Oh My Love Film Review: ಕಾಲೇಜ್ ಕಾರಿಡಾರಲ್ಲಿ ಅಕ್ಷಿತ್ ಪ್ರೇಮದಾಟ

ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ನಟಿಸಿರುವ ‘ಓ ಮೈ ಲವ್‌’ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ?

Kannada film Oh My Love movie review vcs

ಆರ್‌ಕೆ

ಅಸಂಖ್ಯಾತ ತಿರುವುಗಳ ಮಾಮೂಲು ಕಾಲೇಜ್‌ ಕಾರಿಡಾರ್‌ ಸಿನಿಮಾ ‘ಓ ಮೈ ಲವ್‌’. ನಿರ್ದೇಶಕ ಸ್ಮೈಲ್‌ ಶ್ರೀನು ಪ್ರೀತಿಗೂ ಪ್ರೇಮಕ್ಕೂ ಗಂಟು ಹಾಕಿದ್ದಾರೆ. ಅದಕ್ಕೆ ಫ್ಯಾಮಿಲಿ ಸೆಂಟಿಮೆಂಟು ಮೆತ್ತಿದ್ದಾರೆ. ಇವನ್ನೆಲ್ಲ ಕಾಪಾಡಿರುವುದು ಛಾಯಾಗ್ರಹಣ, ಮೇಕಿಂಗ್‌, ಅಕ್ಷಿತ್‌ ಶಶಿಕುಮಾರ್‌ ಅವರ ಆ್ಯಕ್ಷನ್‌ ಹಾಗೂ ಡ್ಯಾನ್ಸ್‌ . ಒಳ್ಳೆಯ ಕತೆ, ಸೂಕ್ತ ನಿರ್ದೇಶಕ ಸಿಕ್ಕರೆ ಅಕ್ಷಿತ್‌ಗೆ ಭವ್ಯ ಭವಿಷ್ಯವಿದೆ.

PETROMAX FILM REVIEW: ‘ಕಾಮ’ನ್‌ ಭಾಷೆಯಲ್ಲಿ ಬದುಕು ಮತ್ತು ಭರವಸೆಯ ಆಟ

ಇಬ್ಬರು ಸ್ನೇಹಿತರು, ಒಬ್ಬ ಫ್ಲರ್ಚ್‌. ಸ್ನೇಹಿತನ ಮಗಳ ಕಾಪಾಡಲು ಹೋಗಿ ವಿಲನ್‌ ಕಣ್ಣಿಗೆ ಬೀಳುತ್ತಾನೆ. ಒಂದು ಕಡೆ ಯುದ್ಧ ಮತ್ತೊಂದು ಕಡೆ ಪ್ರೇಮ- ಹೀಗೆ ಎರಡೆರಡು ಚಕ್ರವ್ಯೂಹದೊಳಗೆ ಸುತ್ತುವ ಹೀರೋ ಪ್ರೀತಿಯನ್ನು ದಕ್ಕಿಸಿಕೊಳ್ಳುತ್ತಾನೆಯೇ ಎಂಬುದು ಚಿತ್ರದ ಕತೆ.

ತಾರಾಗಣ: ಅಕ್ಷಿತ್‌ ಶಶಿಕುಮಾರ್‌, ಕೀರ್ತಿ ಕಲ್ಕರೆ

ನಿರ್ದೇಶನ: ಸ್ಮೈಲ್‌ ಶ್ರೀನು

ರೇಟಿಂಗ್‌: 3

Chase Film Review: ಕಥೆಗೆ ಹೊಸ ಸ್ವರೂಪ, ಅಭಿನಯವೇ ದೀಪ

ಇಲ್ಲಿ ನಾಯಕ ಮತ್ತು ನಾಯಕಿ ಅಣ್ಣನ ನಡುವಿನ ಸ್ನೇಹದ ಕತೆಯೇ ತುಂಬಾ ಪೇಲವ ಆಗಿದೆ. ತಂಗಿಯ ಪ್ರೀತಿಯನ್ನು ವಿರೋಧಿಸುವುದಕ್ಕೆ ಸಕಾರಣಗಳಿಲ್ಲ. ಕಿರುಚುವ ಖಳ, ವ್ಯರ್ಥದೃಶ್ಯಗಳು ಸಾಕಷ್ಟಿವೆ. ಇದರ ನಡುವೆಯೇ ಸಿನಿಮಾ ಸರಾಗ ಸಾಗುತ್ತದೆ. ಹದಿಹರೆಯದ ಕಾಲೇಜು ಪ್ರೇಮ ಕತೆಯನ್ನು ನೋಡಲು ಬಯಸುವವರಿಗೆ ಈ ಸಿನಿಮಾ ಮೆಚ್ಚುಗೆ ಆಗುತ್ತದೆ. ಶಶಿಕುಮಾರ್‌ ಪುತ್ರ ಅಕ್ಷಿತ್‌, ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೀರ್ತಿ ಕಲ್ಕರೆ ನೋಡಲು ಚೆಂದ.

Latest Videos
Follow Us:
Download App:
  • android
  • ios