Asianet Suvarna News Asianet Suvarna News

ಗುಟ್ಕಾ ಹಾಕಿ ಬುಲೆಟ್ ಓಡಿಸೋ ಮಡದಿಗೆ ಡಿವೋರ್ಸ್ ಕೊಟ್ಟ ಪತಿರಾಯ!

ಪತಿ – ಪತ್ನಿ ಮಧ್ಯೆ ಹೊಂದಾಣಿಕೆ ಕಷ್ಟ ಎನ್ನುವ ಸ್ಥಿತಿ ಈಗ ನಿರ್ಮಾಣವಾಗಿದೆ. ಸಣ್ಣ ವಿಷ್ಯಕ್ಕೂ ದಂಪತಿ ಕಿತ್ತಾಡುತ್ತಾರೆ. ಆಗ್ರಾದಲ್ಲಿ ಪತ್ನಿಯ ಚಟವೇ ಇಬ್ಬರು ದೂರವಾಗಲು ಕಾರಣವಾಗಿದೆ. 
 

Wife Habit Riding Bullet And Consuming Gutkha Angry Husband Left House Divorce Situation roo
Author
First Published Apr 29, 2024, 1:29 PM IST

ಪತಿ – ಪತ್ನಿ ಇಬ್ಬರಲ್ಲಿ ಯಾರು ದುಷ್ಚಟ ಅಂಟಿಸಿಕೊಂಡ್ರೂ ಸಂಸಾರ ನಡೆಸೋದು ಕಷ್ಟವಾಗುತ್ತದೆ. ಕುಡಿದು ಬರುವ ಗಂಡ ಹಣವನ್ನೆಲ್ಲ ಖಾಲಿ ಮಾಡಿ ಪತ್ನಿಯನ್ನು ಬೀದಿಗೆ ಹಾಕಿದ ಉದಾಹರಣೆ ಇದೆ. ಅದೇ ರೀತಿ ಕುಡಿತ ಸೇರಿದಂತೆ ಬೇರೆ ಚಟಕ್ಕೆ ಬಿದ್ದ ಪತ್ನಿಯಿಂದಲೂ ಪತಿ ಸಮಸ್ಯೆಗೆ ಒಳಗಾಗ್ತಾನೆ. ಪತ್ನಿ ಅಥವಾ ಪತಿಯ ಈ ಹವ್ಯಾಸಕ್ಕೆ ಬೇಸತ್ತು ವಿಚ್ಛೇದನ ನೀಡುವ ಪುರುಷರೂ ಸಾಕಷ್ಟು ಮಂದಿ. ಈಗ ಉತ್ತರ ಪ್ರದೇಶದ ಆಗ್ರಾ ಇಂಥದ್ದೇ ವಿಷ್ಯಕ್ಕೆ ಚರ್ಚೆಯಲ್ಲಿದೆ. ಪತ್ನಿಯ ಗುಟ್ಕಾ ಹಾಗೂ ಬುಲೆಟ್ ಚಟ ಈಗ ದಂಪತಿ ಮಧ್ಯೆ ವಿವಾದ ಸೃಷ್ಟಿಸಿದ್ದಲ್ಲದೆ ವಿಚ್ಛೇದನಕ್ಕೆ ಬಂದು ನಿಂತಿದೆ. ಕುಟುಂಬ ಸಲಹಾ ಕೇಂದ್ರದಲ್ಲಿ ಪ್ರಕರಣವಿದ್ದು, ಇಬ್ಬರ ಮಧ್ಯೆ ಹೊಂದಾಣಿಕೆ ತರುವ ಪ್ರಯತ್ನ ನಡೆದಿದೆ. 

ಪತಿಗೆ ತಲೆಬಿಸಿ ತಂದಿಟ್ಟ ಪತ್ನಿಯ ಗುಟ್ಕಾ (Gutka) – ಬುಲೆಟ್ (Bullet) : 2020ರಲ್ಲಿ ಜಗದೀಶ್‌ಪುರ ಪ್ರದೇಶದ ಹುಡುಗಿಯನ್ನು ಠಾಣಾ ಸದರ್ ಪ್ರದೇಶದ ಹುಡುಗ ಮದುವೆ ಆಗಿದ್ದ. ಹುಡುಗ ಜಗದೀಶ್‌ಪುರದಲ್ಲಿರುವ ಶೂ ಫ್ಯಾಕ್ಟರಿ (Factory) ಯಲ್ಲಿ ಕೆಲಸ ಮಾಡ್ತಾನೆ. ದಿನಕ್ಕೆ 300 ರೂಪಾಯಿಯಂತೆ ಆತನಿಗೆ ಸಂಬಳ ಸಿಗುತ್ತದೆ. ಮನೆಯಲ್ಲಿ ಬಡತನ ಇರುವ ಕಾರಣ ಸಣ್ಣ ಗುಡಿಸಿಲಿನಲ್ಲಿ ತಂದೆ – ತಾಯಿ ವಾಸವಾಗಿದ್ದಾರೆ. ಹುಡುಗಿ ದೊಡ್ಡ ಮನೆ ಬೇಕು ಎಂದ ಕಾರಣಕ್ಕೆ ಆಕೆ ತಂದೆ ಹುಡುಗನಿಗೆ ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಆರಂಭದಲ್ಲಿ ಇಬ್ಬರ ದಾಂಪತ್ಯ ಚೆನ್ನಾಗಿಯೇ ಇತ್ತು. ಆ ನಂತ್ರ ಹುಡುಗನಿಗೆ ಹುಡುಗಿ ಗುಟ್ಕಾ ತಿನ್ನುತ್ತಾಳೆ ಎಂಬ ಸಂಗತಿ ಗೊತ್ತಾಗಿದೆ. ಹುಡುಗಿ ಬರೀ ಗುಟ್ಕಾ ತಿನ್ನೋದಿಲ್ಲ, ಗುಟ್ಕಾ ಹಾಕಿದಾಗೆಲ್ಲ ಬುಲೆಟ್ ಏರಿ ರೈಡ್ ಗೆ ಹೋಗ್ತಾಳೆ. ಇದು ಆತನಿಗೆ ದೊಡ್ಡ ತಲೆಬಿಸಿಯಾಗಿದೆ.  

ಬೆಂಗಳೂರಲ್ಲಿ ಕಿಟ್ಟಿ ಪಾರ್ಟೀಲಿ ಮಡದಿ ಬ್ಯುಸಿ ಇದ್ರೆ, ನೀರ್ನಳ್ಳಿ ರಾಮಕೃಷ್ಣ ಹಳ್ಳಿಗೆ ಹೋಗಿದ್ಯಾಕೆ?

ಪತ್ನಿಯ ಗುಟ್ಕಾ ಹಾಗೂ ಪೆಟ್ರೋಲ್ ಗೆ ದುಡಿದ ಹಣವೆಲ್ಲ ಹೋಗ್ತಿದೆ ಎಂದು ಪತಿ ಆರೋಪ ಮಾಡಿದ್ದಾನೆ. 2023ರಲ್ಲಿ ಇಬ್ಬರ ಮಧ್ಯೆ ಗಲಾಟೆ ಜೋರಾಗಿದೆ. ಪತ್ನಿಗೆ ಗುಟ್ಕಾ ಬಿಡುವಂತೆ ಪತಿ ಹೇಳಿದ್ದಾನೆ. ಆದ್ರೆ ಗುಟ್ಕಾಗೆ ವಿರೋಧ ಮಾಡ್ತಿದ್ದಂತೆ ಪತ್ನಿ ಕೋಪಗೊಂಡು ಜಗಳ ಶುರು ಮಾಡಿದ್ದಾಳೆ. ಇದ್ರಿಂದ ನೊಂದ ಪತಿ, ಪತ್ನಿ ಬಿಟ್ಟು ಅಪ್ಪ – ಅಮ್ಮನ ಜೊತೆ ವಾಸ ಶುರು ಮಾಡಿದ್ದಾನೆ. ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಈ ವಿಷ್ಯ ಇಡೀ ಪ್ರದೇಶಕ್ಕೆ ಹರಡಿದೆ. ಎಲ್ಲರ ಬಾಯಲ್ಲಿ ಗುಸುಗುಸು ಶುರುವಾಗಿದೆ. ಪತಿ ಬಿಟ್ಟು ಹೋಗ್ತಿದ್ದಂತೆ ಪತ್ನಿ ಪೊಲೀಸ (Police) ರಿಗೆ ದೂರು ನೀಡಿದ್ದಾಳೆ.

ವಿಚಾರಣೆ ವೇಳೆ ಪೊಲೀಸರು ಪ್ರಕರಣವನ್ನು ಕುಟುಂಬ ಸಲಹಾ ಕೇಂದ್ರಕ್ಕೆ (Family Counsessling Center) ವರ್ಗಾಯಿಸಿದ್ದಾರೆ. ಅಧಿಕಾರಿಗಳ ಮುಂದೆ ಹಾಜರಾದ ಪತಿ, ಪತ್ನಿ ಗುಟ್ಕಾ ಸೇವನೆ ಬಿಡಬೇಕು. ಗುಟ್ಕಾ ಹಾಕಿಕೊಂಡು ಬುಲೆಟ್ ಓಡಿಸಬಾರದು ಎಂದಿದ್ದಾನೆ. ಮದುವೆ ಆಗುವ ಮೊದಲೇ ನಾನು ಗುಟ್ಕಾ ಸೇವನೆ ಮಾಡುತ್ತಿದ್ದೆ. ನನ್ನ ತಂದೆ ನನಗೆ ಬುಲೆಟ್ ಕೊಡಿಸಿದ್ದಾರೆ. ಬಾಲ್ಯದಿಂದಲೂ ನಾನು ಬುಲೆಟ್ ಓಡಿಸುತ್ತೇನೆ. ಮದುವೆ ಆದ್ಮೇಲೆ ಗುಟ್ಕಾ ಸೇವನೆಯನ್ನು ನಾನು ಕಡಿಮೆ ಮಾಡಿದ್ದೇನೆ ಎಂದು ಪತ್ನಿ  ಪೊಲೀಸ್ ಮುಂದೆ ಹೇಳಿದ್ದಾಳೆ.

ರಜನಿಕಾಂತ್ ಸೇಡು ತೀರಿಸಿಕೊಂಡಿದ್ದು ಕೂಡ ಸಖತ್ ಸ್ಟೈಲಿಶ್ ಆಗಿಯೇ ಅಂದ್ರೆ ನಂಬ್ಲೇಬೇಕು!

ಒಂದ್ವೇಳೆ ಪತ್ನಿ ಈ ಎರಡೂ ಅಭ್ಯಾಸ ಬಿಟ್ಟಲ್ಲಿ ನಾನು ಆಕೆ ಜೊತೆ ವಾಸಕ್ಕೆ ಸಿದ್ಧ. ನನಗೆ ಸಿಗುವ ಸಂಬಳ ಆಕೆ ಗುಟ್ಕಾ, ಬುಲೆಟ್ ಖರ್ಚಿಗೆ ಸಾಲ್ತಿಲ್ಲ ಎಂದು ಪತಿ ಹೇಳಿದ್ದಾನೆ. ಒಟ್ನಲ್ಲಿ ಇವರಿಬ್ಬರ ಗಲಾಟೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಒಂದು ಹಂತದ ಮಾತುಕತೆ ಮುಗಿದಿದ್ದು, ಇನ್ನೊಮ್ಮೆ ಬರುವಂತೆ ಅಧಿಕಾರಿಗಳು ದಂಪತಿಗೆ ಹೇಳಿದ್ದಾರೆ. 

Latest Videos
Follow Us:
Download App:
  • android
  • ios