Relationship Tips : ಡಾನ್ಸ್ ಮಾಸ್ಟರ್ ಪ್ರೀತಿಗೆ ಬಿದ್ದು ಪತಿಗೆ ಕೈಕೊಟ್ಟ ಪತ್ನಿ..!

ದಾಂಪತ್ಯದಲ್ಲಿ ಎಲ್ಲವೂ ಸರಿಯಿದೆ ಎಂದುಕೊಂಡಿರ್ತೇವೆ. ಆದ್ರೆ ನಮ್ಮ ಬೆನ್ನ ಹಿಂದೆಯೇ ಅನೇಕ ಬಾರಿ ದ್ರೋಹವಾಗ್ತಿರುತ್ತದೆ. ಈ ವ್ಯಕ್ತಿ ಕೂಡ ಪತ್ನಿಯನ್ನು ನಂಬಿ ಮೋಸ ಹೋಗಿದ್ದಾನೆ. ಪತ್ನಿ ಪ್ರೀತಿಸ್ತಾಳೆಂದು ನಂಬಿ ತನ್ನ ಬಾಳನ್ನು ಹಾಳು ಮಾಡ್ಕೊಂಡಿದ್ದಾನೆ. 
 

Wife cheats husband run away with lover

ಜೀವನ (Life) ದ ಮುಂದಿನ ಕ್ಷಣ ಹೇಗಿರುತ್ತೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಸುಖಕರವಾಗಿ ಸಾಗ್ತಿದೆ ಎಂಬ ಜೀವನದಲ್ಲಿ ಏಕಾಏಕಿ ಆಘಾತವಾಗ್ಬಹುದು. ದಾಂಪತ್ಯ ಜೀವನ ಕೂಡ ಇದಕ್ಕೆ ಹೊರತಾಗಿಲ್ಲ. ಎಷ್ಟೇ ಅನುಭವವಿದ್ದರೂ ದಾಂಪತ್ಯದಲ್ಲಿ ಬಿರುಕು ಮೂಡಬಹುದು. ಪರಸ್ಪರ ಒಬ್ಬರನ್ನೊಬ್ಬರು ಅರಿತಿದ್ದೇವೆ ಎಂದುಕೊಂಡಿದ್ದರೂ ಸಮಸ್ಯೆ (Problem) ಕಾಡಬಹುದು. ವ್ಯಕ್ತಿಯೊಬ್ಬನ ಬದುಕಲ್ಲೂ ಅದೇ ಆಗಿದೆ. ಪತ್ನಿ (Wife)ಯನ್ನು ಅಪಾರವಾಗಿ ಪ್ರೀತಿ ಮಾಡ್ತಿದ್ದ ಪತಿಗೆ, ಪತ್ನಿ ಕೈಕೊಟ್ಟಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಪತಿ ತನ್ನ ನೋವನ್ನು ತೋಡಿಕೊಂಡಿದ್ದಾನೆ. 

ಏನು ಆತನ ಸಮಸ್ಯೆ ? : ಆತನ ಪತ್ನಿ ಅಧ್ಬುತ ನೃತ್ಯಗಾರ್ತಿಯಂತೆ. ಅವಳು ಆತನಿಗೆ ಇಷ್ಟವಾದ ಹಾಡುಗಳಿಗೆ ಅನೇಕ ಬಾರಿ ಡಾನ್ಸ್ ಮಾಡಿದ್ದಾಳಂತೆ. ಅವಳನ್ನು ನೋಡುವುದು ಆತನಿಗೆ ತುಂಬಾ ಇಷ್ಟವಾಗಿತ್ತಂತೆ. ಆದ್ರೆ ದೊಡ್ಡ ನಗರಕ್ಕೆ ಬಂದ ಆ ದಂಪತಿ ಬದುಕಲ್ಲಿ ಬಿರುಗಾಳಿ ಬೀಸಿತ್ತಂತೆ. ನೃತ್ಯದ ಬಗೆಗಿನ ಅವಳ ಮನೋಭಾವವು ಸಂಪೂರ್ಣವಾಗಿ ಬದಲಾಗಿತ್ತಂತೆ. ಪತಿಯ ನೆಚ್ಚಿನ ಹಾಡುಗಳಿಗೆ ಡಾನ್ಸ್ ಮಾಡುವುದನ್ನು ಆಕೆ ಬಿಟ್ಟಿದ್ದಳಂತೆ. ಊರು ಬದಲಾಗಿದ್ದು ಆಕೆ ಮೇಲೆ ಪರಿಣಾಮ ಬೀರಿತ್ತಂತೆ.

ದೂರದಲ್ಲಿರುವ ಸಂಗಾತಿಯ ಮನವೊಲಿಸಲು ಹೀಗೆ ಮಾಡಿ

ಹೊಸ ನಗರದಲ್ಲಿ ಕಡಿಮೆಯಾದ ಆತ್ಮವಿಶ್ವಾಸ : ನಗರದಲ್ಲಿ ನನ್ನ ನೃತ್ಯ ನೋಡುವವರಿಲ್ಲವೆಂದು ಪತ್ನಿ ಮರಗುತ್ತಿದ್ದಳಂತೆ. ಪತ್ನಿ ಈ ಮಾತಿನಿಂದ ಆಕೆಯಲ್ಲಿ ಆತ್ಮವಿಶ್ವಾಸ ಕಡಿಮೆಯಾಗ್ತಿದೆ ಎಂದು ಪತಿ ಭಾವಿಸಿದ್ದನಂತೆ. ಪತ್ನಿಗೆ ಆತ್ಮವಿಶ್ವಾಸ ತುಂಬುವ ಪ್ರಯತ್ನ ನಡೆಸಿದ್ದನಂತೆ. ನೀನು ಅದ್ಭುತ ನೃತ್ಯಗಾರ್ತಿ. ನಾವು ಎಲ್ಲಿಂದ ಬಂದಿದ್ದೇವೆ ಎಂಬುದು ಮುಖ್ಯವಲ್ಲ. ನಿನ್ನ ನೃತ್ಯಕ್ಕೂ, ನಗರವನ್ನು ಬದಲಾಯಿಸುವುದಕ್ಕೂ ಯಾವುದೇ ಸಂಬಂಧವಿಲ್ಲವೆಂದು ಪತಿ, ಪತ್ನಿಗೆ ಧೈರ್ಯ ಹೇಳಿದ್ದನಂತೆ. 
ಇಷ್ಟೇ ಅಲ್ಲ, ಶೀಘ್ರದಲ್ಲೇ ನೃತ್ಯ ಶಾಲೆಗೆ ಸೇರಿಸುತ್ತೇನೆ. ಇದರಿಂದ ನೀನು ಉತ್ತಮ ನೃತ್ಯವನ್ನು ಕಲಿಯಬಹುದು ಎಂದ ಪತಿ ಮರುದಿನವೇ ಹೆಂಡತಿಗಾಗಿ ನೃತ್ಯ ಶಾಲೆಯನ್ನು ಹುಡುಕತೊಡಗಿದ್ದನಂತೆ. ಬಹಳ ಹುಡುಕಾಟದ ನಂತರ ಮನೆಯಿಂದ ಹತ್ತಿರವಿರುವ ಡಾನ್ಸ್ ಕ್ಲಾಸ್ ಸಿಕ್ಕಿತ್ತಂತೆ.  

ಪತ್ನಿಯನ್ನು ನೋಡಿ ಬೆಚ್ಚಿಬಿದ್ದ ಪತಿ : ಡಾನ್ಸ್ ಕ್ಲಾಸಿಗೆ ಹೋಗಲು ಶುರು ಮಾಡಿದ್ದ ಪತ್ನಿಯಲ್ಲಿ ನಿಧಾನಕ್ಕೆ ಬದಲಾವಣೆ ಕಾಣಿಸಿಕೊಂಡಿತ್ತಂತೆ. ಡಾನ್ಸ್ ಕ್ಲಾಸ್ ಗೆ ಹೋಗಲು ಶುರು ಮಾಡಿದ ಮೇಲೆ ಆತ್ಮವಿಶ್ವಾಸ ಹೆಚ್ಚಾಗಿತ್ತಂತೆ. ಪತ್ನಿಯ ಈ ಖುಷಿ, ಧೈರ್ಯ ನೋಡಿ ಪತಿಗೆ ನೆಮ್ಮದಿಯಾಗಿತ್ತಂತೆ. ಪತ್ನಿಯನ್ನು ಈ ಸ್ಥಿತಿಯಲ್ಲಿ ನೋಡಲು ಕಾಯ್ತಿದ್ದ ಪತಿ, ಆಕೆಗೆ ಸರ್ಪ್ರೈಸ್ ನೀಡಲು ಮುಂದಾಗಿದ್ದನಂತೆ. ಇದೇ ಕಾರಣಕ್ಕೆ ಒಂದು ದಿನ ಡಾನ್ಸ್ ಕ್ಲಾಸಿಗೆ ಹೋಗಿದ್ದನಂತೆ. ಆದ್ರೆ ಅಲ್ಲಿಗೆ ಹೋದಾಗ ಬೆಚ್ಚಿ ಬಿದ್ದನಂತೆ. ಆತನ ಹೆಂಡತಿ ಡಾನ್ಸ್ ಟೀಚರ್ ಮುಂದೆ ಒಂಟಿಯಾಗಿ ನೃತ್ಯ ಮಾಡ್ತಿದ್ದಳಂತೆ. ಆಕೆಯ ಡಾನ್ಸ್ ಟೀಚರ್ ನೋಡಲು ತುಂಬಾ ಆಕರ್ಷಕವಾಗಿರುವುದು ಮಾತ್ರವಲ್ಲದೆ ವಯಸ್ಸು ಕೂಡ ಕಡಿಮೆಯಿತ್ತು. ಆದ್ರೆ ಡಾನ್ಸ್ ಟೀಚರ್ ಬಗ್ಗೆ ಆತ ಗಮನ ನೀಡಿರಲಿಲ್ಲ. ಪತ್ನಿ ನೃತ್ಯದ ಬಗ್ಗೆ ಗಮನ ಹರಿಸಿದ ಆತ ಒಳಗೆ ಪ್ರವೇಶ ಮಾಡಿದ್ನಂತೆ. ಪತಿಯನ್ನು ನೋಡಿದ ಪತ್ನಿ ಶಾಕ್ ಆಗಿದ್ದಲ್ಲದೆ ವಿಚಿತ್ರವಾಗಿ ವರ್ತಿಸಿದ್ದಳಂತೆ. 

breakup ಬೇಡ ಅಂದ್ರೆ ಅವ್ಳ ಜೊತೆ ಇಂಥದ್ದೆಲ್ಲ ಮಾತಾಡಬೇಡಿ!

ಹೃದಯ ಒಡೆದ ಪತ್ನಿ : ಹೊಸ ನಗರಕ್ಕೆ ಬಂದು ವರ್ಷವಾಗಿತ್ತಂತೆ. ಎಲ್ಲವೂ ಸರಿಯಿದೆ ಎಂದು ಆತ ಭಾವಿಸಿದ್ದನಂತೆ. ಒಂದು ದಿನ ಪತಿ ಬಳಿ ಬಂದ ಪತ್ನಿ, ನಿನ್ನ ಜೊತೆ ನಾನು ಸುಖವಾಗಿ ಜೀವನ ನಡೆಸಿದ್ದೆ ಎನ್ನುತ್ತ ಕೃತಜ್ಞತೆ ಸಲ್ಲಿಸಿದ್ದಳಂತೆ. ಹಾಗೆಯೇ ನಾನು ನಿನ್ನನ್ನು ಪ್ರೀತಿಸುತ್ತಿಲ್ಲ. ಕೆಲ ತಿಂಗಳಿಂದ ನಾನು ಬೇರೆಯವರನ್ನು ಪ್ರೀತಿಸುತ್ತಿದ್ದು, ಅವರ ಜೊತೆ ಇರಲು ಬಯಸ್ತೇನೆ ಎಂದಿದ್ದಳಂತೆ.
ಪತ್ನಿಯ ಮಾತನ್ನು ಪತಿ ನಂಬಿರಲಿಲ್ಲವಂತೆ. ಡಾನ್ಸ್ ಮಾಸ್ಟರ್ ಪ್ರೀತಿಗೆ ಪತ್ನಿ ಬೀಳ್ತಾಳೆ ಎಂಬುದನ್ನು ನಂಬಲು ಆತ ಸಿದ್ಧವಿರಲಿಲ್ಲವಂತೆ. 

ರಾತ್ರಿ ಮನೆ ಬಿಟ್ಟ ಪತ್ನಿ : ಒಂದು ದಿನ ರಾತ್ರಿ ಪತ್ನಿ ಮನೆ ಬಿಟ್ಟಿದ್ದಳಂತೆ. ಡಾನ್ಸ್ ಮಾಸ್ಟರ್ ಜೊತೆ ವಾಸ ಶುರು ಮಾಡಿದ್ದಳಂತೆ. ಆಕೆಯನ್ನು ಡಾನ್ಸ ಕ್ಲಾಸಿಗೆ ಸೇರಿಸದೆ ಹೋದ್ರೆ ಇದೆಲ್ಲ ಆಗ್ತಿರಲಿಲ್ಲ. ತಪ್ಪು ನನ್ನದೆ ಎಂದು ಪತಿ ಈಗ ಬೇಸರ ವ್ಯಕ್ತಪಡಿಸ್ತಿದ್ದಾನೆ. ಸಂಪೂರ್ಣವಾಗಿ ನಾನು ಸೋತು ಹೋಗಿದ್ದೇನೆ ಎಂದು ಮರಗುತ್ತಿದ್ದಾನೆ. 

Latest Videos
Follow Us:
Download App:
  • android
  • ios