ದಾಳಿ ಮಾಡಿದ ಚಿರತೆಯನ್ನು ಹೆಡೆಮುರಿಕಟ್ಟಿ ಹಂದಿಮರಿ ರೀತಿ ಹೊತ್ತೊಯ್ದ ಹಾಸನದ ಶೂರ!

ಜಮೀನಿಗೆ ಹೋಗುವಾಗ ದಾಳಿ ಮಾಡಿದ ಚಿರತೆಯನ್ನು ಜೀವಂತವಾಗಿ ಸೆರೆಹಿಡಿದ ಯವಕ, ಹಂದಿಮರಿ ರೀತಿಯಲ್ಲಿ ಬೈಕ್‌ಗೆ ಕಟ್ಟಿಕೊಂಡು ಹೋಗಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ.

Hassan young man captured attacking leopard and handed it over to forest department sat

ಹಾಸನ (ಜು.14): ಹಾಸನ ಜಿಲ್ಲೆಯಲ್ಲಿ ಅರಣ್ಯದಿಂದ ಆಹಾರವನ್ನು ಅರಸಿ ಬಾಗಿವಾಳು ಗ್ರಾಮದ ಹೊರವಲಯದಲ್ಲಿ ದಾಳಿ ಮಾಡಿದ ಚಿರತೆಯನ್ನು ಜೀವಂತವಾಗಿ ಸೆರೆಹಿಡಿದ ಯವಕ, ಅದನ್ನು ಹಂದಿಮರಿ ರೀತಿಯಲ್ಲಿ ಬೈಕ್‌ಗೆ ಕಟ್ಟಿಕೊಂಡು ಹೋಗಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ.

ರಾಜ್ಯದಲ್ಲಿ ಇತ್ತೀಚಿನ ದಿನಗಳಳಲ್ಲಿ ಕಾಡು ಪ್ರಾಣಿಗಳು ಆಹಾರವನ್ನರಸಿ ನಾಡಿಗೆ ಬರುವ ಸಂಖ್ಯೆಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ಚಿರತೆ ನಾಡಿಗೆ ನುಗ್ಗುವ ಪ್ರಮಾಣ ತುಸು ಹೆಚ್ಚೇ ಎಂದು ಹೇಳಬಹುದು. ಅದೇ ರೀತಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಬಾಗಿವಾಳು ಗ್ರಾಮಕ್ಕೆ ನುಗ್ಗಿದ ಚಿರತೆ ಜಮೀನಿಗೆ ಹೋಗುತ್ತಿದ್ದ ಯುವಕನ ಮೇಲೆ ದಾಳಿ ಮಾಡಿದೆ. ತನ್ನ ಜೀವ ಉಳಿಸಿಕೊಳ್ಳುವ ಉದ್ದೇಶದಿಂದ ಧೈರ್ಯ ಮಾಡಿದ ಯುವಕ ಚಿರತೆಯನ್ನು ಓಡಿಸಲು ಮುಂದಾಗಿದ್ದಾನೆ.

ಸಿದ್ದರಾಮಯ್ಯ ಗೆಳೆತನದ ಬಗ್ಗೆ ರೇವಣ್ಣ ಮಾತು, ನೀನು ಈ ಬಾರಿ ಲಿಂಬೆಹಣ್ಣು ಮಂತ್ರಿಸಿಲ್ಲ-ಕಿಚಾಯಿಸಿದ ಅಶೋಕ್

ಹಗ್ಗದ ಸಹಾಯದಿಂದ ಚಿರತೆಯನ್ನೇ ಕಟ್ಟಿದ: ಇನ್ನು ಚಿರತೆ ಓಡಿಸಲು ಮುಂದಾದಾಗ ಮತ್ತಷ್ಟು ಭೀಕರವಾಗಿ ಯುವಕನ ಮೇಲೆ ಚಿರತೆ ದಾಳಿ ಮಾಡಿದೆ. ಈ ವೇಳೆ ಕೈ ಮತ್ತು ಕಾಲುಗಳಿಗೆ ಗಾಯವಾಗಿದ್ದರೂ, ಚಿರತೆಯೊಂದಿಗೆ ಸೆಣಸಾಡಿದ್ದಾನೆ. ದೇಹದ ಭಾಗಗಳಿಗೆ ಗಾಯವಾದರೂ  ಧೃತಿಗೆಡದ ಯುವಕ ಜಮೀನಿಗೆ ಕೊಂಡೊಯ್ಯುತ್ತಿದ್ದ ಬೈಕ್‌ನಲ್ಲಿರುವ ಹಗ್ಗವನ್ನು ಎತ್ತಿಕೊಂಡು ಚಿರತೆ ದಾಳಿ ಮಾಡಲು ಮುಂದಾದಾಗ ಅದಕ್ಕೆ ಕುಣಿಕೆ ಹಾಕಿ ಬಿಗಿದಿದ್ದಾನೆ. ಈ ವೇಳೆ ಚಿರತೆಯ ಕಾಲುಗಳು ಹಾಗೂ ದೇಹಕ್ಕೆ ಹಗ್ಗ ಬಿಗಿದು ದಾಳಿ ಮಾಡಲು ಸಾಧ್ಯವಾಗದ ರೀತಿ ಬಿದ್ದಿದೆ.

ಚಿರತೆಯನ್ನು ಗ್ರಾಮಕ್ಕೆ ಹೊತ್ತುಕೊಂಡು ಬಂದ ಯುವಕ: ನಂತರ, ದೇಹದ ಭಾಗಕ್ಕೆ ಬಿಗಿದಿದ್ದ ಹಗ್ಗವನ್ನು ಬಿಚ್ಚಿ ನಾಲ್ಕು ಕಾಲುಗಳಿಗೆ ಕಟ್ಟಿದ್ದಾನೆ. ನಂತರ, ಕೋಲುಗಳ ಸಹಾಯದಿಂದ ಬೈಕ್‌ನ ಹಿಂಭಾಗದಲ್ಲಿ ಹಂದಿಮರಿಯ ರೀತಿಯಲ್ಲಿ ಕಟ್ಟಿಕೊಂಡು ಸೀದಾ ಗ್ರಾಮಕ್ಕೆ ಹೋಗಿದ್ದಾನೆ. ಇನ್ನು ಚಿರತೆಯೊಂದಿಗೆ ಏಕಾಂಗಿಯಾಗಿ ಹೋರಾಡಿ ಸೆರೆಹಿಡಿದ ಯುವಕನನ್ನು ಬಾಗಿವಾಳು ಗ್ರಾಮದ ವೇಣುಗೋಪಾಲ್ ಅಲಿಯಾಸ್‌ ಮುತ್ತು ಎಂದು ಹೇಳಲಾಗುತ್ತಿದೆ. ಗ್ರಾಮಸ್ಥರೆಲ್ಲರೂ ಸೇರಿ ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಚಿರತೆಯನ್ನು ಹಸ್ತಾಂತರ ಮಾಡಿದ್ದಾರೆ.

ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ, ಬಾಗಿಲು ಮುಚ್ಚಿ ಲಾಕ್‌ ಮಾಡಿದ ಮನೆ ಮಾಲೀಕ:
ಹಾಸನ (ಜು.14): ಅರಸೀಕೆರೆ ಬಳಿಯ ಬಾಗಿವಾಳು ಗ್ರಾಮದಲ್ಲಿ ಯುವಕನೇ ಸೆಣಸಾಡಿ ಚಿರತೆಯನ್ನು ಸೆರೆಹಿಡಿದು ಹೊತ್ತು ತಂದಿರುವ ಘಟನೆ ಒಂದೆಡೆಯಾದರೆ, ಮತ್ತೊಂದೆಡೆ ಹಾಸನ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಧರ್ಮ ಎಂಬುವವರ ಮನೆಯ ದನದ ಕೊಟ್ಟಿಗೆಗೆ ನುಗ್ಗಿರೊ ಚಿರತೆ ಕೊಟ್ಟಿಗೆಯಲ್ಲಿ ಆರಾಮವಾಗಿ ಮಲಗಿದೆ. ತಮ್ಮ ಜಮೀನಿನ ಬಳಿ ಮನೆ ನಿರ್ಮಿಸಿ ವಾಸವಾಗಿರೊ ಧರ್ಮ ಅವರ ಕುಟುಂಬ, ವಾಸದ ಮನೆಗೆ ಹೊಂದಿಕೊಂಡಂತೆ ದನದ ಕೊಟ್ಟಿಗೆಯನ್ನು ನಿರ್ಮಿಇಸಿಕೊಂಡು ಹೈನುಗಾರಿಕೆ ಮಾಡುತ್ತಿದ್ದಾರೆ. 

Breaking: ಕುನೋ ಪಾರ್ಕ್‌ನಲ್ಲಿ 8ನೇ ಚೀತಾ ಸಾವು, ಗಂಡು ಚೀತಾ ಸೂರಜ್‌ ಮರಣ

ದನಕ್ಕೆ ಮೇವು ಹಾಕುವ ಜಾಗದಲ್ಲಿ ಚಿರತೆ ನಿದ್ರೆ: ಆದರೆ, ನಿನ್ನೆ ರಾತ್ರಿ ವೇಳೆ ಕಾಡಿನಿಂದ ಆಹಾರವನ್ನರಸಿ ನಾಡಿಗೆ ಬಂದಿರುವ ಚಿರತೆ ಸೀದಾ ತೋಟದ ಮನೆಯ ದನದ ಕೊಟ್ಟಿಗೆಗೆ ನುಗ್ಗಿದೆ. ಇನ್ನು ದನಕ್ಕೆ ಮೇವು ಹಾಕುವ ಜಾಗದಲ್ಲಿ ಮಲಗಿದೆ. ಚಿರತೆಯನ್ನು ನೋಡಿದ ದನಗಳು ಪ್ರಾಣಸಂಕಟದಿಂದ ಕೂಗಿಕೊಂಡಿವೆ. ಬೆಳಗ್ಗೆ ಹಾಲು ಕರಿಯಲು ಹೋದ ಹಸುಗಳ ಮಾಲೀಕ ಚಿರತೆಯನ್ನು ನೋಡಿ ಕೊಟ್ಟಿಗೆಯ ಬಾಗಿಲನ್ನು ಮುಚ್ಚಿದ್ದಾನೆ. ಚಿರತೆಯನ್ನು ಲಾಕ್‌ ಮಾಡಿ ಅರಣ್ಯ ಇಲಾಖೆ  ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾನೆ. ದನಗಳಿಗೆ ಹಾನಿಯಾಗದಂತೆ ಚಿರತೆ ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ.

Latest Videos
Follow Us:
Download App:
  • android
  • ios