ತಮ್ಮನ ಜೀವ ಉಳಿಸಿಲು ಬಾವಿಗೆ ಹಾರಿದ 8 ವರ್ಷದ ಬಾಲಕಿ: ಬುದ್ಧಿವಂತಿಕೆ ಇಬ್ಬರ ಪ್ರಾಣ ಉಳಿಸಿತು

ತೋಟದ ಮನೆಯಲ್ಲಿ ಆಟವಾಡುತ್ತಿದ್ದಾಗ ಬಾವಿಗೆ ಬಿದ್ದ ತಮ್ಮನನ್ನು, 8 ವರ್ಷದ ಅಕ್ಕನೇ ಬಾವಿಗೆ ಹಾರಿ ಪ್ರಾಣ ರಕ್ಷಣೆ ಮಾಡಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

young girl jumped into well to save her brother life in Tumkur sat

ತುಮಕೂರು (ಜು.14): ತೋಟದ ಮನೆಯಲ್ಲಿ ಆಟವಾಡುತ್ತಿದ್ದಾಗ ಅಚಾನಕ್ಕಾಗಿ ಆಯತಪ್ಪಿ ಬಾವಿಗೆ ಬಿದ್ದ ತಮ್ಮನನ್ನು ಆತನ 8 ವರ್ಷದ ಅಕ್ಕನೇ ಬಾವಿಗೆ ಹಾರಿ ಪ್ರಾಣ ರಕ್ಷಣೆ ಮಾಡಿದ ಸಾಹಸದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ಬಾವಿಗೆ ಬಿದ್ದ ತಮ್ಮನ ಪ್ರಾಣ ರಕ್ಷಣೆ ಮಾಡಿದ ಬಾಲಕಿಯನ್ನು ಶಾಲೂ ಎಂದು ಗುರುತಿಸಲಾಗಿದೆ. ತುಮಕೂರು ತಾಲ್ಲೂಕು ಕುಚ್ಚಂಗಿ ಗ್ರಾಮದ ತೋಟದ ಮನೆಯಲ್ಲಿ ಉತ್ತರ ಪ್ರದೇಶ‌ ಮೂಲದ ಜೀತೇಂದ್ರ, ರಾಜಕುಮಾರಿ ದಂಪತಿ ಕೆಲಸ ಮಾಡುತ್ತಾ ವಾಸವಾಗಿದ್ದಾರೆ. ಈ ದಂಪತಿಗೆ ಒಟ್ಟು ನಾಲ್ವರು ಮಕ್ಕಳಿದ್ದಾರೆ. ತೋಟದ ಮನೆಯ ಪಕ್ಕದಲ್ಲಿಯೇ ಬಾವಿಯಿದ್ದು, ಅದರಿಂದ ತೋಟಕ್ಕೆ ನೀರು ಬಿಡಲಾಗುತ್ತದೆ. ಜೀತೇಂದ್ರ- ರಾಜಕುಮಾರಿ ದಂಪತಿಗೆ 8 ವರ್ಷದ ಶಾಲೂ, 7 ವರ್ಷದ ಹಿಮಾಂಶೂ, 3 ವರ್ಷದ ರಾಶಿ ಹಾಗೂ 2 ವರ್ಷದ ಕಪಿಲ್ ಎಂಬ ನಾಲ್ವರು ಮಕ್ಕಳಿದ್ದಾರೆ. ಇಂದು ಮಧ್ಯಾಹ್ನ ತಂದೆ-ತಾಯಿ ಕೆಲಸಕ್ಕೆ ಹೋದಾಗ ಮಕ್ಕಳೆಲ್ಲರೂ ಆಟವಾಡುತ್ತಿದ್ದರು.

ದಾಳಿ ಮಾಡಿದ ಚಿರತೆಯನ್ನು ಹೆಡೆಮುರಿಕಟ್ಟಿ ಹಂದಿಮರಿ ರೀತಿ ಹೊತ್ತೊಯ್ದ ಹಾಸನದ ಶೂರ!

ಮನೆಯಲ್ಲಿದ್ದ ಲೈಫ್‌ ಜಾಕೆಟ್‌ ಧರಿಸಿ ಬಾವಿಗೆ ಹಾರಿದ ಬಾಲಕಿ: ಈ ವೇಳೆ ತೋಟದ ಮನೆಯ ಬಳಿಯಲ್ಲಿದ್ದ ಬಾವಿಗೆ 7 ವರ್ಷದ ಹಿಮಾಂಶು ಬಿದ್ದಿದ್ದಾನೆ. ಇನ್ನು ತಮ್ಮನನ್ನು ರಕ್ಷಣೆ ಮಾಡಬೇಕೆಂದು ಕೂಡಲೇ ಮನೆಯಲ್ಲಿದ್ದ ಲೈಫ್‌ ಜಾಕೆಟ್‌ ಧರಿಸಿಕೊಂಡು ಆತನ ಅಕ್ಕ 8 ವರ್ಷದ ಶಾಲೂ ಕೂಡ ಬಾವಿಗೆ ಹಾರಿದ್ದಾಳೆ. ಬಾವಿಯಲ್ಲಿ ಜೀವನ್ಮರಣದ ಮಧ್ಯ ಹೋರಾಡುತ್ತಿದ್ದ ತಮ್ಮ ನೀರು ಕುಡಿದು ಮುಳುಗದಂತೆ ಕಾಪಾಡಿದ್ದಾಳೆ. ಇನ್ನು ಬಾವಿಯಲ್ಲಿ ಬಿದ್ದಾಗ ಹೊರಬರಲು ಆಗದೇ ಸಹಾಯಕ್ಕಾಗಿ ಶಾಲೂ ಜೋರಾಗಿ ಕೂಗಿಕೊಂಡಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ ಇತರೆ ಕಾರ್ಮಿಕರು ಹಾಗೂ ಸ್ಥಳೀಯರು ಕೂಡಲೇ ಬಾವಿಯ ಹತ್ತಿರ ಬಂದು ಮಕ್ಕಳಿಬ್ಬರನ್ನು ರಕ್ಷಣೆ ಮಾಡಿದ್ದಾರೆ.

ಮೂರ್ನಾಲ್ಕು ತಿಂಗಳಿಂದ ಈಜು ಕಲಿಕೆ:  ಮನೆಯಲ್ಲಿದ್ದ ಲೈಫ್‌ ಜಾಕೆಟ್ ಮಕ್ಕಳ ಪ್ರಾಣ ಉಳಿಸಿತು: ಇನ್ನು ತೋಟದ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ದಂಪತಿ ಮಕ್ಕಳಿಗೆ ಶಿಕ್ಷಣದ ಜೊತೆಗೆಮ ಜೀವನ ಕೌಶಲ್ಯಗಳನ್ನು ಕೂಡ ಕಲಿಸುತ್ತಿದ್ದರು. ಹೀಗಾಗಿ, ಕಳೆದ ಮೂರ್ನಾಲ್ಕು ತಿಂಗಳಿಂದ ಶಾಲೂ ಈಜು ಕಲಿಯುತ್ತಿದ್ದಳು. ಇದರಿಂದಾಗಿ ಮನೆ ಮಾಲೀಕ ಧನಂಜಯ್ಯನ ಬಳಿ ಬಾಲಿ ಶಾಲೂ ಈಜು ಕಲಿಯುತ್ತಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಲೈಫ್‌ ಜಾಕೆಟ್‌ ಕೂಡ ಇಟ್ಟುಕೊಂಡಿದ್ದಳು. ಇದರಿಂದ ಆಕೆಗೆ ಕೂಡಲೇ ಲೈಫ್‌ಜಾಕೆಟ್‌ ಲಭ್ಯವಾಗಿದೆ.

ಕೋಲಾರದ ರೈತನಿಗೆ ಜಾಕ್‌ಪಾಟ್, ಟೊಮೊಟೊ ಮಾರಿ ಒಂದೇ ದಿನ 38 ಲಕ್ಷ ಸಂಪಾದನೆ!

ಆಪತ್ಕಾಲದಲ್ಲಿ ನೆರವಾದ ಶಿಕ್ಷಕರ ಪಾಠ: ನೀರಿಗೆ ಬಿದ್ದವರನ್ನು ರಕ್ಷಣೆ ಮಾಡುವ ಮುನ್ನ ತಮ್ಮ ಪ್ರಾಣದ ಬಗ್ಗೆಯೀ ಜಾಗ್ರತೆವಹಿಸಬೇಕು ಎಂದು ಈಜುಕಲಿಸುವ ಶಿಕ್ಷಕ ಧನಂಜಯ ಅವರು ಹೇಳಿಕೊಟ್ಟ ಮಾತಿನಂತೆ ಲೈಫ್‌ಜಾಕೆಟ್‌ ಧರಿಸಿ ಬಾವಿಗೆ ಹಾರಿದ ಶಾಲೂ ತಮ್ಮನ ಪ್ರಾಣ ಉಳಿಸುವ ಮೂಲಕ ಸಾಹಸವನ್ನು ಮೆರೆದಿದ್ದಾಳೆ. ಈ ಘಟನೆಯಿಂದ ಗ್ರಾಮಸ್ಥರು ಶಾಲೂ ಸಾಹಸ ಕೊಂಡಾಡಿದ್ದಾರೆ. ಜೊತೆಗೆ, ತೋಟದ ಮನೆಯಲ್ಲಿ ಆಟವಾಡುವ ಮುನ್ನ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆಯೂ ಪೋಷಕರಿಗೆ ಬುದ್ಧಿಯನ್ನು ಹೇಳಿದ್ದಾರೆ. 

Latest Videos
Follow Us:
Download App:
  • android
  • ios