Asianet Suvarna News Asianet Suvarna News

ದೊಡ್ಡಗಾದ್ರೂ ಮಗು ತರಾ ಆಡ್ತಾರಾ? ಈ ಸಿಂಡ್ರೋಮ್ ಇರ್ಬೋದು!

ದೊಡ್ಡವರಾದರೂ ಸಣ್ಣವರಂತೆ ವರ್ತಿಸುವುದನ್ನು ಸೈಕಾಲಜಿಯಲ್ಲಿ  ಒಂದು ಸಮಸ್ಯೆಯಾಗಿ ನೋಡಲಾಗುತ್ತದೆ. ಅದಕ್ಕಿರುವ ಹೆಸರೇ ಪೀಟರ್ ಪ್ಯಾನ್ ಸಿಂಡ್ರೋಮ್. 

What is Peter Pan syndrome and how does it affect relationships skr
Author
First Published Jan 7, 2024, 12:44 PM IST

ನಿಮ್ಮ ಪರಿಚಿತರಲ್ಲಿ ಕೆಲವರು ದೊಡ್ಡವರಾದರೂ ಚಿಕ್ಕ ಮಕ್ಕಳಂತೆ ಹಟ ಮಾಡುತ್ತಿರಬಹುದು, ಅಥವಾ ಇನ್ನೂ ಬಾಲ್ಯದ ಹುಚ್ಚಾಟಗಳಲ್ಲೇ ಮುಳುಗೇಳುತ್ತಿರಬಹುದು, ಇಲ್ಲವೇ ತಾವು ಆಗ ನೋಡುತ್ತಿದ್ದ ಕಾರ್ಟೂನ್‌ಗಳು, ಆಡುತ್ತಿದ್ದ ಗೊಂಬೆಗಳನ್ನು ಇಂದಿಗೂ ಎಂಜಾಯ್ ಮಾಡುತ್ತಾ ಮಕ್ಕಳಂತೆ ವರ್ತಿಸುತ್ತಿರಬಹುದು. ಹೀಗೆ ದೊಡ್ಡವರಾದರೂ ಸಣ್ಣವರಂತೆ ವರ್ತಿಸುವುದನ್ನು ಸೈಕಾಲಜಿಯಲ್ಲಿ  ಒಂದು ಸಮಸ್ಯೆಯಾಗಿ ನೋಡಲಾಗುತ್ತದೆ. ಅದಕ್ಕಿರುವ ಹೆಸರೇ ಪೀಟರ್ ಪ್ಯಾನ್ ಸಿಂಡ್ರೋಮ್. 

ಪೀಟರ್ ಪ್ಯಾನ್ ಸಿಂಡ್ರೋಮ್ ಎಂದರೇನು?
ಪೀಟರ್ ಪ್ಯಾನ್ ಸಿಂಡ್ರೋಮ್ ಒಂದು ಮಾನಸಿಕ ಸ್ಥಿತಿಯಾಗಿದ್ದು, ಇದರಲ್ಲಿ ವಯಸ್ಕರು ಪ್ರಬುದ್ಧರಾಗಲು ಹೆಣಗಾಡುತ್ತಾರೆ. ಹೆಚ್ಚು ವೃತ್ತಿಪರ ಪರಿಭಾಷೆಯಲ್ಲಿ, ಕ್ಲಿನಿಕಲ್ ಮನಶ್ಶಾಸ್ತ್ರಜ್ಞರು ಇದನ್ನು ಒಂದು ವಿದ್ಯಮಾನವೆಂದು ವಿವರಿಸಿದ್ದಾರೆ, ಅಲ್ಲಿ ವಯಸ್ಕರು ವಿಶಿಷ್ಟವಾದ ವಯಸ್ಕ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಅಥವಾ ಅರ್ಥಪೂರ್ಣ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ಸವಾಲು ಎದುರಿಸುತ್ತಾರೆ. ನಾರ್ಸಿಸಿಸಮ್, ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ರೋಗಲಕ್ಷಣವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಬಾರಿ ಅವರಿಗಿನ್ನೂ ಮೆಚುರಿಟಿ ಬಂದಿಲ್ಲ ಎಂದುಕೊಂಡು ಉಳಿದವರು ಸುಮ್ಮನಾಗುತ್ತಾರೆ. ಆದರೆ, ನಿಜವಾಗಿ ಅವರಿಗೆ ತಜ್ಞರಿಂದ ವಿಶೇಷ ಕಾಳಜಿ ಮತ್ತು ಗಮನದ ಅಗತ್ಯವಿರುತ್ತದೆ.

ಎಂದಿಗೂ ಬೆಳೆಯದ ಮನೋಭಾವ
ಹೀಗೆ ನಿಮಗೆ ಪರಿಚಿತರೂ 'ನಾನು ಬೆಳೆಯುವುದಿಲ್ಲ' ಎಂಬ ಪರಿಸ್ಥಿತಿಯನ್ನು ಅನುಭವಿಸುತ್ತಿರಬಹುದು. ಇನ್ನೂ ಮಕ್ಕಳಂತೆ ವರ್ತಿಸುತ್ತಿರಬಹುದು. ಮನಶ್ಶಾಸ್ತ್ರಜ್ಞ ಡಾನ್ ಕಿಲೆ ಅವರು ತಮ್ಮ 1983 ರ ಪುಸ್ತಕ 'ಪೀಟರ್ ಪ್ಯಾನ್' ನಲ್ಲಿ ಈ ಬಗ್ಗೆ ಬರೆದಿದ್ದಾರೆ. ಪೀಟರ್ ಪ್ಯಾನ್ ಸಿಂಡ್ರೋಮ್ ಎಂಬ ಪದವು ತಮ್ಮ ಪ್ರೌಢಾವಸ್ಥೆಯಲ್ಲಿ ಮಗುವಿನಂತಹ ನಡವಳಿಕೆಯನ್ನು ಪ್ರದರ್ಶಿಸುವವರಿಗೆ ಅನಧಿಕೃತ ಲೇಬಲ್ ಆಗಿದೆ. 

ಯಾರಿಗೆ ಕಾಡಬಹುದು?
ಯಾವುದೇ ಲಿಂಗದ ವ್ಯಕ್ತಿಗಳು ಪೀಟರ್ ಪ್ಯಾನ್ ಸಿಂಡ್ರೋಮ್‌ಗೆ ಸಂಬಂಧಿಸಿದ ನಡವಳಿಕೆಗಳನ್ನು ಪ್ರದರ್ಶಿಸಬಹುದು. ಆದರೆ ಇದು ಪುರುಷರಲ್ಲಿ ಹೆಚ್ಚು ಪ್ರಚಲಿತವಾಗಿದೆ. ಇಂಥ ಪುರುಷನೊಂದಿಗೆ ಇರಬೇಕಾದ ಮಹಿಳೆಯು ಇದರ ಸಂಕಷ್ಟವನ್ನು ಎದುರಿಸಬೇಕಾಗಬಹುದು. ಪೀಟರ್ ಪ್ಯಾನ್ ಸಿಂಡ್ರೋಮ್ (ಪಿಪಿಎಸ್) ಹೊಂದಿರುವ ವ್ಯಕ್ತಿಗಳ ಪಾಲುದಾರರು ಸಾಮಾನ್ಯವಾಗಿ ತಮ್ಮ ಸಂಬಂಧಗಳಲ್ಲಿ ಭಾವನಾತ್ಮಕ ಆಳದ ಕೊರತೆಯನ್ನು ಅನುಭವಿಸುತ್ತಾರೆ. ಅಂದರೆ, ಪೀಟರ್ ಪ್ಯಾನ್ ಸಿಂಡ್ರೋಮ್ ಸಂಬಂಧಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮತ್ತು ಈ ಸಮಸ್ಯೆ ಹೊಂದಿರುವವರ ಸದಾ ಒಬ್ಬ ರಕ್ಷಕನ ಅಗತ್ಯವನ್ನು ಅನುಭವಿಸುತ್ತಾರೆ. ಅವರು ತಮ್ಮ ಜೀವನವನ್ನು ನಡೆಸುವುದರಲ್ಲಿ ಸಾಕಷ್ಟು ಬೇಜವಾಬ್ದಾರಿ ಹೊಂದಿರುತ್ತಾರೆ. ನಿಮ್ಮ ಸಂಬಂಧಗಳನ್ನು ಉಳಿಸಿಕೊಳ್ಳಲು, ಹೊಸ ಸಂಬಂಧ ಗಳಿಸಿಕೊಳ್ಳಲು, ನಿಭಾಯಿಸುವ ಕಾರಣದಿಂದಾಗಿಯಾದರೂ ಈ ವಿಷಯವಾಗಿ ಚಿಕಿತ್ಸೆಯ ಅಗತ್ಯವಿದೆ. 

ಚಿನ್ನದ ಪಾದರಕ್ಷೆ ಹೊತ್ತು ಅಯೋಧ್ಯೆಗೆ 8,000 ಕಿಮೀ ಪಾದಯಾತ್ರೆ ಕೈಗೊಂಡ ...

ಕಾರಣಗಳು
ಸಾಮಾನ್ಯವಾಗಿ ಯಾರಾದರೂ ದೊಡ್ಡವರಾದರೂ ಮಕ್ಕಳಂತೆ ವರ್ತಿಸುತ್ತಿದ್ದರೆ, ಅತೀ ಮುದ್ದಿನಲ್ಲಿ ಬೆಳೆದಿದ್ದಾರೆ, ಅದೇ ಕಾರಣ ಎನ್ನುತ್ತೇವೆ. ಹಾಗೆಯೇ ಈ ಸಿಂಡ್ರೋಮ್‌ಗೆ ಕೂಡಾ ಪೋಷಕರು ಅತಿ ರಕ್ಷಣಾತ್ಮಕವಾಗಿ ವರ್ತಿಸುವುದು ಕಾರಣವಾಗಬಹುದು. ಅಲ್ಲದೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ನಿಟ್ಟಿನಲ್ಲಿ ಕೆಲವರು ಇಮ್ಮೆಚೂರ್ ಆಗಿಯೇ ಉಳಿಯಲು ಪ್ರಯತ್ನಿಸಬಹುದು. ಮತ್ತೆ ಕೆಲವರು ತಮ್ಮ ಗುಂಪಿನಲ್ಲಿ ಹೆಚ್ಚು ಪ್ರೀತಿ ಗಳಿಸುವ ಸಲುವಾಗಿ ಹೀಗೆ ವರ್ತಿಸಬಹುದು. ಒಟ್ಟಿನಲ್ಲಿ ವಯಸ್ಸಾದಂತೆ ಪ್ರಬುದ್ಧತೆಯ ಕೊರತೆಯನ್ನು ಪ್ರದರ್ಶಿಸುವುದೂ ಕಡೆಗಣಿಸುವ ವಿಷಯವಲ್ಲ. 

ಚಿಕಿತ್ಸೆ ನೀಡಬಹುದೇ?
ಪೀಟರ್ ಪ್ಯಾನ್ ಸಿಂಡ್ರೋಮ್‌ಗೆ ಚಿಕಿತ್ಸೆ ನೀಡಬಹುದಾದರೂ, ಪೀಡಿತ ವ್ಯಕ್ತಿಯ ಕಡೆಯಿಂದ ಬಲವಾದ ಇಚ್ಛಾಶಕ್ತಿಯ ಅಗತ್ಯವಿರುತ್ತದೆ. ಈ ಸ್ಥಿತಿಯನ್ನು ನಿವಾರಿಸಲು ವ್ಯಕ್ತಿಯು ತಮ್ಮ ಕಂಫರ್ಟ್ ಝೋನ್‌ನಿಂದ ಹೊರ ಬರಬೇಕು.  ಅವರು ಜವಾಬ್ದಾರಿ ಹೊರುವ ಮತ್ತು ಬದಲಾವಣೆಯ ಭಯವನ್ನು ಎದುರಿಸಬೇಕಾಗುತ್ತದೆ. ಪರಿಸ್ಥಿತಿಯು ನಿಯಂತ್ರಣಕ್ಕೆ ಮೀರಿದ್ದರೆ ಮತ್ತು ಹಾನಿಕಾರಕವಾಗಿದ್ದರೆ, ಆ ಪರಿಸರವನ್ನು ತೊರೆಯಲು ತಜ್ಞರು ಸಲಹೆ ನೀಡುತ್ತಾರೆ. 

Follow Us:
Download App:
  • android
  • ios