ಕೆಜಿಎಫ್‌2 ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ದಾಖಲೆ ಬರೆಯಿತು. ಹಲವು ಹಳೆಯ ದಾಖಲೆಗಳನ್ನು ಮುರಿಯಿತು. ಮಾಚ್‌ರ್‍ 17ರಂದು ಜೇಮ್ಸ್‌ ಚಿತ್ರವನ್ನು ಮೆಚ್ಚಿದ ಪ್ರೇಕ್ಷಕ, ಒಂದೇ ತಿಂಗಳ ಅಂತರದಲ್ಲಿ, ಏಪ್ರಿಲ್‌ 14ರಂದು ಕೆಜಿಎಫ್‌ 2 ಚಿತ್ರವನ್ನು ಕಣ್ತುಂಬಿಕೊಂಡ.

ಕೆಎಫ್‌ಐ: ಫಸ್ಟ್‌ ಕ್ವಾರ್ಟರ್‌ ರಿಪೋರ್ಚ್‌

ಕೋವಿಡ್‌ ನಂತರ ಚಿತ್ರೋದ್ಯಮ ಚೇತರಿಸಿಕೊಳ್ಳುವುದಿಲ್ಲ ಎಂಬ ಭಯ, ಮಂದಿ ಓಟಿಟಿಗೆ ಹೊಂದಿಕೊಂಡಿದ್ದಾರೆ, ಚಿತ್ರಮಂದಿರಗಳಿಗೆ ಬರೋದಿಲ್ಲ ಎಂಬ ಊಹೆ, ಮನರಂಜನಾ ಉದ್ಯಮದ ಕತೆ ಮುಗೀತು ಎಂಬ ಕಳವಳವನ್ನೆಲ್ಲ ಬದಿಗೆ ಸರಿಸಿ, ಕನ್ನಡ ಚಿತ್ರೋದ್ಯಮ ಮೊದಲ ಮೂರು ತಿಂಗಳಲ್ಲಿ ಎಪ್ಪತ್ತು ಚಿತ್ರಗಳನ್ನು ಬಿಡುಗಡೆ ಮಾಡಿದೆ. ಎಂಬಲ್ಲಿಗೆ ಮನರಂಜನಾ ಕ್ಷೇತ್ರ ಮೊದಲಿನ ಹಳಿಗೆ ಮರಳಿದೆ ಎಂದಾಯಿತು. ಇದೇ ವೇಗದಲ್ಲಿ ಹೋದರೆ ವರ್ಷಾಂತ್ಯದ ಹೊತ್ತಿಗೆ ಮುನ್ನೂರು ಚಿತ್ರಗಳಿಗೆ ಮೋಸವಿಲ್ಲ.

ಅದೆಲ್ಲ ಸರಿ, ಆದರೆ ಮೊದಲ ಮೂರು ತಿಂಗಳ ಗಳಿಕೆಯೇನು, ಗೆಲುವೇನು, ಪ್ರೇಕ್ಷಕನ ಪ್ರತಿಕ್ರಿಯೆ ಏನು, ಉದ್ಯಮದ ಆಶೋತ್ತರಗಳೇನು, ಭರವಸೆಯೇನು ಎಂದು ನೋಡಲಿಕ್ಕೆ ಹೋದರೆ ಅಂಥ ನಿರಾಶೆಯೇನೂ ಆಗುವುದಿಲ್ಲ.

ಗೆದ್ದದ್ದು ಎರಡೇ ಎರಡು

ಬಿಡುಗಡೆಯಾದ ಎಪ್ಪತ್ತು ಸಿನಿಮಾಗಳ ಪೈಕಿ ಸೂಪರ್‌ಹಿಟ್‌ ಅನ್ನಿಸಿಕೊಂಡದ್ದು ಕೆಜಿಎಫ್‌2, ಅಚ್ಚರಿಯ ಗೆಲುವು ಕಂಡದ್ದು ಚಾರ್ಲಿ 777. ಈ ಎರಡು ಚಿತ್ರಗಳು ಪ್ರೇಕ್ಷಕನ ಮೇಲೆ ಚಿತ್ರರಂಗಕ್ಕಿದ್ದ ಭರವಸೆಯನ್ನು ಬಲಪಡಿಸಿದವು. ಕೆಜಿಎಫ್‌2 ಗೆಲುವಿಗೆ ಮುನ್ನುಡಿ ಬರೆದದ್ದು ಜೇಮ್ಸ್‌ ಚಿತ್ರದ ಅಸಾಧಾರಣ ಮತ್ತು ಅನಿರೀಕ್ಷಿತ ಯಶಸ್ಸು. ಪುನೀತ್‌ ನಿರ್ಗಮನವೂ ಸ್ಪಲ್ಪ ಮಟ್ಟಿಗೆ ಕಾರಣವಾಯಿತೇನೋ ಎಂದುಕೊಂಡರೂ, ಜೇಮ್ಸ್‌ ಮಾತ್ರ ನಿರ್ಮಾಪಕರ ಜೋಳಿಗೆ ತುಂಬಿಸಿತು. ಪ್ರೇಕ್ಷಕರು ಮುಗಿಬಿದ್ದು ಪುನೀತ್‌ ಕೊನೆಯ ಚಿತ್ರವನ್ನು ನೋಡಿದರು.

ಕೆಜಿಎಫ್‌2 ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ದಾಖಲೆ ಬರೆಯಿತು. ಹಲವು ಹಳೆಯ ದಾಖಲೆಗಳನ್ನು ಮುರಿಯಿತು. ಮಾಚ್‌ರ್‍ 17ರಂದು ಜೇಮ್ಸ್‌ ಚಿತ್ರವನ್ನು ಮೆಚ್ಚಿದ ಪ್ರೇಕ್ಷಕ, ಒಂದೇ ತಿಂಗಳ ಅಂತರದಲ್ಲಿ, ಏಪ್ರಿಲ್‌ 14ರಂದು ಕೆಜಿಎಫ್‌ 2 ಚಿತ್ರವನ್ನು ಕಣ್ತುಂಬಿಕೊಂಡ.

OH MY LOVE FILM REVIEW: ಕಾಲೇಜ್ ಕಾರಿಡಾರಲ್ಲಿ ಅಕ್ಷಿತ್ ಪ್ರೇಮದಾಟ

ಕೆಜಿಎಫ್‌2 ಚಿತ್ರ ತುಂಬಿದ ಭರವಸೆಯೇನೂ ಬಹಳ ಕಾಲ ಉಳಿಯಲಿಲ್ಲ. ಹಾಗೆ ನೋಡಿದರೆ ಈ ತ್ರೈಮಾಸಿಕದ ಮೊದಲ ಚಿತ್ರ ಹೋಮ್‌ ಮಿನಿಸ್ಟರ್‌ ಸೋಲಿನ ಮುನ್ನುಡಿಯೊಂದಿಗೇ ಚಿತ್ರರಂಗ ಹೊಸ ವರುಷಕ್ಕೆ ಕಾಲಿಟ್ಟಿತು. ಅದರ ಬೆನ್ನಿಗೇ ಬಂದ ತಲೆತಂಡ, ಲೋಕಲ್‌ ಟ್ರೈನ್‌, ಬಾಡಿಗಾಡ್‌, ಇನ್‌ಸ್ಟಂಟ್‌ ಕರ್ಮ ಮುಂತಾದ ಚಿತ್ರಗಳು ಪ್ರೇಕ್ಷಕನ ಮನ ಗೆಲ್ಲಲಿಲ್ಲ. ತ್ರಿಕೋನ ಸ್ಪಲ್ಪ ಮಟ್ಟಿಗೆ ಉಸಿರುಬಿಟ್ಟರೂ, ಪ್ರೇಕ್ಷಕ ಚಿತ್ರಮಂದಿರದ ಕಡೆ ಹೊರಳಲಿಲ್ಲ.

ಹಾಗೆ ನೋಡಿದರೆ 2022ರ ಮೊದಲ ಮೂರು ತಿಂಗಳು, ಜನವರಿ, ಫೆಬ್ರವರಿ ಮತ್ತು ಮಾಚ್‌ರ್‍ -ಸೇರಿದಂತೆ ಬಂದದ್ದು ಕೇವಲ 36 ಸಿನಿಮಾಗಳು. ತಿಂಗಳಿಗೆ ಹನ್ನೆರಡು ಸಿನಿಮಾ ಹಿಂಜರಿಕೆಯಿಂದಲೇ ಬಂತು. ಮೊದಲ ಮೂರು ತಿಂಗಳಲ್ಲಿ ಬಂದ ಸಿನಿಮಾಗಳ ಪೈಕಿ ಒಂಬತ್ತನೇ ದಿಕ್ಕು, ಲವ್‌ ಮಾಕ್ಟೇಲ್‌, ಓಲ್ಡ್‌ ಮಾಂಕ್‌- ಸಣ್ಣ ಮಟ್ಟದಲ್ಲಿ ಸುದ್ದಿ ಮಾಡಿದವು. ಗೆಲುವಿನ ಸೂಚನೆ ನೀಡಿದವು. ಆದರೆ 2022 ಆರ್ಥಿಕ ವರ್ಷ, ಏಪ್ರಿಲ್‌ ಆರಂಭವಾಗುತ್ತಿದ್ದಂತೆ ಎರಡು ಸಿನಿಮಾಗಳಿಂದಾಚೆಗೆ ಯಾವುದನ್ನೂ ಪ್ರೇಕ್ಷಕ ಅಷ್ಟಾಗಿ ಮೆಚ್ಚಿಕೊಳ್ಳಲಿಲ್ಲ.

Petromax Film Review: ‘ಕಾಮ’ನ್‌ ಭಾಷೆಯಲ್ಲಿ ಬದುಕು ಮತ್ತು ಭರವಸೆಯ ಆಟ

ಒಳ್ಳೆಯ ಸಿನಿಮಾ ನಿರಾಶೆಯ ಪ್ರತಿಕ್ರಿಯೆ

ಹಾಗೆ ನೋಡಿದರೆ, ಏಪ್ರಿಲ್‌ ನಂತರ ಬಿಡುಗಡೆಯಾದ ಹಲವು ಚಿತ್ರಗಳು ಗೆಲ್ಲಬೇಕಾಗಿದ್ದವು ಕೂಡ. ಒಳ್ಳೆಯ ಕಂಟೆಂಟ್‌, ಅಚ್ಚುಕಟ್ಟಾದ ಮೇಕಿಂಗ್‌, ಗಮನ ಸೆಳೆಯುವ ಹಾಡು, ಜನಪ್ರಿಯ ಕಲಾವಿದರು ಮತ್ತು ಸಾಕಷ್ಟುಪ್ರಚಾರ ಸಿಕ್ಕರೂ ಪ್ರೇಕ್ಷಕ ಚಿತ್ರಮಂದಿರದ ಕಡೆ ತಲೆಹಾಕಲೇ ಇಲ್ಲ.

ಸಕುಟುಂಬ ಸಮೇತ, ಹರಿಕತೆಯಲ್ಲ ಗಿರಿಕತೆ, ವಿಂಡೋ ಸೀಟ್‌, ತೂತು ಮಡಿಕೆ, ವ್ಹೀಲ್‌ಚೇರ್‌ ರೋಮಿಯೋ, ಚೇಜ್‌, ಫಿಸಿಕ್ಸ್‌ ಟೀಚರ್‌, ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ- ಮುಂತಾದ ಚಿತ್ರಗಳು ಮೆಚ್ಚುಗೆ ಗಳಿಸಿದವು. ಅವುಗಳನ್ನು ನೋಡಿದವರು ಕೊಂಡಾಡಿದರು. ಆ ಮೆಚ್ಚುಗೆ ಗಲ್ಲಾಪೆಟ್ಟಿಗೆಯ ಮೇಲೆ ಪ್ರಭಾವ ಬೀರಲಿಲ್ಲ. ಬೈರಾಗಿ ಚಿತ್ರದ ನಿರ್ಮಾಪಕರು ಮಾತ್ರ ಮುಗುಳ್ನಕ್ಕರು.

ಸಿನಿಮಾ ಚೆನ್ನಾಗಿದೆ, ಅಭಿಪ್ರಾಯ ಚೆನ್ನಾಗಿದೆ, ಎಲ್ಲರೂ ನಾಲ್ಕು ಸ್ಟಾರ್‌ ಕೊಟ್ಟಿದ್ದಾರೆ, ಆದರೆ ಜನ ಮಾತ್ರ ಬರುತ್ತಿಲ್ಲ. ಆರೇಳು ಮಂದಿ ಮಾತ್ರ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ ಎಂಬ ಮಾತುಗಳು ನಿರ್ಮಾಪಕರಿಂದಲೇ ಕೇಳಿಬಂದವು.

ಓಟಿಟಿಯಲ್ಲೂ ನಿರಾಶೆ

ಕನ್ನಡ ಸಿನಿಮಾಗಳಿಗಷ್ಟೇ ಅಲ್ಲ, ಕೋವಿಡ್‌ ಕಾಲದಲ್ಲಿ ಅಪಾರ ಜನಪ್ರಿಯತೆ ಕಂಡ ಮಲಯಾಳಂ ಚಿತ್ರಗಳು ಕೂಡ ಓಟಿಟಿಯಲ್ಲಿ ಹಿನ್ನಡೆ ಕಂಡವು. ನೇರವಾಗಿ ಓಟಿಟಿಯಲ್ಲಿ ರಿಲೀಸ್‌ ಮಾಡಿದ ಚಿತ್ರಗಳು ಕೂಡ ಹೆಚ್ಚು ಮಾತಾಡಲಿಲ್ಲ.

ಅದರಿಂದಾಗಿಯೇ ಓಟಿಟಿಗಳು ಕೂಡ ಕನ್ನಡ ಚಿತ್ರಗಳನ್ನು ಕೊಂಡುಕೊಳ್ಳುವಲ್ಲಿ ಹಿಂದೆ ಬಿದ್ದವು. ಹೊಸ ಓಟಿಟಿಗಳು ಆರಂಭವಾದರೂ ಅವುಗಳು ಕನ್ನಡ ಚಿತ್ರಗಳನ್ನು ಕೊಳ್ಳುವಷ್ಟುಶ್ರೀಮಂತಿಕೆ ತೋರಲಿಲ್ಲ. ಕೇವಲ ಓಟಿಟಿಯಲ್ಲಿ ತೆರೆಕಂಡರೆ ಸಬ್ಸಿಡಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಹಲವು ಚಿತ್ರಗಳು ಶಾಸ್ತ್ರಕ್ಕೆಂದು ಒಂದು ಪ್ರದರ್ಶನವನ್ನು ಚಿತ್ರಮಂದಿರದಲ್ಲಿ ನಡೆಸಿದವು.

ಒಂದೇ ಪ್ರದರ್ಶನ

ಮೊದಲ ಪ್ರದರ್ಶನದ ನಂತರ ಪ್ರೇಕ್ಷಕರ ಕೊರತೆಯಿಂದ ಪ್ರದರ್ಶನ ರದ್ದಾದ ಘಟನೆಗಳೂ ನಡೆದವು. ಹಲವು ಚಿತ್ರಗಳು ಕೇವಲ ಒಂದೋ ಎರಡೋ ಪ್ರದರ್ಶನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಐದು ಪ್ರೇಕ್ಷಕರು ಇರದೇ ಹೋದರೆ ಚಿತ್ರಪ್ರದರ್ಶನ ಮಾಡುವುದಿಲ್ಲ ಎಂದು ಮಲ್ಟಿಪ್ಲೆಕ್ಸುಗಳು ಪಟ್ಟು ಹಿಡಿದಿದ್ದರಿಂದ ಹಲವಾರು ಚಿತ್ರಗಳು ಒಂದೇ ಪ್ರದರ್ಶನ ಕಂಡವು.