Asianet Suvarna News Asianet Suvarna News

DNA Kannada Movie: ವಿಭಿನ್ನ ಶೀರ್ಷಿಕೆಯ ಚಿತ್ರದ ಆಡಿಯೋ ಬಿಡುಗಡೆ

ಮಾನವ ಸಂಬಂಧಗಳ ಕತೆಯನ್ನು ಹೇಳುವ 'ಡಿಎನ್‌ಎ' ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಚಿತ್ರಕ್ಕೆ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ಪ್ರಕಾಶ್‌ ರಾಜ್‌ ಮೇಹು. 

Kannada Movie DNA Audio Released by Tulsi Gowda gvd
Author
Bangalore, First Published Jan 6, 2022, 7:50 AM IST

ಮಾನವ ಸಂಬಂಧಗಳ ಕತೆಯನ್ನು ಹೇಳುವ 'ಡಿಎನ್‌ಎ' (DNA) ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡ (Tulsi Gowda) ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಚಿತ್ರಕ್ಕೆ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ಪ್ರಕಾಶ್‌ ರಾಜ್‌ ಮೇಹು (PrakashRaj Mehu). ಅಚ್ಯುತ್‌ ಕುಮಾರ್‌, ರೋಜರ್‌ ನಾರಾಯಣ, ಯಮುನಾ, ಅನಿತಾ ಭಟ್‌, ಎಸ್ತಾರ್‌ ನರೋನ್ಹ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಿರ್ದೇಶಕ ಯೋಗರಾಜ್‌ ಭಟ್‌ ಒಂದು ಹಾಡು ಬರೆಯುವ ಜತೆಗೆ, ನಟ ನೀನಾಸಂ ಸತೀಶ್‌ ಅವರ ಜತೆಗೂಡಿ ಹಾಡಿರುವುದು ವಿಶೇಷ.

ಚಿತ್ರದ ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ಮಾತನಾಡಿ, ‘ನಾನು ಇಪ್ಪತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಇದ್ದೀನಿ. ಜನುಮದ ಜೋಡಿ ಚಿತ್ರಕ್ಕೆ ಟಿ ಎಸ್‌ ನಾಗಾಭರಣ ಅವರೊಡನೆ ಕೆಲಸ ಮಾಡಿದ್ದೀನಿ. ಈ ಚಿತ್ರಕ್ಕಾಗಿ ನಾನು ಸಂಭಾಷಣೆಯನ್ನು ಬರೆದಿದ್ದೀನಿ. ಆದರೂ ನನ್ನ ಹೆಸರು ಹಾಕಿಲ್ಲ. ಮೊದಲ ಬಾರಿಗೆ ನಾನೇ ಸಿನಿಮಾ ನಿರ್ದೇಶಿಸಿರುವೆ. ಡಿಎನ್‌ಎ ವಿಶೇಷ ಕತೆ ಒಳಗೊಂಡ ಸಿನಿಮಾ’ ಎಂದರು. ‘ನಾನು ಡಾ ರಾಜ್‌ಕುಮಾರ್‌ ಅಭಿಮಾನಿ. ಅವರ ಚಿತ್ರಗಳಂತೆ ಒಂದು ಸ್ವಚ್ಛವಾದ ಸಿನಿಮಾ ಮಾಡುವ ಆಸೆಯಿಂದ ಚಿತ್ರರಂಗಕ್ಕೆ ಬಂದಿರುವೆ’ ಎಂದು ನಿರ್ಮಾಪಕ ಮೈಲಾರಿ ಕೇಳಿಕೊಂಡರು. ಅಚ್ಯುತ್‌ ಕುಮಾರ್‌, ಅನಿತಾ ಭಟ್‌, ಎಸ್ತಾರ್‌, ಮಾ.ಆನಂದ್‌, ಭವಾನಿ ಪ್ರಕಾಶ್‌, ಸಂಗೀತ ನಿರ್ದೇಶಕ ಚೇತನ್‌ ರಾಜ್‌ ಇದ್ದರು.

Gajanana and Gang Trailer: ಫೆಬ್ರವರಿ 4ರಂದು‌ ಶ್ರೀ- ಅದಿತಿ ಪ್ರಭುದೇವ ಚಿತ್ರ ರಿಲೀಸ್

ಹೊಸ ವರ್ಷದ ಮೊದಲ ವಾರದಲ್ಲಿ ಯಾವ ಸಿನಿಮಾ ತೆರೆಗೆ ಬರುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಪ್ರೇಕ್ಷಕರಿಗೆ ‘ನಾನು ಬರುತ್ತಿದ್ದೇನೆ’ ಎಂದು ‘ಡಿಎನ್‌ಎ’ ಸಿನಿಮಾ ಕೈ ಎತ್ತಿದೆ. ಹೆಸರಿನಿಂದಲೇ ಗಮನ ಸೆಳೆದಿರುವ ಈ ಚಿತ್ರದ ನಿರ್ದೇಶಕರು ಪ್ರಕಾಶ್‌ರಾಜ್‌ ಮೇಹು ಅವರು. ಡಾ ರಾಜ್‌ಕುಮಾರ್‌ (Dr.Rajkumar) ಅವರ ಕುರಿತ ಅಂತರಂಗದ ಅಣ್ಣ ಹೆಸರಿನಲ್ಲಿ ಪುಸ್ತಕ ಬರೆದು ಗಮನ ಸೆಳೆದವರು ಪ್ರಕಾಶ್‌ರಾಜ್‌ ಮೇಹು. ಅಲ್ಲದೆ ವಜ್ರೇಶ್ವರಿ ಕಂಬೈನ್ಸ್‌ ನಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವದ ಮೇಲೆ ಸಿನಿಮಾ ನಿರ್ದೇಶನ ಮಾಡಿದ್ದಾರೆ. ‘ಡಿಎನ್‌ಎ’ ಇವರಿಗೆ ಮೊದಲ ನಿರ್ದೇಶನದ ಸಿನಿಮಾ.

ಕಷ್ಟವಾದರೂ ಪ್ರೀತಿಯಿಂದ ಈ ಚಿತ್ರವನ್ನು ರೂಪಿಸಿದ್ದು, ಜ.7ರಂದು ಪ್ರೇಕ್ಷಕರ ಮುಂದೆ ತರುತ್ತಿರುವ ಸಂಭ್ರಮದಲ್ಲಿದ್ದಾರೆ ನಿರ್ದೇಶಕರು. ‘ಹೊಡಿ, ಬಡಿ, ಕಡಿ ಎನ್ನುವ ಅಬ್ಬರದ ಚಿತ್ರಗಳ ನಡುವೆ ತಣ್ಣನೆಯ ನದಿಯಂತೆ ಹರಿದು, ಜಲಪಾತವಾಗಿ ಭೋರ್ಗರೆವ ಭಾವಲಹರಿಯನ್ನು ಅನಾವರಣ ಮಾಡುವ ಕತೆ ಇಲ್ಲಿದೆ. ಹೀಗಾಗಿ ಈ ಸಿನಿಮಾ ಹೃದಯವಂತರಿಗೆ ಮಾತ್ರ. ಚಿತ್ರದ ಶೀರ್ಷಿಕೆ ಮೂಡಿಸಿರುವ ಕುತೂಹಲದಂತೆ ಇಡೀ ಸಿನಿಮಾ ಮೂಡಿ ಬಂದಿದೆ’ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್‌ರಾಜ್‌ ಮೇಹು ಅವರು.

ಚಿತ್ರಕ್ಕೆ ಸೆನ್ಸಾರ್‌ ಮಂಡಳಿ 'ಯು' ಪ್ರಮಾಣ ಪತ ನೀಡಿದೆ. ಚಿತ್ರದಲ್ಲಿ ಅಚ್ಯುತ್‌ ಕುಮಾರ್‌ (Achyuth Kumar) ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ಇದು ಸಂಬಂಧಗಳ ಕುರಿತು ಮಾಡಿದ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದರು. ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಇಡೀ ಕುಟುಂಬ ಜೊತೆಯಾಗಿ ಕುಳಿತು ನೋಡಬಹುದು ಎನ್ನುವುದು ನಿರ್ಮಾಪಕ ಮೈಲಾರಿ ಮಾತು.

Laka Laka Lamborghini: ಮಗಳಿಗಾಗಿ ಆಲ್ಬಂ ಸಾಂಗ್ ಮಾಡಿದ ಆರ್.ಕೇಶವ್

ಮಾತೃಶ್ರೀ ಎಂಟರ್‌ಪ್ರೈಸಸ್‌ ಬ್ಯಾನರ್‌ ಮೂಲಕ ಮೈಲಾರಿ ಎಂ ನಿರ್ಮಾಣದ ಈ ಚಿತ್ರದಲ್ಲಿ ಅಚ್ಯುತ್‌ ಕುಮಾರ್‌, ರೋಜರ್‌ ನಾರಾಯಣ್‌, ಎಸ್ತರ್‌ ನರೋನ, ಯಮುನಾ, ಮಾ.ಕೃಷ್ಣ ಚೈತನ್ಯ, ಅನಿತಾ ಭಟ್‌, ನಿಹಾರಿಖ, ನೀನಾಸಂ ಶ್ವೇತಾ, ಶೋಭಾ ಮೈಸೂರು ಮುಂತಾದವರು ನಟಿಸಿದ್ದಾರೆ. ಜಯಂತ್‌ ಕಾಯ್ಕಿಣಿ, ಯೋಗರಾಜ್‌ ಭಟ್‌, ಡಾ ಕೆ ವೈ ನಾರಾಯಣಸ್ವಾಮಿ ಅವರು ಚಿತ್ರದಲ್ಲಿನ ಹಾಡುಗಳಿಗೆ ಸಾಹಿತ್ಯ ನೀಡಿರುವುದು ‘ಡಿಎನ್‌ಎ’ ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಚಿತ್ರಕ್ಕೆ ಚೇತನ್‌ ಅವರ ಸಂಗೀತ ಸಂಯೋಜನೆ, ಶಿವರಾಜ್‌ ಮೇಹು ಸಂಕಲನ, ರವಿಕುಮಾರ್‌ ಸಾನಾ ಕ್ಯಾಮೆರಾ ಹಿಡಿದಿದ್ದಾರೆ.

Follow Us:
Download App:
  • android
  • ios