ಮ್ಯಾಚ್ ಮೇಕಿಂಗ್ ಮೂಲಕ ಸಂಗಾತಿ ಹುಡುಕುವಾಗ ಹಲವು ಬೇಡಿಕೆಗಳು, ಕಂಡೀಷನ್‌ಗಳಿರುವು ಸಾಮಾನ್ಯ. ಈ ಪೈಕಿ ಹುಡುಗಿ ತನ್ನ ಹುಡುಗನ ಕುರಿತು ಅಥವಾ ಮದುವೆಗೆ ಈ ಬೇಡಿಕೆ ಮುಂದಿಟ್ಟರೆ ಮಂದುವರಿಯುವುದಕ್ಕಿಂತ ಈ ಸಂಬಂಧ ಕಟ್ ಮಾಡುವುದೇ ಒಳ್ಳೇದು ಎಂದಿದ್ದಾರೆ.

ಮದುವೆಯಾಗಲು ಮ್ಯಾಚ್ ಮೇಕರ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಹುಡುಗ, ಹುಡುಗಿಯ ಹುಡುಕಾಟ ನಡೆಯುತ್ತದೆ. ಕುಟುಂಬಸ್ಥರ ಮೂಲಕ, ಆಪ್ತರ ಮೂಲಕ ತಮ್ಮ ಮಕ್ಕಳಿಗೆ ಸಂಬಂಧ ಹುಡುಕಲಾಗುತ್ತದೆ. ಇದೀಗ ಮ್ಯಾಚ್ ಮೇಕರ್ ಸೈಟ್ ಮೂಲಕ ಸಂಬಂಧ ಹುಡುಕುವಾಗ ಹಲವು ಬೇಡಿಕೆಗಳು, ಕಂಡೀಷ್‌ನಗಳು ಇರುತ್ತೆ. ಇದೀಗ ಭಾರತದ ಖ್ಯಾಚ ಮ್ಯಾಚ್ ಮೇಕರ್ ಒಯೆಂಡ್ರಿಲಾ ಕಪೂರ್ ಕೆಲ ಸಲಹೆ ನೀಡಿದ್ದಾರೆ. ಇತ್ತೀಚೆಗೆ ತಮ್ಮ ಮ್ಯಾಚ್ ಮೇಕಿಂಗ್‌ನಲ್ಲಿ ಯುವತಿಯೊಬ್ಬಳು ಉತ್ತಮ ಪ್ರೊಫೈಲ್ ಬಂದರೂ ನಿರಾಕರಿಸಿದ್ದರು. ಹಲವು ಹುಡುಗರನ್ನು ಬೇಡ ಎಂದಿದ್ದಳು. ಕೊನೆಗೆ ಆಕೆ ಬಳಿ ಕಾರಣ ಕೇಳಿದಾಗ ಮ್ಯಾಚ್ ಮೇಕರ್‌ಗೆ ಅಚ್ಚರಿಯಾಗಿತ್ತು. ಇದೀಗ ಕಪೂರ್ ಮಹತ್ವದ ಟಿಪ್ಸ್ ನೀಡಿದ್ದಾರೆ. ಈ ರೀತಿಯ ಬೇಡಿಕೆ ಇದ್ದರೆ ಅಂತಹ ಹುಡುಗಿಯನ್ನು ಮದುವೆಯಾಗುವುದಕ್ಕಿಂತ ನಿರಾಕರಿಸುವುದು ಉತ್ತಮ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮ್ಯಾಚ್ ಮೇಕರ್ ಹೇಳಿದ್ದೇನು

ಬಂಗಾಳದ ಪ್ರತಿಷ್ಠಿತ ಸಮುದಾಯದ 28ರ ಯುವತಿ ಮದುವೆಗೆ ಪೋಷಕರು ರೆಡಿಯಾಗಿದ್ದರು. ಯುವತಿ ವಾರ್ಷಿಕ 11 ಲಕ್ಷ ರೂಪಾಯಿ ವೇತನದ ಉದ್ಯೋಗದಲ್ಲಿದ್ದಳು. ಒಯೆಂಡ್ರಿಲಾ ಕಪೂರ್ ಮ್ಯಾಚ್ ಮೇಕಿಂಗ್‌ನಲ್ಲಿ ಒಪ್ಪಂದ ಮಾಡಿಕೊಂಡ ಯುವತಿ ಹಾಗೂ ಪೋಷಕರು ತಮಗೆ ಉತ್ತಮ ವಿದ್ಯಾಭ್ಯಾಸ ಹೊಂದಿರುವ, ಉತ್ತಮ ಕುಟುಂಬ, ಒಳ್ಳೆ ಕೆಲಸದಲ್ಲಿರುವ ವರ ಬೇಕು ಎಂದು ಬೇಡಿಕೆ ಮುಂದಿಟ್ಟಿದ್ದರು.

ಹಲವು ಪ್ರೊಫೈಲ್ ರಿಜೆಕ್ಟ್ ಮಾಡಿದ ಯುವತಿ

ಯುವತಿಯ ಪ್ರೊಫೈಲ್ ನೋಡಿದ ಮ್ಯಾಚ್ ಮೇಕರ್ ಕಪೂರ್ ಸರಿ ಎಂದು ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಮಿಡ್ಲ್ ಕ್ಲಾಸ್ ಫ್ಯಾಮಿಲಿಯ ಹುಡುಗಿ. ಪ್ರತಿ ಪೋಷಕರು, ಹುಡುಗಿ ಉತ್ತಮ ಸಂಬಂಧ ಬಯಸುತ್ತಾರೆ. ಅವರ ಬೇಡಿಕೆ ಕೇಳಿಸಿಕೊಂಡ ಕಪೂರ್ ಒಂದಷ್ಟು ಹುಡುಗರ ಪ್ರೊಫೈಲ್ ಮುಂದಿಟ್ಟಿದ್ದರು. ಉತ್ತಮ ಕುಟುಂಬ, ಒಬ್ಬನೇ ಮಗ, ಉತ್ತಮ ವೇತನ, ನೋಡಲು ಹ್ಯಾಂಡ್ಸಮ್ ಸೇರಿದಂತೆ ಹಲವು ಪ್ರೊಫೈಲ್‌ಗಳನ್ನು ಆಕೆಯ ಮುಂದೆ ಇಡಲಾಗಿತ್ತು. ಆದರೆ ಈ ಎಲ್ಲಾ ಪ್ರೊಫೈಲ್‌ಗಳನ್ನು ಯುವತಿ ಹಾಗೂ ಆಕೆಯ ಪೋಷಕರು ನಿರಾಕರಿಸಿದ್ದರು.

ಯಾವುದೇ ಹುಡುಗರ ಪ್ರೊಫೈಲ್ ನೀಡಿದರೂ ಯವತಿ ಹಾಗೂ ಪೋಷಕರು ರಿಜೆಕ್ಟ್ ಮಾಡಿದ್ದರು. ಹೀಗಾಗಿ ಎಲ್ಲಿ ಸಮಸ್ಯೆಯಾಗುತ್ತಿದೆ ಎಂದು ಅರಿಯಲು ಯುವತಿ ಹಾಗೂ ಕುಟುಂಬಸ್ಥರನ್ನು ಕಪೂರ್ ಸಂಪರ್ಕಿಸಿದ್ದಾರೆ. ಯಾಕೆ ಎಲ್ಲಾ ಪ್ರೊಫೈಲ್ ರಿಜೆಕ್ಟ್ ಆಗುತ್ತಿದೆ. ನಿಮ್ಮ ಬೇಡಿಕೆ ತಕ್ಕಂತೆ ಇರಲಿಲ್ಲವೇ, ಏನಾದರು ಸಮಸ್ಯೆಯಾಗುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.

ತಾನು 1 ಕೋಟಿ ವೇತನದ ಹುಡುಗನ ಹುಡುಕುತ್ತಿದ್ದೇನೆ ಎಂದಿದ್ದಾರೆ. ಇತ್ತ ತಾಯಿ ಬಂಗಾಳಿ ಪ್ರಮುಖ ಸಮುದಾಯದ ಜಾತಿಯವರೇ ಆಗಿರಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಹೀಗಾಗಿ ನೀವು ಕೊಟ್ಟ ಪ್ರೊಫೈಲ್‌ಗಳಲ್ಲಿ ಇವರೆಡು ಮಿಸ್ಸಿಂಗ್ ಇತ್ತು ಎಂದಿದ್ದಾರೆ. ಇದನ್ನು ಮೊದಲೇ ಯಾಕೆ ಹೇಳಲಿಲ್ಲ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಸಮಪರ್ಕ ಉತ್ತರ ಸಿಗಲಿಲ್ಲ. ಹೀಗಾಗಿ ಯುವತಿಯ ಮ್ಯಾಚ್ ಮೇಕರ್ ಒಪ್ಪಂದ ರದ್ದುಗೊಳಿಸಲಾಗಿದೆ ಎಂದು ಒಯಂಡ್ರಿಲಾ ಕಪೂರ್ ಹೇಳಿದ್ದಾರೆ.

ಯುವತಿ ಮಿಡ್ಲ್ ಕ್ಲಾಸ್, ಆಕೆಯ ವೇತನ ಮಿತದಲ್ಲಿದೆ. ಆದರೆ ಆಕೆ ಹಾಗೂ ಆಕೆ ಕುಟುಂಬ ಬಯಸುವುದು ಕೋಟಿ ರೂಪಾಯಿ ಎಂದರೆ ನೀವು ಆವರ ಆಸೆ, ಆಕಾಂಕ್ಷೆಗಳನ್ನು ಊಹಿಸಬಹುದು ಎಂದು ಕಪೂರ್ ಸಲಹೆ ನೀಡಿದ್ದಾರೆ.