ಎಕ್ಸ್ ಮೇಲೆ ಸಿಕ್ಕಾಪಟ್ಟೆ ಸಿಟ್ಟಿದ್ಯಾ ? ಈ ಝೂನಲ್ಲಿ ಮಾಜಿ ಪ್ರೇಯಸಿ ಹೆಸರನ್ನು ಜಿರಳೆಗಿಡ್ಬೋದು!
ಮನೆಯಲ್ಲಿ ಪ್ರೀತಿಯ ಭಾವನೆ ಎಷ್ಟು ತೀವ್ರವಾಗಿದೆಯೋ ದ್ವೇಷದ ಭಾವನೆ ಅಷ್ಟೇ ಕೆಟ್ಟದಾಗಿರುತ್ತದೆ. ತಾನು ಯಾರನ್ನಾದರೂ ದ್ವೇಷಿಸಲು ಆರಂಭಿಸಿದರೆ ಮನುಷ್ಯ ಆತನನ್ನು ತುಂಬಾ ನಿಕೃಷ್ಟವಾಗಿ ನೋಡಲು ಬಯಸುತ್ತಾನೆ. ಇಂಥವರಿಗೆಂದೇ ಕೆನಡಾ ಝೂ ಸ್ಪೆಷಲ್ ಆಫರ್ ನೀಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಪ್ರೀತಿಯೆಂಬುದು ಒಂದು ಸುಂದರವಾದ ಭಾವನೆ. ಆದರೆ ಅಲ್ಲಿ ದ್ವೇಷ ಸುಳಿದುಬಿಟ್ಟರೆ ಆ ಭಾವನೆಯು ತೀವ್ರವಾಗಿರುತ್ತದೆ. ಅದು ಮಾಜಿ ಗೆಳೆಯ, ಗರ್ಲ್‌ಫ್ರೆಂಡ್, ಬಾಸ್, ಗಂಡ ಯಾರೂ ಸಹ ಆಗಿರಬಹುದು. ಅಂಥವರ ಮೇಲೆ ಮನಸ್ಸಿನಲ್ಲಿ ಮುಗಿಯದಷ್ಟು ಹಗೆ ಮೂಡುತ್ತದೆ.
ಜೀವನದಲ್ಲಿ ಸಾಕಷ್ಟುತೊಂದರೆ ಕೊಡುವವರ ಮೇಲೆ ಹಗೆ ತೀರಿಸಿಕೊಳ್ಳಲು ಅವರ ಹೆಸರನ್ನು ಜಿರಳೆಗೆ ಇಡಲು ಕೆನಡಾದ ಮೃಗಾಲಯವೊಂದು ಅವಕಾಶ ನೀಡಿದೆ. ಮಾಜಿ ಪ್ರೇಯಸಿ, ತೊಂದರೆ ಕೊಡುವ ಬಾಸ್, ಎಲ್ಲದರಲ್ಲೂ ಮೂಗು ತೂರಿಸುವ ಸಂಬಂಧಿಗಳ ಹೆಸರನ್ನು ಜಿರಳೆಗಳಿಗೆ ಇಡಲು ಅವಕಾಶ ನೀಡಲಾಗುತ್ತದೆ.
ಮಾಜಿ ಪ್ರೇಯಸಿ ಅಥವಾ ಪ್ರಿಯಕರನ ಹೆಸರನ್ನು ಜಿರಳೆಗೆ ಇಡಿ
ಕೆನಡಾದ ಟೊರೊಂಟೊದಲ್ಲಿರುವ ಮೃಗಾಲಯ (Zoo)ವೊಂದು ನಾವು ದ್ವೇಷಿಸುವ ವ್ಯಕ್ತಿಯ ವಿರುದ್ಧ ನಮ್ಮ ಕೋಪವನ್ನು ಹೊರಹಾಕಲು ವ್ಯಾಲೆಂಟೈನ್ಸ್ ಡೇಗೆ ವಿಶೇಷ ಅವಕಾಶವನ್ನು ನೀಡುತ್ತಿದೆ. ಮುಂಚಿತವಾಗಿ, ಕೆನಡಾದ ಟೊರೊಂಟೊ ಮೃಗಾಲಯದ ವನ್ಯಜೀವಿ ಸಂರಕ್ಷಣಾ ಸಂಸ್ಥೆಯು 'ನೇಮ್-ಎ-ರೋಚ್' ಅಭಿಯಾನದೊಂದಿಗೆ ಬಂದಿದೆ. ಈ ಅಭಿಯಾನವು (Campaign) ಜನರು ತಮ್ಮ ಮಾಜಿ ಅಥವಾ ಅವರು ದ್ವೇಷಿಸುವ ವ್ಯಕ್ತಿಯ ಹೆಸರನ್ನು ಜಿರಳೆಗೆ ಹೆಸರಿಸಲು ಅನುಮತಿಸುತ್ತದೆ. ಇದಕ್ಕಾಗಿ ಕನಿಷ್ಠ 25 ಡಾಲರ್ (1,507 ರು.) ದೇಣಿಗೆಯನ್ನು ನೀಡಬೇಕಾಗುತ್ತದೆ. ಮುಂಬರುವ ವ್ಯಾಲೆಂಟೈನ್ಸ್ ಡೇ ದಿನದಂದು ನಿಮ್ಮ ಮಾಜಿ ಪ್ರೇಯಸಿ (Ex-Girlfriend) ಅಥವಾ ಪ್ರಿಯಕರನ ಹೆಸರನ್ನು ಜಿರಳೆಗೆ ಇಡಿ ಎಂದು ಮೃಗಾಲಯ ಜಾಹೀರಾತು (Advertisement) ನೀಡುತ್ತಿದೆ.
ಫ್ರೈಡ್ ರೈಸ್‍ನಲ್ಲಿ ಜಿರಳೆ ಪತ್ತೆ, ಅದು ಈರುಳ್ಳಿಯಲ್ವಾ ತಿನ್ನಿ ಎಂದ ಸಿಬ್ಬಂದಿ !
ಪ್ರೇಮಿಗಳ ದಿನಕ್ಕೆ ಕೆನಡಾದ ಟೊರೊಂಟೊ ಮೃಗಾಲಯದ ಆಫರ್
'ನಿಮ್ಮ ಜೀವನದಲ್ಲಿ ಯಾರಾದರೂ ನಿಮ್ಮನ್ನು ಕಾಡುತ್ತಿದ್ದಾರೆಯೇ? ಈ ಪ್ರೇಮಿಗಳ ದಿನದಂದು ಅವರಿಗೆ ಜಿರಳೆಯನ್ನು ಹೆಸರಿಸುವ ಮೂಲಕ ಖುಷಿಪಡಿ; ಎಂದು ಟೊರೊಂಟೊ ಮೃಗಾಲಯ ಹೇಳಿದೆ. ವ್ಯಕ್ತಿಗೆ ಜಿರಳೆ (cockroach)ಯನ್ನು ಹೆಸರಿಸುವ ಮೂಲಕ, ನಿಮ್ಮ ಹೆಸರು ಮತ್ತು ರೋಚ್ ಹೆಸರಿನೊಂದಿಗೆ ವೈಯಕ್ತೀಕರಿಸಿದ ಡಿಜಿಟಲ್ ಪ್ರಮಾಣಪತ್ರವನ್ನು (Certificate) ನೀವು ಪಡೆಯಬಹುದು ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ. ನೀವು ಇ-ಕಾರ್ಡ್ ಕಳುಹಿಸುವ ಆಯ್ಕೆಯನ್ನು ಹೊಂದಿರುತ್ತೀರಿ ಅಥವಾ ನಿಮ್ಮದೇ ಆದ ವ್ಯಕ್ತಿಗೆ ತಿಳಿಸುವ ಆಯ್ಕೆಯನ್ನು ಹೊಂದಿರುತ್ತೀರಿ ಎಂಬ ಮಾಹಿತಿಯನ್ನು ಸಹ ನೀಡಲಾಗಿದೆ.
'ಟೊರೊಂಟೊ ಮೃಗಾಲಯದ ವನ್ಯಜೀವಿಯಿಂದ ಸೂಕ್ತವಲ್ಲದ ಹೆಸರುಗಳು ಮತ್ತು ಭಾಷೆ ನಿಮ್ಮ ಡಿಜಿಟಲ್ ಪ್ರಮಾಣಪತ್ರದಲ್ಲಿ ಕಾಣಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಅಶ್ಲೀಲತೆ ಮತ್ತು ದ್ವೇಷದ ಮಾತುಗಳನ್ನು ಸಹಿಸಲಾಗುವುದಿಲ್ಲ' ಎಂದು ಟೊರೊಂಟೊ ಮೃಗಾಲಯ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.
ಜಿರಳೆ ಕಾಟವೇ.? ಸಮಸ್ಯೆ ತಡೆಯುವ ಪರಿಹಾರಗಳಿವು
ಮನೆಯೊಳಗೆ ಜಿರಳೆ ಬಿಟ್ಟುಕೊಂಡರೆ 1.5 ಲಕ್ಷ ಕೊಡತ್ತೆ ಈ ಸಂಸ್ಥೆ!
ಯಾರಾದರೂ ನಿಮಗೆ 1.5 ಲಕ್ಷ ರೂಪಾಯಿಗಳನ್ನು ಕೊಡುತ್ತಾರೆ ಎಂದರೆ ನೀವು ಮನೆಯಲ್ಲಿ ಜಿರಳೆಗಳನ್ನು ಬಿಟ್ಟುಕೊಳ್ಳುತ್ತೀರಾ? ಅಯ್ಯೋ ಇದೇನಿದು ವಿಚಿತ್ರ ಬೇಡಿಕೆ ಅನಿಸುತ್ತದೆ ಅಲ್ಲವಾ? ಆದರೆ ಸತ್ಯವಾಗಲೂ ಅಮೆರಿಕಾದ ಸಂಸ್ಥೆಯೊಂದು ಮನೆಯಲ್ಲಿ ನೂರು ಜಿರಳೆಗಳನ್ನು ಬಿಟ್ಟುಕೊಂಡರೆ ರೂ. 1.5 ಲಕ್ಷ ಕೊಡುತ್ತದೆ. ಪೆಸ್ಟ್ ಕಂಟ್ರೋಲ್ ಸಂಸ್ಥೆ ಈ ಆಫರ್ ಅನ್ನು ಗ್ರಾಹಕರಿಗೆ ನೀಡಿದೆ. ಸಂಸ್ಥೆ ಈ ಬಗ್ಗೆ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದ್ದು, ನೂರು ಜಿರಳೆಗಳನ್ನು ಮನೆಯೊಳಗೆ ಬಿಡಲಾಗುತ್ತದೆ. ನಂತರ ಸಂಸ್ಥೆಯಿಂದ ಪೆಸ್ಟ್ ಕಂಟ್ರೋಲ್ ಸೇವೆ ನೀಡಲಾಗುತ್ತದೆ. ಇದು ಜಿರಳೆಗಳ ಮೇಲೆ ಎಷ್ಟು ಪ್ರಭಾವಿಯಾಗಲಿದೆ ಎಂಬುದನ್ನು ತಿಳಿಯಲು ಈ ಆಫರ್ ನೀಡಿರುವುದಾಗಿ ಸಂಸ್ಥೆ ತಿಳಿಸಿದೆ.