ಅಮ್ಮನ ಈ ಖುಷಿಗೆ ಬೆಲೆ ಕಟ್ಟೋದು ಹ್ಯಾಗೆ ಬ್ರಾಂಡೆಡ್‌ ಫೋನ್‌ ತಂದು ಕೊಟ್ಟ ಮಗ ಅಮ್ಮನ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಚೆನ್ನೈ(ಜ. 7): ಹೀಗೆ ಮಗ ನೀಡಿದ ಸರ್‌ಪ್ರೈಸ್‌ ಗಿಫ್ಟ್‌ ಪಡೆದ ತಾಯಿಯೊಬ್ಬರ ರಿಯಾಕ್ಷನ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋವನ್ನು ನಟ ಆರ್‌ ಮಾಧವನ್ ಕೂಡ ಮೆಚ್ಚಿಕೊಂಡಿದ್ದು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಬದುಕು ಕಲ್ಪಿಸುವುದಕ್ಕೋಸ್ಕರ ಹಗಲಿರುಳು ಶ್ರಮಿಸುತ್ತಾರೆ. ತಮ್ಮ ಮಕ್ಕಳ ಆಸೆಗಳನ್ನು ಪೂರೈಸುವುದಕ್ಕಾಗಿ ಅವರು ಬಹಳಷ್ಟು ಕಷ್ಟ ಪಡುತ್ತಾರೆ. ಅಲ್ಲದೇ ತಮ್ಮ ಶ್ರಮಕ್ಕೆ ತಕ್ಕಂತೆ ಮಕ್ಕಳು ಯಶಸ್ವಿ ಮತ್ತು ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಯಬೇಕೆಂದು ಅವರು ನಿರೀಕ್ಷಿಸುತ್ತಾರೆ. ಪೋಷಕರು ಮಕ್ಕಳಿಗೆ ಉಡುಗೊರೆಗಳನ್ನು ನೀಡಿ ಆಶ್ಚರ್ಯಗೊಳಿಸಿದ ಹಲವು ನಿದರ್ಶನಗಳಿವೆ. ಆದರೆ ಮಕ್ಕಳು ಅವರಿಗೆ ಉಡುಗೊರೆ ನೀಡಿ ಅಚ್ಚರಿಗೊಳಪಡಿಸಿದಾಗ ಅವರ ಪ್ರತಿಕ್ರಿಯೆ ಹೇಗಿರಬಹುದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ

ಬಹುಶ: ಈ ವಿಡಿಯೋದಲ್ಲಿರುವ ತಾಯಿ ಏನೋ ಹೀಗೆ ಬಗ್ಗಿ ನೋಡುತ್ತಿರುತ್ತಾರೆ ಅಷ್ಟರಲ್ಲಿ ಇವರ ಪುತ್ರ ಅವರ ಮುಂದೆ ಒಂದು ಲಕೋಟೆಯನ್ನು ತಂದಿಟ್ಟಿದ್ದು, ಅದರಲ್ಲಿ ಫೋನ್‌ ಇರುತ್ತದೆ. ಇದನ್ನು ತೆಗೆದು ನೋಡುವ ತಾಯಿಗೆ ಅಚ್ಚರಿಯಾಗುತ್ತದೆ. ಜೊತೆಗೆ ಅವರು ತುಂಬಾ ಭಾವುಕರಾಗುತ್ತ ಅಲ್ಲೇ ಇದ್ದ ಚೇರ್‌ ವೊಂದರ ಮೇಲೆ ಕೂರುತ್ತಾರೆ. ಜನವರಿ 5 ರಂದು ಟ್ವಿಟರ್ ಬಳಕೆದಾರ ವಿಘ್ನೇಶ್ ಸಮ್ಮು(Vignesh Sammu) ಅವರು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಅದನ್ನು 4 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ನಾನು ಅಮ್ಮನಿಗೆ ಕೊಟ್ಟ ಬ್ಯಾಗ್‌ನಲ್ಲಿ 8800 ರೂಪಾಯಿ ಮೌಲ್ಯದ ಹೊಸ ಫೋನ್ ಇತ್ತು. ಆದರೆ ನನ್ನ ತಾಯಿ ಆ ಸಂದರ್ಭದಲ್ಲಿ ಅನುಭವಿಸಿದ ಸಂತೋಷಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದು ಆಕೆಗೆ ನೀಡಿದ ಬರ್ತ್‌ಡೇ ಗಿಫ್ಟ್‌ ಎಂದು ಅವರು ಟ್ವಿಟ್ಟರ್‌ (Twitter)ನಲ್ಲಿ ಬರೆದುಕೊಂಡಿದ್ದಾರೆ. 

Scroll to load tweet…

ವೈರಲ್ ವೀಡಿಯೋದಲ್ಲಿ ತಾಯಿ ಹೊಸ ಫೋನ್‌ ಅನ್ನು ಬ್ಯಾಗ್‌ನಿಂದ ಇದೇನು ಎಂಬಂತೆ ತೆಗೆದು ನೋಡುತ್ತಿದ್ದಾಳೆ. ಈ ವೇಳೆ ಆಕೆಯ ಆಕೆಯ ಪ್ರತಿಕ್ರಿಯೆ ಶುದ್ಧ ಚಿನ್ನದಂತಿತ್ತು. ತನ್ನ ಮಗ ತನಗೆ ಅಮೂಲ್ಯವಾದದ್ದನ್ನು ಉಡುಗೊರೆಯಾಗಿ ನೀಡುತ್ತಿರುವುದನ್ನು ನೋಡಿ ಆಕೆಗೆ ಮಾತೇ ಹೊರಡದಂತಾಗಿತ್ತು. ಈ ವಿಡಿಯೋವನ್ನು ನಟ ಮಾಧವನ್(R Madhavan) ಕೂಡ ಇಷ್ಟಪಟ್ಟಿದ್ದು, ಟ್ಟಿಟ್ಟರ್‌ನಲ್ಲಿ ವಿಡಿಯೋವನ್ನು ರಿಟ್ವಿಟ್‌ ಮಾಡಿದ್ದರು. ಈ ಸಂತೋಷಕ್ಕೆ ಬೆಲೆ ಕಟ್ಟಲಾಗದು ಎಂದು ಅವರು ಬರೆದುಕೊಂಡಿದ್ದರು. 


ಅಪ್ಪನ ನೆನಪಿಗಾಗಿ ಮಗಳು ಭಾವುಕ ನಡೆ

ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಒಂದು ಹಿಡಿ ಹೆಚ್ಚು ಪ್ರೀತಿ. ಅಪ್ಪನಿಗೂ ಅಷ್ಟೇ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಮೇಲೆಯೇ ಒಂದಷ್ಟು ಹೆಚ್ಚಿಗೆ ಪ್ರೀತಿ. ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟು ಕಳುಹಿಸುವಾಗಲಂತೂ ಕೆಲವು ಕುಟುಂಬಗಳಲ್ಲಿ ತಂದೆಯರು ಮಕ್ಕಳಂತೆ ಅಳುವುದನ್ನು ನಾವು ನೋಡಿದ್ದೇವೆ. ನೀವು ನೋಡಿರಬಹುದು. ಅದೇ ರೀತಿಯ ಅಪ್ಪ ಮಗಳ ಬಾಂಧವ್ಯದ ಕತೆ ಇದು. ಕಳೆದು ಹೋದ ಅಪನನ್ನು ಮದುವೆ ಸಂದರ್ಭದಲ್ಲಿ ನೆನೆದ ಮಗಳು ಅವರ ನೆನಪು ಸದಾ ಹಚ್ಚ ಹಸುರಾಗಿ ಉಳಿಯುವ ಸಲುವಾಗಿ ತಾನು ಮದುವೆಗೆ ಬಳಸುವ ವೇಲ್‌ನಲ್ಲಿ ಅಪ್ಪ ಆಕೆಗೆ ಬರೆದ ಪತ್ರವನ್ನು ಅಂಬ್ರಾಯಿಡರಿಯಲ್ಲಿ ಸ್ಟಿಚ್‌ ಮಾಡಿಸಿದ್ದಾಳೆ. ಇದು ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿದ್ದು, ನೋಡುಗರ ಕಣ್ಣನ್ನು ತೇವಗೊಳಿಸುತ್ತಿದೆ. 

Baby Shower For Cat : ಗರ್ಭಿಣಿ ಬೆಕ್ಕಿಗೆ ಸೀಮಂತ ಮಾಡಿದ ತಮಿಳುನಾಡಿನ ಕುಟುಂಬ

ಮದುವೆಯ ದಿನ ಧರಿಸುವ ಉಡುಪು ಹೆಣ್ಣು ಮಕ್ಕಳ ಹೃದಯದಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆಯುತ್ತದೆ. ಹೀಗಾಗಿಯೇ ವಧು ಸುವನ್ಯಾ(Suvanya) ತನ್ನ ತಂದೆಯ ನೆನಪನ್ನು ಸದಾ ಹಸಿರಾಗಿಡಲು ಈ ಮದುವೆ ಧಿರಿಸಿನಲ್ಲಿ ಅವರ ಪತ್ರವನ್ನು ಹೊಲಿಸಿದ್ದಾಳೆ. 'ನನ್ನ ಹೃದಯದಿಂದ ನಿನಗೆ' ಎಂದು ಆಕೆ ತನ್ನ ತಂದೆಗೆ ನಮನ ಸಲ್ಲಿಸಿದ್ದಾಳೆ. ಕಳೆದ ವರ್ಷ ಮೇ ತಿಂಗಳಲ್ಲಿ ಸುವನ್ಯಾಳ ತಂದೆ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದರು. 

ಎಲೆಯಿಂದ ಹಪ್ಪಳ ಕದ್ದ ವರ... ವಧು ಏನ್ಮಾಡಿದ್ಲು ನೋಡಿ...