ಎಂಟು ಗಂಟೆ ಡ್ರೈವ್ ಮಾಡ್ಕೊಂಡು ಮದುವೆಗೆ ಹೋದವಳಿಗೆ ಹೀಗ್ ಅವಮಾನ ಮಾಡೋದಾ?
ಸ್ನೇಹಿತರು, ಸಹೋದ್ಯೋಗಿಗಳ ಮದುವೆಯಲ್ಲಿ ಪಾಲ್ಗೊಳ್ಳೋ ಖುಷಿ ಭಿನ್ನವಾಗಿರುತ್ತೆ. ಅವರು ಒಮ್ಮೆ ಬಾ ಅಂದ್ರೂ ಸಾಕು ಮದುವೆ, ರಿಸೆಪ್ಷನ್ ಎಲ್ಲ ಮುಗಿಸಿ ಮನೆಗೆ ಬರ್ತೇವೆ. ಆದ್ರೆ ಎಲ್ಲ ಕಡೆ ನೀವು ಗಿಸ್ಟ್ ಲೀಸ್ಟ್ ನೋಡ್ದೆ ಹೋದ್ರೆ ಈಕೆಯಂತೆ ಅವಮಾನ ಎದುರಿಸಬೇಕಾಗುತ್ತೆ.
ಮದುವೆ ಸಮಾರಂಭಕ್ಕೆ ನಮ್ಮ ಸಂಬಂಧಿಕರು, ಆಪ್ತರು, ನೆರೆಹೊರೆಯವರನ್ನೆಲ್ಲ ನಾವು ಆಹ್ವಾನಿಸುತ್ತೇವೆ. ಮದುವೆ ಹಿಂದಿನ ದಿನವೇ ಮನೆಗೆ ಬರುವ ಸಂಬಂಧಿಕರು ಮದುವೆ ಮುಗಿದು ಎರಡು ದಿನದ ಮೇಲೆ ಮನೆ ಖಾಲಿ ಮಾಡೋದಿದೆ. ಇದು ಭಾರತದ ಪದ್ಧತಿ. ನೀವು ಈ ಕಾರ್ಯಕ್ಕೆ ಆಹ್ವಾನಿತರಲ್ಲ, ಆ ಕಾರ್ಯಕ್ಕೆ ಆಹ್ವಾನಿತರಲ್ಲ ಎಂದು ಅವರನ್ನು ಮನೆಯಿಂದ ಹೊರಗೆ ಕಳುಹಿಸುವ ಪದ್ಧತಿ ಇಲ್ಲಿಲ್ಲ. ಮದುವೆ ಸಮಾರಂಭಕ್ಕೆ ಎಷ್ಟು ಜನ ಬರ್ತಾರೆ ಎನ್ನುವ ಕಲ್ಪನೆ ಕೂಡ ಇರೋದಿಲ್ಲ. ಒಂದೇ ಮನೆಯಲ್ಲಿ ಮೂರ್ನಾಲ್ಕು ಮಂದಿ ಹಾಜರಾದ್ರೆ ಮತ್ತೆ ಕೆಲವರ ಮನೆಯಿಂದ ಒಬ್ಬರೂ ಬಂದಿರೋದಿಲ್ಲ. ಹಿಂದೆ ವಾರಗಟ್ಟಲೆ ನಡೆಯುತ್ತಿದ್ದ ಮದುವೆಗೆ ಆಹ್ವಾನಿತರಲ್ಲದವರೂ ಬಂದು , ನಾವು ಹೆಣ್ಣಿನ ಮನೆ ಕಡೆಯವರು, ನಾವು ಗಂಡಿನ ಮನೆ ಕಡೆಯವರು ಎಂದೆಲ್ಲ ಸುಳ್ಳು ಹೇಳಿ ಊಟ ಮಾಡ್ತಿದ್ದರು.
ಈಗ ಭಾರತದಲ್ಲೂ ಕೆಲ ಪದ್ಧತಿ ಬದಲಾಗಿದೆ. ಮದುವೆ, ರಿಸೆಪ್ಷನ್ ಗಳನ್ನು ಅದ್ಧೂರಿಯಾಗಿ ಮಾಡುವ ಜನರು ಅದನ್ನು ಪ್ಲಾನ್ ಪ್ರಕಾರ ಮಾಡ್ತಾರೆ. ಒಂದೇ ದಿನ ಜನಸಂಖ್ಯೆ ಹೆಚ್ಚಾಗದಿರಲಿ ಎನ್ನುವ ಕಾರಣಕ್ಕೆ ರಿಸೆಪ್ಷನ್ ಗೆ ಒಂದಿಷ್ಟು ಮಂದಿಯನ್ನು, ಮದುವೆಗೆ ಒಂದಿಷ್ಟು ಮಂದಿಯನ್ನು ಪ್ರತ್ಯೇಕವಾಗಿ ಕರೆಯುವುದಿದೆ. ಆದ್ರೆ ಮದುವೆಗೆ ಬಂದ ವ್ಯಕ್ತಿ ರಿಸೆಪ್ಷನ್ ಗೆ ಬಂದ್ರೆ ಅವರನ್ನು ಅವಮಾನ ಮಾಡೋದಿಲ್ಲ. ಪ್ರೀತಿಯಿಂದ ಊಟ ಬಡಿಸಿ ಕಳಿಸ್ತಾರೆ. ವಿದೇಶದಲ್ಲಿ ಹಾಗಲ್ಲ. ಮದುವೆ ಮನೆಗೆ ಪ್ರವೇಶ ಪಡಯಬೇಕು ಅಂದ್ರೆ ನಿಮ್ಮ ಬಳಿ ಕಾರ್ಡ್ ಇರಬೇಕು. ನಿಮ್ಮನ್ನು ಯಾವುದಕ್ಕೆ ಆಹ್ವಾನ ಮಾಡಲಾಗಿದೆಯೋ ಅಷ್ಟಕ್ಕೇ ಬರಬೇಕು. ಮೊದಲ ಬಾರಿ ಮನೆಯಿಂದ ದೂರದ ಊರಿಗೆ ಮದುವೆಗೆಂದು ಹೋಗಿದ್ದ ಮಹಿಳೆಯೊಬ್ಬಳಿಗೆ ಅದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಮದುವೆ ಮನೆಯಲ್ಲಿ ಅವಮಾನ ಎದುರಿಸಿದ್ದಾಳೆ.
ವೈರಲ್ ಆಗ್ತಿದೆ ರಕ್ಷಿತ್ ಶೆಟ್ಟಿ ಮುದ್ದಾದ. ಅಣ್ಣ-ಅತ್ತಿಗೆ ಮಕ್ಕಳ ಫ್ಯಾಮಿಲಿ ಫೋಟೋ
ರೆಡ್ಡಿಟ್ (Reddit) ನ u/Baby8227 ಖಾತೆಯಲ್ಲಿ ಮಹಿಳೆ ತನ್ನ ಅನುಭವ ಹಂಚಿಕೊಂಡಿದ್ದಾಳೆ. ಆಕೆ ಹಾಗೂ ಆಕೆ ಸಹೋದ್ಯೋಗಿ (Colleague) ಗಳು, ಕಚೇರಿಯ ಸಹೋದ್ಯೋಗಿ ಮದುವೆಗೆ ಹೊರಟಿದ್ದರು. ಎಂಟು ಗಂಟೆ ಪ್ರಯಾಣ ಬೆಳೆಸಿ ಮದುವೆ ಮನೆಗೆ ಹೋಗಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಎಲ್ಲರೂ ಎಂಜಾಯ್ ಮಾಡಿದ್ದಾರೆ. ಆದ್ರೆ ರಾತ್ರಿಯ ರಿಸೆಪ್ಷನ್ (Reception) ನಲ್ಲಿ ಎಲ್ಲವೂ ಬದಲಾಗಿದೆ. ಮದುವೆಗೆ ಹಾಜರಾದವರು ರಿಸೆಪ್ಷನ್ ಗೆ ಸಿದ್ಧವಾಗಿ ಹಾಲ್ ಗೆ ಹೋಗಿದ್ದಾರೆ. ರಿಸೆಪ್ಷನ್ ಹಾಲ್ ನಲ್ಲಿ ಪ್ರತಿಯೊಬ್ಬ ಅತಿಥಿ ಹೆಸರಿನ ಖುರ್ಚಿ ಇತ್ತು. ಆದ್ರೆ ಮಹಿಳೆ ಹೆಸರಿನಲ್ಲಿ ಯಾವುದೇ ಖುರ್ಚಿ ಇರಲಿಲ್ಲ. ಮಹಿಳೆ ಈ ಬಗ್ಗೆ ಮ್ಯಾನೇಜ್ಮೆಂಟ್ ಹತ್ತಿರ ವಿಚಾರಿಸಿದ್ದಾಳೆ. ಆಗ ಆಕೆಗೆ ಶಾಕ್ ಆಗಿದೆ. ಆಕೆಯನ್ನು ಸಹೋದ್ಯೋಗಿ ಮದುವೆಗೆ ಮಾತ್ರ ಆಹ್ವಾನಿಸಿದ್ದರು. ರಿಸೆಪ್ಷನ್ ನಲ್ಲಿ ಆಕೆ ಪಾಲ್ಗೊಳ್ಳುವಂತಿರಲಿಲ್ಲ. ಆಕೆ ಆಗ ಅತಿಥಿಗಳ ಪಟ್ಟಿಯನ್ನು ನೋಡಿದ್ದಾಳೆ. ಅದ್ರಲ್ಲಿ ಆಕೆ ಹೆಸರಿರಲಿಲ್ಲ. ಹಾಗೂ ಮದುವೆಗೆ ಮಾತ್ರ ತನ್ನನ್ನು ಆಹ್ವಾನಿಸಿದ್ದಾಳೆ ಎಂಬುದು ಗೊತ್ತಾಗಿದೆ. ಇಷ್ಟುದೂರ ಪ್ರಯಾಣ ಮಾಡಿ ಮದುವೆಗೆ ಬಂದವಳಿಗೆ ರಾತ್ರಿ ಊಟ ಸಿಗಲಿಲ್ಲ. ಹಣ ನೀಡಿ ಬೇರೆ ಕಡೆ ಊಟ ಮಾಡುವ ಸ್ಥಿತಿ ಬಂತು.
ಪೋಷಕರ ಮರಣದ ನಂತರ ತಲೆ ಬೋಳಿಸೋದು ಯಾಕೆ?
ಆಕೆಯ ಸಹೋದ್ಯೋಗಿ (Colleague) ಬಾಸ್ (Boss) ಜೊತೆ ಚರ್ಚೆ ನಡೆಸಿ ಕೆಲ ಸಹೋದ್ಯೋಗಿಗಳನ್ನು ಮಾತ್ರ ರಿಸೆಪ್ಷನ್ ಗೆ ಆಹ್ವಾನಿಸಿದ್ದರಂತೆ. ಈ ವಿಷ್ಯ ತಿಳಿದು ಕೋಪಗೊಂಡ ಮಹಿಳೆ, ಉಡುಗೊರೆಯ ಹಣವನ್ನು (Gifft Cash) ಕಟ್ ಮಾಡಿದ್ದಾಳೆ. ಗಿಫ್ಟ್ ಗೆ ಮೀಸಲಿಟ್ಟಿದ್ದ ಬಜೆಟ್ (Budget) ಕಡಿಮೆ ಮಾಡಿ, ಚಿಕ್ಕ ಉಡುಗೊರೆ ನೀಡಿ ವಾಪಸ್ ಬಂದಿದ್ದಾಳೆ. ಅಷ್ಟೇ ಅಲ್ಲ ಈ ವಿಷ್ಯವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಬರೆಯುವ ಮೂಲಕ ತನ್ನ ಕೋಪ ತೀರಿಸಿಕೊಂಡಿದ್ದಾಳೆ.