ಭಾರತದಲ್ಲಿ ಮದ್ವೆಯಾಗೋಕೆ ಮ್ಯಾಟ್ರಿಮೋನಿ ಸೈಟ್‌ನಲ್ಲಿ ಹುಡುಗ-ಹುಡುಗಿಯನ್ನು ಹುಡುಕುವುದು ಸಾಮಾನ್ಯ. ಇದರಲ್ಲಿ ಬರೋ ಜಾಹೀರಾತುಗಳು ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಹಾಗೆಯೇ ಇಲ್ಲೊಂದು ವಿಚಿತ್ರ ಆ್ಯಡ್ ಎಲ್ಲರ ಹುಬ್ಬೇರುವಂತೆ ಮಾಡಿದೆ. ಆ ಜಾಹೀರಾತಿನಲ್ಲಿದೆ ತಿಳಿಯೋಣ.
ವಧು ವರರ ಹುಡುಕಾಟಕ್ಕೆ ಭಾರತದಲ್ಲಿ ಮ್ಯಾಟ್ರಿಮೋನಿಯಲ್(Matrimonial) ಸೈಟ್ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹಲವರು ತಮ್ಮ ಜೀವನ ಸಂಗಾತಿಯನ್ನು(Life partner) ಕಂಡುಕೊಂಡಿದ್ದಾರೆ. ವರ ಅಥವಾ ವಧು ಬೇಕಿರುವವರು ಸೈಟ್‌ಗೆ ಲಾಗಿನ್ ಆಗಿ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಈ ದಿನಗಳಲ್ಲಿ, ಬಹಳಷ್ಟು ಮ್ಯಾಟ್ರಿಮೋನಿಯಲ್ ಜಾಹೀರಾತುಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿ ಕೊನೆಗೊಳ್ಳುತ್ತವೆ. ಹುಡುಗ-ಹುಡುಗಿಯನ್ನು ಹುಡುಕುವವರಅಸಂಬದ್ಧ ಅಥವಾ ಹಾಸ್ಯಾಸ್ಪದ ನಿರೀಕ್ಷೆಗಳು ಮತ್ತು ಬೇಡಿಕೆಗಳು ಹೆಚ್ಚು ವೈರಲ್ ಆಗುತ್ತವೆ. ಸ್ತ್ರೀದ್ವೇಷದ ವಿವರಣೆಗಳಿಂದ ಹಿಡಿದು ಬಹುತೇಕ ಚೇಷ್ಟೆಯಂತೆ ಭಾಸವಾಗುವ ಪರಿಸ್ಥಿತಿಗಳವರೆಗೆ, ವೈವಾಹಿಕ ಜಾಹೀರಾತುಗಳು ಸಹ ಭಾರತದ ವ್ಯವಸ್ಥಿತ ವಿವಾಹ ವ್ಯವಸ್ಥೆಯ ಬಗ್ಗೆ ಒಂದು ಅನನ್ಯ ಒಳನೋಟವನ್ನು ನೀಡುತ್ತವೆ. ಅಂಥಹದ್ದೇ ಮ್ಯಾಟ್ರಿಮೋನಿಯಲ್‌ನಲ್ಲಿ ನೀಡಿದ ಜಾಹೀರಾತು ಇದೀಗ ಭಾರಿ ವೈರಲ್ ಆಗಿದೆ.
ಮದ್ವೆಯಾಗಲು ಸಾಫ್ಟ್‌ವೇರ್ ಇಂಜಿನಿಯರ್ಸ್ ಬೇಡ್ವೇ ಬೇಡ್ವಂತೆ !
ಮ್ಯಾಟ್ರಿಮೋನಿಯಲ್‌ನಲ್ಲಿ ವರ ಅಥವಾ ವಧು ಬೇಕಿರುವವರು ಕೆಲ ನಿರ್ದಿಷ್ಟ ಬೇಡಿಕೆಗೆಳನ್ನು(Demand) ಇಡುವುದು ಸಹಜ. ಉದ್ಯೋಗಿಯಾಗಿರಬೇಕು, ಕನಿಷ್ಠ ಡಿಗ್ರಿ ಆಗಿರಬೇಕು, ಮನೆತನೆಕ್ಕೆ ಹೊಂದಿಕೊಳ್ಳಬೇಕು, ಬೆಳ್ಳಗೆ ಇರಬೇಕು, ತೆಳ್ಳಗೆ ಇರಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಇಡುತ್ತಾರೆ. ಆದರೆ ಇತ್ತೀಚೆಗೆ, ಟ್ವಿಟರ್‌ನಲ್ಲಿ ವೈವಾಹಿಕ ಜಾಹೀರಾತು ವೈರಲ್ ಆಗಿದೆ. ಇದರಲ್ಲಿ 'ಸಾಫ್ಟ್‌ವೇರ್ ಎಂಜಿನಿಯರ್‌ಗಳು ದಯೆಯಿಂದ ಕರೆ ಮಾಡಬೇಡಿ' ಎಂದು ಜಾಹೀರಾತಿನ ಕೊನೆಯ ಸಾಲಿನಲ್ಲಿ ಸೂಚಿಸಲಾಗಿದೆ.
ಮ್ಯಾಟ್ರಿಮೋನಿ ಎಚ್ಚರ, ಈ ರೀತಿಯೂ ವಂಚನೆ ಮಾಡ್ತಾರೆ ಹುಷಾರ್!
ಜಾಹೀರಾತನ್ನು ನೀಡಿದ ಮಹಿಳೆಯು IAS/IPS, ವ್ಯಾಪಾರ, ಕೈಗಾರಿಕಾ ಅಥವಾ ವೈದ್ಯರ ಹಿನ್ನೆಲೆಯಿಂದ ಯಾರಾದರೂ ಹುಡುಗ ಸಿಕ್ಕಿದರೆ ಆಗಬಹುದು. ಸಾಫ್ಟ್‌ವೇರ್ ಇಂಜಿನಿಯರ್ ಖಂಡಿತವಾಗಿಯೂ ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಜಾಹೀರಾತಿನಲ್ಲಿ ಈ ರೀತಿ ತಿಳಿಸಲಾಗಿದೆ.
ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ವಿಚಿತ್ರ ಜಾಹೀರಾತು
'ಶ್ರೀಮಂತ ಕುಟುಂಬದ ವ್ಯಾಪಾರ ಹಿನ್ನೆಲೆಯಿಂದ ಬಂದ MBA ವಿದ್ಯಾಭ್ಯಾಸ ಪೂರೈಸಿರುವ ಸುಂದರ ಹುಡುಗಿ ವರನನ್ನು ಹುಡುಕುತ್ತಿದ್ದಾಳೆ. ವರನು ಐಎಎಸ್/ಐಪಿಎಸ್, ವೈದ್ಯ ಅಥವಾ ಕೈಗಾರಿಕೋದ್ಯಮಿಯಾಗಿದ್ದರೆ ಆಗಬಹುದು. ಆದ್ರೆ ಸಾಫ್ಟ್‌ವೇರ್ ಎಂಜಿನಿಯರ್‌ಗಳು ದಯೆವಿಟ್ಟು ಕರೆ ಮಾಡಬೇಡಿ' ಎಂದು ತಿಳಿಸಲಾಗಿದೆ. ಇತರ ಜಾಹೀರಾತುಗಳಂತೆ, ಇದರಲ್ಲಿ ವರನ ಎತ್ತರ ಅಥವಾ ಮೈಬಣ್ಣದ ಬಗ್ಗೆ ಏನನ್ನೂ ಹೇಳಲಾಗಿಲ್ಲ. ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಈ ರೀತಿಯ ಜಾಹೀರಾತು ಇದೇ ಮೊದಲಲ್ಲ. ಹಲವು ಚಿತ್ರ ವಿಚಿತ್ರ ಜಾಹೀರಾತುಗಳು ಈ ಹಿಂದೆಯೂ ವೈರಲ್ ಆಗಿವೆ. ಆದರೆ ಇಷ್ಟು ನಿಖರವಾಗಿ ಬೇಡಿಕೆ ಇಟ್ಟ ಜಾಹೀರಾತು ಇದೇ ಮೊದಲು.
ಮ್ಯಾಟ್ರಿಮೋನಿಯಲ್/ಡೇಟಿಂಗ್ ಸೈಟ್‌ನ ಪ್ರೊಫೈಲ್ ಫೋಟೋ ಹೀಗ್ ಹಾಕ್ಬೇಡಿ!
ಬ್ರಾ ಸೈಜ್ 32B, ಸೊಂಟ 28, ವಯಸ್ಸು 26 ರೊಳಗಿನ ವಧು ಬೇಕಾಗಿದೆ ಪೋಸ್ಟ್ ವೈರಲ್
ಈ ಹಿಂದೆಯೂ ಮ್ಯಾಟ್ರಿಮೋನಿ ಸೈಟ್‌ನಲ್ಲಿ ವಿಚಿತ್ರ ಜಾಹೀರಾತುವೊಂದು ವೈರಲ್ ಆಗಿದೆ. ನಾನು ಮದುವೆಯಾಗಲು(Marriage) ಹುಡುಗಿ ಹುಡುಕುತ್ತಿದ್ದೇನೆ. ಮದುವೆಯಾಗುವ ಹುಡುಗಿ ಎತ್ತರ 5.2 ನಿಂದ 5.6 ಇರಬೇಕು. ಬ್ರಾ ಸೈಜ್ 32 ಬಿ ಯಿಂದ 32 ಸಿ ಒಳಗಿರಬೇಕು, ಸೊಂಟದ ಸೈಜ್ 12 ರಿಂದ 16 ಒಳಗಿರಬೇಕು. ವಯಸ್ಸು 18 ರಿಂದ 26ರ ಒಳಗಿರಬೇಕು. ಅಹಂಕಾರವಿರಬಾರದು. ಹಸ್ತಾಲಂಕಾರ ಮಾಡಿದ, ಸ್ವಚ್ಚ ಪಾದಗಳನ್ನು ಹೊಂದಿರಬೇಕು. ಹುಡುಗಿಯ ಉಡುಪುಗಳು ಶೇಕಡಾ 80 ಕ್ಯಾಶ್ಯುಲ್ ಹಾಗೂ ಶೇಕಡಾ 20 ರಷ್ಟು ಫಾರ್ಮಲ್ ಆಗಿರಬೇಕು. ಬೆಡ್‌ರೂಂನಲ್ಲೂ ವೇಷಭೂಣಗಳನ್ನು ಧರಿಸಬೇಕು. ನಂಬಲರ್ಹವಾಗಿರಬೇಕು, ಚಲನಚಿತ್ರ, ಪ್ರವಾಸ ಮಾಡುವಂತಿರಬೇಕು, ಮಕ್ಕಳು ಬೇಡ, ನಾಯಿಯನ್ನು ಪ್ರೀತಿಸಬೇಕು. ಕುಟುಂಬಕ್ಕೆ ಹೊಂದಿಕೊಳ್ಳಬೇಕು ಎಂದು ಅತೀ ದೊಡ್ಡ ಜಾಹೀರಾತನ್ನು ನೀಡಿದ್ದಾನೆ.
ಈತನ ಬೇಡಿಕೆ ಇಷ್ಟಕ್ಕೆ ನಿಂತಿಲ್ಲ. ಬಳುಕುವ ಬಳ್ಳಿಯಾಗಿರಬೇಕು, ಬೆಳ್ಳಗಿರಬೇಕು, ಲಕ್ಷಣವಾಗಿರಬೇಕು, ಸುಂದರಿಯಾಗಿರಬೇಕು ಸೇರಿದಂತೆ ಲಿಸ್ಟ್ ತುಂಬಾನ ಇದೆ. ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಈ ರೀತಿಯ ಜಾಹೀರಾತು ಪ್ರಕಟವಾದ ಬೆನ್ನಲ್ಲೇ ಭಾರಿ ವೈರಲ್ ಆಗಿತ್ತು. ಈ ಜಾಹೀರಾತು ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲೂ(Social Media) ಭಾರೀ ಸಂಚಲನ ಮೂಡಿಸಿತ್ತು.

