ಬಾಯ್ ಫ್ರೆಂಡ್ ಫೋನ್ ಪಾಸ್ವರ್ಡ್ ಗೊತ್ತಿಲ್ವಾ? ಚಿಂತೆ ಬೇಡ, ಈಕೆ ಹೇಳೋ ಟೆಕ್ನಿಕ್ ಫಾಲೋ ಮಾಡಿ
ಮುಳ್ಳನ್ನು ಮುಳ್ಳಿನಿಂದ್ಲೇ ತೆಗೆಯಬೇಕು ಎನ್ನುವ ಮಾತಿದೆ. ನಿಮ್ಮ ಬಾಯ್ ಫ್ರೆಂಡ್ ಮೋಸ ಮಾಡ್ತಿದ್ದಾನೆ ಎಂಬ ಅನುಮಾನ ಬಂದಾಗ ಅದನ್ನು ಪತ್ತೆ ಮಾಡೋದು ತಪ್ಪಲ್ಲ. ಅದಕ್ಕೆ ಫೋನ್ ಪಾಸ್ವರ್ಡ್ ಹ್ಯಾಕ್ ಮಾಡಿ. ಅದು ಹೇಗೆ ಅಂದ್ರಾ?
ಸಂಗಾತಿಗೆ ಮೋಸ ಮಾಡಬಾರದು ಸರಿ, ಆದ್ರೆ ಸಂಗಾತಿ ಮೋಸ ಮಾಡ್ತಿದ್ದರೆ ಅದನ್ನು ಹೇಗೆ ಪತ್ತೆ ಮಾಡೋದು. ಈಗಿನ ದಿನಗಳಲ್ಲಿ ಟೆಕ್ನಾಲಜಿ ತುಂಬಾ ಮುಂದುವರೆದಿದೆ. ಪ್ರತಿಯೊಬ್ಬರೂ ತಮ್ಮ ಫೋನ್ ಲಾಕ್ ಮಾಡಿರ್ತಾರೆ. ಅಂತೂ ಇಂತೂ ಫೋನ್ ಓಪನ್ ಆದ್ರೂ ಪ್ರತಿಯೊಂದು ಅಪ್ಲಿಕೇಷನ್ ಗೆ ಒಂದೊಂದು ಪಾಸ್ವರ್ಡ್ ಇರುತ್ತೆ. ಇಷ್ಟೆಲ್ಲಾ ಇದ್ರೂ ಹ್ಯಾಕರ್ಸ್ ಫೋನ್ ಹ್ಯಾಕ್ ಮಾಡ್ತಾರೆ. ಬರೀ ಹ್ಯಾಕರ್ಸ್ ಮಾತ್ರವಲ್ಲ ಕೆಲ ಸಾಮಾನ್ಯ ಜನರು ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಸಂಗಾತಿ ಫೋನ್ ಗೆ ಪಾಸ್ವರ್ಡ್ ಇಟ್ಟಿದ್ದಾರೆ, ಅದನ್ನು ಹೇಳ್ತಿಲ್ಲ ಎಂದಾಗ್ಲೇ ಅನೇಕರಿಗೆ ಅನುಮಾನ ಶುರುವಾಗುತ್ತದೆ. ಪ್ರೀತಿಸುವ ದಂಪತಿ ಮಧ್ಯೆ ಈ ಪಾಸ್ವರ್ಡ್ ಗುಟ್ಟು ಇರಬಾರದು ಎಂದು ಅನೇಕರು ನಂಬುತ್ತಾರೆ. ಒಬ್ಬರ ಫೋನನ್ನು ಇನ್ನೊಬ್ಬರು ಆರಾಮವಾಗಿ ಓಪನ್ ಮಾಡುವಂತಿದ್ದು, ಎಲ್ಲವನ್ನೂ ಓದುವ, ತಿಳಿಯುವ ಹಾಕಿದ್ರೆ ಆ ಸಂಬಂಧದಲ್ಲಿ ಯಾವುದೇ ಗುಟ್ಟು ಇರೋದಿಲ್ಲ. ಅದೇ ಪಾಸ್ವರ್ಡ್ ಇಟ್ಟು, ಕದ್ದು ಮುಚ್ಚಿ ವ್ಯವಹಾರ ನಡೆಸ್ತಿದ್ದಾರೆ ಅಂದ್ರೆ ಅವರ ಮೇಲೆ ಹದ್ದಿನ ಕಣ್ಣಿಟ್ಟು, ಅವರ ಗುಟ್ಟು ಬಯಲು ಮಾಡೋದ್ರಲ್ಲಿ ತಪ್ಪೇನಿಲ್ಲ. ಅದ್ರಿಂದ ನಿಮಗಾಗ್ತಿರುವ ಮೋಸದಿಂದ ನೀವು ಹೊರಗೆ ಬರಬಹುದು. ಈ ಹುಡುಗಿ ಕೂಡ ಈ ವಿಷ್ಯವನ್ನು ಒಪ್ಪಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಬಾಯ್ ಫ್ರೆಂಡ್ ಫೋನ್ ಹೇಗೆ ಓಪನ್ ಮಾಡಿದೆ ಎನ್ನುವುದಲ್ಲದೆ ಯಾವೆಲ್ಲ ಟೆಕ್ನಿಕ್ ಉಪಯೋಗಿಸಿ ಜನ ಫೋನ್ ಓಪನ್ ಮಾಡಿ, ಮೋಸ ಪತ್ತೆ ಹಚ್ಚಿದ್ದಾರೆ ಎಂಬುದನ್ನು ಹೇಳಿದ್ದಾಳೆ.
ಘಟನೆ ನಡೆದಿರೋದು ಆಸ್ಟ್ರೇಲಿಯಾ (Australia) ದಲ್ಲಿ. ಹುಡುಗಿ ಹೆಸರು ಜೈನಾ ಹಾಕಿಂಗ್. ಆಕೆ ಬಾಯ್ ಫ್ರೆಂಡ್ (Boyfriend), ಊಟ ತರಲು ಹೊರಗೆ ಹೋದಾಗ ಆತನ ಫೋನ್ (Phone) ಚೆಕ್ ಮಾಡಿದ್ದಾಳೆ. ಆತ ಅನೇಕ ಹುಡುಗಿಯರ ಜೊತೆ ಮಾತಾಡ್ತಾನೆ, ಕೆಲ ಅಶ್ಲೀಲ ಫೋಟೋ ಇದೆ ಎಂಬುದು ಗೊತ್ತಾಗಿದೆ. ಆತ ಮಲಗಿದ್ದ ಸಮಯದಲ್ಲಿ ಫೋಟೋ ಡಿಲೀಟ್ ಮಾಡಿದ್ದಲ್ಲದೆ ಡಿಲೀಟ್ ಪೋಲ್ಡರ್ ನಿಂದಲೂ ಫೋಟೋ ಡಿಲೀಟ್ ಮಾಡಿದ್ದಾಳೆ. ಈ ವಿಷ್ಯಕ್ಕೆ ಆಕೆ ಬಾಯ್ ಫ್ರೆಂಡ್ ಜಗಳ ಮಾಡಿದ್ದನಂತೆ. ಫೋನ್ ಓಪನ್ ಮಾಡಿ, ನಂಬಿಕೆಗೆ ದ್ರೋಹ ಬಗೆದಿದ್ದಾಳೆ ಎಂದು ಆರೋಪ ಮಾಡಿದ್ದನಂತೆ. ನನಗಿಂತ ಆತ ನನಗೆ ಮೋಸ ಮಾಡ್ತಿದ್ದ ಎಂದು ಜೈನಾ ಹೇಳಿದ್ದಾಳೆ. ಅಲ್ಲದೆ ಈ ಸಮಯದಲ್ಲಿ ಫೋನ್ ನೋಡೋದು ತಪ್ಪಲ್ಲ ಎಂದೂ ಆಕೆ ಹೇಳಿದ್ದಾಳೆ. ಕೆಲ ತನ್ನ ಸ್ನೇಹಿತರು ಹೇಗೆ ಅವರ ಬಾಯ್ ಫ್ರೆಂಡ್ ಫೋನ್ ಓಪನ್ ಮಾಡಿದ್ದಾರೆ ಎಂಬುದನ್ನೂ ಹೇಳಿದ್ದಾಳೆ.
ಗಂಡ-ಹೆಂಡ್ತಿ ಸಂಬಂಧಕ್ಕೆ ಹುಳಿ ಹಿಂಡಿದ ನಕಲಿ ಫಾದರ್: ನಡು ರಸ್ತೆಯಲ್ಲಿ ಧರ್ಮದೇಟು ಕೊಟ್ಟ ಪತಿರಾಯ
ಆಕೆ ಪ್ರಕಾರ, ಆಕೆಯ ಒಬ್ಬ ಸ್ನೇಹಿತೆ, ಅವಳ ಬ್ಯಾಯ್ ಫ್ರೆಂಡ್ ವಿಡಿಯೋ ಮಾಡಿದ್ದಳಂತೆ. ಅದ್ರಲ್ಲ ಆತ ಫೋನ್ ಗೆ ಯಾವ ಪಾಸ್ವರ್ಡ್ ಹಾಕಿದ್ದಾನೆ ಎಂಬುದೂ ರೆಕಾರ್ಡ್ ಆಗಿತ್ತಂತೆ. ಅದ್ರ ಆಧಾರದ ಮೇಲೆ ಆತನ ಫೋನ್ ಹ್ಯಾಕ್ ಮಾಡಿದ್ದಳಂತೆ. ಇನ್ನೊಬ್ಬ ಸ್ನೇಹಿತೆ, ತನ್ನ ಬಾಯ್ ಫ್ರೆಂಡ್ ಮಾಜಿ ಲವ್ವರ್ ಹೆಸರನ್ನು ಪಾಸ್ವರ್ಡ್ ಜಾಗದಲ್ಲಿ ಹಾಕಿದ್ದಾಳೆ. ಆಗ ಫೋನ್ ಓಪನ್ ಆಗಿದೆ. ಆ ಸಮಯದಲ್ಲಿ ಆತನ ಫೋನ್ ನಲ್ಲಿದ್ದ ಕೆಲ ವಿಷ್ಯ, ಅವರಿಬ್ಬರ ಬ್ರೇಕ್ ಅಪ್ ಗೆ ಕಾರಣವಾಯ್ತು ಎಂದು ಜೈನಾ ಹೇಳಿದ್ದಾಳೆ.
ಇನ್ನೊಬ್ಬ ಸ್ನೇಹಿತೆಯ ಬಾಯ್ ಫ್ರೆಂಡ್, ಆಪಲ್ ವಾಚ್ ಬಿಟ್ಟು ಹೋಗಿದ್ದನಂತೆ. ಅದ್ರಲ್ಲಿ ಒಂದು ಮೆಸ್ಸೇಜ್ ಬಂದಿದೆ. ಆ ಮೆಸ್ಸೇಜ್ ಮಹಿಳೆಯದಾಗಿತ್ತು. ಆಕೆಯ ಮೆಸ್ಸೇಜ್ ನಿಂದ, ಬಾಯ್ ಫ್ರೆಂಡ್ ಬಣ್ಣ ಬದಲಾಯ್ತು. ನೀವು ಫೋನ್ ಪಾಸ್ವರ್ಡ್ ಹೇಗೆ ಓಪನ್ ಮಾಡೋದು ಎಂಬ ಚಿಂತೆ ಮಾಡ್ಬೇಡಿ. ಬೇರೆ ಬೇರೆ ಟೆಕ್ನಿಕ್ ಉಪಯೋಗಿಸಿ ಪಾಸ್ವರ್ಡ್ ಪತ್ತೆ ಮಾಡಿ ಎನ್ನುತ್ತಾಳೆ ಜೈನಾ.
ಹೆಂಡ್ತಿ ಕೋಪಗೊಂಡಾಗ ಏನು ಮಾಡಬೇಕು? ಪುರುಷರಿಗೆ AIMIM ನಾಯಕ ಅಸಾದುದ್ದೀನ್ ಒವೈಸಿ ಟಿಪ್ಸ್!