Asianet Suvarna News Asianet Suvarna News

ಇವರು ಅಮ್ಮ – ಮಗಳಲ್ಲ… ದಂಪತಿ! ಈ ಜೋಡಿ ಮಧ್ಯೆ ಇದೆ 37 ವರ್ಷಗಳ ಅಂತರ

ಈಗಿನ ದಿನಗಳಲ್ಲಿ ಮದುವೆ ಕಾನ್ಸೆಪ್ಟ್ ಸಂಪೂರ್ಣ ಬದಲಾಗಿದೆ. ಯಾರು – ಯಾರನ್ನ ಬೇಕಾದ್ರೂ ಮದುವೆ ಆಗ್ಬಹುದು. ಇದಕ್ಕೆ ಈ ಜೋಡಿ ಸಾಕ್ಷಿ. ವಯಸ್ಸಿನ ಅಂತರ ಜಾಸ್ತಿ ಇದ್ರೂ ಓಪನ್ ಮ್ಯಾರೇಜ್ ರೂಲ್ಸ್ ಇವರನ್ನು ಖುಷಿಯಾಗಿಟ್ಟಿದೆ.
 

Lesbian Couple Thirty Seven Year Age Gap Reveal Cruel Troll Comments roo
Author
First Published Nov 30, 2023, 3:17 PM IST

ಪ್ರೀತಿ ಅರ್ಥ ಈಗಿನ ದಿನಗಳಲ್ಲಿ ಸಂಪೂರ್ಣ ಬದಲಾಗಿದೆ. ಮದುವೆಗೆ ಜಾತಿ, ಊರು, ಧರ್ಮ ಗೊತ್ತಿಲ್ಲ ಎನ್ನುವ ಕಾಲವಿತ್ತು. ಈಗ ಪ್ರೀತಿಗೆ ಲಿಂಗ ಹಾಗೂ ವಯಸ್ಸಿನ ಅಂತರವೂ ಗೊತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ತಮಗಿಂತ ಇಪ್ಪತ್ತು – ಮೂವತ್ತು ವರ್ಷ ಹೆಚ್ಚು ವಯಸ್ಸಿನ ಜನರನ್ನು ಪ್ರೀತಿಸುವ, ಮದುವೆಯಾಗುವ ಜನರಿದ್ದಾರೆ. ಹಾಗೆಯೇ ಸಲಿಂಗಕಾಮಿಗಳ ಸಂಖ್ಯೆ ಹೆಚ್ಚಾಗಿದೆ. ಪುರುಷನಿಗೆ ಪುರುಷನ ಮೇಲೆ ಮಹಿಳೆಗೆ ಮಹಿಳೆ ಮೇಲೆ ಪ್ರೀತಿ ಚಿಗುರೋದಲ್ಲದೆ ಇಬ್ಬರು ಮದುವೆಯಾಗ್ತಿದ್ದಾರೆ. ಅಂತ ಜೋಡಿಯಲ್ಲಿ ಇಂಗ್ಲೆಂಡ್‌ನ ಇಬ್ಬರು ಮಹಿಳೆಯರು ಸೇರಿದ್ದಾರೆ. ಇಂಗ್ಲೆಂಡ್ ಹುಡುಗಿಯೊಬ್ಬಳು ತನಗಿಂತ 37 ವರ್ಷ ಹಿರಿ ವಯಸ್ಸಿನ ಮಹಿಳೆಯನ್ನು ಮದುವೆಯಾಗಿದ್ದಾಳೆ. ಇಬ್ಬರು ತಾಯಿ ಮಗಳಂತೆ ಕಾಣ್ತಾರಾದ್ರೂ ಅವರು ವಾಸ್ತವದಲ್ಲಿ ಗಂಡ- ಹೆಂಡತಿ. ಅವರ ಪ್ರೀತಿ ಕಥೆ ಇಲ್ಲಿದೆ.

ತನಗಿಂತ 37 ವರ್ಷ ಹಿರಿ ಮಹಿಳೆ ಮೇಲೆ ಪ್ರೀತಿ (love) : 29 ವರ್ಷದ ಜೂಲಿಯಾ ಜೆಲ್ಗ್ ಗೆ 66 ವರ್ಷದ ಐಲೀನ್ ಡಿ ಫ್ರೀಸ್ಟ್ ಮೇಲೆ ಪ್ರೀತಿ ಚಿಗುರಿತ್ತು. ಇಬ್ಬರೂ 2019 ರಲ್ಲಿ ವಿವಾಹ (Marriage) ವಾದರು. ಇಬ್ಬರ ನಡುವೆ 37 ವರ್ಷಗಳ ವಯಸ್ಸಿನ ಅಂತರವಿದೆ. ಜೂಲಿಯಾ ಯೂಟ್ಯೂಬರ್ (YouTuber) ಮತ್ತು ಗಾಯಕಿ ಮತ್ತು ತನ್ನ ಹೆಂಡತಿಯೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಾಳೆ. ಜೂಲಿಯಾ ಮತ್ತು ಐಲೀನ್ ಇಬ್ಬರೂ ಲೆಸ್ಬಿಯನ್ ಜೋಡಿಗಳಾಗಿದ್ದು, ಜನರ ಕಣ್ಣು ಇವರ ಮೇಲೆ ಸದಾ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ಇವರು ಸುದ್ಧಿಗೆ ಬರ್ತಾರೆ. ಇವರನ್ನು ನೋಡಿದ ಜನರು, ತಾಯಿ – ಮಗಳು ಎಂದು ಗೇಲಿ ಮಾಡ್ತಾರಂತೆ. ಕೆಲವರು ಹಣಕ್ಕಾಗಿ ಇಬ್ಬರು ಜೊತೆಗಿದ್ದಾರೆ ಎಂದ್ರೆ ಮತ್ತೆ ಕೆಲವರು ಐಲೀನ್ ಳನ್ನು ಶುಗರ್ ಮಮ್ಮಿ ಎಂದು ಕರೆಯುತ್ತಾರಂತೆ. ಜನರ ಮಾತಿಗೆ ನಾವು ತಲೆಕೆಡಿಸಿಕೊಳ್ಳೋದಿಲ್ಲ ಎನ್ನುವ ಈ ಜೋಡಿ, ನಾವಿಬ್ಬರು ಪರಸ್ಪರ ತುಂಬಾ ಪ್ರೀತಿಸುತ್ತೇವೆ. ನಮ್ಮಿಬ್ಬರಿಗೂ ನಮ್ಮ ಇಷ್ಟಕಟ್ಟಗಳು ಗೊತ್ತು ಎನ್ನುತ್ತಾರೆ.

ಬಿಗ್‌ಬಾಸ್‌ನಲ್ಲಿ ಎಲ್ಲೆ ಮೀರಿದ ಕಪಲ್‌ ರೋಮ್ಯಾನ್ಸ್‌; ಮನೆ ಬಿಟ್ಟು ಬಂದು ರೂಮ್‌ ಮಾಡ್ಕೊಳ್ಳಿ ಎಂದ ನೆಟ್ಟಿಗರು!

ನಾಲ್ಕು ವರ್ಷಗಳ ಕಾಲ ಜೊತೆಗಿದ್ದ ಇವರು ಲಾಕ್ ಡೌನ್ ಸಂದರ್ಭದಲ್ಲಿ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಜೂಲಿಯಾ ತಂದೆ ಹಾಗೂ ಸಹೋದರ ಇವರ ಸಂಬಂಧವನ್ನು ಸ್ವೀಕರಿಸಿದ್ದಾರಂತೆ. ವಯಸ್ಸಿನ ಅಂತರದ ಬಗ್ಗೆ ಮಾತನಾಡಿದ ಇವರು ಪ್ರೀತಿಯನ್ನು ಎಂದಿಗೂ ಜಡ್ಜ್ ಮಾಡಬಾರದು ಎನ್ನುತ್ತಾರೆ. ಜೂಲಿಯಾ ಮೂಲತಃ ಬ್ರೆಜಿನ್ ನವಳಾಗಿದ್ದು ಲಂಡನ್ ನಲ್ಲಿ ವಾಸವಾಗಿದ್ದಾಳೆ. 

ಈ ಜೋಡಿ ಮದುವೆಯನ್ನು ಓಪನ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಅಂದರೆ ಮದುವೆಯಾದ್ರೂ ಬೇರೆಯವರ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ. ಇಬ್ಬರೂ ಪ್ರಾಮಾಣಿಕವಾಗಿದ್ದು, ಯಾವುದೇ ವಿಷ್ಯವನ್ನು ಮುಚ್ಚಿಡುವುದಿಲ್ಲ. ನಾವಿಬ್ಬರೂ ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದು, ನಮ್ಮ ಸ್ವಭಾವಕ್ಕೆ ತಕ್ಕಂತೆ ಜನರ ಜೊತೆ ಡೇಟ್ ಮಾಡ್ತೇವೆ ಎನ್ನುತ್ತಾರೆ ಈ ಜೋಡಿ. 

ಜೂಲಿಯಾ ಎಲ್ಲ ರೀತಿಯ ಜನರ ಜೊತೆ ಬೆರೆಯಲು ಇಷ್ಟಪಡುತ್ತಾಳೆ. ಆದ್ರೆ ಐಲೀನ್ ಆದ್ಯತೆಯನ್ನು ಮರೆಯೋದಿಲ್ಲ. ಪರಸ್ಪರ ಪ್ರೀತಿ ಮಾಡುವ ಇವರು ಸ್ವಂತ ಅಗತ್ಯತೆಗಳಿಗೆ ಅನುಗುಣವಾಗಿಯೇ  ಡೇಟಿಂಗ್ ಮಾಡುತ್ತಾರೆ. ಐಲೀನ್ ಬುದ್ಧಿವಂತಿಕೆಗೆ ಹೆಚ್ಚು ಮಹತ್ವ ನೀಡ್ತಾಳೆ. ಪ್ರಣಯಕ್ಕಿಂತ ಹೃದಯದ ಜೊತೆ ಬೆರೆಯಲು ಬಯಸ್ತೇನೆ ಎನ್ನುತ್ತಾಳೆ. ಐಲೀನ್ ಗೆ ತನ್ನ ವಯಸ್ಸಿನವರ ಜೊತೆ ಡೇಟ್ ಮಾಡೋದು ಇಷ್ಟ. ಇವರಿಗೆ ಇವರ ಜೀವನದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದ್ರೆ ಜನರಿಗೆ ಇವರ ಸಂಬಂಧದ ಬಗ್ಗೆ ಸಮಸ್ಯೆಯಿದೆ. 

ಮದ್ವೇಲಿ ಹಚ್ಚೋ ಮೆಹಂದಿ ಯಾವ ಬಣ್ಣ ಬಂದರೆ ದಾಂಪತ್ಯದಲ್ಲಿ ಪ್ರೀತಿ ಹೆಚ್ಚು ಎಂದರ್ಥ?

ಅವರು 300,000 ಕ್ಕಿಂತ ಹೆಚ್ಚು ಯುಟ್ಯೂಬ್ ಚಂದಾದಾರರನ್ನು ಮತ್ತು  ಸುಮಾರು 70,000 ಇನ್ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದಾರೆ. ಅಲ್ಲಿ ಬರುವ ನೂರಾರು ಕಮೆಂಟ್ ಗೆ ಇವರು ತಲೆಕೆಡಿಸಿಕೊಳ್ಳೋದಿಲ್ಲ. 
 

Follow Us:
Download App:
  • android
  • ios