Asianet Suvarna News Asianet Suvarna News

ನನ್ನಮ್ಮನ ಜೊತೆಯೇ ಗಂಡನ ರಾಸಲೀಲೆ, ಏನ್ಮಾಡೋದು ಕೇಳ್ತಿದ್ದಾಳೆ ಹೆಂಡತಿ?

ಟಿಕ್ ಟಾಕ್ ನ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಮಹಿಳೆ ತನ್ನ ನೋವನ್ನು ತೋಡಿಕೊಂಡಿದ್ದಾಳೆ. ನಂಬಿದ್ದ ಅಮ್ಮ ಹಾಗೂ ಪತಿ ಇಬ್ಬರೂ ಮೋಸ ಮಾಡಿರೋದನ್ನು ಮಹಿಳೆ ಎಲ್ಲರ ಮುಂದಿಟ್ಟಿದ್ದಾಳೆ.
 

Woman Caught Husband Mother Extramarital Affair Tells Story On Social Media roo
Author
First Published Jan 8, 2024, 2:42 PM IST | Last Updated Jan 8, 2024, 4:25 PM IST

ತಾಯಿಯ ಮೇಲಿದ್ದಷ್ಟು ನಂಬಿಕೆ ಮತ್ತ್ಯಾರ ಮೇಲಿರಲೂ ಸಾಧ್ಯವಿಲ್ಲ. ಅಮ್ಮನಾದವಳು ಮಕ್ಕಳಿಗೆ ಮೋಸ ಮಾಡಲು ಸಾಧ್ಯವೇ ಇಲ್ಲ. ಇದೇ ನಂಬಿಕೆಯಲ್ಲಿ ಮಕ್ಕಳು ಜೀವನ ನಡೆಸ್ತಾರೆ. ಕೆಲವೊಮ್ಮೆ ತಾಯಿ ತಪ್ಪು ಮಾಡಿದ್ದಾಳೆ ಎಂಬುದು ಬೇರೆಯವರಿಂದ ಗೊತ್ತಾದ್ರೂ ಅದನ್ನು ನಂಬೋದಿಲ್ಲ. ಮಕ್ಕಳ ಕೈನಲ್ಲೇ ಅಮ್ಮ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಕೂಡ ಕ್ಷಮಿಸುವ ಮಕ್ಕಳು ಅನೇಕರಿದ್ದಾರೆ. ತಾಯಿಯಾದವಳು ಕೂಡ ತನ್ನ ಮಕ್ಕಳು ಸದಾ ಸುಖವಾಗಿರಲಿ ಎಂದೇ ಬಯಸ್ತಾರೆ. ಮಕ್ಕಳು ದೊಡ್ಡವರಾದ್ಮೇಲೆ ಅವರಿಗೆ ಒಳ್ಳೆ ಸಂಗಾತಿ ಸಿಗಲಿ ಎಂದು ಹಾರೈಸುವ ಅಮ್ಮಂದಿರುವ, ಸಂಗಾತಿ ಜೊತೆ ಮಕ್ಕಳು ಪ್ರೀತಿಯಿಂದ ಬಾಳ್ವೆ ಮಾಡಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ನಡೆಸ್ತಾರೆ. ಅಳಿಯನನ್ನು ಮಗನನ್ನಾಗಿ ನೋಡುವ ಅಮ್ಮಂದಿರ ಸಂಖ್ಯೆ ನಮ್ಮಲ್ಲಿ ಹೆಚ್ಚಿದೆ. ಆದ್ರೆ ಇದಕ್ಕೆ ಅಪವಾದ ಎನ್ನುವ ಕೆಲ ಮಹಿಳೆಯರಿದ್ದಾರೆ. ಮಕ್ಕಳ ಬಾಳು ಏನಾದ್ರೂ ಅವರಿಗೆ ಚಿಂತೆಯಿಲ್ಲ. ಅವರ ಸುಖ, ಸಂತೋಷ ಮುಖ್ಯವಾಗುತ್ತದೆ. ಇದಕ್ಕಾಗಿ ಅವರು ಮಗಳ ಗಂಡನನ್ನೇ ತಮ್ಮ ಬುಟ್ಟಿಗೆ ಹಾಕಿಕೊಳ್ತಾರೆ. ಅದಕ್ಕೆ ಈ ಘಟನೆ ಸಾಕ್ಷ್ಯ.

ಟಿಕ್ ಟಾಕ್ (Tik Tok) ನಲ್ಲಿ ಮಹಿಳೆಯೊಬ್ಬಳು ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಹೇಗೆ ಆಕೆ ಪತಿ ಹಾಗೂ ಆಕೆಯ ಅಮ್ಮ ಮೋಸ (Cheating) ಮಾಡಿದ್ದಾರೆ ಎಂಬುದನ್ನು ಹೇಳಿದ್ದಾಳೆ. ಆಕೆಯ ಹೆಸರು ಲ್ಯಾಸಿ. ಇವಳು ಅಮೆರಿಕದ ಇಂಡಿಯಾನಾಪೊಲಿಸ್‌ ನಲ್ಲಿ ವಾಸಿಸುತ್ತಿದ್ದಾಳೆ. ಈಕೆಗೊಂದು ಮಗಳಿದ್ದಾಳೆ. ಟಿಕ್ ಟಾಕ್ ನಲ್ಲಿ ಲ್ಯಾಸಿ ತಮ್ಮ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾಳೆ. ಆಕೆಗೆ ತಾಯಿ ಕೂಡ ಲ್ಯಾಸಿ ಜೊತೆ ವಾಸವಾಗಿದ್ದಳಂತೆ. ಲ್ಯಾಸಿ ತಾಯಿ ಹಾಗೂ ಪತಿ ಮಧ್ಯೆ ಅಕ್ರಮ ಸಂಬಂಧ ಬೆಳೆದಿತ್ತು. ನಾನು ಪ್ರಗ್ನೆಂಟ್ ಇದ್ದಾಗ ಅಂದ್ರೆ ಹದಿನಾಲ್ಕು ವರ್ಷಗಳ ಹಿಂದಿಯೇ ನನ್ನ ಪತಿ ಹಾಗೂ ತಾಯಿ ಮಧ್ಯೆಯೇ ಸಂಬಂಧ ಚಿಗುರಿತ್ತು ಎನ್ನುತ್ತಾಳೆ ಲ್ಯಾಸಿ. ಮಗು ಜನಿಸಿದ ಮೇಲೆ ನನ್ನ ಜೊತೆಯೇ ಅಮ್ಮ ವಾಸವಾಗಿದ್ದಳು. ಕೆಲ ವರ್ಷಗಳ ನಂತ್ರ ಕೆಳಗಿನ ಮನೆಯಲ್ಲಿ ತಂಗಿದ್ದಳು. ಈ ಸತ್ಯ ಗೊತ್ತಾಗುವ ಸಮಯದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು ಎನ್ನುತ್ತಾಳೆ ಲ್ಯಾಸಿ. 

ಜಾನ್ವಿ ಕಪೂರ್ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸಾರಾ ತೆಂಡೂಲ್ಕರ್: ನೆಟ್ಟಿಗರ ಪ್ರತಿಕ್ರಿಯೆ ನೋಡಿ

ಲ್ಯಾಸಿ  ಅಮ್ಮ ಹಾಗೂ ಪತಿ ಇಬ್ಬರೂ ಒಟ್ಟಿಗೆ ಕೆಲಸಕ್ಕೆ ಹೋಗ್ತಿದ್ದರಂತೆ. ಪತಿ ಮೇಲೆ ಲ್ಯಾಸಿಗೆ ಅನುಮಾನ ಶುರುವಾಗಿತ್ತು. ಆದ್ರೆ ಅದನ್ನು ಹೇಳಿರಲಿಲ್ಲ. ಒಂದು ದಿನ ಲ್ಯಾಸಿ ಬಳಿ ಬಂದ ಆಕೆ ತಾಯಿ, ನಿನ್ನ ಪತಿಗೆ ಅನೇಕ ಮಹಿಳೆಯರ ಜೊತೆ ಅಕ್ರಮ ಸಂಬಂಧವಿದೆ ಎಂದಿದ್ದಳಂತೆ. ಈ ವಿಷ್ಯವನ್ನು ಗಂಡನಿಗೆ ಹೇಳ್ಬೇಡ ಎಂದೂ ತಾಯಿ ಹೇಳಿದ್ದಳು. ಆದ್ರೆ ಲ್ಯಾಸಿ ಗಂಡನ ಬಳಿ ಪ್ರಶ್ನೆ ಮಾಡಿದ್ದಳು. ನಿನಗೆ ಅಕ್ರಮ ಸಂಬಂಧವಿದೆ ಎಂದು ಅಮ್ಮ ಹೇಳಿದ್ದಾಳೆ ಎಂದು ಲ್ಯಾಸಿ ನೇರವಾಗಿ ಕೇಳಿದ್ದಳು. ಅದಕ್ಕೆ ಉತ್ತರಿಸಿದ್ದ ಆಕೆ ಪತಿ, ನಿಮ್ಮ ಅಮ್ಮನ ಬಳಿ ಹೋಗಿ ಕೇಳು, ನಮ್ಮಿಬ್ಬರ ಮಧ್ಯೆ ಯಾವ ಸಂಬಂಧವಿದೆ ಎನ್ನುವುದನ್ನು ಎಂದಿದ್ದ.

ತಕ್ಷಣ ಅಮ್ಮನ ಬಳಿ ಬಂದ ಲ್ಯಾಸಿ, ಅಳಿಯನ ಕೈ ಹಿಡಿದಿದ್ದೆ. ಆದ್ರೆ ಇಬ್ಬರ ಮಧ್ಯೆ ಯಾವುದೇ ಸಂಬಂಧವಿಲ್ಲ ಎಂದು ತಾಯಿ ಹೇಳಿದ್ದಾಳೆ. ಅಮ್ಮನ ಮಾತನ್ನು ಲ್ಯಾಸಿ ನಂಬಲಿಲ್ಲ. ಈಗ ಲ್ಯಾಸಿ ಇಬ್ಬರಿಂದ ದೂರವಿದ್ದಾಳೆ. ಮಗಳ ಜೊತೆ ಒಂಟಿಯಾಗಿ ವಾಸವಾಗಿದ್ದು ಸಿಂಗಲ್ ಮದರ್ಸ್ ಗಾಗಿ ಎನ್ ಜಿಒ ಶುರು ಮಾಡಿದ್ದಾಳೆ. ಟಿಕ್ ಟಾಕ್ ನಲ್ಲಿ ಆಕೆ ವಿಡಿಯೋ ವೈರಲ್ ಆಗಿದೆ. ಬಳಕೆದಾರರು ನಾನಾ ಕಮೆಂಟ್ ಮಾಡ್ತಿದ್ದಾರೆ. ಇಲ್ಲಿಯವರೆಗೆ 2.7 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ವಿಡಿಯೋ ವೀಕ್ಷಣೆ ಮಾಡಲಾಗಿದೆ.  

ದೊಡ್ಡಗಾದ್ರೂ ಮಗು ತರಾ ಆಡ್ತಾರಾ? ಈ ಸಿಂಡ್ರೋಮ್ ಇರ್ಬೋದು!

Latest Videos
Follow Us:
Download App:
  • android
  • ios