Asianet Suvarna News Asianet Suvarna News

ಈ ಜೋಡಿ ನಡುವಿನ ಅಂತರ 19 ವರ್ಷ: ತಾನೇ ಎತ್ತಿ ಆಡಿಸಿದ ಮಗುವೇ ಈಗ ಮಡದಿ!

Weird News: ಈ ವರ್ಷ ಜುಲೈನಲ್ಲಿ ವಿವಾಹವಾದ ಈ ದಂಪತಿ ಜನವರಿಯಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ

Couple with 19 year age gap find they met years earlier when 29 year old wife was a baby mnj
Author
Bengaluru, First Published Aug 16, 2022, 5:03 PM IST

ಲಂಡನ್‌ (ಆ. 16): ವಯಸ್ಸು ಕೇವಲ ಒಂದು ನಂಬರ್‌ ಅಷ್ಟೇ. ಈ ಮಾತಿಗೆ ಒಂದು ಉತ್ತಮ ಉದಾಹರಣೆ ಎಂಬಂತೆ ಬ್ರಿಟನ್‌ನಲ್ಲಿ  ವ್ಯಕ್ತಿಯೊಬ್ಬರು ತಮಗಿಂತ 19 ವರ್ಷ ಚಿಕ್ಕ ಹುಡುಗಿಯನ್ನು ಮದುವೆಯಾಗಿದ್ದಾರೆ. ಆದರೆ ಅಚ್ಚರಿಯ ವಿಷಯವೆಂದರೆ ಇಬ್ಬರ ವಯಸ್ಸಿನ ವ್ಯತ್ಯಾಸವಲ್ಲ.  ಮಗುವಾಗಿದ್ದಾಗ ತಾವೇ ಎತ್ತಿ ಆಡಿಸಿದ ಮಗುವನ್ನೇ ಈಗ ಈ ವ್ಯಕ್ತಿ ಮದುವೆಯಾಗಿದ್ದಾರೆ. ಈ ದಂಪತಿಗಳು  ಮೊದಲೇ ಭೇಟಿಯಾಗಿದ್ದರು ಎಂದು ತಿಳಿದಾಗ ಸಂಬಂಧಿಕರೆಲ್ಲರಿಗೂ ಆಶ್ಚರ್ಯವಾಗಿದೆ.  

ಹೆಂಡತಿಯನ್ನು ಮಗುವಾಗಿದ್ದಾಗ ಮೊದಲ ಬಾರಿಗೆ ಭೇಟಿಯಾಗಿದ್ದೆ. ಈಗ ನಾವು ಮಕ್ಕಳ ನಿರೀಕ್ಷೆಯಲ್ಲಿದ್ದೆವೆ ಎಂದು ಪತಿ ಹೇಳಿದ್ದಾರೆ.  ರಿಚ್ ಟಾಮ್ಕಿನ್ಸನ್ (48) ಕಳೆದ ತಿಂಗಳು ಎವಿ (29) ಅವರನ್ನು ವಿವಾಹವಾದರು. ನಾಲ್ಕು ವರ್ಷಗಳ ಹಿಂದೆ ಇಬ್ಬರೂ ಪಬ್‌ನಲ್ಲಿ ಭೇಟಿಯಾಗಿದ್ದರು. 

ಈ ಜೋಡಿ ನಡುವಿನ ಅಂತರ 19 ವರ್ಷ: ಇಬರಿಬ್ಬರ ನಡುವೆ  ದೊಡ್ಡ ವಯಸ್ಸಿನ ಅಂತರವಿದ್ದರೂ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ರಿಚ್ ಎವಿಯ ಪೋಷಕರನ್ನು ಭೇಟಿಯಾದಾಗ, ಅವರು ವರ್ಷಗಳ ಹಿಂದೆ ಭೇಟಿಯಾಗಿದ್ದರು ಎಂದು ಗೊತ್ತಾಗಿದೆ. ಇದರೊಂದಿಗೆ, ಅವರು ತಮ್ಮ ಭಾವಿ ಪತ್ನಿಯನ್ನು ಬಾಲ್ಯದಲ್ಲೇ ಭೇಟಿಯಾಗಿರುವುದು ಅರಿವಾಗಿದೆ. 

Teenage Love: ಸೂಕ್ಷ್ಮವಾದ ವಿಷ್ಯ, ಪೋಷಕರು ಹುಷಾರಾಗರಿಬೇಕಷ್ಟೇ!

ರಿಚ್ ಟಾಮ್ಕಿನ್ಸನ್ ಸ್ಟಾಫರ್ಡ್‌ಶೈರ್‌ನ ನಿವಾಸಿಯಾಗಿದ್ದು ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದಾರೆ.  "ನಾನು ಬಾಲ್ಯದಲ್ಲಿ ಈವಿಯನ್ನು ಮೊದಲು ಭೇಟಿಯಾಗಿದ್ದೆ ಎಂದು ತಿಳಿದು ನನಗೆ ಆಶ್ಚರ್ಯವಾಗಿದೆ. ಈ ಸಂಗತಿ ಕೇಳಿ ನಮಗೆ ನಗು ಬರುತ್ತಿದೆ. ವಯಸ್ಸು ನಮಗೆ ಕೇವಲ ಒಂದು ಸಂಖ್ಯೆ ಮತ್ತು ನೀವು ಯಾರನ್ನು ಪ್ರೀತಿಸುತ್ತೀರಿ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ" ಎಂದು ರಿಚ್ ಹೇಳುತ್ತಾರೆ.

ಕೆಲವೊಮ್ಮೆ ಜನರು ತಮ್ಮನ್ನು ಎವಿಯ ತಂದೆ ಎಂದು ತಪ್ಪಾಗಿ ಭಾವಿಸುತ್ತಾರೆ ಎಂದು ರಿಚ್ ಹೇಳುತ್ತಾರೆ. 19 ವರ್ಷಗಳ ವಯಸ್ಸಿನ ಅಂತರವು ತನಗೆ ಸಮಸ್ಯೆಯಲ್ಲ ಎಂದು ಅವರು ಹೇಳುತ್ತಾರೆ. ಎವಿಯನ್ನು ಮದುವೆಯಾಗುವುದು ತಮ್ಮ ಜೀವನದ ಅತ್ಯುತ್ತಮ ದಿನ ಎಂದು ಅವರು ಹೇಳಿದ್ದಾರೆ. ನಾನು ಬಾಲ್ಯದಿಂದಲೂ ಅವಳೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಸಂತೋಷವಾಗುತ್ತಿದೆ ಎಂದು ರಿಚ್‌ ಹೇಳಿದ್ದಾರೆ. 

"2018 ರ ಜುಲೈನಲ್ಲಿ ಬಾರ್‌ನಲ್ಲಿ ಅವರನ್ನು ಭೇಟಿಯಾದೆ. ಮೊದಲ ಭೇಟಿಯಿಂದಲೇ ನಾನು ರಿಚ್‌ನತ್ತ ಸೆಳೆಯಲ್ಪಟ್ಟೆ" ಎಂದು ಇವಿ ಹೇಳಿದ್ದಾರೆ.  "ನಾವು ಯಾವಾಗಲೂ ಬಾರ್‌ನಲ್ಲಿ ಭೇಟಿಯಾಗುತ್ತಿದ್ದೇವು ಮತ್ತು ಚಾಟ್ ಮಾಡುತ್ತಿದ್ದೇವು. ಆದರೆ ಇವಿ ಒಮ್ಮೆ ರಜೆಯ ಮೇಲೆ ಹೋದಾಗ, ನಾನು ಅವಳನ್ನು ಪ್ರೀತಿಸುತ್ತಿದ್ದೇನೆ ಎಂದು ಅರಿತುಕೊಂಡೆ" ಎಂದು ರಿಚ್‌ ಹೇಳಿದ್ದಾರೆ. 

'ಮನೆಗಿಂತ ಕಚೇರಿನಲ್ಲಿ ಹೆಚ್ಚು ಸಮಯ ಕಳಿತಾಳೆ ನನ್ನ ಹೆಂಡ್ತಿ'

ವರ್ಷಗಳ ಹಿಂದೆ ತಾಯಿಯನ್ನು ಭೇಟಿಯಾಗಿದ್ದೆ: ರಿಚ್ ಎವಿಯ ತಾಯಿ ಸಾರಾಳನ್ನು  ಭೇಟಿಯಾದಾಗ  90 ರ ದಶಕದಲ್ಲಿ ಬೀದಿಯಲ್ಲಿ ಕೆಲಸ ಮಾಡುವಾಗ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು ಎಂಬದು ಗೊತ್ತಾಗಿದೆ. ಇದರ ನಂತರ ರಿಚ್‌ ತಮ್ಮ ಭಾವಿ ಹೆಂಡತಿನ್ನೂ ಭೇಟಿಯಾಗಿದ್ದೆ ಎಂದು ಅರಿತುಕೊಂಡರು. ಕಳೆದ ವರ್ಷ ಇಬ್ಬರೂ ಮದುವೆಯಾಗಲು ಬಯಸಿದ್ದರು, ಆದರೆ ಕರೋನಾದಿಂದಾಗಿ ಸಾಧ್ಯವಾಗಲಿಲ್ಲ. ಈ ವರ್ಷ ಜುಲೈನಲ್ಲಿ ವಿವಾಹವಾದ ಅವರು ಜನವರಿಯಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Follow Us:
Download App:
  • android
  • ios