Asianet Suvarna News Asianet Suvarna News

100-150 ಕಾರುಗಳನ್ನು ಬಳಸಿ ಭರ್ಜರಿ ಫೈಟ್‌ ಸೀನ್ ಚಿತ್ರೀಕರಣ ಮಾಡುತ್ತಿರುವ ರಮೇಶ್ ಅರವಿಂದ್!

'100' ಚಿತ್ರದ ಚೇಸಿಂಗ್ ದೃಶ್ಯಕ್ಕೆ ನಟ ರಮೇಶ್ ಅರವಿಂದ್ ಪ್ಲಾನ್ ಮಾಡುತ್ತಿರುವುದನ್ನು ನೋಡಿ..... 

150 cars used to shoot chasing scene in Ramesh Aravind 100 film vcs
Author
Bangalore, First Published Nov 5, 2021, 1:21 PM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದ (Sandalwood) ಹ್ಯಾಂಡ್ಸಮ್‌ ನಟ ರಮೇಶ್ ಅರವಿಂದ್ (Ramesh Aravind) ನಟಿಸಿ, ನಿರ್ದೇಶಿಸುತ್ತಿರುವ 100 ಸಿನಿಮಾದಲ್ಲಿ ರಚಿತಾ ರಾಮ್ (Rachita Ram) ಹಾಗೂ ಪೂರ್ಣಾ (Purna) ನಟಿಸುತ್ತಿದ್ದಾರೆ. ಇದೊಂದು ಸೈಬರ್ ಕ್ರೈಮ್ (Cyber Crime) ಆಧರಿತ ಸಿನಿಮಾ ಆಗಿದ್ದು ಫೈಟ್‌ ಸನ್ನಿವೇಶವನ್ನು ಜಾಲಿ ಬಾಸ್ಟಿನ್ (Jolly Bastian) ಮತ್ತು ರವಿವರ್ಮಾ (Ravivarma) ನಿರ್ದೇಶನ ಮಾಡುತ್ತಿದ್ದಾರೆ.

ನಟ ರಮೇಶ್ ಅರವಿಂದ್ ತ್ಯಾಗಮೂರ್ತಿ 'ಸಿಂಗ್' ಆಗಿದ್ದು ಯಾಕೆ?

ಸಾಮಾನ್ಯವಾಗಿ ರಮೇಶ್ ಸಿನಿಮಾಗಳು ಕೌಟುಂಬಿಕವಾಗಿರುತ್ತದೆ ಇಲ್ಲವಾದರೆ ಪ್ರೇಮಕಥೆ ಹೊಂದಿರುತ್ತದೆ. ಲವರ್ ಬಾಯ್ (Lover boy) ಆಗಿ ಜನರಿಗೆ ಹತ್ತಿರವಾಗಿರುವ ರಮೇಶ್, ಶಿವಾಜಿ ಸುರತ್ಕಲ್ (Shivaji Surathkal) ಚಿತ್ರದ ಮೂಲಕ ಡಿಫರೆಂಟ್ ಶೇಡ್‌ನಲ್ಲಿ ಕಾಣಿಸಿಕೊಂಡರು. ಇದೀಗ ಸೈಬರ್ ಕ್ರೈಮ್ ಸಿನಿಮಾದಲ್ಲಿ ಹೇಗಿರಲಿದೆ ಲುಕ್ ಎಂದು ನೋಡಬೇಕು ....

150 cars used to shoot chasing scene in Ramesh Aravind 100 film vcs

'100' ಚಿತ್ರದಲ್ಲಿ ಆಕ್ಷನ್ ಸನ್ನಿವೇಶ ಪ್ರಮುಖ ಭಾಗವಾಗಲಿದೆ. ಖಳನಟ ಹೀರೋಗೆ ಹೊಡೆಯುತ್ತಾನೆ ಅಂದ್ರೆ ಒಂದು ಕಾರಣವಿರಬೇಕು ಇಲ್ಲವಾದರೆ ನೋಡಗರು ಒಪ್ಪಿಕೊಳ್ಳುವುದಿಲ್ಲ. ಚಿತ್ರದಲ್ಲಿರುವ ನಾಲ್ಕು ಫೈಟ್‌ಗಳಿಗೆ ಒಂದು ಗಟ್ಟಿಯಾದ ಭಾವನಾತ್ಮಕ ಕಾರಣಗಳಿದೆ ಎಂದು ಖಾಸಗಿ ಪತ್ರಿಕೆಯೊಂದಕ್ಕೆ ರಮೇಶ್ ಸಂದರ್ಶನ ನೀಡಿದ್ದಾರೆ. ಎರಡು ದೃಶ್ಯಗಳನ್ನು ಜಾಲಿ ಬಾಸ್ಟಿನ್ ಮತ್ತೆ ಎರಡು ದೃಶ್ಯಗಳನ್ನು ರವಿವರ್ಮ ಮಾಡಿದ್ದಾರಂತೆ. 

ನ.19ಕ್ಕೆ ರಮೇಶ್‌ ಅರವಿಂದ್‌ ನಟನೆಯ 100 ಚಿತ್ರ ಬಿಡುಗಡೆ

'ಸಿನಿಮಾದಲ್ಲಿರುವ ಚೇಸಿಂಗ್ ದೃಶ್ಯಕ್ಕೆ (Chasing scene) 100-150 ಕಾರುಗಳನ್ನು (Car) ಬಳಸಲಾಗಿದೆ. ಇಡೀ ರಸ್ತೆ ಬಾಡಿಗೆಗೆ ತೆಗೆದುಕೊಂಡು ಆ ದೃಶ್ಯವನ್ನು ಚಿತ್ರೀಕರಣ ಮಾಡಲಾಗಿದೆ. ಈ ಸನ್ನಿವೇಶಗಳನ್ನು ಚಿತ್ರೀಕರಿಸಿದ್ದೇ ಒಂದು ದೊಡ್ಡ ಥ್ರಿಲ್ಲಿಂಗ್ ಅನುಭವ. ರವಿವರ್ಮಾ ಅದ್ಭುತ ತಂತ್ರಜ್ಞರು ಅವರು ಚಿತ್ರಮಂದಿರದ ಒಳಗೆ ಒಂದು ಫೈಟ್ ಸನ್ನಿವೇಶ ಶೂಟ್ ಮಾಡಿದ್ದಾರೆ. ಸರ್ ನಿಮಗೆ ಎಷ್ಟು ಉದ್ದದ ಫೈಟ್ ದೃಶ್ಯ ಬೇಕು ಎಂದು ಸ್ಥಳದಲ್ಲಿಯೇ ಎಡಿಟ್ ಮಾಡಿ ಕೊಡುತ್ತಾರೆ. ನನ್ನ ಸಿನಿಮಾದಲ್ಲಿ ಫೈಟ್ ಜಾಸ್ತಿ ಇರುವುದಿಲ್ಲ ಎನ್ನುತ್ತಾರೆ ಸುಖಾ ಸುಮ್ಮನೆ ಫೈಟ್‌ಗಳನ್ನು ಸೇರಿಸಲು ನನಗೆ ಇಷ್ಟವಿಲ್ಲ ಆ ಸಿನಿಮಾಗಳ ಕಥೆ ಹಾಗಿರುತ್ತಿತ್ತು. ಇದು ಆಕ್ಷನ್ ಸಿನಿಮಾ ಆಗಿರುವುದರಿಂದ ಜಾಗವಿತ್ತು. ನಮ್ಮ ನಿರ್ಮಾಪಕರು ರಮೇಶ್ ರೆಡ್ಡಿ ಯಾವುದಕ್ಕೂ ಕಡಿಮೆ ಮಾಡದೇ ಆ ದೃಶ್ಯಗಳಿಗಾಗಿ ಖರ್ಚು ಮಾಡಿದ್ದಾರೆ. ತೆರೆ ಮೇಲೆ ಕಂಡಾಗ ನಮ್ಮ ಶ್ರಮ ಜನರಿಗೆ ತಿಳಿಯುತ್ತದೆ' ಎಂದು ರಮೇಶ್ ಅರವಿಂದ್ ಮಾತನಾಡಿದ್ದಾರೆ. 

ಕೊನೆ ಹಂತದ ಕೆಲಸಗಳು ನಡೆಯುತ್ತಿದ್ದು ಸಿನಿಮಾ ಇದೇ ನವೆಂಬರ್ 19ರಂದು ಬಿಡುಗಡೆ ಆಗುತ್ತಿದೆ.

Follow Us:
Download App:
  • android
  • ios