ಸಪ್ತಪದಿ ತುಳಿಯಲಿದ್ದಾರೆ 'ಆ ದಿನಗಳು' ಚೇತನ್ | ಭಾವೀ ಪತ್ನಿ ಜೊತೆ ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆ ನೀಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ | ಇವರ ಸಾಮಾಜಿಕ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 

ಬೆಂಗಳೂರು (ಜ. 29):  'ಆ ದಿನಗಳು' ಖ್ಯಾತಿಯ ಚೇತನ್ ಸಿನಿಮಾ ಜೊತೆಗೆ ಸಾಮಾಜಿಕ ಕೆಲಸಗಳಿಂದಲೂ ಗುರುತಿಸಿಕೊಂಡವರು. ಆಗಾಗ ಜನಪರ ಹೋರಾಟಗಳಲ್ಲಿ ಭಾಗವಹಿಸಿ ಗಮನ ಸೆಳೆದವರು. ಇದೀಗ ಚೇತನ್ ಸಪ್ತಪದಿ ತುಳಿಯುವ ಸಂಭ್ರಮದಲ್ಲಿದ್ದಾರೆ. ಗೆಳತಿ ಮೇಘಾ ಜೊತೆ ಇದೇ ಫೆ. 2 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 

ಆ ದಿನಗಳು ಚೇತನ್‌ ಮದುವೆ ಆಗ್ತಿರೋ ಹುಡುಗಿ ಯಾರು?

ಮೇಘಾ ಐಟಿ ಉದ್ಯೋಗಿಯಾಗಿದ್ದು ಇಬ್ಬರೂ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಫೆಬ್ರವರಿ 2 ರಂದು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಬುಡಕಟ್ಟು ಮಕ್ಕಳ ನಡುವೆ ಮದುವೆಯಾಗುತ್ತಿರುವುದು ವಿಶೇಷ. 

Scroll to load tweet…

ಮೇಘಾ ಹಾಗೂ ಚೇತನ್ ಸಮಾನ ಮನಸ್ಕರಾಗಿದ್ದು ಚೇತನ್ ಸಾಮಾಜಿಕ ಕೆಲಸಗಳಿಗೆ ಮೇಘಾ ಸಾಥ್ ನೀಡುತ್ತಿದ್ದಾರೆ. ಅನಾಥಾಶ್ರಮದ ಆಶ್ರಮದ ಮಕ್ಕಳಿಗೆ ಉಚಿತವಾಗಿ ಹಾಸಿಗೆ ನೀಡಿದ್ದಾರೆ. ಇವರ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.