ನಟಿ ಅದಿತಿ ಪ್ರಭುದೇವ್ ಅವರ ಮಗಳು ನೇಸರ ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮೇಘನಾ ರಾಜ್ ಅವರ ಪುತ್ರ ರಾಯನ್ ರಾಜ್ ಸರ್ಜಾ ಭಾಗವಹಿಸಿದ್ದರು. ರಾಯನ್, ನೇಸರ ಜೊತೆ ನಾಚಿಕೊಳ್ಳುತ್ತಿದ್ದ ವಿಡಿಯೋ ವೈರಲ್ ಆಗಿದೆ. ರಾಯನ್ ತಂದೆ ಚಿರು ತರಹಾನೇ ಇದ್ದಾನೆ ಎಂದು ಮೇಘನಾ ಸಂದರ್ಶನದಲ್ಲಿ ಹೇಳಿದ್ದಾರೆ.

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್​ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಜೊತೆಗೆ, ರಿಯಾಲಿಟಿ ಷೋಗಳಲ್ಲಿಯೂ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದ ನಟಿ ಸದ್ಯ ಸಂಪೂರ್ಣ ಅಮ್ಮ ಆಗಿದ್ದಾರೆ. ಮಗಳು ನೇಸರಳ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ. ಮೊನ್ನೆ ಅಂದ್ರೆ ಏಪ್ರಿಲ್‌ 4ರಂದು ಅದಿತಿ ಅವರು ಮಗಳ ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಈ ಕಾರ್ಯಕ್ರಮಕ್ಕೆ ತಾರಾದಂಡೇ ಹರಿದು ಬಂದಿತ್ತು. ನೇಸರ ಆರು ತಿಂಗಳು ಇರುವಾಗಲೂ ಅದಿತಿ ಮತ್ತು ಯಶಸ್ ಅರ್ಧ ವರ್ಷದ ಹುಟ್ಟುಹಬ್ಬವನ್ನೂ ಆಚರಿಸಿದ್ದರು. ಆದರೆ ಇದೀಗ ಮೊದಲ ಹುಟ್ಟುಹಬ್ಬ ಸಕತ್​ ಗ್ರ್ಯಾಂಡ್​ ಆಗಿ ನಡೆದಿತ್ತು. 


‘’4.4.2024 to 4.4.2025.. ಮೊದಲ ಹುಟ್ಟುಹಬ್ಬದ ಶುಭಾಶಯಗಳು ಮಗಳೇ "ನೇಸರ".. ನೀ ನಮ್ಮ ಬದುಕು, ನಮ್ಮ ಜೀವದ ಬೆಳಕು.. ಪ್ರತಿ ಕ್ಷಣ, ಪ್ರತಿ ಮಾತು, ಪ್ರತಿ ನಿರ್ಧಾರದಲ್ಲೂ ನೀವೆ ಮಗಳೆ.. ಆ ಶಿವನಾಣೆ ನಿನ್ನ ಬದುಕಿನ ಪ್ರತಿ ಹೆಜ್ಜೆಯಲ್ಲೂ ನಿನ್ನೊಂದಿಗಿರುತ್ತೇವೆ.. I LOVE YOU’’ ಎಂದು ಮಗಳ ಮೊದಲ ಬರ್ತ್‌ಡೇ ಪ್ರಯುಕ್ತ ಸೋಷಿಯಲ್ ಮೀಡಿಯಾದಲ್ಲಿ ನಟಿ ಅದಿತಿ ಪ್ರಭುದೇವ ಬರೆದುಕೊಂಡಿದ್ದರು. ಹುಟ್ಟುಹಬ್ಬದ ಕೆಲವು ವಿಡಿಯೋಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಅದಿತಿ ಅವರ ಅಭಿಮಾನಿಗಳು ಈ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಅದ್ಧೂರಿ ಹುಟ್ಟುಹಬ್ಬದ ಹಲವು ಕ್ಲಿಪಿಂಗ್ಸ್​ಗಳಲ್ಲಿ ಗಮನ ಸೆಳೆದದ್ದು ನಟಿ ಮೇಘನಾ ರಾಜ್​ ಅವರ ಪುತ್ರ ರಾಯನ್​ ರಾಜ್​ ಸರ್ಜಾ ಕ್ಯೂಟ್​ ವಿಡಿಯೋ.

ಅಪ್ಪನ ಜೊತೆ ನಟಿ ಅದಿತಿ ಪ್ರಭುದೇವ ಎಳನೀರು ಚಾಲೆಂಜ್​! ಒಂದು ಸಾವಿರ ರೂ. ಗೆದ್ದೋರು ಯಾರು?

ಅದಿತಿ ಪುತ್ರಿ ನೇಸರಳಂತೆ, ಕನ್ನಡ ಚಿತ್ರರಂಗದ ಟಾಪ್‌ ಸೆಲೆಬ್ರಿಟಿ ಕಿಡ್‌ ಪಟ್ಟಿಯಲ್ಲಿ ಸೇರಿದ್ದಾನೆ ನಟಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಮಗ ರಾಯನ್ ಸರ್ಜಾ. 2020 ರ ಅಕ್ಟೋಬರ್​ನಲ್ಲಿ ಹುಟ್ಟಿರುವ ರಾಯನ್​ಗೆ ಈಗ ನಾಲ್ಕೂವರೆ ವರ್ಷ ವಯಸ್ಸು. ಅದಿತಿ ಮಗಳ ಮೊದಲ ಹುಟ್ಟುಹಬ್ಬದಂದು ಮೇಘನಾ ಅವರು ರಾಯನ್​ನನ್ನು ಕೂಡ ಕರೆದುಕೊಂಡು ಹೋಗಿದ್ದರು. ಅದಿತಿ ಪುತ್ರಿ ನೇಸರ ಜೊತೆ ಮಾತನಾಡು ಮಾತನಾಡು ಎಂದು ಎಷ್ಟೇ ಹೇಳಿದರೂ ಆತ ನಾಚಿ ನೀರಾಗಿರುವ ವಿಡಿಯೋ ವೈರಲ್​ ಆಗಿದೆ. ಆರಂಭದಲ್ಲಿ ನೇಸರ, ರಾಯನ್​ನನ್ನು ನೋಡಿ ಅತ್ತರೂ ಕೊನೆಗೆ ಆತನ ಜೊತೆ ಮಾತನಾಡಲು ನೋಡಿದ್ದಾಳೆ. ಆದರೆ, ರಾಯನ್​ ಮಾತ್ರ ಸುತರಾಂ ಮಾತನಾಡಲಿಲ್ಲ, ಬದಲಿಗೆ ಸಕತ್​ ನಾಚಿಕೊಳ್ಳುತ್ತಿದ್ದ. ಇದರ ಕ್ಯೂಟ್​ ವಿಡಿಯೋಗೆ ಹಲವಾರು ಮಂದಿ ಕಮೆಂಟ್​ ಮಾಡಿದ್ದಾರೆ.

ಇನ್ನು ರಾಯನ್​ ಸರ್ಜಾ ಕುರಿತು ಹೇಳುವುದಾದರೆ, ರಾಯನ್​, ಅಮ್ಮನ ಹೊಟ್ಟೆಯಲ್ಲಿ ಇರುವಾಗಲೇ ಚಿರು ಇಹಲೋಕ ತ್ಯಜಿಸಿದರು. ಅವರು ಅಗಲಿದ ಮೇಲೆ ಕುಟುಂಬಕ್ಕೆ ಬೆಳಕಾಗಿ ಬಂದಿದ್ದು ರಾಯನ್. ಮೇಘನಾ ಹೊಟ್ಟೆಯಲ್ಲಿ ಚಿರು ಹುಟ್ಟಿ ಬರಬೇಕು ಎಂಬ ಅಸಂಖ್ಯ ಅಭಿಮಾನಿಗಳ ಆಸೆ ಈಡೇರಿತ್ತು. ಇದೀಗ ಮೇಘನಾ ಅವರು ರಾಯನ್​ ಲಾಲನೆ, ಪಾಲನೆಯಲ್ಲಿ ತೊಡಗಿದ್ದಾರೆ. 'ರಾಯನ್ ಸೇಮ್ ಚಿರು ತರನೇ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದ ಮೇಘನಾ, ನಾನು ಮಾತನಾಡುತ್ತಿರುತ್ತೀನಿ ಆದರೆ ಅವನ ಕೆಲಸ ಅವನು ಮಾಡುತ್ತಲೇ ಇರುತ್ತಾನೆ. ಚಿರು ಕೂಡ ಹಾಗೆ ಇದ್ದರು ಎಂದಿದ್ದರು. ರೆಡಿಯಾಗುವ ವಿಷಯದಲ್ಲಿಯೂ ಈತ ಸೇಮ್​ ಟು ಸೇಮ್​. ಚಿರು ರೆಡಿಯಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದರು, ರಾಯನ್ ಕೂಡ ಹಾಗೆಯೇ. ರಾಯನ್ ಸ್ನಾನ ಮಾಡು ಊಟ ಮಾಡು ಅಂದ್ರೆ 5 ನಿಮಿಷ ಅಂತಾನೆ. ಚಿರು ಹಾಗೆಯೇ ಹೇಳ್ತಿದ್ರು, ಇದು ತುಂಬಾ ಕುತೂಹಲ ಎಂದು ಹೇಳಿದ್ದರು. ಇದನ್ನು ಎಫ್​ಡಿಎಫ್​ಎಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದೆ. 

ಅಮ್ಮ ಆದ್ಮೇಲೆ ದಪ್ಪ ಆಗ್ತಾರೆನ್ನೋ ಸೆನ್ಸೂ ಇಲ್ವೇನ್ರೀ.. ತೆಳ್ಳಗಾದ್ರೂ ಕೇಳ್ತೀರಾ... ನಟಿ ಅದಿತಿ ಪ್ರಭುದೇವ ವಿಡಿಯೋ ವೈರಲ್

YouTube video player