Asianet Suvarna News Asianet Suvarna News

ಬಾರೆ ಡೇಟ್‌ ಹೋಗೋಣ ಎಂದ ಯವನಿಗೆ ಶಾಕ್, ಮೇಕ್‌ಅಪ್‌ಗೆ 10,000ರೂ ಕಳುಹಿಸಲು ಯುವತಿ ತಾಕೀತು!

ಬಾರೆ ಡೇಟ್ ಹೋಗೋಣ ಬಾ, ಕಪ್‌ಲ್ಲಿ ಕಾಫಿ ಹೀರೋಣ ಬಾ ಎಂದು ಯುವಕ ಗೆಳೆತಿಯನ್ನು ಕರೆದಿದ್ದಾನೆ. ಮರು ಮಾತಿಲ್ಲದೆ ಒಕೆ ಎಂದ ಯುವತಿ ಅಷ್ಟೇ ವೇಗದಲ್ಲಿ ಪೆಡಿಕ್ಯೂರ್, ವ್ಯಾಕ್ಸ್, ಮೇಕ್‌ಅಪ್ ಸೇರಿದಂತೆ ಡೇಟಿಂಗ್ ಬರಲು ತಯಾರಿಗಾಗಿ 10,000 ರೂಪಾಯಿ ಕಳುಹಿಸಲು ತಾಕೀತು ಮಾಡಿದ ಸ್ಕ್ರೀನ್ ಶಾಟ್ ಭಾರಿ ವೈರಲ್ ಆಗಿದೆ.
 

Woman ask rs 10000 from boyfriend to date preparation like makeup wax dress Screenshots goes viral ckm
Author
First Published Jun 18, 2024, 7:58 PM IST

ಪ್ರೀತಿ, ಪ್ರೇಮ, ಪ್ರಣಯ ಹಳೇ ಕಾಲದಲ್ಲಾಯ್ತು. ಈಗೇನಿದ್ರು ರಿಲೇಶನ್‌ಶಿಪ್, ಡೇಟಿಂಗ್, ಲಿವಿಂಗ್ ರಿಲೇಶನ್‌ಶಿಪ್ ಹೀಗೆ ಒಂದಕ್ಕಿಂತ ಒಂದು ಮಿಗಿಲು. ಇದೇ ಕಾರಣಕ್ಕೆ ಸಂಬಂಧದ ಅರ್ಥ ಕಳೆದುಕೊಂಡಿದೆಯಾ ಅನ್ನೋ ಚರ್ಚೆ ಹಲವು ಬಾರಿ ಮಹತ್ವ ಪಡೆದುಕೊಂಡಿದೆ. ಇದೀಗ ಯುವಕನೋರ್ವ ಪರಿಚಯಸ್ಥ ಗೆಳೆತಿಯನ್ನು ಸಂಜೆ ಕಾಫಿಗೆ ಹೋಗೋಣ ಅಂತಾ ಕರೆದಿದ್ದಾನೆ. ಈಕೆ ಕೂಡ ಒಕೆ ಅಂದಿದ್ದಾಳೆ. ಜೊತೆಗೆ ದೊಡ್ಡ ಲಿಸ್ಚ್ ಒಂದು ಕಳುಹಿಸಿ ಡೇಟ್‌ಗೆ ಬರಲು ಇಷ್ಟು ತಯಾರಿ ಮಾಡಬೇಕು. ಇದಕ್ಕೆ 10,000 ರೂಪಾಯಿ ಖರ್ಚಾಗುತ್ತೆ. ಕಳುಹಿಸಿ ಎಂದು ಯುವತಿ ಮಸೇಜ್ ಮಾಡಿದ್ದಾಳೆ. ಈ ಸಂದೇಶ ಭಾರಿ ವೈರಲ್ ಆಗಿದೆ.

ಪತ್ರಕರ್ತೆ ದೀಪಿಕಾ ನಾರಾಯಣ ಭಾರದ್ವಾಜ್ ಈ ಕುರಿತ ಸ್ಕ್ರೀನ್ ಶಾಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಭಾರತದಲ್ಲಿ ಡೇಟಿಂಗ್ ಹೊಸಬರಿಗಲ್ಲ ಎಂದು ಹೇಳಿದ್ದಾರೆ. ಎರಡು ಸ್ಕ್ರೀನ್ ಶಾಟ್ ಹಂಚಿಕೊಳ್ಳಲಾಗಿದೆ. ಎರಡೂ ಗೆಳೆಯ ಹಾಗೂ ಗೆಳೆಯತಿ ಚಾಟ್ ಮೆಸೇಜ್. ಗೆಳಯನಿಗೆ ಯುವತಿ ಹಾಯ್ ಎಂದು ಸಂದೇಶ ಕಳುಹಿಸಿದ್ದಾಳೆ. ಗೆಳತಿಯ ಸಂದೇಶಕ್ಕೆ ಉತ್ಸುಕನಾದ ಗೆಳೆಯ, ಸಂಜೆ ಕಾಫಿಗೆ ಹೋಗೋಣ ಎಂದು ಕೇಳಿದ್ದಾನೆ.

ನೀಲಿ ಚಿತ್ರ ತಾರೆಗೆ ಸೆಕ್ಸ್ ಟಾಯ್ ತಂದ ಆಪತ್ತು, ಹೊರತೆಗೆಯಲು ಬೇಕಾಯ್ತು ಸರ್ಜರಿ!

ಮರುಕ್ಷಣವೇ ಯುವತಿ ಪ್ರತಿಕ್ರಿಯೆ ನೀಡಿದ್ದಾಳೆ, ಖಂಡಿತ ಬರುತ್ತೇನೆ ಎಂದಿದ್ದಾಳೆ. ಸರಿ ಎಷ್ಟು ಹೊತ್ತಿಗೆ ಎಂದು ಯುವಕ ಆಕೆಯನ್ನು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಯುವತಿ ಸಂಜೆ 7 ಗಂಟೆ ಎಂದಿದ್ದಾಳೆ. ಬಳಿಕ ಮತ್ತೊಂದು ಸಂದೇಶ ಕಳುಹಿಸಿದ್ದಾಳೆ. ಈ ಸಂದೇಶ ನೋಡಿ ಯುವಕ ಬೆಚ್ಚಿ ಬಿದ್ದಿದ್ದಾನೆ.

ನಿನ್ನ ಜೊತೆ ಕಾಫಿ ಡೇಟ‌್‌ಗೆ ಬರಲು ನಾನು ರೆಡಿಯಾಗಬೇಕು. ವ್ಯಾಕ್ಸಿಂಗ್, ಮ್ಯಾನಿಕ್ಯೂರ್, ನೈಲ್ಸ್, ಪೆಡಿಕ್ಯೂರ್, ನನ್ನ ನೆಚ್ಚಿನ ಡ್ರೆಸ್, ಶೂ ಹಾಗೂ ಮೇಕ್ ಅಪ್ ಒಟ್ಟು 10,000 ರೂಪಾಯಿ ಕಳುಹಿಸು. ನನ್ನ ಯುಪಿಐ ಐಡಿ ಇಲ್ಲಿದೆ ಎಂದು ದೊಡ್ಡ ಲಿಸ್ಟ್ ಜೊತೆಗೆ ಹಣ ಪಾವತಿಗೆ ಐಡಿ ನೀಡಿದ್ದಾಳೆ. ಇದರ ಜೊತೆಗೆ ಮತ್ತೊಂದು ಸಂದೇಶವನ್ನು ಯುವತಿ ಕಳುಹಿಸಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಉಚಿತ ಡೇಟಿಂಗ್‌ನಲ್ಲಿ ಉತ್ಸಾಹ ಇಲ್ಲ. ಕಾರಣ ನನಗೆ ಹೆಚ್ಚು ಖರ್ಚಾಗುತ್ತಿದೆ ಎಂದಿದ್ದಾಳೆ. ಯುವತಿಯ ಉದ್ದದ ಲಿಸ್ಟ್ ನೋಡಿ ಯುವಕ ಮೌನಕ್ಕೆ ಶರಣಾಗಿದ್ದಾನೆ. 

ಸಿಂಗಲ್ ಇದ್ದವರಿಗೆ ಮಿಂಗಲ್ ಅವಕಾಶ, ಸರ್ಕಾರದಿಂದಲೇ ಡೇಟಿಂಗ್ ಆ್ಯಪ್ ಲಾಂಚ್!

ಮತ್ತೊಂದು ಸ್ಕ್ರೀನ್‌ಶಾಟ್‌ನಲ್ಲೂ ಇದೇ ರೀತಿಯ ಗೆಳತಿಯೊಬ್ಬಳು ನಾನು ಶಾಪಿಂಗ್ ಮಾಡಿ ಹಣ ಖಾಲಿಯಾಗಿದೆ. ನನಗೆ 5 ರಿಂದ 6 ಸಾವಿರ ರೂಪಾಯಿ ಕಳುಹಿಸು ಎಂದು ಸಂದೇಶ ಕಳುಹಿಸಿದ್ದಾಳೆ. ಈ ಎರಡು ಚಾಟಿಂಗ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಡೇಟಿಂಗ್ ಮೂಲಕವೇ ಹಣ ಮಾಡುತ್ತಿದ್ದಾರಾ ಎಂದು ಹಲವರು ಪ್ರಶ್ನಿಸಿದ್ದಾರೆ.


 

Latest Videos
Follow Us:
Download App:
  • android
  • ios