ಗೆಳತಿಯ ಮದುವೆಯಾಗಲು 7 ಲಕ್ಷ ವೆಚ್ಚ ಮಾಡಿ ಲಿಂಗಪರಿವರ್ತನೆ ಮಾಡಿಕೊಂಡ ಮಹಿಳೆ

ಉತ್ತರ ಪ್ರದೇಶದ ಕನೌಜ್‌ನಲ್ಲಿ ಮಹಿಳೆಯೊಬ್ಬರು ತಮ್ಮ ಗೆಳತಿಯನ್ನು ಮದುವೆಯಾಗಲು 7 ಲಕ್ಷ ರೂಪಾಯಿ ವೆಚ್ಚ ಮಾಡಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ. 

woman spends 7 lakh to gender transition for marry her girlfriend

ನವದೆಹಲಿ:  ಇತ್ತೀಚೆಗೆ ಸಲಿಂಗಿ ವಿವಾಹಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಿದೆ. ಆದರೆ ಲಿಂಗ ಪರಿವರ್ತನೆ ಮಾಡಿಕೊಂಡು ಮದುವೆಯಾಗುವುದು ಕಡಿಮೆಯಾದರೂ ಅಂತಹ ಘಟನೆಗಳು ಕೂಡ ನಡೆದಿವೆ. ಲಿಂಗ ಪರಿವರ್ತನೆಯ ನಂತರ ಪ್ರೇಯಸಿ/ಪ್ರಿಯಕರ ಕೈಕೊಟ್ಟಂತಹ ಘಟನೆಗಳು ನಡೆದಿವೆ. ಆದರೆ ಇಲ್ಲೊಂದು ಕಡೆ ಮಹಿಳೆಯೊಬ್ಬರು ತಮ್ಮ ಪ್ರೇಯಸಿಯನ್ನು ಮದುವೆಯಾಗುವುದಕ್ಕಾಗಿ ಲಿಂಗ ಪರಿವರ್ತನೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿ ನಡೆದಿದೆ.  ಕನೌಜ್‌ನ ಸದರ್ ಕೊತ್ವಾಲಿ ಪ್ರದೇಶದಲ್ಲಿ ಈ ಜೋಡಿ ನವಂಬರ್ 25ರಂದು ತಮ್ಮ ಪೋಷಕರ ಸಮ್ಮುಖದಲ್ಲೇ ಮದುವೆಯಾಗಿದ್ದರು. 

ಇದಾದ ನಂತರ ಅವರು ಸಾಮಾಜಿಕ ಅವಮಾನ ಹಾಗೂ ಬಹಿಷ್ಕಾರವನ್ನು ತಡೆಯುವ ಸಲುವಾಗಿ ಲಿಂಗ ಪರಿವರ್ತನೆ ಚಿಕಿತ್ಸೆಗೆ ಒಳಗಾಗಿದ್ದಾರೆ.  ಪ್ರಸ್ತುತ ರಾನು ಆಗಿ ಬದಲಾದ ಶಿವಾಂಗಿ ಎಂಬುವವರೇ ಹೀಗೆ ಪ್ರೇಯಸಿಯನ್ನು ಮದುವೆಯಾಗಲು ಲಿಂಗ ಪರಿವರ್ತನೆ ಮಾಡಿಕೊಂಡವರು. ಇವರು ತಮ್ಮ ಪ್ರೇಯಸಿ ಜ್ಯೋತಿಯವರನ್ನು ಮದುವೆಯಾಗಲು 7 ಲಕ್ಷ ರೂಪಾಯಿ ವೆಚ್ಚ ಮಾಡಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ.  ಶಿವಾಂಗಿಯವರು ತಮ್ಮ ತಂದೆಯವರ ಜ್ಯುವೆಲ್ಲರಿ ಶಾಪ್‌ನಲ್ಲಿ ಮೊದಲ ಬಾರಿಗೆ ಜ್ಯೋತಿಯವರನ್ನು ಭೇಟಿಯಾಗಿದ್ದರು. ಜ್ಯೋತಿಯವರು ಶಿವಾಂಗಿ ಅವರ ತಂದೆಯವರಿಂದ ಬ್ಯೂಟಿ ಪಾರ್ಲರ್ ನಡೆಸುವುದಕ್ಕಾಗಿ ಮನೆಯೊಂದನ್ನು ಬಾಡಿಗೆ ಪಡೆದಿದ್ದರು. ಇದಾದ ನಂತರ ಈ ಇಬ್ಬರು ಪರಸ್ಪರ ಆಗಾಗ ಭೇಟಿಯಾಗುತ್ತಿದ್ದು, ಇಬ್ಬರಲ್ಲಿ  ಆತ್ಮೀಯತೆ ಹೆಚ್ಚಾಗಿದೆ. ಹೀಗಾಗಿ ಇಬ್ಬರು ಪರಸ್ಪರ ಮದುವೆಯಾಗಲು ನಿರ್ಧರಿಸಿದ್ದಾರೆ.  

ಪ್ರಾರಂಭದಲ್ಲಿ ಎರಡು ಮನೆಯವರು ಕೂಡ ಈ ವಿವಾಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದಾದ ನಂತರ ಶಿವಾಂಗಿ ಲಿಂಗ ಪರಿವರ್ತನೆಗೆ ಒಳಗಾಗಲು ಮುಂದಾಗಿದ್ದು, ಇದಕ್ಕಾಗಿ ಲಕ್ನೋ ಹಾಗೂ ದೆಹಲಿಯಲ್ಲಿ ವೈದ್ಯರನ್ನು ಸಂಪರ್ಕಿಸಿದ್ದರು. ಇದಾದ ನಂತರ ಅವರು ಲಿಂಗಪರಿವರ್ತನೆಗೆ ಒಳಗಾಗಿದ್ದು, ತಮ್ಮ ಹೆಸರನ್ನು ಶಿವಾಂಗಿ ಬದಲು ರಾನು ಎಂದು ಬದಲಾಯಿಸಿಕೊಂಡಿದ್ದಾರೆ. 

 

Latest Videos
Follow Us:
Download App:
  • android
  • ios