ನ.22 ರಂದು ‘ಕಾಳಿದಾಸ ಕನ್ನಡ ಮೇಸ್ಟ್ರು’ ಸಿನಿಮಾ ತೆರೆಗೆ ಬರುತ್ತಿದ್ದು, ಕನ್ನಡ ಭಾಷೆ, ಶಿಕ್ಷಣದ ಸುತ್ತ ಸಾಗುವ ಕತೆಯಾಗಿದೆ. ಈ ಕಾರಣಕ್ಕೆ ನವೆಂಬರ್ ತಿಂಗಳಲ್ಲಿ ಸೂಕ್ತ ಸಿನಿಮಾ ಎನಿಸಿದ್ದು, ನಿರ್ದೇಶಕ ಕವಿರಾಜ್ ಅವರ ನವೆಂಬರ್‌ನಲ್ಲೇ ಚಿತ್ರವನ್ನು ತೆರೆಗೆ ತರುವುದಕ್ಕೆ ಹೊರಟಿದೆ.

ಕಾಳಿದಾಸ ಕನ್ನಡ ಮೇಷ್ಟ್ರಿಗೆ 21 ನಟಿಯರ ಸಾಥ್!

1. ವಿದ್ಯಾರ್ಥಿಗಳ ಓದು, ಪೋಷಕರ ಸಂಕಟಗಳು, ಶಿಕ್ಷಣ ವ್ಯವಸ್ಥೆಯ ಸುತ್ತ ಮನರಂಜನಾತ್ಮಕವಾಗಿಯೇ ಈ ಸಿನಿಮಾ ಸಾಗುತ್ತದೆ.

2.  ಒಂದು ಗಂಭೀರ ವಿಚಾರವನ್ನು ಎಲ್ಲರಿಗೂ ಅರ್ಥವಾಗುವಂತೆ ಹೇಳುವ ಸವಾಲಿನಲ್ಲಿ ಗೆಲ್ಲುವುದಕ್ಕೆ ಕಾರಣವಾಗಿರುವುದು ಜಗ್ಗೇಶ್ ಮ್ಯಾನರಿಸಂ.

3.  ತೊಂಭತ್ತರ ದಶಕದ ಕನ್ನಡ ಮೇಷ್ಟ್ರು ಹೇಗಿದ್ದರು ಮತ್ತು ಅವರ ತೊಳಲಾಟಗಳು ಹೇಗಿರುತ್ತಿದ್ದವು ಎಂಬುದನ್ನು ಕಾಮಿಡಿ ರೂಪದಲ್ಲಿ ಹೇಳುವ ಪ್ರಯತ್ನವಿದು.

4.  ಇದು ನೈಜ ಘಟನೆ ಆಧಾರಿತ ಸಿನಿಮಾ. ಹೀಗಾಗಿ ಪೋಷಕರು ಮಕ್ಕಳ ಜೊತೆ ಸಿನಿಮಾ ನೋಡಬೇಕು.

ಮೇಘನಾ ಗಾಂವ್ಕರ್‌ಗೆ ಕನ್ನಡ ಮೇಷ್ಟ್ರಾದ ಜಗ್ಗೇಶ್!

5.  ಮೇಘನಾ ಗಾಂವ್ಕರ್ ನಾಯಕಿಯಾಗಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ನಟ ಶರಣ್ ಅವರ ಹಿನ್ನೆಲೆ ಧ್ವನಿ ಇರುವುದು ಟ್ರೇಲರ್‌ನ ಮತ್ತೊಂದು ಹೈಲೈಟ್.

ಕಾಳಿದಾಸ ಕನ್ನಡ ಮೇಷ್ಟ್ರು ಟ್ರೇಲರ್ ಹಾಗೂ ಟೆಐಟಲ್ ಮೂಲಕ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಒಂದೊಳ್ಳೆ ಕಥೆ ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ. ಜಗ್ಗೇಶ್‌ಗೆ ನಾಯಕಿಯಾಗಿ ಮೇಘನಾ ಗಾಂವ್ಕರ್ ನಟಿಸಿದ್ದಾರೆ.