ತುಂಬಾ ಸರಳವಾಗಿ ಮದುವೆಯಾಗುತ್ತಿದ್ದಾರೆ. ಇಂದು ರಿಜಿಸ್ಟರ್ಡ್‌ ಮದುವೆ ಆಗಿ ನಾಳೆ ಬೆಂಗಳೂರಿನ ವಿನೋಬಾ ಭಾವೆ ಆಶ್ರಮದಲ್ಲಿ ಅನಾಥಾಶ್ರಮದ ಮಕ್ಕಳು ಮತ್ತು ವೃದ್ಧರೊಡನೆ ಸಂತೋಷ ಕೂಟ ಆಚರಿಸುತ್ತಿದ್ದಾರೆ. ಈ ಮೂಲಕ ಮಾದರಿ ನಡೆ ಇಟ್ಟಿದ್ದಾರೆ.

ಆ ದಿನಗಳು ಚೇತನ್‌ ಮದುವೆ ಆಗ್ತಿರೋ ಹುಡುಗಿ ಯಾರು?

ಮಧ್ಯಪ್ರದೇಶ ಮೂಲದ ಮೇಘ ಮತ್ತು ಚೇತನ್‌ ಗೆಳೆಯರು. ಹೋರಾಟದ ಮೂಲಕವೇ ಪರಿಚಿತವಾದ ಜೋಡಿ ಇದು. ತನೆಗೆ ಹೋರಾಟದ ಹಾದಿಗೆ ಇಳಿಯಲು ಪ್ರೇರಣೆ ನೀಡಿದವರೇ ಮೇಘ ಎನ್ನುತ್ತಾರೆ ಚೇತನ್‌. ಇದೀಗ ಹ್ಯೂಮನ್‌ ರೈಟ್ಸ್‌ ಲಾ ಓದುತ್ತಿರುವ ಮೇಘ ಜತೆ ಸಪ್ತಪದಿ ತುಳಿಯಲು ಆಲೋಚಿಸಿದ್ದಾರೆ. ಈ ವಿವಾಹ ಕೂಟದಲ್ಲಿ ಸಾಂಕೇತಿಕವಾಗಿ ಏಕತೆಯನ್ನು ವಿರೋಧಿಸಿ ಬಹುತ್ವ ಪ್ರತಿಪಾದಿಸಬೇಕು ಅನ್ನುವ ಸಂದೇಶ ನೀಡುತ್ತಿದ್ದೇವೆ ಎನ್ನುತ್ತಾರೆ ಚೇತನ್‌. ವಚನ-ಸೂಫಿ ಗಾಯನ, ಸಿದ್ಧಿ ನೃತ್ಯ, ಕೊರಗ ನೃತ್ಯ ಇತ್ಯಾದಿ ಕಾರ್ಯಕ್ರಮಗಳು ಔತಣಕೂಟದಂದು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಚೇತನ್‌ ಮತ್ತು ಮೇಘ ದಿರಿಸುಗಳು ಕೂಡ ಪ್ರಕೃತಿ ಪರವಾಗಿ, ರೈತನ ಪರವಾಗಿ ಇರಲಿವೆ. ಈ ಸಂದರ್ಭದಲ್ಲಿ ಅನಾಥಾಶ್ರಮದ ಮಕ್ಕಳ ಜತೆ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದಾರೆ.

ಭಾವೀ ಪತ್ನಿ ಜೊತೆ ಅನಾಥಾಶ್ರಮ ಮಕ್ಕಳಿಗೆ ಹಾಸಿಗೆ; ಸಾಮಾಜಿಕ ಕಳಕಳಿ ಮೆರೆದ 'ಆ ದಿನಗಳು' ಚೇತನ್

ವಿಭಿನ್ನ ಮದುವೆ ಆಹ್ವಾನ ಪತ್ರಿಕೆ

ಅದ್ದೂರಿ ಆಹ್ವಾನ ಪತ್ರಿಕೆ ಬದಲಾಗಿ ಪರಿಸರ ಸ್ನೇಹಿ ಆಹ್ವಾನ ಪತ್ರಿಕೆ ರೂಪಿಸಿದ್ದು ಮದುವೆ ವಿಶೇಷತೆ. ಈ ಇಕೋ ಫ್ರೆಂಡ್ಲಿ ಆಹ್ವಾನ ಪತ್ರಿಕೆಯಲ್ಲಿ ಚೆಂಡು ಹೂವಿನ ಬೀಜಗಳಿದ್ದು, ಗಿಡವನ್ನು ಬಿತ್ತಿದರೆ ಚಂಡು ಹೂವಿನ ಗಿಡ ಮೊಳೆಯುತ್ತದೆ. ಈ ಮೂಲಕ ಪ್ರೀತಿ ಜತೆಗೆ ಹೂವು ಕೂಡ ಅರಳಬೇಕು ಅನ್ನುವುದು ಚೇತನ್‌ ಆಶಯ.