ಈ ರೀತಿಯ ಹುಡುಗರಿಗೆ ಕ್ಲೀನ್ ಬೋಲ್ಡ್ ಆಗುತ್ತಾರೆ ಹುಡುಗಿಯರು...
First Published Dec 3, 2020, 5:24 PM IST
ಇಷ್ಟ ಆಗಬೇಕೆಂದರೆ ವ್ಯಕ್ತಿಯ ಕೆಲವೊಂದು ಗುಣಗಳು ಆಕರ್ಷಕವಾಗಿರಬೇಕು. ಅದು ಅಂದ, ಚೆಂದ ಮಾತ್ರವಲ್ಲ ಉತ್ತಮ ಅಥವಾ ಕೆಲವೊಂದಿಷ್ಟು ಬೇರೆ ರೀತಿಯ ಗುಣಗಳಿದ್ದರೆ ಹುಡುಗಿಯರು ಬೇಗನೆ ಆಕರ್ಷಿತರಾಗುತ್ತಾರೆ. ಅಂತಹ ಯಾವ ಕ್ವಾಲಿಟಿ ಹುಡುಗಿಯರಿಗೆ ಇಷ್ಟವಾಗುತ್ತದೆ ಎಂದು ನೀವು ತಿಳಿಯಬೇಕು ಎಂದಿದ್ದರೆ ಇದನ್ನು ಪೂರ್ತಿಯಾಗಿ ಓದಿ...

ಇಂಟೆಲಿಜೆಂಟ್ ವ್ಯಕ್ತಿ : ಮಾತಿನಲ್ಲಿ ತನ್ನ ಚತುರತೆಯನ್ನು ತೋರಿಸುವ ಜೀನಿಯಸ್ ವ್ಯಕ್ತಿ ಹುಡುಗಿಯರಿಗೆ ಇಷ್ಟವಾಗುತ್ತಾನೆ. ಯಾವ ಹುಡುಗ ಆಕೆಯನ್ನು ತನ್ನ ಮಾತುಗಳ ಮೋಡಿಯಿಂದ ನಗಿಸುತ್ತಾನೋ ಅಥವಾ ರಾಜಕೀಯದ ಬಗ್ಗೆ ಪಟಾಪಟ್ ಎಂದು ಮಾತನಾಡುತ್ತಾನೋ ಅಂತಹ ಹುಡುಗನಿಗೆ ಆಕೆ ಬೋಲ್ಡ್ ಆಗುತ್ತಾಳೆ.

ಕಾನ್ಫಿಡೆಂಟ್ ವ್ಯಕ್ತಿತ್ವ : ಸಾಧಾರಣವಾಗಿ ಹುಡುಗಿಯರು ಕಾನ್ಫಿಡೆಂಟ್ ಹುಡುಗರಿಗೆ ಫಿದಾ ಆಗುತ್ತಾರೆ. ಯಾಕೆಂದರೆ ಆತನಿಗೆ ತಾನು ಏನು ಎಂಬುದು ಗೊತ್ತಿರುತ್ತದೆ. ಆತ ಯಾವತ್ತೂ ಆಕೆಯ ಮೇಲೆ ಜೆಲಸಿ ಫೀಲ್ ಮಾಡುವುದಿಲ್ಲ ಅಷ್ಟೇ ಅಲ್ಲಾ ಆಕೆಯ ಇತರ ಪುರುಷ ಸ್ನೇಹಿತರ ಮೇಲೆ ಕೋಪ ಮಾಡಿಕೊಳ್ಳುವುದಿಲ್ಲ. ಈ ಗುಣ ಆಕೆಗೆ ಇಷ್ಟವಾಗುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?