breakup ಬೇಡ ಅಂದ್ರೆ ಅವ್ಳ ಜೊತೆ ಇಂಥದ್ದೆಲ್ಲ ಮಾತಾಡಬೇಡಿ!
ಮಾತು ಆಡಿದ್ರೆ ಹೋಯ್ತು. ಮಾತನಾಡುವಾಗ ಅದ್ರಲ್ಲೂ ಗರ್ಲ್ ಫ್ರೆಂಡ್ ಮುಂದೆ ಮಾತನಾಡುವಾಗ ಎರಡು ಪಟ್ಟು ಎಚ್ಚರಿಕೆ ವಹಿಸ್ಬೇಕು. ಕೆಲವೊಂದು ಗುಟ್ಟುಗಳನ್ನು ಅವಳ ಮುಂದೆ ಹೇಳಿ ಸಂಬಂಧ ಹಾಳು ಮಾಡ್ಕೊಳ್ಳಬೇಡಿ.
ಒಬ್ಬರು ಇಬ್ಬರಾದಾಗ ಅಂದ್ರೆ ಹೊಸ ಸಂಬಂಧ (Relation) ದಲ್ಲಿ ಬಿದ್ದಾಗ ಹುಡುಗ – ಹುಡುಗಿ ಇಬ್ಬರೂ ಹೊಸ (New) ಅನುಭವ ಮತ್ತು ಸವಾಲು (Challenge) ಗಳನ್ನು ಎದುರಿಸುತ್ತಾರೆ. ಮೊದಲು ತಮ್ಮೊಬ್ಬರ ಸಂತೋಷ (Happiness) ವನ್ನು ಮಾತ್ರ ನೋಡಿಕೊಳ್ಳುತ್ತಿದ್ದರು. ಆದರೆ ಪ್ರೀತಿ ಚಿಗುರಿದ ಮೇಲೆ ಅಥವಾ ಮದುವೆಯಾದ್ಮೇಲೆ ತನ್ನ ಜೊತೆ ತನ್ನ ಸಂಗಾತಿಯ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಸುಖ ದುಃಖದಲ್ಲಿ ಸಂಗಾತಿಯನ್ನು ಬೆಂಬಲಿಸುವುದು, ಕಾಳಜಿ ತೋರಿಸುವುದ, ಪ್ರಾಮಾಣಿಕವಾಗಿ ನಡೆದುಕೊಳ್ಳುವುದು, ಸಂಗಾತಿಗೆ ಸಮಯ ನೀಡುವುದು ಸೇರಿದಂತೆ ಅನೇಕ ಹೊಣೆಯನ್ನು ವ್ಯಕ್ತಿ ಹೊರಬೇಕು. ಇದು ಸಂಬಂಧದ ಮೂಲಭೂತ ಅಗತ್ಯಗಳಾಗಿವೆ. ಇದ್ರಿಂದ ಸಂಬಂಧದಲ್ಲಿ ಸುಖ ಕಾಣಬಹುದು. ಇಬ್ಬರ ಮಧ್ಯೆ ಪ್ರೀತಿ ಬಹಳ ಮುಖ್ಯವಾಗುತ್ತದೆ. ಪ್ರೀತಿ ಮಾತುಗಳೂ ಮಹತ್ವ ಪಡೆಯುತ್ತವೆ. ಆದ್ರೆ ಹುಡುಗರು ಸಣ್ಣ – ಸಣ್ಣ ವಿಷ್ಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇದು ಸಂಬಂಧದಲ್ಲಿ ಅತಿ ಮುಖ್ಯ ಎಂಬುದೂ ಅವರಿಗೆ ತಿಳಿದಿರುವುದಿಲ್ಲ. ಪ್ರೀತಿ ಸಂಬಂಧದಲ್ಲಿ ಮುಚ್ಚುಮರೆಯಿರಬಾರದು ನಿಜ. ಆದ್ರೆ ಹುಡುಗರು ಕೆಲ ವಿಷ್ಯಗಳನ್ನು ತಮ್ಮ ಗರ್ಲ್ ಫ್ರೆಂಡ್ ಗೆ ಹೇಳ್ಬಾರದು. ಒಂದು ವೇಳೆ ಆ ವಿಷ್ಯಗಳನ್ನು ಹುಡುಗಿ ಮುಂದೆ ಹೇಳಿದ್ರೆ ಸಂಬಂಧ ಹಾಳಾಗುವ ಸಾಧ್ಯತೆಯಿರುತ್ತದೆ.
ಸಂಗಾತಿಗೆ ಎಂದೂ ಹುಡುಗರು ಹೇಳ್ಬಾರದು ಈ ವಿಷ್ಯ :
ಮಾಜಿಗೆ ಸಂಬಂಧಿಸಿದ ಸಣ್ಣ ಸಣ್ಣ ವಿಷ್ಯ : ಮಾಜಿ ಪ್ರೇಯಸಿಯಿದ್ದರೆ ಆಕೆ ಬಗ್ಗೆ ಹೇಳುವುದು ಬಹಳ ಮುಖ್ಯ. ಆದ್ರೆ ಮಾಜಿ ಬಗ್ಗೆ ಸಣ್ಣ ಸಣ್ಣ ವಿಷ್ಯಗಳನ್ನು ಹೇಳುವುದು ಒಳ್ಳೆಯದಲ್ಲ. ಇದು ಮುಂದಿನ ದಿನಗಳಲ್ಲಿ ಸಮಸ್ಯೆ ತಂದೊಡ್ಡಬಹುದು. ಯಾವುದೋ ವಿಷ್ಯಕ್ಕೆ ನಿಮ್ಮಿಬ್ಬರ ಮಧ್ಯೆ ಜಗಳವಾಗಿದ್ದರೆ ನಿಮ್ಮ ಸಂಗಾತಿ ಮಾಜಿ ವಿಷ್ಯ ತೆಗೆದು ಗಲಾಟೆಯನ್ನು ಮತ್ತಷ್ಟು ದೊಡ್ಡದು ಮಾಡ್ಬಹುದು. ಹಾಗಾಗಿ ಹುಡುಗರು ಮಾಜಿ ಇದ್ದಳು ಎಂಬುದನ್ನು ಬಿಟ್ಟು ಬೇರೆ ಯಾವುದೇ ವಿಷ್ಯವನ್ನು ಹೇಳದಿರುವುದು ಒಳ್ಳೆಯದು.
ಗರ್ಲ್ ಫ್ರೆಂಡ್ ಮುಂದೆ ಬೇರೆ ಹುಡುಗಿಯ ಗುಣಗಾನ : ನನ್ನ ಹುಡುಗ ಕೇವಲ ನನ್ನನ್ನು ಮಾತ್ರ ಹೊಗಳಬೇಕೆಂದು ಎಲ್ಲ ಹುಡುಗಿಯರು ಬಯಸ್ತಾರೆ. ತನ್ನ ಮುಂದೆಯೇ ಬೇರೆ ಹುಡುಗಿ ಹೊಗಳುವುದನ್ನು ಯಾವು ಹುಡುಗಿಯರೂ ಇಷ್ಟಪಡುವುದಿಲ್ಲ. ಬೇರೆ ಹುಡುಗಿಯ ಗುಣಗಾನ ಮಾಡಿದ್ರೆ ಅವರ ಕೋಪ ನೆತ್ತಿಗೇರುತ್ತದೆ. ಇಬ್ಬರ ಮಧ್ಯೆ ಜಗಳವಾಗಬಹುದು. ಹಾಗಾಗಿ ಎಂದೂ ಗರ್ಲ್ ಫ್ರೆಂಡ್ ಮುಂದೆ ಬೇರೆ ಹುಡುಗಿಯನ್ನು ಹೊಗಳಬೇಡಿ.
RELATIONSHIP TIPS : ಈ ರೀತಿ ಮನೆಯ ವೃದ್ಧರನ್ನು ಶಾಂತಗೊಳಿಸಿ
ಪದೇ ಪದೇ ಬ್ಯಾಂಕ್ ಬ್ಯಾಲೆನ್ಸ್ ಹೇಳುವುದು : ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಪದೇ ಪದೇ ಹೇಳಬೇಡಿ. ಈಗಿನ ಹುಡುಗಿಯರು ತಮ್ಮ ಕಾಲ್ಮೇಲೆ ನಿಂತುಕೊಂಡಿದ್ದಾರೆ. ಹಾಗಾಗಿ ಅವರಿಗೆ ಹಣದ ಮಹತ್ವ ಗೊತ್ತಿರುತ್ತದೆ. ನೀವು ಆಗಾಗ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅಥವಾ ನಿಮ್ಮ ಐಷಾರಾಮಿ ಬದುಕಿನ ಬಗ್ಗೆ ಹೇಳ್ತಿದ್ದರೆ ಅವರಿಗೆ ಕಿರಿಕಿರಿಯಾಗ್ಬಹುದು.
ಡ್ರೆಸ್ ಬಗ್ಗೆ ಕಮೆಂಟ್ : ಅನೇಕ ಹುಡುಗರು ಗರ್ಲ್ ಫ್ರೆಂಡ್ ಡ್ರೆಸ್ ಬಗ್ಗೆ ಕಮೆಂಟ್ ಮಾಡ್ತಾರೆ. ಆ ಡ್ರೆಸ್ ಬೇಡ, ಈ ಡ್ರೆಸ್ ಬೇಡ. ಅದು ಹೀಗೆ, ಇದು ಹೀಗೆ ಎನ್ನುತ್ತಿರುತ್ತಾರೆ. ಇದು ಹುಡುಗಿಯರನ್ನು ಕೆರಳಿಸುತ್ತದೆ. ಅವರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ. ಆಕೆ ಡ್ರೆಸ್ ಬಗ್ಗೆ ಹೊಗಳಿಕೆ ಮಾತಿರಲಿ. ಆದ್ರೆ ಎಂದೂ ತೆಗಳುವ ಪ್ರಯತ್ನಕ್ಕೆ ಕೈ ಹಾಕ್ಬೇಡಿ.
ಸಂಗಾತಿ ಜೊತೆ ಮುಂಜಾನೆ ಈ ಕೆಲಸ ಮಾಡಿದ್ರೆ, ದಿನವಿಡೀ ರೊಮ್ಯಾಂಟಿಕ್ ಮೂಡ್ ನಿಮ್ಮದಾಗುತ್ತೆ
ಬೇರೆಯವರ ಹೋಲಿಕೆ : ಇದು ಎಲ್ಲರಿಗೂ ಅನ್ವಯಿಸುತ್ತದೆ. ಯಾವುದೇ ವ್ಯಕ್ತಿಯನ್ನು ಇನ್ನೊಬ್ಬರಿಗೆ ಹೋಲಿಕೆ ಮಾಡಿದ್ರೆ ಅದು ಇಷ್ಟವಾಗುವುದಿಲ್ಲ. ಅದ್ರಲ್ಲೂ ನಿಮ್ಮ ಗರ್ಲ್ ಫ್ರೆಂಡ್ ಹೋಲಿಕೆಯನ್ನು ಬೇರೆ ಹುಡುಗಿ ಜೊತೆ ಮಾಡಿದ್ರೆ ಅವರಿಗೆ ಇಷ್ಟವಾಗುವುದಿಲ್ಲ. ಈಗಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮದೇ ವ್ಯಕ್ತಿತ್ವಕ್ಕೆ ಆದ್ಯತೆ ನೀಡ್ತಾರೆ.