Asianet Suvarna News Asianet Suvarna News

5 ಹೊಸ ಸಿನಿಮಾ, 5 ಸಿನಿಮಾ ಸಂಸ್ಥೆ ಆರಂಭ: ಶ್ರೀಪಾದರಾವ್‌ ತಂಡದ ಸಾಹಸ

ಸಂಚಾರಿ ವಿಜಯ್‌, ಶ್ರುತಿ ಹರಿಹರನ್‌ ನಟನೆಯ ‘ಅಂತ್ಯವಲ್ಲ ಆರಂಭ’ ಚಿತ್ರದ ನಿರ್ದೇಶಕರಾದ ನಡಹಳ್ಳಿ ಶ್ರೀಪಾದ್‌ ರಾವ್‌, ಡಾ. ಎನ್‌.ಬಿ. ಜಯಪ್ರಕಾಶ್‌ ಮತ್ತು ತಂಡ ದೊಡ್ಡ ಘೋಷಣೆಗಳನ್ನು ಮಾಡಿದೆ. ಇವರಿಬ್ಬರು ಸೇರಿಕೊಂಡು ಐದು ಸಿನಿಮಾಗಳನ್ನು ನಿರ್ದೇಶಿಸಲಿದ್ದಾರೆ. 

5 New Movie and 5 Film Institute Started by Nadahalli Sripada Rao Team gvd
Author
Bangalore, First Published Jan 6, 2022, 8:26 AM IST

ಸಂಚಾರಿ ವಿಜಯ್‌ (Sanchari Vijay), ಶ್ರುತಿ ಹರಿಹರನ್‌ (Sruthi Hariharan) ನಟನೆಯ ‘ಅಂತ್ಯವಲ್ಲ ಆರಂಭ’ ಚಿತ್ರದ ನಿರ್ದೇಶಕರಾದ ನಡಹಳ್ಳಿ ಶ್ರೀಪಾದ್‌ ರಾವ್‌ (Nadahalli Sripada Rao), ಡಾ. ಎನ್‌.ಬಿ. ಜಯಪ್ರಕಾಶ್‌ (Dr.N.B.Jayaprakash) ಮತ್ತು ತಂಡ ದೊಡ್ಡ ಘೋಷಣೆಗಳನ್ನು ಮಾಡಿದೆ. ಇವರಿಬ್ಬರು ಸೇರಿಕೊಂಡು ಐದು ಸಿನಿಮಾಗಳನ್ನು ನಿರ್ದೇಶಿಸಲಿದ್ದಾರೆ. ಬದುಕು ಜಟಕಾ ಬಂಡಿ (Baduku Jataka Bandi), ಹೆಣ್ಣು (Hennu), ನೇತ್ರದಾನ (Netradana), ಮಣ್ಣು (Mannu), ಸಂತ ಕವಿ ಕನಕದಾಸ (Santa Kavi Kanakadasa) ಎಂಬ ಆ ಐದು ಸಿನಿಮಾಗಳ ಟೈಟಲ್‌ ಅನಾವರಣಗೊಂಡಿದೆ. 

ಇದೇ ಸಂದರ್ಭದಲ್ಲಿ ನಡಹಳ್ಳಿಯವರ ನಿರಂತರ, ಇಮೋಷನ್‌ ಎಂಬೆರಡು ಚಲನಚಿತ್ರ ನಿರ್ಮಾಣ ಸಂಸ್ಥೆಗಳು, ಗಣೇಶ್‌ ಕುಮಾರ್‌ ಅವರ ಜಿ ಕೆ ಬ್ರೈಟ್‌ಲೈಟ್‌ ಪಿಕ್ಚರ್ಸ್‌, ಜೆಪಿಯವರ ಬಯೋಸ್ಕೋಪ್‌ ಸಂಸ್ಥೆಗಳು ಉದ್ಘಾಟನೆಗೊಂಡವು. ಸದಭಿರುಚಿ ಚಲನಚಿತ್ರ ಪ್ರೋತ್ಸಾಹ ತಂಡ ಎಂಬ ಚಲನಚಿತ್ರ ವಿತರಣಾ ಸಂಸ್ಥೆಗೂ ಚಾಲನೆ ನೀಡಲಾಯಿತು.

DNA Kannada Movie: ವಿಭಿನ್ನ ಶೀರ್ಷಿಕೆಯ ಚಿತ್ರದ ಆಡಿಯೋ ಬಿಡುಗಡೆ

ಟೈಟಲ್‌ ಅನಾವರಣ ಮಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ (JaiRaj), ‘ಚಲನಚಿತ್ರ ನಿರ್ಮಾಣ ಸಂಸ್ಥೆಗೆ ಚಾಲನೆ ಸಿಕ್ಕಿದ್ದು ನನಗೆ ಖುಷಿಯಾಗುವಂತಹ ವಿಚಾರ’ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ್‌ ಜೋಶಿ (Dr.Mahesh Joshi), ‘ಸಾಮಾಜಿಕ ಸಂದೇಶ ನೀಡುವ ಸಿನಿಮಾ ಮಾಡುತ್ತಿದ್ದಾರೆ, ಒಳ್ಳೆಯದಾಗಲಿ’ ಎಂದರು. 

ಕನ್ನಡಪ್ರಭ ಪತ್ರಿಕೆಯ ಪ್ರಧಾನ ಪುರವಣಿ ಸಂಪಾದಕ ಜೋಗಿ (Jogi) ಅವರು, ‘ಶ್ರೀಪಾದ ರಾವ್‌ ಉತ್ಸಾಹಿ. ಒಮಿಕ್ರೋನ್‌ ಕತ್ತಿ ತೂಗುತ್ತಿರುವ ಸಂದರ್ಭ ಇದು. ಉತ್ಸಾಹ ಉಳಿಸಿಕೊಂಡು ಹೋಗುವುದು ಮುಖ್ಯ. ರಿಸ್ಕ್‌ ತೆಗೆದುಕೊಳ್ಳುತ್ತಿರುವವರಿಗೆ ಶುಭ ಹಾರೈಕೆ’ ಎಂದರು. ನಿರ್ಮಾಪಕರ ಸಂಘದ ಅಧ್ಯಕ್ಷ ರಾಮಕೃಷ್ಣ (Ramakrishna), ನಿರ್ಮಾಪಕ ಗಣೇಶ್‌ ಕುಮಾರ್‌ (Ganesh Kumar), ಛಾಯಾಗ್ರಾಹಕ ಬಿ.ಆರ್‌.ಮಲ್ಲಿಕಾರ್ಜುನ (B.R.Mallikarjuna) ಇದ್ದರು.

Gajanana and Gang Trailer: ಫೆಬ್ರವರಿ 4ರಂದು‌ ಶ್ರೀ- ಅದಿತಿ ಪ್ರಭುದೇವ ಚಿತ್ರ ರಿಲೀಸ್

8884018800ಗೆ ಮಿಸ್‌ ಕಾಲ್‌ ಕೊಟ್ಟು ನೇತ್ರದಾನಕ್ಕೆ ಹೆಸರು ಕೊಡಿ: ‘ಅಪ್ಪು (Puneeth Rajkumar) ತೀರಿಕೊಂಡ ನಂತರ ಅವರಿಂದ ಪ್ರೇರೇಪಿತರಾಗಿ ನಮ್ಮ ಕೇಂದ್ರದಲ್ಲಿ ಸುಮಾರು 12000ಕ್ಕೂ ಹೆಚ್ಚು ಮಂದಿ ನೇತ್ರದಾನಕ್ಕೆ ಹೆಸರು ನೋಂದಣಿ (Eye Donation) ಮಾಡಿದ್ದಾರೆ. ಈಗ ನಾವು ಆನ್‌ಲೈನ್‌ ಮೂಲಕವೂ ಹೆಸರು ನೋಂದಾಯಿಸುವ ಅವಕಾಶ ನೀಡಿದ್ದೇವೆ.

8884018800ಗೆ ಮಿಸ್‌ ಕಾಲ್‌ ಕೊಟ್ಟರೆ ನಿಮಗೊಂದು ಫಾರ್ಮ್ ಬರುತ್ತದೆ. ಅದನ್ನು ತುಂಬಿಸಿ ಕಳುಹಿಸಿ ನೀವು ನೇತ್ರದಾನಕ್ಕೆ ಹೆಸರು ಸಲ್ಲಿಸಬಹುದು. ಇದುವರೆಗೂ ಆನ್‌ಲೈನ್‌ನಲ್ಲಿ 30000 ಮಂದಿ ಹೆಸರು ಕೊಟ್ಟಿದ್ದಾರೆ. ನೀವೂ ಕೊಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ’ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ (Dr.Bhujang Shetty) ತಿಳಿಸಿದ್ದಾರೆ.

Follow Us:
Download App:
  • android
  • ios