Asianet Suvarna News Asianet Suvarna News

ಗಂಡನಿಗೆ ಡಿವೋರ್ಸ್ ನೀಡಿ ಮಗನಿಂದಲೇ ಮಗು ಪಡೆದ ಮಹಿಳೆ...!

ಪ್ರಪಂಚದಲ್ಲಿ ಕೆಲವು ಸಂಬಂಧಗಳಿಗೆ ಏನೆಂದು ಕರೆಯಬೇಕು ಎಂದು ತಿಳಿಯುವುದೇ ಇಲ್ಲ. ಯಾರೂ ಯಾರನ್ನು ಮದುವೆಯಾಗುತ್ತಾರೋ ದೇವರೇ ಬಲ್ಲ.

woman gave divorce and later get baby by her stepson akb
Author
Bangalore, First Published Aug 18, 2022, 10:31 AM IST

ಪ್ರಪಂಚದಲ್ಲಿ ಕೆಲವು ಸಂಬಂಧಗಳಿಗೆ ಏನೆಂದು ಕರೆಯಬೇಕು ಎಂದು ತಿಳಿಯುವುದೇ ಇಲ್ಲ. ಯಾರೂ ಯಾರನ್ನು ಮದುವೆಯಾಗುತ್ತಾರೋ ದೇವರೇ ಬಲ್ಲ. ಕೆಲ ದಿನಗಳ ಹಿಂದೆ ತಂಗಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ನಾಲ್ಕು ಮಕ್ಕಳಿಗೆ ತಂದೆಯಾದ ವ್ಯಕ್ತಿಯೊಬ್ಬನ ಸುದ್ದಿ ವಿದೇಶದಲ್ಲಿ ವರದಿಯಾಗಿತ್ತು. ಅದೇ ರೀತಿ ಈಗ ಮಹಿಳೆಯೊಬ್ಬಳು ಮಲಮಗನನ್ನು ಮದುವೆಯಾಗಿ ಮಗುವನ್ನು ಪಡೆದು ಸುದ್ದಿಯಾಗಿದ್ದಾಳೆ. ಅಷ್ಟೇ ಅಲ್ಲದೇ ಆಕೆ ಆತನಿಂದಲೇ ಎರಡನೇ ಮಗುವಿಗೆ ಆಕೆ ಗರ್ಭಿಣಿ ಆಗಿದ್ದಾಳಂತೆ. ಇದನ್ನು ಆಕೆಯೇ ಯಾವುದೇ ನಾಚಿಕೆ ಇಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾಳೆ. ರಷ್ಯಾದ 37 ವರ್ಷದ ಮರೀನಾ ಬಲ್ಮಶೇವಾ ಎಂಬಾಕೆಯೇ ಹೀಗೆ ತಾನೇ ಸಾಕಿದ್ದ ಮಲ ಮಗನೊಂದಿಗೆ ಹಾಸಿಗೆ ಹಂಚಿಕೊಂಡಾಕೆ. ಈಕೆ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಳ್ಳುತ್ತಿದ್ದಂತೆ ಅನೇಕರು ಗಾಬರಿಗೊಳಗಾಗಿದ್ದಾರೆ.

ಮರೀನಾಗೆ ದತ್ತು ಪುತ್ರನಿಂದ ಈಗಾಗಲೇ ಒಂದು ಹೆಣ್ಣು ಮಗುವಿದೆ. ಮರೀನಾ ಬಲ್ಮಶೇವಾ ಹಾಗೂ ಆಕೆಯ ಪತಿ ಅಲೆಕ್ಸಿ ಶೆವರಿನ್ ನಾಲ್ಕು ಮಕ್ಕಳನ್ನು ದತ್ತು ಪಡೆದಿದ್ದರಂತೆ. ಆ ನಾಲ್ಕು ಮಕ್ಕಳಲ್ಲಿ ಈಗ ಈಕೆಯ ಹೆಣ್ಣು ಮಗುವಿನ ತಂದೆಯಾಗಿರುವ ವ್ಯಕ್ತಿಯೂ ಓರ್ವನಾಗಿದ್ದಾನೆ. ಆತನಿಗೆ ಏಳು ವರ್ಷಗಳಿರುವಾಗಿನಿಂದಲೇ ಈಕೆ ಆತನನ್ನು ಮಗುವಿನಂತೆ ಸಾಕಲು ಆರಂಭಿಸಿದ್ದಾಳೆ. ಆತನಿಗೆ ತಿನ್ನಿಸಿ ಉಣಿಸಿ ಎಲ್ಲಾ ಮಕ್ಕಳ ಅಗತ್ಯವಾಗಿರುವ ತಾಯಿ ಪ್ರೀತಿಯನ್ನು ಆತನಿಗೆ ನೀಡಿದ ಈಕೆಗೆ ಆತನೊಂದಿಗೆ ಮಲಗುವ ಮನಸ್ಸು ಹೇಗೆ ಬಂತು ದೇವರೇ ಬಲ್ಲ. ಮರೀನಾ ಬಲ್ಮಶೇವಾಳ ಈ ನಡೆಗೆ ಸ್ವತಃ ಆಕೆಯ ತಂದೆಯೇ ವಿರೋಧ ವ್ಯಕ್ತಪಡಿಸಿದ್ದಾರಂತೆ, ಜೊತೆಗೆ ಗಂಡನೂ ವಿರೋಧ ವ್ಯಕ್ತಪಡಿಸಿದ್ದಾನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಅಲ್ಲದೇ ಈಕೆ ಗಂಡನೊಂದಿಗೆ ಇದ್ದಾಗ ದತ್ತು ಪಡೆದಿದ್ದ ಇನ್ನೂ ಮೂವರು ಸಾಕು ಮಕ್ಕಳೊಂದಿಗೆ ಈಕೆಯ ಗಂಡ ವಾಸಿಸುತ್ತಿದ್ದಾನಂತೆ.

ಈ ಜೋಡಿ ನಡುವಿನ ಅಂತರ 19 ವರ್ಷ: ತಾನೇ ಎತ್ತಿ ಆಡಿಸಿದ ಮಗುವೇ ಈಗ ಮಡದಿ!

ಇನ್ನು ಈಕೆಯ ಮಕ್ಕಳಿಗೆ ಅಪ್ಪನಾಗಿರುವ ಈಕೆ ಮಲಮಗ ದೂರದಲ್ಲಿ ಓದುತ್ತಿದ್ದನಂತೆ. ಕಾಲೇಜು ರಜೆಯ ಮೇಲೆ ಮನೆಗೆ ಬಂದ ಈತನಿಗೆ ಸಾಕುತಾಯಿಯ ಮೇಲೆ ಮನಸ್ಸಾಗಿದೆ. ಇತ್ತ ಈಕೆಗೂ ಆತನ ಆಸೆಯಾಗಿದ್ದು, ಈಗ ಒಂದು ಮಗುವಿನ ಪೋಷಕರಾಗಿದ್ದಾರೆ. ಒಂದು ರೀತಿಯಲ್ಲಿ ನಮ್ಮ ಭಾರತೀಯರಿಗೆ ಕೇಳಲೇ ಅಸಹ್ಯದ ಜೊತೆ ಕಿರಿಕಿರಿ ಎನಿಸುವ ಈ ಸ್ಟೋರಿ ಭಾರತದಲ್ಲೇಲ್ಲಾದರೂ ನಡೆದಿದ್ದಾರೆ ಕತೆಯೇ ಬೇರೆ ಇರುತ್ತಿತ್ತೇನೋ. ಅಲ್ಲದೇ ಈ ಸಂಬಂಧದ ಹೆಸರೇ ಬೇರೆ ಇರುತ್ತಿತ್ತು. 

ಬೆನ್ನು ನೋವಾ? ಯಾವುದ್ಯಾವುದೋ ಭಂಗಿ ಸೂಟ್ ಆಗೋಲ್ಲ

ಇನ್ನು ಈಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಜನರಿದ್ದು, ಇವಳ ಈ ಚರಿತ್ರೆ ಕೇಳಿ ಅವರೇ ದಂಗಾಗಿದ್ದಾರೆ. ಇನ್ನು ಮಲ ಮಗನೊಂದಿಗೆ ವಾಸಿಸುವ ಸಲುವಾಗಿ ಈಕೆ ಗಂಡನಿಗೆ ವಿಚ್ಛೇದನವನ್ನು ನೀಡಿದ್ದಾಳಂತೆ. ಒಟ್ಟಿನಲ್ಲಿ ಜಗತ್ತು ಎಷ್ಟು ವಿಚಿತ್ರ ಎನಿಸುತ್ತಿದೆ. ಪ್ರಪಂಚದಲ್ಲಿ ಎಂತೆಂತವರೆಲ್ಲಾ ಇರ್ತಾರೆ ನೋಡಿ. ಇತ್ತೀಚೆಗೆ ಮಲತಂದೆ ಮಲ ಮಗಳ ಮೇಲೆ ಅಥವಾ ಸಾಕು ಮಗಳ ಮೇಲೆ ಅತ್ಯಾಚಾರವೆಸಗಿದ್ದು, ಲೈಂಗಿಕ ಕಿರುಕುಳ ನೀಡಿದ್ದಂತಹ ಘಟನೆಯನ್ನು ಕೇಳಿದ್ದೀರಿ. ಆದರೆ ಇಲ್ಲಿ ಈ ಸಂಬಂಧ ಇಬ್ಬರಿಗೂ ಇಷ್ಟವಾಗಿದ್ದರಿಂದ ದಾಂಪತ್ಯವಾಗಿದೆ. ಒಂದು ವೇಳೆ ಭಾರತದಲ್ಲಾಗಿದ್ದರೆ ಮಹಿಳೆ ಕಂಬಿ ಎಣಿಸುತ್ತಿದ್ದಿದ್ದು ಪಕ್ಕಾ. ಒಟ್ಟಿನಲ್ಲಿ ವೈವಾಹಿಕ ಸಂಬಂಧಗಳಿಗೆ ಯಾವುದೇ ಬೆಲೆ ಇಲ್ಲ. ಎಂಬುದನ್ನು ಈ ಮಹಿಳೆ ಹಾಗೂ ಆಕೆಯ ಸಾಕುಪುತ್ರ ತೋರಿಸಿಕೊಟ್ಟಿದ್ದಾರೆ. 

ಕೆಲ ದಿನಗಳ ಹಿಂದೆ ಬ್ರಿಟನ್‌ನ ವ್ಯಕ್ತಿಯೊಬ್ಬರು ತನಗಿಂತ 19 ವರ್ಷ ಚಿಕ್ಕ ವಯಸ್ಸಿನ ಯುವತಿಯನ್ನು ಮದುವೆಯಾಗಿದ್ದರು. ಮದುವೆ ವಯಸ್ಸಿನ ಅಂತರ ದೊಡ್ಡ ವಿಚಾರವಲ್ಲ ಬಿಡಿ. ಆದರೆ ಇಲ್ಲಿ ಆತನೇ ಆಕೆಯನ್ನು ಬಾಲ್ಯದಲ್ಲಿರುವಾಗ ಎತ್ತಿ ಆಡಿಸಿ ಬೆಳೆಸಿದ್ದ. ಹೆಂಡತಿಯನ್ನು ಮಗುವಾಗಿದ್ದಾಗ ಮೊದಲ ಬಾರಿಗೆ ಭೇಟಿಯಾಗಿದ್ದೆ. ಈಗ ನಾವು ಮಕ್ಕಳ ನಿರೀಕ್ಷೆಯಲ್ಲಿದ್ದೇವೆ ಎಂದು ಪತಿ ಹೇಳಿದ್ದ. ಈ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. 

Follow Us:
Download App:
  • android
  • ios