತಮ್ಮ ಕಾರನ್ನು ಕಾಶಿನಾಥ್ ಪುತ್ರನಿಗೆ ಕೊಡಲು ನಿರ್ಧರಿಸಿದ್ದ ಸುದೀಪ್; ಘಟನೆ ಬಿಚ್ಚಿಟ್ಟ ಅಭಿಮನ್ಯು
ಕಾಶಿನಾಥ್ ಪುತ್ರನಿಗೆ ಬಿಗ್ ಸಪೋರ್ಟ್ ಆಗಿ ನಿಂತ ಕಿಚ್ಚ ಸುದೀಪ್. ಸಿಸಿಎಲ್ ಸಮಯದಲ್ಲಿ ನಡೆದ ಘಟನೆಯನ್ನು ಹಂಚಿಕೊಂಡ ನಟ.....
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಯೊಬ್ಬ ಕಲಾವಿದರನ್ನು ಗೌರವಿಸಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ತಮಗೆ ಎಷ್ಟೇ ನೋವಿದ್ದರೂ ಕಷ್ಟವಿದ್ದರೂ ತೋರಿಸಿಕೊಳ್ಳದೆ ತಮ್ಮವರಿಗಾಗಿ ಗಟ್ಟಿಯಾಗಿ ನಿಲ್ಲುತ್ತಾರೆ. ಕಾಶಿನಾಥ್ ಪುತ್ರ ಅಭಿಮನ್ಯ ನಟನೆಯ ಎಲ್ಲಿಗೆ ಪ್ರಯಣ ಯಾವುದೋ ದಾರಿ ಚಿತ್ರದ ಟ್ರೈಲರ್ ಲಾಂಚ್ ಮಾಡಿಕೊಡುತ್ತಾರೆ ಸುದೀಪ್. ಸಿಸಿಎಲ್ ಸಮಯದಿಂದ ಅಭಿಮನ್ಯು ಮತ್ತು ಸುದೀಪ್ ಪರಿಚಯವಾಗಿದ್ದು, ಆ ಸಮಯದಲ್ಲಿ ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ.
'ಸಿಸಿಎಲ್ ಸಮಯದಲ್ಲಿ ನಾನು ಸುದೀಪ್ ಅವರಿಗೆ ಪರಿಚಯವಾಗುತ್ತೀನಿ ಅಲ್ಲಿಂದ ಪ್ರತಿ ಹೆಚ್ಚೆಯಲ್ಲೂ ನನಗೆ ಸಪೋರ್ಟ್ ಮಾಡುತ್ತಿದ್ದಾರೆ. ಸಿಸಿಎಲ್ ಆರಂಭವಾದ ಸಮಯದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳಬೇಕು, ಮೊದಲು ಸಿಸಿಎಲ್ ಪ್ರಾಕ್ಟೀಸ್ ಪ್ಯಾಲೆಸ್ ಗ್ರೌಂಡ್ಸ್‌ನಲ್ಲಿ ನಡೆಯುತ್ತಿತ್ತು. ಬೆಳಗ್ಗೆ 5.30ಗೆ ಪ್ರಾಕ್ಟೀಸ್ ಶುರುವಾಗುತ್ತಿತ್ತುಆಗ ಸುದೀಪ್ ಸರ್ ಕರೆಕ್ಟ್ ಟೈಂಗೆ ಆಗಮಿಸುತ್ತಿದ್ದರು ನಾವು ಸಿಸಿಎಲ್ ಎಂದು ಸುಖಸುಮ್ಮನೆ ಪ್ರಾಕ್ಟೀಸ್ ಮಾಡುತ್ತಿರಲಿಲ್ಲ ಸೀರಿಯಸ್ ಆಗಿ ಪ್ರತಿಯೊಬ್ಬರು ಪ್ರಾಕ್ಟೀಸ್ ಮಾಡುತ್ತಿದ್ದರು. ಪ್ರತಿ ಶನಿವಾರ ಮತ್ತು ಭಾನುವಾರ ನೆಲಮಂಗಲದಲ್ಲಿ ಇರುವ ಆದಿತ್ಯಾ ಗ್ರೌಂಡ್ಸ್‌ನಲ್ಲಿ ಮ್ಯಾಚ್ ನಡೆಯುತ್ತಿತ್ತು...ಆ ಸಮಯದಲ್ಲಿ ನಾನು ಪ್ರತಿ ಜಾಗಕ್ಕೂ ನನ್ನ ಬಳಿ ಇದ್ದ ಬೈಕ್‌ನಲ್ಲಿ ಟ್ರಾವಲ್ ಮಾಡುತ್ತಿದ್ದೆ.' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಸುದೀಪ್ ಬಗ್ಗೆ ಅಭಿಮನ್ಯು ಮಾತನಾಡಿದ್ದಾರೆ.
ಇನ್ನು ಮುಂದೆ ದರ್ಶನ್ ತಾನಾಯ್ತು ತನ್ನ ಮಡದಿ ಅಯ್ತು ಮಗ ಆಯ್ತು ಅಂತ ಇರಬೇಕು: ರವಿಶ್ರೀವತ್ಸ
'ನಾನು ಸದಾ ಬೈಕ್‌ನಲ್ಲಿ ಓಡಾಡುವುದನ್ನು ನೋಡಿ ಒಮ್ಮೆ ಸುದೀಪ್ ಸರ್ ಕರೆದು ಹೇಳಿದ್ದರು, ಪ್ರತಿಯೊಬ್ಬ ಆರ್ಟಿಸ್ಟ್‌ಗೂ ಫೇಸ್ ಮತ್ತು ಬಾಡಿ ತುಂಬಾನೇ ಮುಖ್ಯ ಆದರೆ ನೀನು ಬೈಕ್‌ನಲ್ಲಿ ಓಡಾಡುತ್ತಿರುವ ಒಂದು ಸಲ ಆ ಕಡೆ ಈ ಕಡೆ ಆದ್ರೂನೂ ಕಷ್ಟ ಜೀವನನೇ ಕಷ್ಟ ಆಗಿಬಿಡುತ್ತದೆ. ನನ್ನ ಮನೆಯಲ್ಲಿ ಒಂದು ಸ್ಯಾಂಟ್ರೋ ಕಾರು ಇದೆ ಅದನ್ನು ಬಳಸಿಕೊಂಡು ಓಡಾಡುತ್ತಿರು ಯಾವಾತ್ತು ನೀನು ಚೆನ್ನಾಗಿ ಆಗಿ ಹೊಸ ಕಾರು ಖರೀದಿಸಿದ ಮೇಲೆ ನನಗೆ ವಾಪಸ್ ಕೊಡು ಎಂದು ಸುದೀಪ್ ಸರ್ ಹೇಳಿದ್ದರು. ಆ ಸಮಯಲ್ಲಿ ಕಾರು ತೆಗೆದುಕೊಳ್ಳುವುದು ಹೆಚ್ಚಲ್ಲ ಆದರೆ ಒಂದು ಕಾರ್‌ನ ಮೇನ್ಟೇನ್ ಮಾಡುವಷ್ಟು ಶಕ್ತಿ ಇರಲಿಲ್ಲ. ಇತ್ತೀಚಿಗೆ ಟ್ರೈಲರ್ ನೋಡಿ ಲಾಂಚ್ ಮಾಡಿ ಕೊಡಿ ಎಂದು ಕೇಳಲು ಅವರ ಮನೆಗೆ ಹೋದಾಗ ಆ ಸ್ಯಾಂಟ್ರೋ ಕಾರು ಅಲ್ಲೇ ನಿಂತಿತ್ತು...ಈಗಲೂ ಹೊಸ ಕಾರಿನ ಕಂಡಿಷನ್‌ನಲ್ಲಿ ಇತ್ತು. ಮೊದಲ ಕಾರು ಎಂದು ಅವರಿಗೆ ಒಂದು ಎಮೋಷನಲ್ ಕನೆಕ್ಟ್ ಇರುತ್ತದೆ ಅದನ್ನು ನಾನು ತೆಗೆದುಕೊಂಡು ಏನಾದರೂ ಮಾಡಿಬಿಟ್ಟರೆ ಅನ್ನೋ ಭಯ ಕೂಡ ಇತ್ತು ಹೀಗಾಗಿ ಥ್ಯಾಂಕ್ಸ್ ಸರ್ ಎಂದು ಹೇಳಿ ಸುಮ್ಮನಾಗುತ್ತೀನಿ. ನಮ್ಮ ಬಳಿ ಇರುವ ಕಾರನ್ನು ಮತ್ತೊಬ್ಬರು ಓಡಿಸಲು ಕೊಡುವಾಗ ಹತ್ತು ಸಲ ಯೋಚನೆ ಮಾಡುತ್ತೀವಿ ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತೆಗೆದುಕೊಂಡು ಹೋಗು ಅಂದಿದ್ದರು, ಅದು ಅವರ ದೊಡ್ಡ ಗುಣ' ಎಂದು ಅಭಿಮನ್ಯು ಹೇಳಿದ್ದಾರೆ.