Asianet Suvarna News Asianet Suvarna News

ನಡು ವಯಸ್ಸಿನ ಹೆಣ್ಣು ಬೇರೊಬ್ಬನೊಂದಿಗೆ ಹೋಗೋದು ಲೈಂಗಿಕ ಆಸೆಗೋಸ್ಕರನಾ?

ಹೆಂಡ್ತಿ ಸುಂದರಿಯಾಗಿದ್ರೂ ಪುರುಷ ಬೇರೊಬ್ಬಳೊಂದಿಗೆ ಸಂಬಂಧ ಇಟ್ಟುಕೊಂಡಿರಬಹುದು. ಮಕ್ಕಳಿದ್ದರೂ ಅವರನ್ನು ತೊರೆದು ಮಹಿಳೆ ಬೇರೊಬ್ಬರೊಂದಿಗೆ ಹೋಗಬಹುದು. ಇದು ಅವರ ಮಾನಸಿಕ ಮತ್ತು ದೈಹಿಕ ಸಂಬಂಧ ಹಾಗೂ ಹೊಂದಾಣಿಕೆಯನ್ನು ಅವಲಂಬಿಸಿರುವ ಸಂಗತಿ.
 

Why woman leave her husband and children in middle age trend icreased why sum
Author
First Published Dec 1, 2023, 5:37 PM IST

'ಆತನಿಗೆ ಇಬ್ಬರು ಮಕ್ಕಳಿದ್ದಾವೆ ಕಣ್ರೀ, ಹೆಂಡ್ತಿ ನೋಡೋಕೆ ಸುಂದ್ರಿ. ಏನಾಗಿದೆ ಅಂತ ಬೇರೊಬ್ಬಳನ್ನ ಇಟ್ಕೊಂಡಿದಾನೋ ಏನೋʼ ಎಂದು ಊರೆಲ್ಲ ಮಾತನಾಡುತ್ತದೆ. 'ಆಕೆಗೆ ಈ ವಯಸ್ಸಲ್ಲಿ ಏನಾಗಿತ್ತು ಧಾಡಿ? ಬೆಳೆಯುತ್ತಿರೋ ಮಕ್ಕಳಿವೆ, ಅದನ್ನೂ ನೋಡದೇ ಬೇರೊಬ್ಬನೊಂದಿಗೆ ಹೋಗ್ಬಿಟ್ಟಿದ್ದಾಳೆʼ ಎನ್ನುವ ಮಾತುಗಳೂ ಆಗಾಗ ಕೇಳಿಬರುತ್ತವೆ. ಇವೆಲ್ಲ ಮಧ್ಯವಯಸ್ಸಿನಲ್ಲಿರುವ ಪುರುಷ ಅಥವಾ ಮಹಿಳೆಗೆ ಸಂಬಂಧಿಸಿದ ಸಂಗತಿಗಳು ಎಂದು ಸುಲಭವಾಗಿ ಗುರುತಿಸಬಹುದು. ಮಧ್ಯವಯಸ್ಸಿನಲ್ಲಿ ಹೆಚ್ಚಾಗುವ ಮಾನಸಿಕ ತುಮುಲಗಳಲ್ಲಿ ಸಂಬಂಧಕ್ಕೆ ಸಂಬಂಧಿಸಿದ ಅಂಶಗಳು ಸಹ ಹೆಚ್ಚು ಕಂಡುಬರುತ್ತವೆ. ಅದುವರೆಗೆ ದೊರೆಯದ ಮಾನಸಿಕ ಅಥವಾ ದೈಹಿಕ ತೃಪ್ತಿಗಾಗಿ ಬಾಹ್ಯ ಸಂಬಂಧಗಳು ಸುಲಭವಾಗಿ ಉಂಟಾಗಿಬಿಡುತ್ತವೆ. ಕೆಲವರು ಗುಟ್ಟಾಗಿ ಬಾಹ್ಯ ಸಂಬಂಧವನ್ನು ನಿಭಾಯಿಸಿದರೆ, ಕೆಲವರು ಹಳೆಯ ಜೀವನವನ್ನೇ ತೊರೆದು ಹೋಗುವವರಿದ್ದಾರೆ. ವ್ಯಕ್ತಿಗತವಾಗಿ ಉಂಟಾಗುವ ಇಂತಹ ಸಮಸ್ಯೆಗಳು ಸಾಮಾಜಿಕವಾಗಿ ಪರಿಣಾಮ ಬೀರುವ ಘಟನೆಗಳಾಗಿ ಪರಿವರ್ತಿತವಾಗುತ್ತವೆ ಎಂದರೆ ತಪ್ಪಿಲ್ಲ. ಹಾಗೆಂದು, ಎಲ್ಲ ಘಟನೆಗಳನ್ನೂ ಜನರಲೈಸ್‌ ಅಂದರೆ ಒಂದೇ ತಕ್ಕಡಿಯಲ್ಲಿಟ್ಟು ತೂಗಲು ಸಾಧ್ಯವಿಲ್ಲ. ಪ್ರತಿಯೊಂದಕ್ಕೂ ಪ್ರತ್ಯೇಕ ಕಾರಣಗಳಿರುತ್ತವೆ ಎನ್ನುವುದು ಸತ್ಯ. 

ಮಧ್ಯ ವಯಸ್ಸಿನ ಮಹಿಳೆಯರು (Women) ಬೇರೊಬ್ಬರೊಂದಿಗೆ ಹೋಗಿ ಜೀವನ (Life) ಕಟ್ಟಿಕೊಳ್ಳುವುದನ್ನು ಈ ಸಮಾಜ ಸಾಮಾನ್ಯವಾಗಿ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ, ತಲೆಗೊಂದರಂತೆ ಮಾತು ಕೇಳಿಬರುವುದು ಸಹಜ. ಆದರೆ, ಆ ಮಹಿಳೆಯ ಇಂತಹ ಕೃತ್ಯಕ್ಕೆ ಹಲವು ಕಾರಣಗಳಿರುವುದನ್ನು ಅಲ್ಲಗಳೆಯಲಾಗದು. ಇಷ್ಟವಿಲ್ಲದವರನ್ನು ಮದುವೆ (Marriage) ಯಾಗುವುದು, ಮದುವೆಯಾದರೂ ಮನಸ್ಸು (Mind) ಮತ್ತು ದೈಹಿಕ (Pysical Relationship) ಸಂಬಂಧದಲ್ಲಿ ಹೊಂದಾಣಿಕೆಯಾಗದಿರುವುದು ಇಂಥ ಘಟನೆಗಳಿಗೆ ಪ್ರಮುಖ ಕಾರಣವಾಗಿರುತ್ತವೆ. 

ಇವರು ಅಮ್ಮ – ಮಗಳಲ್ಲ… ದಂಪತಿ! ಈ ಜೋಡಿ ಮಧ್ಯೆ ಇದೆ 37 ವರ್ಷಗಳ ಅಂತರ

ಮನಸ್ಸುಗಳು ಸೇರಲಿಲ್ಲ
ಮದುವೆಯಾದ ಆರಂಭದಲ್ಲಿ ಹೇಗೋ ಜತೆಯಾಗಿದ್ದು ಬಿಡುವುದು ಸುಲಭ. ಆಗ ಮಕ್ಕಳಾಗುತ್ತವೆ. ಆದರೆ, ಕ್ರಮೇಣ ಮನಸ್ಸಿನಲ್ಲಿ ಹೊಂದಾಣಿಕೆ (Adjustment) ಸಾಧ್ಯವಾಗದೇ 'ಈ ಜೀವನ ನನಗೆ ಬೇಕಾಗಿರಲಿಲ್ಲʼ ಎಂದು ಅನಿಸಲು ಶುರುವಾಗುತ್ತದೆ. ಇಬ್ಬರ ಮನಸ್ಸುಗಳು ಎಂದಿಗೂ ಬೆರೆಯುವುದೇ ಇಲ್ಲ. ಮಹಿಳೆಯರಿಗೆ ಸಾಮಾನ್ಯವಾಗಿ ತಾನು ಎಷ್ಟೊಂದು ಜಾಣೆಯಿದ್ದೆ, ತನ್ನ ಬುದ್ಧಿವಂತಿಕೆಯೆಲ್ಲ ಇಲ್ಲಿ ಬಂದು ಹಾಳಾಯಿತು. ಬರೀ ಕೆಲಸ ಮಾಡುವುದರಲ್ಲೇ ಜೀವನ ಕಳೆಯುತ್ತಿದೆ, ಗಂಡ-ಮಕ್ಕಳ ಸೇವೆಯಲ್ಲಿ ತನ್ನ ಬದುಕು ಹಾಳಾಯಿತು, ಅರ್ಥ ಮಾಡಿಕೊಳ್ಳುವ ಗಂಡ ಸಿಗಬೇಕಿತ್ತು ಎನ್ನುವ ಭಾವನೆಗಳು ಹೆಚ್ಚು. ಈ ಸನ್ನಿವೇಶದಲ್ಲಿ ಮನಸ್ಸು ಬದಲಾವಣೆಗೆ (Change) ಸಿದ್ಧವಾಗಿರುತ್ತದೆ. 

ಇನ್ನು, ದೈಹಿಕವಾಗಿಯೂ ಕಾರಣಗಳಿರುತ್ತವೆ. ಪತಿ-ಪತ್ನಿಯಾಗಿ ಬಹಳಷ್ಟು ವರ್ಷ ಬದುಕು ನಡೆಸಿದ ಮೇಲೂ ದೈಹಿಕ ಬಯಕೆ ಸರಿಯಾಗಿ ಈಡೇರಿದೆ ಎನ್ನುವ ಭಾವನೆ ಬಾರದೇ ಇರಬಹುದು. ಇದುವರೆಗಿನ ಲೈಂಗಿಕ (Sexual) ಜೀವನ ಬೇಸರವನ್ನೂ ಮೂಡಿಸಿರುತ್ತದೆ. ಎಷ್ಟೋ ಮಂದಿ ಈ ಹಂತದಲ್ಲಿ ಹೊಸ ಅನುಭವಗಳನ್ನು ಬಯಸುತ್ತಾರೆ. ಇವೆರಡೂ ಸೇರಿದ ಈ ಸಮಯದಲ್ಲೇ ಅಕಸ್ಮಾತ್ತಾಗಿ ಯಾರೋ ಇವರ ಸನ್ನಿವೇಶಕ್ಕೆ ಮಿಡಿಯುವವರು ದೊರೆತರೆ ಅವರಲ್ಲೇ ಸಂಗಾತಿಯನ್ನು (Partner) ಕಾಣುವುದು ಹೆಚ್ಚು. ಬಳಿಕ, ಇದು ದೈಹಿಕ ಸಂಪರ್ಕಕ್ಕೂ ತಿರುಗುತ್ತದೆ. ಅದೇ ಸುಖವೆನ್ನುವ ಭಾವನೆ ಬಲಿಯುತ್ತದೆ. 

ಅತೃಪ್ತ ಮನಸ್ಸುಗಳು
'ಮಹಿಳೆ, ಪುರುಷರಿಬ್ಬರಲ್ಲೂ ಘಟಿಸುವ ಸಂಗತಿ ಇದುʼ ಎನ್ನುತ್ತಾರೆ ಆಪ್ತಸಮಾಲೋಚಕಿ ಶಾಂತಾ ನಾಗರಾಜ್.‌ 'ಮಕ್ಕಳಾಗೋದಕ್ಕೂ, ದಾಂಪತ್ಯ ಗಟ್ಟಿಯಾಗುವುದಕ್ಕೂ ಸಂಬಂಧವಿಲ್ಲ. ಮಾನಸಿಕವಾಗಿ ಹೊಂದಾಣಿಕೆ ಇಲ್ಲದಿದ್ದರೂ ಮಕ್ಕಳಾಗುತ್ತವೆ. ಕೆಲ ದಂಪತಿಗಳಲ್ಲಿ ಮಾನಸಿಕ ಹೊಂದಾಣಿಕೆ ಎಂದಿಗೂ ಬರುವುದೇ ಇಲ್ಲ. ಅವರಿಗೆ ಇವರು ಇಷ್ಟವಾಗಲ್ಲ, ಇವರಿಗೆ ಅವರು ಇಷ್ಟವಾಗಲ್ಲ. ಕೆಲವರು ಬರೀ ಜಗಳವಾಡಿಕೊಂಡು ಜೀವನ ಮಾಡುತ್ತಾರೆ. ಕೆಲವರು ಮನದಲ್ಲೇ ಕೊರಗುತ್ತಾರೆ. ಇಂಥವರ ಮನದ ಕುದಿತ ಅರ್ಥಮಾಡಿಕೊಂಡು ಯಾರಾದರೂ ಸ್ಪಂದಿಸಿದಾಗ, ಅವರಲ್ಲೂ ಹುಡುಕಾಟ ಇದ್ದಾಗ ಅವರಿಬ್ಬರ ಮನಸ್ಸುಗಳಲ್ಲಿ ಹೊಂದಾಣಿಕೆ ಆಗಿಬಿಡುತ್ತದೆʼ ಎಂದು ವಿಶ್ಲೇಷಿಸುತ್ತಾರೆ. 

ಪ್ರೀತಿಸಿದವರು ಕೈ ಕೊಟ್ಟು ಹೋದರೆ, ಬದುಕು ಕಟ್ಟಿ ಕೊಳ್ಳಲು ಇಲ್ಲಿವೆ ಸೊಲ್ಯೂಷನ್ಸ್

'ದೈಹಿಕವಾದ ಕಾಮನೆಗಳು ಸಹ ಬೇರೊಬ್ಬರೊಂದಿಗೆ ಸಂಬಂಧ (Relation) ಹೊಂದಲು ಕಾರಣವಾಗುತ್ತವೆ. ಗಂಡು, ಹೆಣ್ಣು ಇಬ್ಬರಲ್ಲೂ ಲೈಂಗಿಕ ಅತೃಪ್ತಿಯಿದ್ದಾಗ ಇದು ಸಾಧ್ಯವಾಗುತ್ತದೆʼ ಎನ್ನುತ್ತಾರೆ. 

ಪ್ರಬುದ್ಧತೆ ಬೆಳೆಸಿಕೊಳ್ಳೋದೇ ಪರಿಹಾರ
ನಾಲಿಗೆಯ ಚಪಲಕ್ಕೆ ಹೊಟ್ಟೆ ತೊಂಬಿದ್ದರೂ ಮತ್ತೇನೋ ತಿನ್ನುವ ಆಸೆಯಾದಂತೆಯೇ ಲೈಂಗಿಕ ಚಪಲವೂ ಕೂಡ ಎನ್ನುವುದು ಗಮನಾರ್ಹ. ಸಂಸಾರದಲ್ಲಿರುವ ಎಲ್ಲರಲ್ಲೂ ಈ ಭಾವನೆಗಳು ಸಹಜ. ಆದರೆ, ಕೆಲವು ಇದನ್ನರಿತು ಪತಿ-ಪತ್ನಿಯೊಂದಿಗೆ ಸಹಜವಾಗಿ ಬದುಕು ನಡೆಸುತ್ತಾರೆ. ಪರಸ್ಪರರ ತಪ್ಪುಗಳು, ಮನಸ್ಥಿತಿಗಳನ್ನು (Mentality) ಒಪ್ಪಿಕೊಂಡು ಬಾಳುತ್ತಾರೆ. ಮಾನಸಿಕವಾಗಿ ಪ್ರಬುದ್ಧತೆ (Maturity) ಗಳಿಸುವ ಮೂಲಕ ಹೀಗೆ ಬದುಕಲು ಸಾಧ್ಯ. ಜತೆಗೆ, ಹವ್ಯಾಸಗಳಿಗೆ ಪ್ರೋತ್ಸಾಹ ನೀಡುವುದು, ಸ್ನೇಹ ವಲಯವನ್ನು (Friends Circle) ಹೊಂದುವುದು ಅಗತ್ಯ.  
 

Follow Us:
Download App:
  • android
  • ios