ಯಾವತ್ತೂ ತೋರದ ಪ್ರೀತಿ ಗಂಡ ತೋರಿದರೆ ಹೆಂಡ್ತಿಗೇಕೆ ಡೌಟ್?

ಗಂಡ ಚಾಪೆ ಕೆಳಗೆ ತೂರಿದ್ರೆ ಪತ್ನಿ ರಂಗೋಲಿ ಕೆಳಗೆ ತೂರುತ್ತಾಳೆ. ಸದಾ ಪತಿ ಮೇಲೆ ಕಣ್ಣಿಟ್ಟಿರುವ ಪತ್ನಿಗೆ ಒಮ್ಮೆ ಗಂಡನ ಮೇಲೆ ಸಂಶಯ ಶುರುವಾದ್ರೆ ಮುಗೀತು. ಪತಿ ಕುಳಿತುಕೊಳ್ಳೋ ಭಂಗಿಯಿಂದ ಹಿಡಿದು ಪ್ರೀತಿ ಮಾಡೋ ಸ್ಟೈಲ್ ವರೆಗೆ ಎಲ್ಲದಕ್ಕೂ ಸಂದೇಹಪಡ್ತಾಳೆ ಪತ್ನಿ.
 

Why Wife Doubts Her Husband if he showers love suddenly

ವೈವಾಹಿಕ ಜೀವನದಲ್ಲಿ ಪತಿ-ಪತ್ನಿ ಮಧ್ಯೆ ಪರಸ್ಪರ ನಂಬಿಕೆ ಬಹಳ ಮುಖ್ಯ. ಅನೇಕ ಬಾರಿ ಸಂದೇಹದಿಂದಾಗಿ ಸಂಬಂಧದಲ್ಲಿ ಕಹಿ ಶುರುವಾಗುತ್ತದೆ. ಸಂಶಯದಿಂದಾಗಿ ಸಂಬಂಧ ಮುರಿದು ಬೀಳುವ ಹಂತ ತಲುಪುತ್ತದೆ. ಕೆಲ ಪತ್ನಿಯರು ತಮ್ಮ ಗಂಡನನ್ನು ಅನುಮಾನಿಸಲು ಪ್ರಾರಂಭಿಸುತ್ತಾರೆ. ಈ ಸಂದೇಹಗಳು ಬಹಳ ಸಣ್ಣ ಕಾರಣಗಳಿಂದ ಶುರುವಾಗುತ್ತವೆ. ನಂತ್ರ ಅದು ದೊಡ್ಡದಾಗಿ ಬೆಳೆಯುತ್ತದೆ. ಸಂದೇಹವನ್ನು ಸಮಯಕ್ಕೆ ಸರಿಯಾಗಿ ಕಿತ್ತೊಗೆಯದೆ ಹೋದ್ರೆ ಕ್ರಮೇಣ ಇದು ಹೆಮ್ಮರವಾಗುತ್ತದೆ. ಸಣ್ಣ ಸಣ್ಣ ಕಾರಣಕ್ಕೂ ಪತಿಯ ಮೇಲೆ ಸಂಶಯ ಕಾಡುತ್ತದೆ. ಅವರ ಮೇಲಿನ ನಂಬಿಕೆ ಕಡಿಮೆಯಾಗುತ್ತದೆ. ಇದು ದಾಂಪತ್ಯದ ಮೇಲೆ ಪರಿಣಾಮ ಬೀರುತ್ತದೆ. ದಾಂಪತ್ಯ ಮುಂದುವರೆಯಲು ಬರೀ ಪ್ರೀತಿ ಮಾತ್ರವಲ್ಲ, ನಂಬಿಕೆ, ವಿಶ್ವಾಸ, ಗೌರವ ಎಲ್ಲವೂ ಅಗತ್ಯ. ನಂಬಿಕೆಯಿಲ್ಲದೆ ಸಂಶಯವೇ ತುಂಬಿದ್ದರೆ ಆಗ ಆ ಸಂಸಾರ ನೂರು ಕಾಲ ಬದುಕುಳಿಯಲು ಸಾಧ್ಯವಿಲ್ಲ. ಇಂದು ನಾವು ಪತ್ನಿಯಾದವಳು ಪತಿಯನ್ನು ಸಂಶಯಿಸಲು ಏನು ಕಾರಣ ಎಂಬುದನ್ನು ಹೇಳ್ತೇವೆ.

ಪತಿ (Husband )ಮೇಲೆ ಸಂದೇಹಪಡಲು ಇವು ಕಾರಣ :
ಬೇರೆಯವರ ಬಗ್ಗೆ ಚರ್ಚೆ :
ಎಲ್ಲ ಮಹಿಳೆಯರು ನಮ್ಮವರು ನಮ್ಮನ್ನು ಹೊಗಳಬೇಕೆಂದು ಬಯಸ್ತಾರೆ. ಹೊಗಳಿಕೆ ಇಲ್ಲವೆಂದ್ರೂ ತಮ್ಮ ಬಗ್ಗೆ ಮಾತನಾಡ್ಲಿ ಎಂದುಕೊಳ್ತಾರೆ. ಆದ್ರೆ ಪತಿಯಾದವನು ತನ್ನ ಮಾಜಿ ಗರ್ಲ್ ಫ್ರೆಂಡ್ (Girlfriend ) ಅಥವಾ ಬೇರೆ ಹುಡುಗಿಯರನ್ನು ಅತಿಯಾಗಿ ಹೊಗಳಿದ್ರೆ ಅಥವಾ ಆಕೆ ಬಗ್ಗೆ ಸದಾ ಮಾತನಾಡ್ತಿದ್ದರೆ ಪತ್ನಿಗೆ ಅನುಮಾನ ಬರಲು ಶುರುವಾಗುತ್ತದೆ. ಹಾಗೆ ಮನೆಯಲ್ಲಿ ಕಡಿಮೆ ಮಾತನಾಡುವ ಪತಿ, ಮನೆಯಿಂದ ಹೊರಗೆ ಬೀಳ್ತಿದ್ದಂತೆ ವಿಶೇಷವಾಗಿ ಹುಡುಗಿಯರ ಜೊತೆ ಹೆಚ್ಚು ಮಾತನಾಡ್ತಿದ್ದರೆ ಆಗ ಪತ್ನಿ ಆತನ ಮೇಲೆ ಸಂದೇಹಪಡುತ್ತಾಳೆ.

ಮೊಬೈಲಿನಲ್ಲಿ ಮುಳುಗಿ ಹೋದ ಪತಿ : ಯಾವುದೇ ವ್ಯಕ್ತಿ ಹೆಚ್ಚಿನ ಸಮಯವನ್ನು ಮೊಬೈಲ್ ನಲ್ಲಿ ಕಳಿತಾನೆ ಎಂದಾಗ ಪತ್ನಿಗೆ ಸಂದೇಹ ಬರುವುದು ಸಹಜ. ರೂಮ್ ಬಾಗಿಲು ಹಾಕಿ ಫೋನ್ ನಲ್ಲಿ ಗಂಟೆಗಟ್ಟಲೆ ಮಾತನಾಡುವುದು, ವಾಟ್ಸ್ ಅಪ್ ನಲ್ಲಿ ಸದಾ ಸಕ್ರಿಯವಾಗಿರುವುದು ಮಾಡಿದ್ರೆ ಸಂಶಯ ಜಾಸ್ತಿಯಾಗುತ್ತದೆ. ಮೊಬೈಲ್ ನಲ್ಲಿ ನೀವು ಏನು ಮಾಡ್ತಿದ್ದೀರಿ ಎಂಬುದು ಮುಖ್ಯವಾಗುವುದಿಲ್ಲ. ಒಂದ್ವೇಳೆ ನೀವು ಕ್ಯಾಂಡಿ ಕ್ರಶ್ ಆಡ್ತಿರಿ, ಆದ್ರೆ ಅದು ಪತ್ನಿಗೆ ಗೊತ್ತಿರೋದಿಲ್ಲ. ಹೆಚ್ಚು ಸಮಯ ಮೊಬೈಲ್ ನಲ್ಲಿ ಏನು ಮಾಡ್ತಾನೆ ಎಂಬ ಸಂಶಯ ಆಕೆಗೆ ಬರಲು ಶುರುವಾಗುತ್ತದೆ.

ಕೆಲಸದ ಸಮಯ ಮುಗಿದ್ರೂ ಮನೆಗೆ ಬಾರದ ಪತಿ : ಕೆಲಸ ಮುಗಿದ ತಕ್ಷಣ ಮನೆಗೆ ಬರುವ ಪತಿಯನ್ನು ಪತ್ನಿ ಕಣ್ಮುಚ್ಚಿ ನಂಬ್ತಾಳೆ. ಅದೇ ಕೆಲಸ 6ಕ್ಕೆ ಮುಗಿದ್ರೂ 9 ಗಂಟೆಯಾದ್ರೂ ಮನೆಗೆ ಬರದ ಪತಿ ಮೇಲೆ ಪತ್ನಿ ಕಣ್ಣಿಡುತ್ತಾಳೆ.

Dispute Marriage: ನಪುಂಸಕ ಮಗ ಕೊಡದ ಸಂತೋಷ ನಾನು ಕೊಡ್ತೀನೆಂದ ಮಾವ…!

ಆಫೀಸ್ ಟ್ರಿಪ್ : ಅನೇಕರು ಆಫೀಸ್ ಟ್ರಿಪ್ ಮೇಲೆ ಸುತ್ತಾಡ್ತಿರುತ್ತಾರೆ. ಮತ್ತೆ ಕೆಲವರು ದಿಢೀರ್ ಅಂತಾ ಆಫೀಸ್ ಟ್ರಿಪ್ ಬಗ್ಗೆ ಮಾತನಾಡಲು ಶುರು ಮಾಡ್ತಾರೆ. ಇಷ್ಟು ದಿನ ಇಲ್ಲದಿರೋ ಟ್ರಿಪ್ ಈಗ ಹೇಗೆ ಶುರುವಾಯ್ತು ಎಂಬ ಅನುಮಾನ ಪತ್ನಿಗೆ ಬರುತ್ತದೆ. ಇದೇ ಕಾರಣಕ್ಕೆ ನಾನೂ ಬರ್ತೇನೆ ಎಂದು ಹಠ ಹಿಡಿಯುವ ಪತ್ನಿಯರಿದ್ದಾರೆ.

ಪ್ರತಿ ಮಾತಿಗೂ ಕೋಪ : ಅನೇಕ ಪುರುಷರು ಮಾತು ಮಾತಿಗೆ ರೇಗಾಡ್ತಾರೆ. ಪತ್ನಿ ಹೇಳಿದ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳೋದಿಲ್ಲ. ಇದು ಪತ್ನಿಯ ಅನುಮಾನಕ್ಕೆ ನೀರೆರೆಯುತ್ತದೆ. 

ವೈವಾಹಿಕ ಜೀವನ ಹಾಳು ಮಾಡುತ್ತೆ ಪುರುಷರು ಮಾಡೋ ಈ ಕೆಲಸ

ಅತಿ ಹೆಚ್ಚು ಕಾಳಜಿ : ಏಕಾಏಕಿ ಪತಿ ಅತಿ ಕಾಳಜಿ ತೋರಿಸ್ತಿದ್ದಾನೆ, ಸಿಹಿ ಮಾತುಗಳನ್ನು ಆಡ್ತಿದ್ದಾನೆ, ಪ್ರೀತಿ ಹೆಚ್ಚಾಗಿದೆ ಅಂದ್ರೆ ಅದಕ್ಕೂ ಮಹಿಳೆಯರು ಅನುಮಾನ ವ್ಯಕ್ತಪಡಿಸ್ತಾರೆ. ಇದ್ರಲ್ಲೇನೋ ಅಡಗಿದೆ ಎಂದುಕೊಳ್ತಾರೆ.
 

Latest Videos
Follow Us:
Download App:
  • android
  • ios