ಮಾಜಿ ಗರ್ಲ್‌ಫ್ರೆಂಡ್ ಜೊತೆಗಿನ ಇಂಟಿಮೇಟ್‌ ಪೋಟೋ ಗಂಡ ಇನ್ನೂ ಇಟ್ಕೊಂಡಿದ್ದಾನೆ, ಏನ್ಮಾಡ್ಮಿ ?

ಸಂಬಂಧ ಅನ್ನೋದು ತುಂಬಾ ಸೂಕ್ಷ್ಮವಾದುದು. ಅದು ಸರಿಯಾಗಿ ಮುನ್ನಡೆಯಬೇಕಾದರೆ ಸಮರ್ಪಕವಾದ ರೀತಿಯಲ್ಲಿ ನಿಭಾಯಿಸುವುದು ತುಂಬಾ ಮುಖ್ಯ. ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಗಳು ರಿಲೇಶನ್‌ ಶಿಪ್‌ನ್ನು ಹಾಳು ಮಾಡಿಬಿಡುತ್ತವೆ. ಇಲ್ಲೊಬ್ಬಾಕೆಗೆ ಹಾಗೇ ಆಗಿದೆ. ವಾರ್ಡ್‌ರೋಬ್‌ನಲ್ಲಿ ಗಂಡ ಇನ್ನೊಬ್ಬಳ ಜೊತೆ ಆಪ್ತತೆಯಿಂದ ಸಮಯ ಕಳೆದಿರುವ ಪೋಟೋ ಸಿಕ್ಕಿದೆ. ಮುಂದೇನು ಮಾಡಲಿ ಎಂದು ಮಹಿಳೆ ಕಂಗಾಲಾಗಿದ್ದಾಳೆ.
 

Wife Found So Many Pictures Of Husband With Girlfriend In Wardrobe Vin

ಮದುವೆಯಾಗುವುದು ಸುಲಭ. ಆದ್ರೆ  ಮದುವೆಯನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಮ್ಯಾರೀಡ್ ಲೈಫ್‌ ನಿಭಾಯಿಸಲು ನಂಬಿಕೆ, ವಿಶ್ವಾಸ ಎಲ್ಲವೂ ಜೊತೆಗಿರಬೇಕು. ಸಣ್ಣ ತಪ್ಪಾದರೂ ಮದುವೆಯ ಅಡಿಪಾಯ ಕುಸಿಯಲು ಆರಂಭವಾಗುತ್ತದೆ. ಇಲ್ಲೊಬ್ಬಾಕೆಗೆ ಹಾಗೆಯೇ ಆಗಿದೆ. ಗಂಡನ ಹಳೇಯ ಪ್ರೀತಿಯ ಸಂಬಂಧದ ಪೋಟೋಗಳು ಅಕಸ್ಮಾತಾಗಿ ಕೈ ಸೇರಿದೆ. ಅದೂ ಅಂತಿಂಥಾ ಪೋಟೋ ಅಲ್ಲ. ಗಂಡ ಮತ್ತೊಬ್ಬಳ ಜೊತೆ ಆಪ್ತವಾಗಿ ಸಮಯ ಕಳೆದಿರುವ ಪೋಟೋಸ್‌.

ಪ್ರಶ್ನೆ: ನಾನು ವಿವಾಹಿತ ಮಹಿಳೆ (Woman). ನನಗೆ ಮದುವೆಯಾಗಿ 6 ​​ವರ್ಷಗಳಾಗಿವೆ. 3 ವರ್ಷದ ಮಗಳಿದ್ದಾಳೆ. ನಾನು ನನ್ನ ಗಂಡ (Husband) ನನ್ನು ತುಂಬಾ ಪ್ರೀತಿಸುತ್ತೇನೆ. ನಮ್ಮ ದಾಂಪತ್ಯದಲ್ಲಿ (Married life) ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಆದರೆ ಒಂದು ದಿನ ನಾನು ನನ್ನ ಗಂಡನ ಕಪಾಟಿನಲ್ಲಿ ಕೆಲವು ಕೆಲಸದ ದಾಖಲೆಗಳನ್ನು ಹುಡುಕುತ್ತಿದ್ದಾಗ, ನನ್ನ ಗಂಡ ಹಾಗೂ ಅವರ ಗೆಳತಿಯ ಅನೇಕ ಚಿತ್ರಗಳು ಮತ್ತು ಪ್ರೇಮ ಪತ್ರಗಳು (Love letters) ಕಂಡುಬಂದವು. ನಿಜವಾಗಿ, ನನ್ನ ಪತಿ ಕಾಲೇಜಿನಲ್ಲಿ ಓದುತ್ತಿದ್ದಾಗ, ಒಬ್ಬ ಹುಡುಗಿಯೊಂದಿಗೆ ಸಂಬಂಧ (Relationship) ಹೊಂದಿದ್ದರು ಎಂಬುದು ನನ್ನ ಗಮನಕ್ಕೆ ಬಂತು.

ಫೋನ್ ಹಿಡಿದು ಬಾತ್ ರೂಮಿಗೆ ಹೋಗ್ತಾನೆ ಗಂಡ, ಏನ್ಮಾಡ್ತಾನೋ ಗೊತ್ತಿಲ್ಲ!

ನನ್ನ ಪತಿ ಈ ವಿಷಯದ ಬಗ್ಗೆ ನನಗೆ ಎಲ್ಲವನ್ನೂ ಹೇಳಿದ್ದರು. ಆದರೆ ಅವರು ಆ ಪೋಟೋಗಳನ್ನು ತನ್ನೊಂದಿಗೆ ಏಕೆ ಇಟ್ಟುಕೊಂಡಿದ್ದಾನೆಂದು ನನಗೆ ಅರ್ಥವಾಗಲ್ಲಿಲ್ಲ. ಏಕೆಂದರೆ ಅದರಲ್ಲಿ ಅವರಿಬ್ಬರ ಆತ್ಮೀಯ ಚಿತ್ರಗಳೂ ಸೇರಿದ್ದವು. ಅದನ್ನು ನೋಡಿದಾಗಿನಿಂದ ನನ್ನ ನೆಮ್ಮದಿ ಹೊರಟು ಹೋಗಿದೆ. . ಪತಿಯ (Husband) ಬಳಿ ಇದನ್ನು ಕೇಳಿದ್ದಕ್ಕೆ ಹಳೆಯ ಕಡತದೊಂದಿಗೆ ಪೋಟೋ ಉಳಿದುಕೊಂಡಿದೆ ಎಂದರು. ನಾನು ಸಾಕಷ್ಟು ಗಲಾಟೆ ಮಾಡಿದ ನಂತರ ಚಿತ್ರಗಳನ್ನು ಎಸೆದರು. ನಾನು ನನ್ನ ಸಂಸಾರವನ್ನು ಉಳಿಸಿಕೊಳ್ಳಲು ಮುಂದೇನು ಮಾಡಲಿ ಎಂದು ಮಹಿಳೆ ಪ್ರಶ್ನಿಸಿದ್ದಾರೆ.

ತಜ್ಞರ ಉತ್ತರ: ಹೆಂಡತಿ (Wife)ಯಾಗಿ ನಿಮ್ಮ ಮನಸ್ಸಿನಲ್ಲಿ ಎಷ್ಟೆಲ್ಲಾ ತಲ್ಲಣವಿದೆ ಎಂದು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಗಂಡನ ವಾರ್ಡ್‌ರೋಬ್‌ನಲ್ಲಿ ಫೋಟೋಗಳು ಸಿಕ್ಕವು ಎಂದ ತಕ್ಷಣ ನೀವು ಈ ಸಂಬಂಧವನ್ನು ಕೊನೆಗೊಳಿಸಬೇಕಾಗಿಲ್ಲ. ಏಕೆಂದರೆ ನಿಮ್ಮ ಪತಿ ತಮ್ಮ ಹಳೆಯ ಸಂಬಂಧದ ಬಗ್ಗೆ ಈಗಲೂ ಯಾವ ರೀತಿಯ ಭಾವನೆಯನ್ನಿಟ್ಟುಕೊಂಡಿದ್ದಾರೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ. 

ಇನ್ನೂ ಆಕೆಯ ನೆನಪಿನಲ್ಲಿದ್ದಾರಾ ?: ಹಿಂದೊಮ್ಮೆ ಇದ್ದ ಸಂಬಂಧದ ಬಗ್ಗೆ ಗಂಡನಿಗೆ ಈಗ ಯಾವ ಭಾವನೆಯಿದೆ. ಅವರ ಭಾವನೆಗಳೇನು? ಆ ಹುಡುಗಿ ಇನ್ನೂ ಅವನ ಹೃದಯದಲ್ಲಿ ಯಾವುದೇ ಸ್ಥಾನವನ್ನು ಹೊಂದಿದ್ದಾಳಾ ? ಹಾಗಾಗದಿದ್ದರೆ ಆ ಲಕೋಟೆಯನ್ನು ಇಲ್ಲಿಯವರೆಗೂ ತನ್ನ ಬಳಿಯೇ ಇಟ್ಟುಕೊಂಡಿರುವುದೇಕೆ ? ಎಂಬುದನ್ನು ನೀವು ಗಂಡನ ಬಳಿ ಕೇಳಿ ತಿಳಿದುಕೊಳ್ಳಬಹುದು. ಆದರೆ ನೀವು ನಿಮ್ಮ ಗಂಡನ ಬಳಿ ಮಾತನಾಡುವ ವಿಧಾನವು ತುಂಬಾ ಸಾಮಾನ್ಯವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ನೀವು ಅವರ ಮೇಲೆ ಕೋಪ (Angry)ಗೊಂಡರೆ, ವಿಷಯ ಇನ್ನಷ್ಟು ಕಗ್ಗಂಟಾಗಿ ಪರಿಣಮಿಸಬಹುದು.

Matrimonial Ad: ವರ ಬೇಕಾಗಿದ್ದಾನೆ, ಸಾಫ್ಟ್‌ವೇರ್‌ ಇಂಜಿನಿಯರ್ಸ್‌ ದಯವಿಟ್ಟು ಕಾಲ್ ಮಾಡ್ಬೇಡಿ !

ಗಂಡನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ: ನಿಮ್ಮ ಗಂಡನಿಗೆ ಈ ಹಿಂದೆ ಸಂಬಂಧವಿದ್ದಿದ್ದು ನಿಜ. ಆದರೆ ಅವರು ಆ ಬಗ್ಗೆ ಎಲ್ಲವನ್ನೂ ನಿಮ್ಮಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ನೀವು ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಬೇಕು. ಎಲ್ಲವನ್ನೂ ಮರೆತು, ನಿಮ್ಮ ಸಂಬಂಧ ಮತ್ತು ಸಂತೋಷದ (Happy) ಕ್ಷಣಗಳ ಬಗ್ಗೆ ಇಬ್ಬರೂ ಮಾತನಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಂಬಂಧದಲ್ಲಿ ಪ್ರೀತಿಯನ್ನು ಪುನರುಜ್ಜೀವನಗೊಳಿಸುವುದಲ್ಲದೆ, ಇದರಿಂದಾಗಿ ನೀವಿಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳುವ ಅವಕಾಶವನ್ನು ಪಡೆಯುತ್ತೀರಿ. ನಿಮ್ಮ ಜೊತೆಗಿದೆ ನಾನಿದ್ದೇನೆ ಅನ್ನೋ ಭಾವನೆಯನ್ನು ಅವರಿಗೆ ಮೂಡಿಸಿ. ಹಿಂದಿನ ನೆನಪುಗಳು ಮತ್ತೆ ಅವರ ಮೇಲೆ ಪ್ರಭಾವ ಬೀರಲು ಬಿಡಬೇಡಿ.

ಗಂಡನ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಿ:  ನಿಮ್ಮ ಗಂಡನೊಂದಿಗೆ ಈ ವಿಷಯವನ್ನು ಬಹಿರಂಗವಾಗಿ ಮಾತನಾಡುವುದು ತಪ್ಪಲ್ಲ. ಆದರೆ ಈ ಸಮಯದಲ್ಲಿ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ನಿಮ್ಮ ವಿಚಾರವನ್ನು ಅವರ ಮುಂದೆ ಇಟ್ಟುಕೊಂಡು, ನಿಮಗೆ ಇದೆಲ್ಲ ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿ. ನಿಮ್ಮಿಬ್ಬರ ಮಧ್ಯೆ ಯಾವುದೇ ಮೂರನೇ ವ್ಯಕ್ತಿ ಬರುವುದು ನಿಮಗೆ ಇಷ್ಟವಿಲ್ಲ ಎಂದು ಹೇಳಿ. ಮಾತುಕತೆ ಸಫಲವಾಗದಿದ್ರೆ ನೀವು ಸಮಸ್ಯೆಯನ್ನು ನಿಭಾಯಿಸಲು ಎಕ್ಸ್‌ಪರ್ಟ್‌ ​​ಸಹಾಯವನ್ನು ಸಹ ತೆಗೆದುಕೊಳ್ಳಬಹುದು.

ಮಗುವಿನ ಭವಿಷ್ಯವನ್ನು ಯೋಚಿಸಿ: ಭೂತಕಾಲದಲ್ಲಿ ಗಂಡನಿಗೆ ಯಾವುದೋ ಸಂಬಂಧವಿದ್ದ ಮಾತ್ರಕ್ಕೆ ಅದನ್ನು ವರ್ತಮಾನಕ್ಕೆ ತರುವ ಅಗತ್ಯವಿಲ್ಲ. ನೀವು ಈಗಾಗಲೇ ಒಂದು ಮಗುವನ್ನು ಹೊಂದಿದ್ದೀರಿ. ಆ ಮಗುವಿನ ಭವಿಷ್ಯದ (Future) ಬಗ್ಗೆ ಯೋಚಿಸಿ. ಗಂಡ ಸಹ ಇದೇ ನಿಟ್ಟಿನಲ್ಲಿ ಯೋಚಿಸಬಹುದು. ಅವರೂ ಸಹ ಸಂಸಾರವನ್ನು ಉಳಿಸಿಕೊಳ್ಳಲು ಯತ್ನಿಸುತ್ತಾರೆ. ಆಗಿದ್ದು ಆಗಿ ಹೋಯಿತು. ವಿಷಯವನ್ನು ಜಟಿಲಗೊಳಿಸದೆ ಸುಲಭವಾಗಿ ಮುಕ್ತಾಯಗೊಳಿಸುವುದು ಜಾಣತನ. 

ಸೂಚನೆ: ನೀವು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುವ ಯಾವುದೇ ಸಂಬಂಧ ಸಂಬಂಧಿತ ಕಥೆಯನ್ನು ಹೊಂದಿದ್ದರೆ, ನೀವು ಅದನ್ನು digitalblr@suvarnanews.inಗೆ ಕಳುಹಿಸಬಹುದು. ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.

Latest Videos
Follow Us:
Download App:
  • android
  • ios