ಎಕ್ಸ್ ಬಗ್ಗೆ ಎಲ್ಲ ಮರೆತು ಮುಂದೆ ಬಂದಾಗಿದೆ ಎಂದು ನಿಮ್ಮ ಫ್ರೆಂಡ್ಸ್ ಜೊತೆ ಸುಳ್ಳು ಹೇಳಿದ್ದು ಓಕೆ, ನಿಮ್ಮ ಹೃದಯಕ್ಕೆಷ್ಟು ಬಾರಿ ಸುಳ್ಳು ಹೇಳಿಕೊಂಡಿದ್ದೀರಿ? ಕನಿಷ್ಠ 1000 ಬಾರಿ? ಪರವಾಗಿಲ್ಲ, ಎಕ್ಸ್‌ನ್ನು ಮಿಸ್ ಮಾಡಿಕೊಳ್ಳುವುದು ತಪ್ಪಲ್ಲ. ನೀವಿಬ್ಬರೂ ಕಳೆದ ಮಧುರ ಗಳಿಗೆಗಳನ್ನು ನೆನೆಸಿಕೊಳ್ಳುವುದರಲ್ಲೂ ತಪ್ಪಿಲ್ಲ. ಆದರೆ, ನೀವೇನು ಮಿಸ್ ಮಾಡಿಕೊಳ್ಳುತ್ತಿದ್ದೀರಿ, ನಿಮಗೇನು ಬೇಕು ಎಂಬ ಬಗ್ಗೆ ಸ್ಪಷ್ಟ ಅರಿವಿರುವುದು ಮುಖ್ಯ. ಏಕೆಂದರೆ ಬಹಳಷ್ಟು ಬಾರಿ ಇಗೋಗಳಿಗೆ ಚೆಂದದ ಬಂಧಗಳು ಬಲಿಯಾಗುತ್ತವೆ. ಹಿಂದೆ ಹೋಗಲಾಗದಷ್ಟು ಮುಂದೆ ಹೋದ ಮೇಲೆ ಜ್ಞಾನೋದಯವಾದರೆ ಪ್ರಯೋಜನವಂತೂ ಇಲ್ಲವಲ್ಲ... ಕೆಲ ರಾಶಿಯವರು ಮಾತ್ರ ಮತ್ತೆ ಎಕ್ಸ್ ಬಳಿ ಹೋಗಿ ಪ್ಯಾಚಪ್ ಮಾಡಿಕೊಂಡು ಸಂಬಂಧ ಮುಂದುವರೆಸುತ್ತಾರೆ. ಹೀಗೆ ಎಕ್ಸ್ ಜೊತೆ ಮತ್ತೆ ಒಂದಾಗುವ ರಾಶಿಗಳು ಇವು. 

ವೃಷಭ
ವೃಷಭ ರಾಶಿಯವರು ಕಂಫರ್ಟ್ ಝೋನ್ ಬಿಟ್ಟು ಬಂದರೆ ಚಡಪಡಿಸುವವರು. ಹಾಗಾಗಿ ಅವರು ಸುಲಭವಾಗಿ ಪ್ರೀತಿಗೆ ಬೀಳುವವರಲ್ಲ. ಒಂದು ವೇಳೆ ಬಿದ್ದು ಬ್ರೇಕಪ್ ಆದರೆ, ನಂತರದ ವಾತಾವರಣಕ್ಕೆ ಹೊಂದಿಕೊಳ್ಳುವುದು ಅವರಿಗೆ ಬಹಳ ಕಷ್ಟ. ಹೀಗಾಗಿ ವೃಷಭ ರಾಶಿಯವರು ಮತ್ತೆ ತಮ್ಮ ಎಕ್ಸ್ ಜೊತೆ ಒಂದಾಗುವ ಸಾಧ್ಯತೆ ಹೆಚ್ಚು. ಬದುಕಿನಲ್ಲಿ ಹೆಚ್ಚು ಬದಲಾವಣೆಗಳನ್ನು ತಡೆದುಕೊಳ್ಳಲಾಗದ ಕಾರಣವೇ ಅವರನ್ನು ಪ್ರೀತಿಗೆ ಮರಳಿಸುತ್ತದೆ. 

ಜನ್ಮರಾಶಿಗೆ ಸೆಕ್ಸ್ ಭಂಗಿಗೂ ಇದೆ ಸಂಬಂಧ? ಏನಿದು ಪುರಾಣ?

ಕರ್ಕಾಟಕ
ಕರ್ಕಾಟಕ ರಾಶಿಯವರು ಸಿಕ್ಕಾಪಟ್ಟೆ ಭಾವಜೀವಿಗಳು. ಸಂಬಂಧದೊಳಗೆ ಹೊಕ್ಕ ಮೇಲೆ ತಮ್ಮ ಪ್ರೇಮಿಯ ಮೇಲೆ ಅತಿಯಾಗಿ ಅಟ್ಯಾಚ್ ಆಗುವವರು. ಹಾಗಾಗಿ, ಬ್ರೇಕಪ್‌ಗಳನ್ನು ತಡೆದುಕೊಳ್ಳುವುದು ಇವರಿಂದ ಸಾಧ್ಯವಿಲ್ಲ. ತಮ್ಮ ಪ್ರೀತಿಯ ಕ್ಷಣಗಳನ್ನು ಮರೆಯುವುದು ಇವರಿಂದ ಸಾಧ್ಯವೇ ಇಲ್ಲ. ಬ್ರೇಕಪ್ ಬಳಿಕ ಇವೆಲ್ಲ ಪದೇ ಪದೆ ಕಾಡಲಾರಂಭಿಸುತ್ತದೆ. ಹಾಗಾಗಿ, ಅವರು ಮತ್ತೆ ಪ್ಯಾಚಪ್ ಮಾಡಿಕೊಳ್ಳುತ್ತಾರೆ. 

ಸಿಂಹ
ಸಿಂಹ ರಾಶಿಯವರದು ಬಹಳ ಡಾಮಿನೆಂಟ್ ವ್ಯಕ್ತಿತ್ವ. ಬಹುಷಃ ಅದೇ ಕಾರಣಕ್ಕೆ ತಾವಂದುಕೊಂಡಿದ್ದು ಅಂತೆಯೇ ಆಗದಿದ್ದರೆ ಅವರಿಂದ ಅದನ್ನು ಸಹಿಸಲು ಸಾಧ್ಯವಿಲ್ಲ. ತಮಗೆ ಬೇಕಾಗಿದ್ದನ್ನು ಪಡೆಯಲು ಅವರು ಸ್ವಲ್ಪ ಹೆಚ್ಚೇ ಪ್ರಯತ್ನ ಹಾಕುತ್ತಾರೆ. ಎಕ್ಸ್‌ನ್ನು ಮರಳಿ ಪಡೆಯುವಲ್ಲೂ ಅಷ್ಟೇ.  

ಕನ್ಯಾ
ಇವರು ಹೊರಗಿನಿಂದ ಬಹಳ ಸ್ಟ್ರಾಂಗ್ ಇರುವಂತೆ ಕಂಡರೂ ಪ್ರೀತಿಯ ವಿಷಯಕ್ಕೆ ಬಂದರೆ ಬಹಳ ಮೆತ್ತಗಾಗುವವರು. ಬ್ರೇಕಪ್ ಹ್ಯಾಂಡಲ್ ಮಾಡಲು ಬರದೆ ಒದ್ದಾಡುವವರು. ಇದಕ್ಕಾಗಿಯೇ ಮತ್ತೊಂದು ಹೊಸ ಸಂಬಂಧ ಶುರು ಮಾಡಬೇಕೆಂದರೆ ಹೆದರಿ ನಲುಗುತ್ತಾರೆ. ಅದಕ್ಕಿಂತ ಹಳೆಯ ಸಂಬಂಧದೊಂದಿಗೆ ಪ್ಯಾಚಪ್ ಮಾಡಿಕೊಳ್ಳುವುದೇ ಬೆಸ್ಟ್ ಎಂಬುದು ಇವರ ನಂಬಿಕೆ. ಎಕ್ಸ್‌ನ್ನು ಕ್ಷಮಿಸುವುದೆಂದರೆ ಮುಂದೆಂದೂ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲವೆಂಬ ಭರವಸೆ ಸಿಕ್ಕರಷ್ಟೇ ಕ್ಷಮಿಸಿಬಿಡುತ್ತಾರೆ. 

ತುಲಾ
ಮರೆತು ಮುಂದುವರಿಯುವ ಸ್ವಭಾವ ಇವರದು. ಪ್ರೀತಿಸುವವರ ತಪ್ಪುಗಳನ್ನು ಕಂಡೂ ಕಾಣದಂತೆ ಮುಂದೆ ಹೋಗಿಕೊಂಡು ಅವರನ್ನು ಹೆಚ್ಚಾಗಿ ನಂಬಬಯಸುವ ಗುಣ. ಈ ಮೃದು ಹೃದಯಿ ಸ್ವಭಾವದಿಂದಲೇ ಇವರು ತಮ್ಮ ಎಕ್ಸ್ ಜೊತೆ ಮತ್ತೆ ಒಂದಾಗುತ್ತಾರೆ. ಅವರ ತಪ್ಪುಗಳನ್ನು ಮನ್ನಿಸಿ ಅವರನ್ನು ಪ್ರೀತಿಸುತ್ತಾರೆ. 

ಕೃಷ್ಣನ ಆ'ರಾಧ'ನೆಯಲ್ಲೇ ದೈವತ್ವಕ್ಕೇರಿದಳು ರಾಧೆ...

ಮೀನ
ಪ್ರೀತಿಗೆ ಫೇರಿ ಟೇಲ್ ಎಂಡಿಂಗ್ ಬಯಸುವವರು ಇವರು. ಎಲ್ಲ ಲವ್ ಸ್ಟೋರಿಗಳಿಗೂ ಹ್ಯಾಪಿ ಎಂಡಿಂಗ್ ಇರಬೇಕು ಎಂಬುದು ಇವರ ನಂಬಿಕೆ. ಇವರಿಗೆ ಯುದ್ಧಕ್ಕಿಂತ ಪ್ರೀತಿ ಮೇಲೇ ನಂಬಿಕೆ. ಪ್ರೀತಿಯೇ ಗೆಲ್ಲಬೇಕು ಎಂಬ ಬಯಕೆ.  ಡ್ರಾಮಾ ಶುರುವಾಗುತ್ತಿದೆ ಎಂದರೆ ಅದರಿಂದ ದೂರ ಓಡಿ ತಕ್ಷಣ ಶಾಂತಿಸ್ಥಾಪನೆ ಮಾಡುವ ಉದ್ದೇಶ ಇವರದು. ಹಾಗಾಗಿ, ಕಾರಣಾಂತರಗಳಿಂದ ಬ್ರೇಕಪ್ ಆದರೂ ತಮ್ಮ ಇಗೋ ಬಿಟ್ಟು ಎಕ್ಸ್ ಜೊತೆ ಮರಳಿ ಸುಂದರ ಜೀವನ ನಡೆಸುವ ಕನಸು ಕಾಣುತ್ತಾರೆ. ಇಲ್ಲವೇ ಎಕ್ಸ್ ವಾಪಸ್ ಬಂದು ಕ್ಷಮೆ ಕೇಳಿದರೆ ತಕ್ಷಣ ಕ್ಷಮಿಸಿಬಿಡುತ್ತಾರೆ.