ಮಹಿಳೆಯೊಬ್ಬರು ಗಾಯಗೊಂಡ ಚಿರತೆಗೆ ರಾಖಿ ಕಟ್ಟುತ್ತಿರುವ ಫೋಟೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಈ ಫೋಟೋವನ್ನು ಐಎಫ್‌ಎಸ್‌ ಅಧಿಕಾರಿ ಸುಶಾಂತ್ ನಂದಾ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಪ್ರಾಣಿಗಳ ಬಗೆಗಿನ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಿರುತ್ತದೆ. ಆದರೆ, ಇತ್ತೀಚಿಗೆ ವೈರಲ್‌ ಆಗುತ್ತಿರುವ ಫೋಟೋವೊಂದು ಅನೇಕ ನೆಟ್ಟಿಗರ ಹೃದಯ ಮನಸೂರೆಗೊಂಡಿದೆ. ಮಹಿಳೆಯೊಬ್ಬರು ಗಾಯಗೊಂಡ ಚಿರತೆಗೆ ರಾಖಿ ಕಟ್ಟಿದ್ದಾರೆ. ಕಾಡು ಪ್ರಾಣಿಯ ಮೇಲಿನ ಮಹಿಳೆಯ ಪ್ರೀತಿ ಮತ್ತು ಅದನ್ನು ಚಿತ್ರಿಸಲು ಆಕೆ ನಿರ್ಧರಿಸಿದ ರೀತಿಯನ್ನು ಜನರು ಇಷ್ಟಪಟ್ಟಿದ್ದಾರೆ ಹಾಗೂ ಅಚ್ಚರಿಗೊಳಗಾಗಿದ್ದಾರೆ.

ರಾಜಸ್ಥಾನದಲ್ಲಿ ಗಾಯಗೊಂಡ ಚಿರತೆಗೆ ಮಹಿಳೆಯೊಬ್ಬರು ರಾಖಿ ಕಟ್ಟುತ್ತಿರುವ ಫೋಟೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) (Indian Forest Service) ಅಧಿಕಾರಿ ಸುಶಾಂತ ನಂದಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿರುವ ಚಿರತೆಯನ್ನು ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕೆಲವೇ ನಿಮಿಷಗಳ ಮೊದಲು ಗಾಯಗೊಂಡ ಪ್ರಾಣಿಗೆ ಗುಲಾಬಿ ಸೀರೆಯುಟ್ಟ ಮಹಿಳೆ ರಾಖಿ ಕಟ್ಟುತ್ತಿರುವುದನ್ನು ತೋರಿಸಿದೆ.

ರಕ್ಷಾ ಬಂಧನ ದಿನದ ಶುಭಾಶಯಗಳು

ಹೃದಯಸ್ಪರ್ಶಿ ಚಿತ್ರವನ್ನು ಸರ್ಕಾರಿ ಅಧಿಕಾರಿ ಪೋಸ್ಟ್‌ ಮಾಡಿದ್ದು, "ಭಾರತದಲ್ಲಿ ಮನುಷ್ಯರು ಮತ್ತು ಪ್ರಾಣಿಗಳು ಹಲವು ಯುಗಗಳಿಂದ ಕಾಡುಗಳ ಬಗ್ಗೆ ಬೇಷರತ್ತಾದ ಪ್ರೀತಿಯೊಂದಿಗೆ ಸಾಮರಸ್ಯದಿಂದ ಬದುಕುತ್ತಿದ್ದಾರೆ. ರಾಜಸ್ಥಾನದಲ್ಲಿ, ಮಹಿಳೆಯೊಬ್ಬರು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮೊದಲು ಗಾಯಗೊಂಡಿದ್ದ ಚಿರತೆಗೆ ರಾಖಿ (Rakhi) (ಪ್ರೀತಿ ಮತ್ತು ಸಹೋದರತ್ವದ ಚಿಹ್ನೆ) ಕಟ್ಟುವ ಮೂಲಕ ನಮ್ಮ ಕಾಡಿಗೆ ಈ ಅನಿಯಂತ್ರಿತ ಪ್ರೀತಿಯನ್ನು ತೋರಿಸಿದ್ದಾರೆ’’ ಎಂದು ಸುಶಾಂತ್ ನಂದಾ ಟ್ವೀಟ್‌ ಮಾಡಿದ್ದಾರೆ. ಈ ಚಿತ್ರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದರಿಂದ, ಅನೇಕ ನೆಟ್ಟಿಗರು ಪೋಸ್ಟ್‌ ಬಗ್ಗೆ ತಮ್ಮ ಪ್ರೀತಿ ಮತ್ತು ಬೆಂಬಲವನ್ನು ನೀಡಿದ್ದು, ಮಹಿಳೆಯ ಇಂಗಿತವನ್ನು ಶ್ಲಾಘಿಸಿದ್ದಾರೆ.

Scroll to load tweet…

ಇನ್ನು, ಸುಶಾಂತ್ ನಂದಾ ಫೋಟೋಗೆ ಹಲವು ನೆಟ್ಟಿಗರು ಕಮೆಂಟ್‌ ಹಾಗೂ ಲೈಕ್‌ಗಳ ಸುರಿಮಳೆ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಹಲವು ಜನರು ವಿಭಿನ್ನ ಕಮೆಂಟ್‌ಗಳನ್ನು ಸಹ ಮಾಡಿದ್ದಾರೆ. "ಹಾಗೆಯೇ ಇರಬೇಕು. ನಾವು ಕಾಡುಗಳು ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕು. ದೇವರು ಎಲ್ಲಾ ರೀತಿಯ ಜೀವನವನ್ನು ಸೃಷ್ಟಿಸಿದ್ದಾನೆ ಮತ್ತು ಪ್ರಪಂಚವು ಮನುಷ್ಯರಿಗೆ ಮಾತ್ರವಲ್ಲ" ಎಂದು ಒಬ್ಬ ಬಳಕೆದಾರರು ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು, "ರಾಖಿ ಕಟ್ಟುವುದು ಸಾಂಕೇತಿಕವಾಗಿದೆ... ಪ್ರೀತಿ ಮತ್ತು ವಾತ್ಸಲ್ಯವು ತುಂಬಾ ಸುಂದರವಾಗಿದೆ... ಮಹಿಳೆ ತೋರಿಸಿದಂತೆ... ಮತ್ತು ನಮ್ಮ ಕಾಡುಗಳನ್ನು ನೋಡಿಕೊಳ್ಳುವ ಎಲ್ಲಾ ಸಿಬ್ಬಂದಿಗೆ ದೊಡ್ಡ ಚಪ್ಪಾಳೆ." ಎಂದು ಟ್ವೀಟ್‌ ಮಾಡಿದ್ದಾರೆ.

Rakshabandhan: ಮಾನಸಿಕ ಆರೋಗ್ಯ ವೃದ್ಧಿಸುವ ಒಡಹುಟ್ಟಿದವರ ಬಾಂಧವ್ಯ

ಆಗಸ್ಟ್‌ 12 ರಂದು ಐಎಫ್‌ಎಸ್‌ ಅಧಿಕಾರಿ ಸುಶಾಂತ್ ನಂದಾ ಈ ಫೋಟೋವನ್ನು ಹಂಚಿಕೊಂಡು ಟ್ವೀಟ್‌ ಮಾಡಿದ್ದು, ಅವರ ಪೋಸ್ಟ್‌ಗೆ ಸುಮಾರು 1,800 ಲೈಕ್‌ಗಳನ್ನು ಗಳಿಸಿದೆ. ಹಾಗೂ,ಇದನ್ನು ಸುಮಾರು 200 ನೆಟ್ಟಿಗರು ರೀಟ್ವೀಟ್‌ ಮಾಡಿದ್ದಾರೆ. ಐಎಫ್‌ಎಸ್‌ ಅಧಿಕಾರಿ ಸುಶಾಂತ್ ನಂದಾ ಅವರು ವನ್ಯಜೀವಿಗಳಿಗೆ ಸಂಬಂಧಿಸಿದ ವಿಡಿಯೋಗಳು ಮತ್ತು ಚಿತ್ರಗಳನ್ನು ಪೋಸ್ಟ್ ಮಾಡುತ್ತಾರೆ. ಈ ಸರ್ಕಾರಿ ಅಧಿಕಾರಿಗೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹೆಚ್ಚಿನ ಫಾಲೋವರ್‌ಗಳು ಇದ್ದಾರೆ. ಟ್ವಿಟ್ಟರ್‌ನಲ್ಲೇ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಜನರು ಇವರನ್ನು ಅನುಸರಣೆ ಮಾಡುತ್ತಾರೆ.